'I Love You Bhumi Mam' ಪರೀಕ್ಷೆಯಲ್ಲಿ ಇಂಥದ್ದೊಂದು ಪ್ರಬಂಧ ಬರೆದ 6ನೇ ತರಗತಿ ವಿದ್ಯಾರ್ಥಿ
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ತಮ್ಮ ನೆಚ್ಚಿನ ಶಿಕ್ಷಕರು ಇದ್ದೇ ಇರುತ್ತಾರೆ. ತಮ್ಮ ನೆಚ್ಚಿನ ಶಿಕ್ಷಕರಿಗೆ ವಿದ್ಯಾರ್ಥಿಗಳು ಚಾಕೊಲೆಟ್, ಗಿಫ್ಟ್, ರೊಸ್ ಕೊಡುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಇಲ್ಲೊಬ್ಬ ಪುಟ್ಟ ವಿದ್ಯಾರ್ಥಿ ಪರೀಕ್ಷೆಯಲ್ಲಿ ತನ್ನ ನೆಚ್ಚಿನ ಶಿಕ್ಷಕಿಗೆ 'ಐ ಲವ್ ಯೂ' ಹೇಳುವ ಮೂಲಕ ಪ್ರಬಂಧ ಬರೆದಿದ್ದಾನೆ.
ಹೌದು... 'I Love You Bhumi Mam' ಎಂದು ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಪ್ರಬಂಧ ಬರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಪ್ರಬಂಧ ಓದಿ ಜನ ಹೊಟ್ಟೆ ನೋವಾಗುವಷ್ಟು ನಗಾಡಿದ್ದಾರೆ. ಈ ಪ್ರಬಂಧದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ನಗೆಗಡಲಲ್ಲಿ ತೇಲುತ್ತಿದ್ದಾರೆ.

6 ನೇ ತರಗತಿಯ ವಿದ್ಯಾರ್ಥಿ ತನ್ನ ಶಿಕ್ಷಕರಿಗೆ ಪರೀಕ್ಷೆಯಲ್ಲಿ ಇಂತಹ ಪ್ರಬಂಧವನ್ನು ಬರೆದಿದ್ದಾನೆ. ಅದನ್ನು ನೋಡಿದ ಶಿಕ್ಷಕಿ ಶಾಕ್ ಆಗಿದ್ದಾರೆ. ಈ ಪ್ರಬಂಧದ ಚಿತ್ರವನ್ನು ಹಲವಾರು ಬಾರಿ ಹಂಚಿಕೊಳ್ಳಲಾಗಿದೆ. ಈ ವೈರಲ್ ಪ್ರಬಂಧದ ಪ್ರತಿಯನ್ನು ಶಿಕ್ಷಕಿ ಭೂಮಿಕಾ ರಜಪೂತ್ (@Rajputbhumi157) ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಆರನೇ ತರಗತಿಯ ಹುಡುಗ ಈ ಪ್ರಬಂಧವನ್ನು ತಮಗೆ ಬರೆದಿರುವುದಾಗಿ ಶಿಕ್ಷಕಿ ಭೂಮಿಕಾ ರಜಪೂತ್ ಹೇಳಿಕೊಂಡಿದ್ದಾರೆ.
ಈ ಪ್ರಬಂಧದ ಪ್ರತಿಯನ್ನು ಹಂಚಿಕೊಳ್ಳುವಾಗ, ಭೂಮಿಕಾ ರಜಪೂತ್ ಅವರು ಖುಷಿ ವ್ಯಕ್ತಪಡಿಸಿದ್ದಾರೆ. "ನನ್ನ ಮನಸ್ಥಿತಿಯನ್ನು ಸುಧಾರಿಸಬೇಕಾದಾಗ, ನಾನು ಅದನ್ನು ಓದುತ್ತೇನೆ..." ಎಂದು ಅವರು ಬರೆದಿದ್ದಾರೆ. ಈ ಪ್ರಬಂಧದಲ್ಲಿ ವಿದ್ಯಾರ್ಥಿಯು 'ಭೂಮಿಕಾ ಮೇಡಮ್' ಬಗ್ಗೆ ತನ್ನ ಒಲವನ್ನು ವ್ಯಕ್ತಪಡಿಸಿದ ರೀತಿ ತುಂಬಾ ಚೆನ್ನಾಗಿದೆ. ಹೀಗಾಗಿ ಅದು ಅಂತರ್ಜಾಲದಲ್ಲಿ ಜನರ ಗಮನ ಸೆಳೆದಿದೆ. ಈ ಪ್ರಬಂಧದ ವಿಷಯವೆಂದರೆ 'ಅತ್ಯಂತ ಮೆಚ್ಚಿನ ಶಿಕ್ಷಕಿ'ಯಾಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪ್ರಬಂಧದ ನಡುವೆ ವಿದ್ಯಾರ್ಥಿ ಬರೆದ 'I Love You Bhumi Mam' ಶಬ್ದವನ್ನು ಓದಿ ಜನ ಸಿಕ್ಕಾಪಟ್ಟೆ ನಗಾಡಿದ್ದಾರೆ. ಹಲವು ಜನ ತಮ್ಮ ಬಾಲ್ಯವನ್ನೂ ನೆನಪಿಸಿಕೊಂಡಿದ್ದಾರೆ. ತಮ್ಮ ಬಾಲ್ಯದಲ್ಲಿ ನಾವು ಮಾಡಿದ ಇಂತಹ ಚೇಷ್ಟೆಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಜನರ ಕಾಮೆಂಟ್ ಹೇಗಿದೆ ನೋಡೋಣ.
ಜನರ ಕಾಮೆಂಟ್ ಹೀಗಿದೆ:-
'ಮಕ್ಕಳು ಹೃದಯ ತುಂಬಾ ಸುಂದರ. ಆ ಮಗು ಏನು ಬರೆದಿದೆ ಅದು ಈ ಮಗುವಿನ ಪೋಷಕರ ಪೋಷಣೆಯ ಫಲಿತಾಂಶವಾಗಿದೆ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
'ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಇಂಥಹ ಪ್ರೀತಿ ಇದ್ದರೆ ಮಾತ್ರ ಕಲಿಕೆ ಸಾಧ್ಯ' ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
'ಇದು ಹೃದಯವನ್ನು ಬೆಚ್ಚಗಾಗಿಸುವ ಸಂದೇಶ. ಮೊದಲನೆಯದಾಗಿ ಶಿಕ್ಷಕರ ಕಡೆಗೆ ಮಗುವಿನ ವಾತ್ಸಲ್ಯ ಮತ್ತು ಎರಡನೆಯದಾಗಿ ಮಕ್ಕಳ ಕಡೆಗೆ ಶಿಕ್ಷಕರ ಸಮರ್ಪಣೆಯನ್ನು ಇದು ತೋರಿಸುತ್ತದೆ' ಇದು ನನಗೆ ಸಂತೋಷವಾಯಿತು ಎಂದು ಇನ್ನೊಬ್ಬರು ಬರೆದಿದ್ದಾರೆ.
ಮಾತ್ರವಲ್ಲದೆ ಇದು ಕೆಲವು ಬಳಕೆದಾರರು ಉತ್ತಮ ಅಂಕಗಳನ್ನು ಪಡೆಯಲು ಸರಿಯಾದ ಮಾರ್ಗವೆಂದು ಕರೆದಿದ್ದಾರೆ.
ಪ್ರಬಂಧದಲ್ಲಿ ಏನಿದೆ?
'ನಮಗೆ ಎಲ್ಲ ಶಿಕ್ಷಕರೂ ಇಷ್ಟ, ಆದರೆ ನಮಗೆ ಅತ್ಯಂತ ಪ್ರಿಯವಾದದ್ದು ಭೂಮಿಕಾ ಮೇಡಂ, ಅವರು ನಮಗೆ ತುಂಬಾ ಒಳ್ಳೆಯದನ್ನು ಹೇಳುತ್ತಾರೆ, ನಮಗೆ ಕಲಿಸುತ್ತಾರೆ ಮತ್ತು ನಮ್ಮನ್ನು ತುಂಬಾ ಪ್ರೀತಿಸುತ್ತಾರೆ' ಎಂದು ಪ್ರಬಂಧದಲ್ಲಿ ಬರೆಯಲಾಗಿದೆ. ಶಿಕ್ಷಕರನ್ನು ಶ್ಲಾಘಿಸಿದ ವಿದ್ಯಾರ್ಥಿಯು ಕೊನೆಯಲ್ಲಿ 'ಎಲ್ಲ ಶಿಕ್ಷಕರಿಗೂ ದೇವರು ನಮ್ಮ ಮೇಡಂನಂತಿರಲು ಆಶೀರ್ವದಿಸಲಿ, ಮಕ್ಕಳು ಮನಃಪೂರ್ವಕವಾಗಿ ಕಲಿಯುತ್ತಾರೆ' ಎಂದು ಬರೆಯಲಾಗಿದೆ. ಇದರೊಂದಿಗೆ ವಿದ್ಯಾರ್ಥಿ ಐ ಲವ್ ಯೂ ಭೂಮಿ ಮೇಡಂ ಎಂದೂ ಕೊನೆಯಲ್ಲಿ ಬರೆದಿದ್ದಾನೆ.
Class 6th student ❣️
— भूमिका राजपूत 🇮🇳 (@Rajputbhumi157) April 8, 2024
जब अपना मूड ठीक करना होता है तब इसे पढ़ लेती हूं 😌💞
~भूमि pic.twitter.com/BeEI3NBgDE
ಶಿಕ್ಷಕಿ ಟ್ವೀಟ್
ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಮತ್ತು ಮಾಧ್ಯಮದಲ್ಲಿ ಪ್ರಸಾರವಾದ ನಂತರ ಭೂಮಿಕಾ ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಾರೆ, "ಜನರು ನನ್ನನ್ನು ಅರ್ಥಮಾಡಿಕೊಳ್ಳಬೇಕು. ಇದನ್ನು ಹಂಚಿಕೊಳ್ಳುವಾಗ ನಾವು ವೈರಲ್ ಆಗಬೇಕು ಎಂಬ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ ಇದು ವಿಭಿನ್ನ ತಿರುವು ಪಡೆದುಕೊಂಡಿದೆ... ಅಂಶಿಕಾ ಮಗನೇ, ನಿನ್ನ ಬರಹ ಎಲ್ಲರಿಗೂ ಇಷ್ಟವಾಯಿತು. ನಿನ್ನಿಂದಾಗಿ ಇಂದು ಜನ ನನ್ನನ್ನು ಗುರುತಿಸಿದ್ದಾರೆ...'' ಎಂದು ಅವರು ಬರೆದಿದ್ದಾರೆ.












Click it and Unblock the Notifications