ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಜ್ವಾಲಾಮುಖಿ ಸ್ಪೋಟಿಸುವಾಗ ಹತ್ತಿರದಿಂದ ಸೆಲ್ಫಿ ತೆಗೆದುಕೊಂಡ ಪ್ರವಾಸಿಗರು

|
Google Oneindia Kannada News

ಜ್ವಾಲಾಮುಖಿ ಸ್ಫೋಟದ ಮುನ್ಸೂಚನೆ ತಿಳಿಯುತ್ತಿದ್ದಂತೆ ಆ ಪ್ರದೇಶದ ಸುತ್ತ ಮುತ್ತ ಜನ ವಾಸಿಸುವುದು ಒಂದು ಕಡೆ ಇರಲಿ ಪ್ರಾಣಿ-ಪಕ್ಷಿಗಳೂ ಸುಳಿದಾಡುವುದಿಲ್ಲ. ಯಾಕೆಂದರೆ ಬೆಂಕಿಯ ಜ್ವಾಲೆ ಸ್ಪೋಟದ ತೀವ್ರತೆ ಆ ಮಟ್ಟದ್ದಾಗಿರುತ್ತದೆ. ಬೆಂಕಿ ಜ್ವಾಲೆ ಆವರಿಸಿಬಿಟ್ಟರೆ ಮುಗಿತು ಉಳಿದುಕೊಳ್ಳುವ ಮಾತೇ ಇಲ್ಲ. ಹೀಗಿರುವಾಗ ಇಲ್ಲೊಂದು ವೈರಲ್ ವಿಡಿಯೋದಲ್ಲಿ ಜನರ ಗುಂಪೊಂದು ಜ್ವಾಲೆಯ ಸ್ಪೋಟವನ್ನು ವೀಕ್ಷಿಸಿದ್ದಾರೆ. ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಕಂಡು ಜನ ಒಂದು ಕ್ಷಣ ದಂಗಾಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಗೊತ್ತಾ? ಒಂದು ಎತ್ತರದ ಬೆಟ್ಟದ ತುದಿಯಲ್ಲಿ ಜ್ವಾಲಾಮುಖಿ ಸ್ಪೋಟಗೊಳ್ಳುತ್ತದೆ. ಅದೇ ಬೆಟ್ಟಕ್ಕೆ ಹತ್ತಿರದಲ್ಲಿ ಮತ್ತೊಂದು ಬೆಟ್ಟದ ತುದಿಯ ಮೇಲೆ ನಿಂತ ಜನ ವಿಡಿಯೋ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಕೆಲವರು ಸ್ಪೋಟದ ತೀವ್ರತೆಯನ್ನು ನೋಡಿ ಆಶ್ಚರ್ಯದಿಂದ ಕಿರುಚಾಡುತ್ತಾರೆ. ಕತ್ತಲೆಯಲ್ಲಿ ಜ್ವಾಲೆಯ ಸ್ಪೋಟ ನೋಡುಗರನ್ನು ಬೆರಗುಗೊಳಿಸಿದೆ. ಜ್ವಾಲೆ ಸ್ಪೋಟಗೊಳ್ಳುತ್ತಿದ್ದಂತೆ ಜ್ವಾಲೆ ಬೆಟ್ಟವನ್ನೆ ಆವರಿಸುತ್ತದೆ. ಅಲ್ಲಲ್ಲಿ ಬೆಂಕಿಯ ಕಿಡಿ ನಕ್ಷತ್ರದಂತೆ ಗೋಚರಿಸುತ್ತದೆ. ಇದೊಂದು ಅದ್ಭುತದ ಜೊತೆಗೆ ಅಪಾಯಕಾರಿ ದೃಶ್ಯವೂ ಹೌದು. ಆದರೆ ಈ ಜ್ವಾಲೆಯ ಕಿಡಿ ಅಥವಾ ಬೆಂಕಿಯ ಉಂಡೆಗಳು ಜನರಿರುವ ಬೆಟ್ಟದ ಕಡೆಗೆ ಹಾರುವುದಿಲ್ಲ. ಹೀಗಾಗಿ ಜನ ಯಾವುದೇ ಅಪಾಯ ಆತಂಕವಿಲ್ಲದೆ ಜ್ವಾಲೆ ಸ್ಪೋಟವನ್ನು ಕಣ್ತುಂಬಿಕೊಂಡಿದ್ದಾರೆ. ಕೆಲವು ಪ್ರವಾಸಿಗರು ಸುರಕ್ಷಿತ ಸ್ಥಳಕ್ಕೆ ಹಿಂತಿರುಗಿದರು, ಇತರರು ವಿನೋದದಿಂದ ಈ ದೃಶ್ಯವನ್ನು ನೋಡಿದರು.

ಟೊಂಗಾ ಜ್ವಾಲಾಮುಖಿ: ತೈಲ ಸೋರಿಕೆಯಿಂದ ಪ್ರಾಣಿ ಪಕ್ಷಿಗಳಿಗೆ ಹಾನಿ ಟೊಂಗಾ ಜ್ವಾಲಾಮುಖಿ: ತೈಲ ಸೋರಿಕೆಯಿಂದ ಪ್ರಾಣಿ ಪಕ್ಷಿಗಳಿಗೆ ಹಾನಿ

ಕತ್ತಲಲ್ಲಿ ಈ ದೃಶ್ಯ ತುಂಬಾ ಹತ್ತಿರದಲ್ಲಿ ನಡೆದಂತೆ ಸೆರೆಯಾಗಿದ್ದರೂ ಜನ ಮತ್ತೊಂದು ಬೆಟ್ಟದಲ್ಲಿ ನಿಂತಿರುವುದನ್ನು ಗಮನಿಸಬಹುದು. ಆದರೂ ಈ ವೈರಲ್ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಆಗಲಿ, ಎಲ್ಲಿ ನಡೆದಿದೆ ಎನ್ನುವ ಬಗ್ಗೆಯಾಗಲಿ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋವನ್ನು ವೈರಲ್ ಹಾಗ್ ಪೋಸ್ಟ್ ಮಾಡಿದ್ದು, 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕೆಲವು ಪ್ರವಾಸಿಗರು ಸುರಕ್ಷಿತ ಸ್ಥಳಕ್ಕೆ ಹಿಂತಿರುಗಿದರು, ಇತರರು ವಿನೋದದಿಂದ ಈ ದೃಶ್ಯವನ್ನು ನೋಡಿದರು.

Video: Tourists take a close-up selfie as the volcano erupts

ವಿಡಿಯೊವನ್ನು ಇಲ್ಲಿ ವೀಕ್ಷಿಸಿ:

ವೈರಲ್ ಆಗಿರುವ ವಿಡಿಯೋ ನೆಟ್ಟಿಗರು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವಂತೆ ಮಾಡಿದೆ. "ನಿಮ್ಮ ಫೋನ್ ಅನ್ನು ನಿಮ್ಮ ಜೇಬಿನಲ್ಲಿ ಇರಿಸಿ ಮತ್ತು ಓಡಿ!" ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

English summary
A video of tourists watching a volcano erupt up close has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X