Get Updates
Get notified of breaking news, exclusive insights, and must-see stories!

Valentine Week 2025: ಯಾವ ದಿನ ಕಿಸ್ ಡೇ? ಯಾವ ದಿನ ಹಗ್‌ ಡೇ? ಫೆ.7ರಿಂದ ಫೆ.14 ಪ್ರೇಮಿಗಳ ವಾರ ಶುರು

ಪ್ರೀತಿ ಎಂಬ ಎರಡಕ್ಷರದಲ್ಲಿ ತುಂಬಾ ಶಕ್ತಿ ಇದೆ. ಪ್ರೀತಿ ಇಲ್ಲದೆ ಜೀವನವೇ ಇಲ್ಲ. ಪ್ರತಿಯೊಬ್ಬರ ಬದುಕಿಗೆ ಪ್ರೀತಿ ಬೇಕೇ ಬೇಕು. ಪ್ರೀತಿ ಇಲ್ಲದ ಜೀವನವನ್ನು ನಾವ್ಯಾರೂ ಕೂಡ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಪ್ರೀತಿ ಇದ್ದಲ್ಲಿ ಮಾತ್ರ ಸಂತೋಷ, ಸ್ನೇಹ, ನೆಮ್ಮದಿ, ಖುಷಿ ಇರಲು ಸಾಧ್ಯ. ಅಂದಹಾಗೆ ಪ್ರೀತಿ ಬಗ್ಗೆ ಇಗ್ಯಾಕೆ ಮಾತು ಬಂತು ಅಂದರೆ ನಾಳೆಯಿಂದ ಪ್ರೇಮಿಗಳ ವಾರ ಶುರುವಾಗಲಿದೆ.

ಹೌದು.. ಫೆಬ್ರವರಿಯನ್ನು ಪ್ರೀತಿಯ ತಿಂಗಳು ಎಂದು ಕರೆಯಲಾಗುತ್ತದೆ. ಯಾಕೆಂದರೆ ಫೆಬ್ರವರಿ 7ರಿಂದ ಫೆಬ್ರವರಿ 14ರವರೆಗಿನ ಸಮಯ ಸ್ವಲ್ಪ ವಿಭಿನ್ನವಾಗಿರುತ್ತದೆ. ಪ್ರೇಮಿಗಳ ದಿನದ ಹಿಂದಿನ ಈ 7 ದಿನಗಳು ತುಂಬಾ ವಿಶೇಷವಾಗಿವೆ. ಅಂದರೆ ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು, ಪ್ರೀತಿಯನ್ನು ಹಂಚಿಕೊಳ್ಳಲು, ತಮ್ಮ ಪ್ರೇಮಿಯೊಂದಿಗೆ ಸಮಯವನ್ನು ಕಳೆಯಲು ಇರುವ ಸುಸಂದರ್ಭ.

Valentine Week 2025 See the complete list of Valentine Week dates from Feb 7 to Feb 14

ತಮ್ಮ ಪ್ರೇಮಿಗೆ ತಮ್ಮ ಪ್ರೀತಿಯ ವಿಷಯವನ್ನು ತಿಳಿಸಲು ಈ 7 ದಿನಗಳು ತುಂಬಾ ಮುಖ್ಯವಾಗಿವೆ. ಹಾಗಾದರೆ ಈ 7 ದಿನ ಯಾವ ದಿನವಾಗಿ ಆಚರಿಸಲಾಗುತ್ತದೆ? ಈ ದಿನಗಳ ವಿಶೇಷತೆ ಏನು? ಯಾವ ದಿನ ಯಾವ ಉಡುಗೊರೆ ನೀಡಲಾಗುತ್ತದೆ? ಎಲ್ಲವನ್ನೂ ತಿಳಿಯೋಣ.

2025ರ ಪ್ರೇಮಿಗಳ ವಾರದ ಸಂಪೂರ್ಣ ಪಟ್ಟಿ

ಫೆಬ್ರವರಿ 7, ಶುಕ್ರವಾರ - ಗುಲಾಬಿ ದಿನ

ಫೆಬ್ರವರಿ 8, ಶನಿವಾರ - ಪ್ರಪೋಸ್ ಡೇ

ಫೆಬ್ರವರಿ 9, ಭಾನುವಾರ - ಚಾಕೊಲೇಟ್ ದಿನ

ಫೆಬ್ರವರಿ 10, ಸೋಮವಾರ - ಟೆಡ್ಡಿ ಡೇ

ಫೆಬ್ರವರಿ 11, ಮಂಗಳವಾರ - ಪ್ರಾಮಿಸ್ ಡೇ

ಫೆಬ್ರವರಿ 12, ಬುಧವಾರ - ಅಪ್ಪುಗೆಯ ದಿನ

ಫೆಬ್ರವರಿ 13, ಗುರುವಾರ - ಕಿಸ್ ಡೇ

ಫೆಬ್ರವರಿ 14, ಶುಕ್ರವಾರ - ಪ್ರೇಮಿಗಳ ದಿನ

ರೋಸ್ ಡೇ

ಈ ದಿನ ಹೂವಿನಂತೆ ಪ್ರೀತಿ ಅರಳಲಿದೆ. ಫೆಬ್ರವರಿ 7 ಶುಕ್ರವಾರ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಗುಲಾಬಿಗಳನ್ನು ಪ್ರೇಮಿಗಳು ಪರಸ್ಪರ ಹಂಚಿಕೊಳ್ಳುತ್ತಾರೆ. ಗುಲಾಬಿ ಬಣ್ಣ ಪ್ರೇಮದ ಸಂಕೇತವಾಗಿದ್ದು, ಇದನ್ನು ನೀಡುವ ಮೂಲಕ ಪ್ರೇಮ ಪ್ರಸ್ತಾಪ ಮಾಡಲಾಗುತ್ತದೆ.

Valentine Week 2025 See the complete list of Valentine Week dates from Feb 7 to Feb 14

ಪ್ರಪೋಸ್ ಡೇ

ಪ್ರಪೋಸ್ ದಿನದಂದು ಪ್ರೀತಿ ಮಾಡುವವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಒಬ್ಬ ಹುಡುಗ ತಾನು ಪ್ರೀತಿಸುವ ಹುಡುಗಿಗೆ ತನ್ನ ಪ್ರೀತಿಯ ವಿಷಯವನ್ನು ಹೇಳಿಕೊಳ್ಳುತ್ತಾನೆ. ಈ ದಿನ ಹುಡುಗನಿಗೆ ಹುಡುಗಿ ಕೂಡ ಪ್ರಪೋಸ್ ಮಾಡಬಹುದು. ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರೆ ಅದನ್ನು ಒಪ್ಪಿಕೊಳ್ಳುತ್ತಾರೆ. ತಮ್ಮ ಪ್ರೀತಿಯನ್ನು ಮುಮದುವರೆಸುತ್ತಾರೆ.

ಚಾಕೊಲೇಟ್ ಡೇ

ಚಾಕೊಲೇಟ್ ಅನೇಕರ ಅಚ್ಚುಮೆಚ್ಚಿನ ಸಿಹಿ. ಪ್ರೇಮಿಗಳು ಇದನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಾರೆ. ವಿಶೇಷವಾಗಿ ಪ್ರೀತಿ ಮಾಡುವ ಹುಡುಗ ಹುಡುಗಿ ತಮ್ಮ ಪ್ರೀತಿಯನ್ನು ಒಪ್ಪಿಕೊಂಡ ನಂತರದ ದಿನ ಈ ಚಾಕೊಲೇಟ್ ಡೇ ಅನ್ನು ಆಚರಿಸುತ್ತಾರೆ. ಈ ದಿನ ಚಾಕೊಲೇಟ್ ಕೊಟ್ಟು ತಮ್ಮ ಪ್ರೇಮ ಒಪ್ಪಿಗೆಯನ್ನು ಆಚರಿಸುತ್ತಾರೆ. ಅಲ್ಲದೆ ಚಾಕೊಲೇಟ್ ಅನ್ನು ಪ್ರೀತಿಯ ಮೊದಲ ಉಡುಗೊರೆ ಎಂದೂ ಕರೆಯಲಾಗುತ್ತದೆ.

ಟೆಡ್ಡಿ ಡೇ

ಪ್ರೇಮಿಗಳ ವಾರದ ನಾಲ್ಕನೇ ದಿನ ಅಂದರೆ ಟೆಡ್ಡಿ ಡೇ. ಟೆಡ್ಡಿ ಡೇ ಹೆಸರೇ ಸೂಚಿಸುವಂತೆ ಈ ದಿನದಂದು ಪ್ರೇಮಿಗಳು ಪರಸ್ಪರ ಟೆಡ್ಡಿ ಬೇರ್‌ಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ವಿಶೇಷವಾಗಿ ಹುಡುಗರು ತಮ್ಮ ಗೆಳತಿಯರಿಗೆ ಟೆಡ್ಡಿ ಕೊಡುತ್ತಾರೆ. ಇದು ಪ್ರೇಮಿ ತನ್ನ ಪ್ರೇಮಿಗೆ ನೀಡುವ ಮೊದಲ ಉಡುಗೊರೆಯಾಗಿದೆ.

ಪ್ರಾಮಿಸ್ ಡೇ

ಪ್ರಾಮಿಸ್ ಡೇ ಎಂದರೆ ಪ್ರೀತಿಯನ್ನು ಪ್ರತಿಜ್ಞೆ ಮಾಡುವ ದಿನ. ಪ್ರಾಮಿಸ್ ಡೇಯಂದು ಪ್ರೇಮಿಗಳು ಪರಸ್ಪರ ವಿವಿಧ ಭರವಸೆಗಳನ್ನು ನೀಡುತ್ತಾರೆ. ಅವುಗಳನ್ನು ಉಳಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡುತ್ತಾರೆ. ಈ ದಿನವು ಪರಸ್ಪರ ಸಂಬಂಧವನ್ನು ಬಲಪಡಿಸುವ ದಿನವೆಂದು ಹೇಳಲಾಗುತ್ತದೆ. ಇದರಲ್ಲಿ ನಂಬಿಕೆ, ಪರಸ್ಪರ ಪ್ರೀತಿಯ ಒಂದು ನೋಟವಿದೆ.

ಅಪ್ಪುಗೆಯ ದಿನ

ಯಾವ ಜೋಡಿ ಒಬ್ಬರನ್ನೊಬ್ಬರು ಅಪ್ಪಿಕೊಳ್ಳಲು ಇಷ್ಟಪಡುವುದಿಲ್ಲ ಹೇಳಿ? ಹಗ್ ಡೇಯಂದು ಪ್ರೇಮಿಗಳು ಪರಸ್ಪರ ಭೇಟಿಯಾಗಿ ಅಪ್ಪಿಕೊಳ್ಳುತ್ತಾರೆ. ಅಪ್ಪುಗೆಯು ಸಾಂತ್ವನ ನೀಡುವುದಲ್ಲದೆ ಪ್ರೀತಿಯ ಭಾವನೆಯನ್ನೂ ನೀಡುತ್ತದೆ. ಹೀಗಾಗಿ ಪ್ರೇಮಿಗಳ ವಾರದ ಆರನೇ ದಿನ ಅಪ್ಪುಗೆಯ ದಿನವನ್ನಾಗಿ ಆಚರಿಸಲಾಗುತ್ತದೆ.

ಕಿಸ್ ಡೇ

ಪ್ರೇಮಿಗಳ ದಿನದ ಏಳನೇ ದಿನ ಕಿಸ್ ಡೇ ಅನ್ನು ಆಚರಿಸಲಾಗುತ್ತದೆ. ಈ ದಿನ ಪ್ರಣಯದಿಂದ ಕೂಡಿರುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸಲು, ಪರಸ್ಪರ ಹತ್ತಿರವಾಗಲು ಪ್ರೇಮಿಗಳು ಈ ದಿನ ಪರಸ್ಪರ ಚುಂಬಿಸುತ್ತಾರೆ.

ಪ್ರೇಮಿಗಳ ದಿನ

ಪ್ರೇಮಿಗಳ ವಾರ ಮುಗಿದ ನಂತರ ಪ್ರೇಮಿಗಳ ದಿನ ಬರುತ್ತದೆ. ಫೆಬ್ರವರಿ 14ರಂದು ಜೋಡಿಗಳು ಭೇಟಿಯಾಗುತ್ತಾರೆ. ಒಟ್ಟಿಗೆ ಹೊರಗೆ ಹೋಗುತ್ತಾರೆ. ಭೋಜನ ಮಾಡುವುದು ಮಾತ್ರವಲ್ಲದೆ ಡೇಟ್‌ಗಳಿಗೆ ಹೋಗುತ್ತಾರೆ. ಜೊತೆಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಹೀಗಾಗಿ ಪ್ರೇಮಿಗಳ ದಿನ ತುಂಬಾ ವಿಶೇಷವಾಗಿದೆ. ಈ ಪ್ರೇಮಿಗಳ ದಿನವನ್ನು ಆಚರಿಸಲು ಪ್ರೇಮಿಗಳು ವಿಭಿನ್ನ ಯೋಜನೆಗಳನ್ನು ಮಾಡುತ್ತಾರೆ. ಈ ದಿನದ ಉದ್ದೇಶ ಸಂಗಾತಿಯೊಂದಿಗೆ ಸಮಯ ಕಳೆಯುವುದು ಮತ್ತು ಪ್ರೀತಿಯಲ್ಲಿ ಮಿಂದೇಳುವುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+