ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಪರ್ವತಗಳಲ್ಲಿ ಓಟಗಾರ್ತಿಯನ್ನು ಹಿಂಬಾಲಿಸಿದ ನೂರಾರು ಕುರಿಗಳು

|
Google Oneindia Kannada News

ಪರ್ವತಗಳಲ್ಲಿ ಪಾದಯಾತ್ರೆಗೆ ಹೋಗುವುದು ಅದ್ಭುತ ಅನುಭವ. ಚಾರಣ(ಹೈಕಿಂಗ್) ಮಾಡುವಾಗ ಪ್ರಯಾಣ ಅದ್ಭುತ ಅನುಭವವನ್ನು ಕೊಡುತ್ತದೆ. ಈ ವೇಳೆ ಸುಂದರವಾದ ನೈಸರ್ಗಿಕ ದೃಶ್ಯಾವಳಿಗಳು ಮತ್ತು ಅದ್ಭುತ ಪ್ರಾಣಿಗಳು ಹಾಗೂ ಅವುಗಳ ಆವಾಸಸ್ಥಾನಗಳಲ್ಲಿ ಅವುಗಳ ನಡವಳಿಕೆಯನ್ನು ಕಣ್ತುಂಬಿಕೊಳ್ಳಬಹುದು. ಅಂತಹ ಒಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಇದು ಫ್ರಾನ್ಸ್‌ನಲ್ಲಿ ಟ್ರಯಲ್ ರನ್ನರ್ ಅನ್ನು ಅನುಸರಿಸುತ್ತಿರುವ ನೂರಾರು ಕುರಿಗಳನ್ನು ತೋರಿಸುತ್ತದೆ.

Eleanor Scholz ಎಂಬ ಬಳಕೆದಾರರು ಸೆಪ್ಟೆಂಬರ್ 18 ರಂದು Instagramನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅವರು ಪೋಸ್ಟ್ ಅನ್ನು "ನಾನು ನೋಡಿದ ಅತ್ಯುತ್ತಮ ದೃಶ್ಯದಲ್ಲಿ ಇದು ಒಂದಾಗಿದೆ" ಎಂದು ಬರೆದಿದ್ದಾರೆ. ಮಿಸ್ ಸ್ಕೋಲ್ಜ್ ಅವರು ಫ್ರಾನ್ಸ್‌ನಲ್ಲಿ ಏಕಾಂಗಿಯಾಗಿ ರನ್ನಿಂಗ್ ಮಾಡುವಾಗ ವಿಡಿಯೊವನ್ನು ಸೆರೆಹಿಡಿಯಲಾಗಿದೆ. ಈ ವಿಡಿಯೋ ಪರ್ವತಗಳಲ್ಲಿ ಓಟಗಾರ್ತಿಯನ್ನು ಹಿಂಬಾಲಿಸುವ ಕುರಿಗಳ ದೊಡ್ಡ ಹಿಂಡು ತೋರಿಸುತ್ತದೆ.

ಲಡಾಖ್ ಪರ್ವತಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿದ ರಫೇಲ್ ಲಡಾಖ್ ಪರ್ವತಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿದ ರಫೇಲ್

"ಫ್ರಾನ್ಸ್‌ನಲ್ಲಿ ಏಕಾಂಗಿಯಾಗಿ ಹೈಕಿಂಗ್ ಮಾಡುವಾಗ ನಾನು ಎದುರಿಸಿದ ದಿಗ್ಭ್ರಮೆಗೊಳಿಸುವ ದೃಶ್ಯವಿದು. ಇದನ್ನು ಮರೆಯಲು ಸಾಧ್ಯವಿಲ್ಲ" ಎಂದು ವಿಡಿಯೊದಲ್ಲಿ ಬರೆಯಲಾಗಿದೆ. ಮಿಸ್ ಸ್ಕೋಲ್ಜ್ ರನ್ ಮಾಡುತ್ತಿರುತ್ತಾರೆ. ಅವರ ಹಿಂದೆ ನೂರಾರು ಕರಿಗಳು ಓಡುತ್ತವೆ.

Video: Hundreds of sheep follow runners in the mountains

ಶ್ರೀಮತಿ ಸ್ಕೋಲ್ಜ್ ಅವರೊಂದಿಗೆ ಮಾತನಾಡಲು ವಿಡಿಯೋ ಮಾಡುತ್ತಿರುವ ಮಹಿಳೆ ಕೆಲವು ನಿಮಿಷಗಳ ಕಾಲ ನಿಲ್ಲುತ್ತಿದ್ದಂತೆ, ಕುರಿಗಳು ಸಹ ನಿಂತುಕೊಳ್ಳುತ್ತವೆ. ಸ್ಕೋಲ್ಜ್ ಅವರು ತಮ್ಮು ಓಟವನ್ನು ಪುನರಾರಂಭಿಸಿದಾಗ, ಇಡೀ ಕುರಿಗಳ ಹಿಂಡು ಅವಳನ್ನು ಮತ್ತೆ ಹಿಂಬಾಲಿಸುತ್ತವೆ.

"ಸ್ಕೋಲ್ಜ್ ಓಡುವುದನ್ನು ಮತ್ತೆ ಪ್ರಾರಂಭಿಸಿದಾಗ ಕುರಿಗಳು ಅವಳ ಹಿಂದೆ ಓಡಿದವು. ಅವಳು ಈಗ ಕುರುಬಳು" ಎಂದು ವಿಡಿಯೊದಲ್ಲಿನ ಪಠ್ಯವು ಹೇಳುತ್ತದೆ.

ವಿಡಿಯೊವನ್ನು ಹಂಚಿಕೊಂಡಾಗಿನಿಂದ 11.8 ಮಿಲಿಯನ್ ವೀಕ್ಷಣೆಗಳು ಮತ್ತು 6.9 ಲಕ್ಷ ಲೈಕ್‌ಗಳನ್ನು ಪಡೆದುಕೊಂಡಿದೆ. ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಹಲವಾರು ಬಳಕೆದಾರರು ಉಲ್ಲಾಸದ ಟೀಕೆಗಳನ್ನು ಪೋಸ್ಟ್ ಮಾಡಿದ್ದಾರೆ.

ಬಳಕೆದಾರರು "ಇದು ಹುಚ್ಚುತನದ ಸಂಗತಿಯಾಗಿದೆ. ಅವರು ಎಷ್ಟು ಮೈಲುಗಳಷ್ಟು ಓಡಿದ್ದಾರೆ ಮತ್ತು ಕುರಿಗಳಲ್ಲಿ ಯಾವುದಾದರೂ ಅವರಿಂದೆ ಅಲ್ಲಿವರೆಗೆ ಓಡಿದ್ದಾರೆ ನಾನು ಆಶ್ಚರ್ಯ ಪಡುತ್ತೇನೆ" ಎಂದು ಬರೆದಿದ್ದಾರೆ.

"ಇದು ತುಂಬಾ ಮುದ್ದಾಗಿದೆ" ಎಂದು ಕಾಮೆಂಟ್ ನೋಡಬಹುದು.

ಮೂರನೇ ಬಳಕೆದಾರರು ಸರಳವಾಗಿ "ಇದು ಉಲ್ಲಾಸದಾಯಕವಾಗಿದೆ" ಎಂದು ಹೇಳಿದ್ದಾರೆ.

English summary
A video of hundreds of sheep chasing runners in the mountains of France has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X