ಕೊಳದಲ್ಲಿ ಹಳ್ಳಿ ಹುಡುಗರ ದೇಸಿ WWE: ವಿಡಿಯೋ ನೋಡಿ 'ಹಾಕು ಮಗಾ ಎತ್ತಾಕು' ಎಂದ ನೆಟ್ಟಿಗರು....
ನಾವೆಲ್ಲರೂ ನಮ್ಮ ಬಾಲ್ಯದಲ್ಲಿ WWE ಅನ್ನು ನೋಡಿದ್ದೇವೆ. ನಮ್ಮ ನೆಚ್ಚಿನ ಸ್ಟಾರ್ ಕುಸ್ತಿಪಟುಗಳಿಗೆ ಹುರಿದುಂಬಿಸಿದ್ದೇವೆ. ಜೊತೆಗೆ ನಾವೆಲ್ಲರೂ ನಮ್ಮ ನೆಚ್ಚಿನ ಕುಸ್ತಿ ಪಟುಗಳಂತೆ ಕುಸ್ತಿಯಾಡಲು ಪ್ರಯತ್ನ ಕೂಡ ಮಾಡಿದ್ದೇವೆ. ನಮ್ಮ ಒಡಹುಟ್ಟಿದವರು ಮತ್ತು ಸ್ನೇಹಿತರ ಮೇಲೆ ಕೆಲವು ಅಪಾಯಕಾರಿ ಹೊಡೆತಗಳನ್ನು ಪ್ರಯತ್ನಿಸಿದ್ದೇವೆ.
ಇದೇ ಮಾದರಿಯಲ್ಲಿ ಇಬ್ಬರು ಹಳ್ಳಿ ಹುಡುಗರ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಗೆ ಅವರ ಬಾಲ್ಯದ ನೆನಪುಗಳನ್ನು ನೆನಪಿಸುತ್ತಿದೆ. ಕ್ಲಿಪ್‌ನಲ್ಲಿ ಇಬ್ಬರು ಹುಡುಗರು ತಮ್ಮ ಕುಸ್ತಿ ಅಖಾಡವಾಗಿ ಕೊಳವನ್ನು ಬಳಸಿಕೊಂಡು ಪರಸ್ಪರ ಹೊಡೆತಗಳನ್ನು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ಕ್ಲಿಪ್ ಕಾಡ್ಗಿಚ್ಚಿನಂತೆ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ತಮ್ಮ ಬಾಲ್ಯದ ಸುಂದರ ನೆನಪುಗಳನ್ನು ಮೆಲುಕು ಹಾಕುವಂತೆ ಪ್ರೇರೇಪಿಸಿದ್ದಾರೆ.

ದೇಸಿ WWE: ವೀಡಿಯೊ ಏನು ತೋರಿಸುತ್ತದೆ?
ದಿನಾಂಕವಿಲ್ಲದ ಕ್ಲಿಪ್‌ನಲ್ಲಿ ಹಳ್ಳಿಯ ಹುಡುಗರು ಕೆಲವು WWE ತಾರೆಯರಂತೆ ಕುಸ್ತಿ ಪ್ರದರ್ಶಿಸಿದ್ದಾರೆ. ಪರಸ್ಪರ ಕೊಳಕ್ಕೆ ಎತ್ತಾಕಿದ್ದಾರೆ. ಒಬ್ಬ ಹುಡುಗ ಕುಸ್ತಿಯ ಸಮಯದಲ್ಲಿ ತಾನು ದಣಿದಿದ್ದೇನೆ ಎಂಬಂತೆ ನಟಿಸುತ್ತಾನೆ ಮತ್ತು ಇನ್ನೊಬ್ಬನು ಮೂಲ ಕುಸ್ತಿ ಪಂದ್ಯದಂತೆಯೇ ತನ್ನ ಹೊಡೆತಗಳೊಂದಿಗೆ ಅವನನ್ನು ಕೆಳಗೆ ಉರುಳಿಸಲು ಪ್ರಯತ್ನಿಸುತ್ತಾನೆ.
ದೇಸಿ WWE: ದೇಸಿ ಕುಸ್ತಿಯನ್ನು ಇಲ್ಲಿ ವೀಕ್ಷಿಸಿ
Desi WWE kinda kalesh b/w Two bois pic.twitter.com/W621HWHfNn
— Ghar Ke Kalesh (@gharkekalesh) October 4, 2023
ಕ್ಲಿಪ್ ಅನ್ನು ಇಂಟರ್ನೆಟ್‌ನಲ್ಲಿ ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) 'ಘರ್ ಕೆ ಕಾಲೇಶ್' ಹೆಸರಿನ ಖಾತೆಯಿಂದ "Desi WWE kinda kalesh b/w Two bois" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಈ ಕ್ಲಿಪ್ 33,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. 470 ಕ್ಕೂ ಹೆಚ್ಚು ಇಷ್ಟಗಳನ್ನು ಸ್ವೀಕರಿಸಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು 'ದೇಸಿ ಕುಸ್ತಿ' X ಬಳಕೆದಾರರನ್ನು ಪ್ರೇರೇಪಿಸಿತು. ಬಳಕೆದಾರರು ವಿಶಿಷ್ಟವಾದ ಕುಸ್ತಿ ಪಂದ್ಯಕ್ಕಾಗಿ ಹುಡುಗರನ್ನು ಹೊಗಳಿದ್ದಾರೆ. ಆದರೆ ಇತರರು ಯಾವ ಹುಡುಗ WWE ಕುಸ್ತಿಪಟುವಿನ ಚಲನೆಯನ್ನು ಅನುಸರಿಸಿದ್ದಾನೆಂದು ಊಹಿಸಿದರು. ಈ ವಿಡಿಯೋ ಎಲ್ಲಿಯದ್ದು ಎನ್ನುವ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ವಿಡಿಯೋ ಹಂಚುಕೊಂಡ ಕೆಲವೇ ಗಂಟೆಗಳಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ನೋಡುಗರ ಬಾಲ್ಯವನ್ನು ನೆನಪಿಸಿದೆ.
ಭಯಾನಕ ವಿಡಿಯೋ ವೈರಲ್
ಇತ್ತೀಚೆಗೆ ಭಯಾನಕ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಮೊಸಳೆ ಇರುವ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆತನಲ್ಲಿ ಸ್ವಲ್ಪವೂ ಭಯ ಕಂಡು ಬಂದಿಲ್ಲ. ಕೊಳದ ದಡದಲ್ಲಿ ಮೊಸಳೆಗಳು ಮಲಗಿದ್ದರೆ ಆಮೊಸಳೆಗಳತ್ತ ವ್ಯಕ್ತಿ ಹೋಗುವು ಕಂಡು ಬರುತ್ತದೆ. ಮೊಸಳೆಗಳು ಅವನನ್ನು ನೋಡಿದ ತಕ್ಷಣ ದಾಳಿ ಮಾಡುವ ಬದಲು ಅವುಗಳು ಹೆದರಿ ಅವಸರದಲ್ಲಿ ನೀರಿಗೆ ಹಾರುವುದು ಕಾಣಬಹುದು.












Click it and Unblock the Notifications