ವಿಡಿಯೋ: ಸಿನಿಮಾ ಶೈಲಿಯಲ್ಲಿ ದಂಪತಿಯ ಪ್ರೀ ವೆಡ್ಡಿಂಗ್ ಫೋಟೋ ಶೂಟ್
ಪ್ರೀ ವೆಡ್ಡಿಂಗ್ ಶೂಟ್ ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿಬಿಟ್ಟಿದೆ. ಮದುವೆಗೂ ಮುನ್ನ ಜೋಡಿಗಳು ಬೇರೆ ಬೇರೆ ಸ್ಥಳಗಳಿಗೆ ಹೋಗಿ ಪ್ರೀ ವೆಡ್ಡಿಂಗ್ ಶೂಟ್ ಮಾಡುತ್ತಾರೆ. ಮದುವೆಯ ಪೂರ್ವದ ವಿಡಿಯೋಗಳನ್ನು ಸಹ ಇಂಟರ್ನೆಟ್‌ನಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತದೆ. ಇದು ಜನರಿಗೂ ತುಂಬಾ ಇಷ್ಟವಾಗಿದೆ. ಇಂತಹದೊಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಜೋಡಿಯೊಂದು ಸಿನಿಮಾ ಶೈಲಿಯಲ್ಲಿ ಫೋಟೋ ಶೂಟ್ ಮಾಡಿದೆ.
ಅಸಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದಂಪತಿ ಬೈಕ್ ಮೇಲೆ ಕುಳಿತಿದ್ದಾರೆ. ಇದಾದ ಬಳಿಕ ದಂಪತಿ ಕಡೆಯಿಂದ ಬೈಕ್ ಸ್ಟಾರ್ಟ್ ಮಾಡಿಸಿ ಕ್ರೇನ್ ಸಹಾಯದಿಂದ ಗಾಳಿಯಲ್ಲಿ ಕಾರಿನ ಮೇಲಿಂದ ಮೇಲೆತ್ತಿ ಬೈಕ್ ಅನ್ನು ಇನ್ನೊಂದು ಬದಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಈ ಪ್ರೀ ವೆಡ್ಡಿಂಗ್ ಶೂಟ್ ಸಿನಿಮಾ ಶೂಟಿಂಗ್ ಗಿಂತ ಕಡಿಮೆ ಏನೂ ಇಲ್ಲ. ಈ ವಿಡಿಯೋ ಚಿತ್ರೀಕರಣಕ್ಕೆ ಹತ್ತಾರು ಜನರೂ ನೆರೆದಿರುವುದು ಕಾಣಬಹುದು. ಕಾರಿನ ಮೇಲಿಂದ ಬೈಕ್ ತೆಗೆದ ಕೂಡಲೇ ಜನ ಚಪ್ಪಾಳೆ ತಟ್ಟಿದ್ದು ಕಾಣಿಸುತ್ತದೆ.
|
ವಿಡಿಯೋ ವೈರಲ್
@@bestofallll ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಜನರಿಂದ ಸಾಕಷ್ಟು ಲೈಕ್ ಪಡೆದಿದೆ. ವಿಡಿಯೋ ಶೇರ್ ಆದ ನಂತರ ಎಂಟು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಜೊತೆಗೆ 15,000 ಲೈಕ್‌ಗಳು ಮತ್ತು ಹಲವಾರು ಕಾಮೆಂಟ್‌ಗಳು ಬಂದಿವೆ. ಅನೇಕ ಜನರು ಈ ವಿಡಿಯೋವನ್ನು ತಮಾಷೆಯೆಂದು ಕರೆದಿದ್ದಾರೆ. ಅನೇಕರು ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಪ್ರೀ ವೆಡ್ಡಿಂಗ್ ಶೂಟ್ಗೆ ಹಲವಾರು ಪ್ರತಿಕ್ರಿಯೆ
ಮದುವೆಯ ಪೂರ್ವದಲ್ಲಿ ನಾನು ಅಂತಹ ಫೋಟೋ ಶೂಟ್ ಮಾಡುತ್ತೇನೆ ಎಂದು ಬಳಕೆದಾರರು ಬರೆದಿದ್ದಾರೆ. ನಾನು ಮೇ ತಿಂಗಳಲ್ಲಿ ಮದುವೆಯಾಗುತ್ತಿದ್ದೇನೆ ಮತ್ತು ನಾನು ಈ ಫೋಟೋಗ್ರಾಫರ್ ಅನ್ನು ಚಿತ್ರೀಕರಣಕ್ಕೆ ಕರೆಯುತ್ತೇನೆ ಎಂದು ಬಳಕೆದಾರರು ಕಮೆಂಟ್ ಹಾಕಿದ್ದಾರೆ.
ಆದರೆ ನೀವು ಅಂತಹ ಮದುವೆಯ ಪೂರ್ವ ಚಿತ್ರೀಕರಣವನ್ನು ಮಾಡದಿದ್ದರೆ ನೀವು ಮದುವೆಯಾಗಿದ್ದೀರಿ ಅಂತಾಗುವುದಿಲ್ಲವೇ? ಎಂದು ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಈ ಜೋಡಿಗಳು ಬಾಲಿವುಡ್‌ನಲ್ಲಿ ಪಾದಾರ್ಪಣೆ ಮಾಡುವ ಅರ್ಹರಾಗಿದ್ದಾರೆ. ಅವರಿಗೆ ಉತ್ತಮ ಅವಕಾಶ ಸಿಗಬಹುದು ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಅಲ್ಲದೇ ಸಿನಿಮಾ ನೋಡುವ ಮೂಲಕ ಮದುವೆಯನ್ನು ಮೂರ್ಖರನ್ನಾಗಿಸುತ್ತಿದ್ದೇವೆ ಎಂದು ಮತ್ತೊಬ್ಬರು ಹೇಳಿದ್ದಾರೆ.
|
ನೆಟ್ಟಿಗರ ಕಾಮೆಂಟ್
ಮತ್ತೊಂದು ವಿಚಾರ ಅಂದರೆ ಕೆಲವರು ಈ ಫ್ರೀ ವೆಡ್ಡಿಂಗ್ ಶೂಟ್ ಅನ್ನು 'ಧೂಮ್' ಸಿನಿಮಾಕ್ಕೆ ಹೋಲಿಸಿ ಇದನ್ನು 'ಧೂಮ್ 4' ಎಂದು ಕರೆದಿದ್ದಾರೆ. ಸಿನಿಮಾದಲ್ಲಿ ಮಾಡುವ ಸ್ಟಂಟ್ ಇಲ್ಲಿ ದಂಪತಿಗಳು ಮಾಡಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಸಿನಿಮಾ ಶೈಲಿಯಲ್ಲಿ ಇವರು ಬೈಕ್ ಸ್ಟೆಂಟ್ ಮಾಡುವ ಮೂಲಕ ಸದ್ಯ ಎಲ್ಲೆಡೆ ಹೊಸ ಕ್ರೇಜ್ ಹುಟ್ಟು ಹಾಕಿದ್ದಾರೆ.

ಈ ಹಿಂದೆ ರಸ್ತೆ ಗುಂಡಿಯಲ್ಲಿ ಫೋಟೋ ಶೂಟ್
ಇತ್ತೀಚೆಗೆ ವಿಚಿತ್ರವಾದ ವೆಡ್ಡಿಂಗ್ ಫೋಟೋ ಶೂಟ್ ಮಾಡುವುದು ಕಂಡು ಬರುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಕೇರಳದ ವಧುವೊಬ್ಬರು ತಮ್ಮ ಮದುವೆಯ ಚಿತ್ರೀಕರಣವನ್ನು ಸ್ಮರಣೀಯವಾಗಿಸಲು ಗುಂಡಿಗಳ ಸಮಸ್ಯೆಯನ್ನು ಹೈಲೈಟ್ ಮಾಡಿದ್ದರು. ವಧು ಮತ್ತು ವಿವಾಹದ ಛಾಯಾಗ್ರಾಹಕರನ್ನು ಒಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೆಂಪು ಸೀರೆ ಉಟ್ಟ ವಧು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ನಡೆಯುತ್ತಿರುವುದು ವಿಡಿಯೋದಲ್ಲಿತ್ತು.












Click it and Unblock the Notifications