
ವಿಡಿಯೋ: ಅವಳಿ ಸಹೋದರಿಯರನ್ನು ಮದುವೆಯಾದ ಒಂಟಿ ವರ- ದೂರು ದಾಖಲು
ಮುಂಬೈ ಡಿಸೆಂಬರ್ 5: ಅವಳಿ ಸಹೋದರಿಯರು ಒಬ್ಬನೇ ವರನನ್ನು ಮದುವೆಯಾದ ವಿಲಕ್ಷಣ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದೆ. ವಿವಾಹದ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಸದ್ಯ ಈ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ 'ತ್ರಿಕೋನ ಮದುವೆ' ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ.
ಮುಂಬೈನಲ್ಲಿ ಐಟಿ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುವ ತದ್ರೂಪಿ ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‌ನಲ್ಲಿ ಶುಕ್ರವಾರ ಅತುಲ್ ಅವತಾಡೆ ಅವರನ್ನು ವಿವಾಹವಾದರು. ವಧುವಿನ ಕುಟುಂಬದವರು ಮತ್ತು ವರನ ಕುಟುಂಬದ ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ನಡೆದಿದೆ ಎಂದು ವರದಿಯಾಗಿದೆ.
IT Layoffs : ಇತ್ತೀಚಿಗೆ 853 ಐಟಿ ಸಂಸ್ಥೆಗಳಿಂದ 1,37,492 ಟೆಕ್ಕಿಗಳ ವಜಾ
ಇದು ಒಮ್ಮತದ ಕಾರ್ಯವಾಗಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಜನರು ಈ ಮದುವೆಯ ಕಾನೂನುಬದ್ಧತೆ ಮತ್ತು ನೈತಿಕತೆಯ ಬಗ್ಗೆ ಊಹಾಪೋಹ ಮಾಡುತ್ತಿದ್ದಾರೆ.
ಪಿಂಕಿ ಮತ್ತು ರಿಂಕಿ ಅತುಲ್ ಅವರನ್ನು ಏಕೆ ಮದುವೆಯಾದರು?
ಅವಳಿ ಸಹೋದರಿಯರು ಮತ್ತು ಅತುಲ್ ಚಿಕ್ಕಂದಿನಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದ್ದರಿಂದ ಇಬ್ಬರು ಸಹೋದರಿಯರು ಅತುಲ್ ನನ್ನು ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
महाराष्ट्र के पंढरपुर में दो सगी बहनों ने एक ही लड़के से शादी की..#Viral #viralvideo pic.twitter.com/eZQFjLlvO5
— Vivek Gupta (@imvivekgupta) December 3, 2022
ವರನ ವಿರುದ್ಧ ದೂರು
ಸೋಲಾಪುರ ಪೊಲೀಸರು ಅತುಲ್ ಅವತಾಡೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. "ಡಿಸೆಂಬರ್ 2 ರಂದು ಅವಳಿ ಸಹೋದರಿಯರನ್ನು ಒಟ್ಟಿಗೆ ಮದುವೆಯಾದ ಅತುಲ್ ಅವತಾಡೆ ವಿರುದ್ಧ ಐಪಿಸಿ ಸೆಕ್ಷನ್ 494 ರ ಅಡಿಯಲ್ಲಿ ನಾನ್-ಕಾಗ್ನಿಜಬಲ್ ಅಪರಾಧಗಳ ಪ್ರಕರಣವನ್ನು ದಾಖಲಿಸಲಾಗಿದೆ. ಮದುವೆಯು ಅಕ್ಲುಜ್ ಪಟ್ಟಣದಲ್ಲಿ ನಡೆಯಿತು" ಎಂದು ಎಸ್ಪಿ ಸೋಲಾಪುರ ಶಿರೀಷ್ ಸರ್ದೇಶಪಾಂಡೆ ಹೇಳಿದ್ದಾರೆ.