Video Viral: ಕಾಲೇಜು ತರಗತಿಯಲ್ಲಿ ವಿದ್ಯಾರ್ಥಿ ಜೊತೆ ಪ್ರಾಧ್ಯಾಪಕಿ ವಿವಾಹ
ಕೋಲ್ಕತ್ತಾ, ಜನವರಿ 30: ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ಮದುವೆಗಳು, ಡಿವೋರ್ಸ್ ಪ್ರಕರಣ ನೋಡಿದರೆ ಇಂದಿನ ಯುವ ಸಮೂಹ ಮದುವೆಗೆ ಮೊದಲಿನಷ್ಟು ಪ್ರಾಮುಖ್ಯತೆ ನೀಡುತ್ತಿಲ್ಲ ಅನ್ನಿಸುತ್ತದೆ. ಕೆಲವರಂತೂ ನಿಂತ ಕಾಲ ಮೇಲೆರೆ ಮದುವೆ ಆಗಿ ಬಂದ ಉದಾಹರಣೆಗಳು ಇವೆ. ಇದು ವ್ಯಕ್ತಿಯ ವೈಯಕ್ತಿಕ ವಿಷಯವೇ ಆದರೂ ಕೆಲವು ವಿವಾಹಗಳು ಸಮಾಜದ ತನ್ನದೇ ಆದ ರೀತಿಯಲ್ಲಿ ಪ್ರಭಾವ ಉಂಟು ಮಾಡುತ್ತವೆ. ಅಂಥದ್ದೆ ಒಂದು ವಿವಾಹ ಪಶ್ಚಿಮ ಬಂಗಾಳದ ಕಾಲೇಜಿನಲ್ಲಿ ನಡೆದಿದೆ. ಭಾರೀ ವೈರಲ್ ಆಗುತ್ತಿದೆ.
ಕೊಲ್ಕತ್ತಾದಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ನಾಡಿಯಾದಲ್ಲಿರುವ ಹರಿಂಗಟ ತಂತ್ರಜ್ಞಾನ ಕಾಲೇಜಿನ ಮನೋವಿಜ್ಞಾನ ವಿಭಾಗದಲ್ಲಿ ಮದುವೆ ನಡೆದಿದೆ. ಹೌದು, ಮಹಿಳಾ ಪ್ರಾಧ್ಯಾಪಕಿಯೊಬ್ಬರು ಕಾಲೇಜು ಯುವ ವಿದ್ಯಾರ್ಥಿಯೊಬ್ಬನನ್ನು ತರಗತಿ ಕೊಠಡಿಯಲ್ಲೇ ಮದುವೆ ಆಗಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ತರಗತಿಯೊಳಗೆ ವಿವಾಗಿದ್ದಾರೆ. ಕುಂಕುಮ ಮತ್ತು ಹೂಮಾಲೆಯನ್ನು ಪ್ರಾಧ್ಯಾಪಕಿ ಮತ್ತು ವಿದ್ಯಾರ್ಥಿ ಪರಸ್ಪರ ವಿನಿಮಯ ಮಾಡಿಕೊಳ್ಳುವುದು, ಹಣೆಗೆ ಕುಂಕುಮ ಇಡುವುದು ಕಾಣಿಸುತ್ತದೆ. ವಿವಾಹ ವಿಧಿ ವಿಧಾನಗಳು ಆಪ್ತರ ಸಮ್ಮುಖದಲ್ಲಿ ಪೂರ್ಣಗೊಳ್ಳುವುದು ಕಾಣಿಸುತ್ತದೆ.
A lady Professor in MAKAUT is 'getting married' to her young student in the office. pic.twitter.com/coXaVGH7s7
— Abir Ghoshal (@abirghoshal) January 29, 2025
ಕಾಲೇಜು ಮೌಲಾನಾ ಅಬುಲ್ ಕಲಾಂ ಆಜಾದ್ ತಂತ್ರಜ್ಞಾನ ವಿಶ್ವವಿದ್ಯಾಲಯದ (MAKAUT) ತಂತ್ರಜ್ಞಾನ ಕಾಲೇಜು ಇದಾಗಿದೆ. ಕಾಲೇಜಿನ ಪ್ರಾಧ್ಯಾಪಕಿ ಪಾಯಲ್ ಬ್ಯಾನರ್ಜಿ ಎಂಬುವವರು ವಧವಿನ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಸಿರು ಶರ್ಟ್‌ನಲ್ಲಿ ಮಾಲೆ ಹಾಕಿಕೊಂಡು ವರ ನಿಂತಿದ್ದಾರೆ. ವಿಡಿಯೋದಲ್ಲಿ ಇವರೇ ವಧು-ವರ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಈ ಮದುವೆ ನಿಜವಾ?
ಕಾಲೇಜಿನಲ್ಲಿ ನಡೆದ ಈ ಘಟನೆಯನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಗಮನಿಸಬೇಕು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಮತ್ತೆ ಕೆಲವರು ಇದು ನಿಜವಾದ ಮದುವೆ ಅಲ್ಲ. ವಿಡಿಯೋಗಾಗಿ ಮಾಡಿದ್ದಾರೆ ಅಂತಲೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತದೆ. ಪ್ರಾಧ್ಯಾಪಕಿಯನ್ನು ಮೂರು ದಿನಗಳ ಕಾಲ ರಜೆಯಲ್ಲಿ ಕಳುಹಿಸಿದ್ದು, ಇತ್ತ ಮೂವರ ಅಧಿಕಾರಿಗಳ ಸಮತಿ ರಚಿಸಲಾಗಿದೆ. ಸರಿಯಾದ ತನಿಖೆ ನಡೆಸಿದ ಬಳಿಕವೇ ಕ್ರಮ ಕೈಗೊಳ್ಳಲು ಕಾಲೇಜು ಆಡಳಿತ ಮಂಡಳಿ ಮತ್ತು ವಿಶ್ವವಿದ್ಯಾಲಯ ನಿರ್ಧರಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ವಿದ್ಯಾರ್ಥಿ ತನ್ನ ಮುಂದಲೆಗೆ ಸಿಂಧೂರವನ್ನು ಹಚ್ಚಿಕೊಂಡು ಗುಲಾಬಿ ಅರ್ಪಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸುತ್ತವೆ. ಪ್ರಾಧ್ಯಾಪಕಿ ಮತ್ತು ವಿದ್ಯಾರ್ಥಿ ಪರಸ್ಪರ ಸಂಗಾತಿಯಾಗಿದ್ದಾರೆ. ಈ ಕುರಿತ ಕಾಲೇಜಿನ ಲೆಟರ್ ಹೆಡ್ ಸಹ ವೈರಲ್ ಆಗಿದೆ. ಕೊಲ್ಕತ್ತಾ ಭಾಗದಲ್ಲಿ ಈ ಸುದ್ದಿ ಹೆಚ್ಚು ಸದ್ದು ಮಾಡುತ್ತಿದೆ.
ಪ್ರಾಧ್ಯಾಪಕಿ ಹೇಳಿದ್ದೇನು?
ಸದ್ಯ ಈ ಕುರಿತು ಪ್ರತಿಕ್ರಿಯಿಸಿದ ಮನೋವಿಜ್ಞಾನ ಬೋಧಿಸುವ ಪ್ರಾಧ್ಯಾಪಕಿ ಪಾಯಲ್ ಬ್ಯಾನರ್ಜಿ ಅವರು, ಈ ವಿವಾಹವು ತರಗತಿಯಲ್ಲಿ ಪಠ್ಯದ ಭಾಗವೇ ಆಗಿದೆ. ಏಕೆಂದರೆ ಮನೋವಿಜ್ಞಾನದ ಪರಿಕಲ್ಪನೆ ವಿವರಿಸಲು ಮಾನಸಿಕ ನಾಟಕವಾಡಲಾಗಿದೆ. ಇದು ನಿಜವಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಅದರೆ ಈ ವಿವಾಹದ ವಿಡಿಯೋ ಹೇಗೆ ವೈರಲ್ ಆಗಿದ್ದರ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications