ಕೊರೊನಾ ಲಸಿಕೆ, ಕೊರೊನಾ ಸೋಂಕಿನಿಂದಾಗುವ ಅಡ್ಡಪರಿಣಾಮಗಳ ಹೋಲಿಕೆ ಅಸಾಧ್ಯ

ಕೊರೊನಾ ಲಸಿಕೆ ಪಡೆದರೆ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟಾಗಲಿದೆ ಎನ್ನುವ ಭ್ರಮೆಯಲ್ಲಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಆದರೆ ಕೊರೊನಾ ಸೋಂಕು ತಗುಲಿದರೆ ದೇಹದ ಮೇಲಾಗುವ ದೀರ್ಘಕಾಲೀನ ದುಷ್ಪರಿಣಾಮದ ಬಗ್ಗೆಯೂ ನೀವು ಚಿಂತಿಸಬೇಕಿದೆ.

ಕೊರೊನಾ ಸೋಂಕು ಪಡೆದರೆ ಜ್ವರ ಬರಬಹುದು, ಮೈ ಕೈ ನೋವು ಒಂದೆರೆಡು ದಿನ ಇರಬಹುದು, ಸುಸ್ತು ಸಾಮಾನ್ಯ ಆದರೆ ಕೊರೊನಾ ಸೋಂಕು ತಗುಲಿದರೆ ಪಾರ್ಶ್ವವಾಯು, ಪಾರ್ಕಿನ್‌ಸನ್, ಶ್ವಾಸಕೋಶಕ್ಕೆ ದೀರ್ಘಕಾಲದ ಹಾನಿಯುಂಟುಮಾಡುತ್ತದೆ.

ಕೊರೊನಾ ಸೋಂಕಿಗಿಂತ ಕೊರೊನಾ ಲಸಿಕೆ ಪಡೆದು ಸೋಂಕನ್ನು ತಡೆಗಟ್ಟುವುದೇ ಸೂಕ್ತ, ಎರಡರಿಂದಲೂ ಉಂಟಾಗುವ ಅಡ್ಡಪರಿಣಾಮಗಳ ಹೋಲಿಕೆಯೇ ಸಾಧ್ಯವಿಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ.

 ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ ಕಡಿಮೆ

ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ ಕಡಿಮೆ

ಕೊರೊನಾ ಲಸಿಕೆ ಪಡೆದರೆ ಜ್ವರ, ಮೈಕೈನೋವು ಉಂಟಾಗಬಹುದು ಅದೂ ಸೌಮ್ಯ ಪ್ರಮಾಣದಲ್ಲಿರುತ್ತದೆ, ಒಂದೆರೆಡು ದಿನಕ್ಕೆ ಕಡಿಮೆಯಾಗುತ್ತದೆ. ಇದ್ಯಾವುದೂ ದೀರ್ಘಕಾಲದವರೆಗೆ ಇರುವುದಿಲ್ಲ, ಹೀಗಾಗಿ ಕೊರೊನಾ ಲಸಿಕೆ ಪಡೆಯಲು ಹಿಂಜರಿಕೆ ಬೇಡ ಎಂದು ತಜ್ಞರು ಹೇಳಿದ್ದಾರೆ.

 ದೀರ್ಘಕಾಲದ ಸಮಸ್ಯೆ

ದೀರ್ಘಕಾಲದ ಸಮಸ್ಯೆ

ಕೊರೊನಾ ಸೋಂಕು ತಗುಲಿದರೆ ಹೃದಯ ಸಂಬಂಧಿ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಆರಂಭವಾಗಬಹುದು, ಈ ಮೊದಲೇ ಮಧುಮೇಹದಂತಹ ಕಾಯಿಲೆಗಳಿದ್ದರೆ ಹೆಚ್ಚಾಗಿ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ, ಪಾರ್ಕಿನ್‌ಸನ್, ಪಾರ್ಶ್ವವಾಯು ಸೇರಿದಂತೆ ಹಲವು ರೋಗಗಳಿಗೆ ಎಡೆಮಾಡಿಕೊಡುತ್ತದೆ.

 ಭಾರತದಲ್ಲಿ 36 ಕೋಟಿ ಮಂದಿಗೆ ಕೊರೊನಾ ಲಸಿಕೆ

ಭಾರತದಲ್ಲಿ 36 ಕೋಟಿ ಮಂದಿಗೆ ಕೊರೊನಾ ಲಸಿಕೆ

ಕಳೆದ 24 ಗಂಟೆಗಳಲ್ಲಿ 32,40,007 ಮಂದಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. 18 ರಿಂದ 44 ವಯೋಮಾನದ 16,00,825 ಜನರಿಗೆ ಮೊದಲ ಡೋಸ್ ಹಾಗೂ 1,09,913 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೂ ಇದೇ ವಯೋಮಾನದ 10,45,24,240 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 30,42,302 ಜನರಿಗೆ ಎರಡನೇ ಡೋಸ್ ಲಸಿಕೆ ವಿತರಿಸಲಾಗಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 172 ದಿನಗಳಲ್ಲಿ 36 ಕೋಟಿಗಿಂತಲೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಒಟ್ಟು 36,09,56,621 ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

 ಅಡ್ಡಪರಿಣಾಮಗಳ ಬಗ್ಗೆ ಹೋಲಿಕೆ ಅಸಾಧ್ಯ

ಅಡ್ಡಪರಿಣಾಮಗಳ ಬಗ್ಗೆ ಹೋಲಿಕೆ ಅಸಾಧ್ಯ

''ಕೊರೊನಾ ಲಸಿಕೆ ಹಾಗೂ ಕೊರೊನಾ ಸೋಂಕಿನಿಂದಾಗುವ ಅಡ್ಡಪರಿಣಾಮಗಳ ಹೋಲಿಕೆ ಅಸಾಧ್ಯವಾದದ್ದು, ಕೊರೊನಾ ಲಸಿಕೆಯಿಂದ ಸೌಮ್ಯ ಪ್ರಮಾಣದ ಅಡ್ಡಪರಿಣಾಮ ಉಂಟಾಗುತ್ತದೆ, ಹಾಗೂ ಅದು ಬೇಗ ವಾಸಿಯಾಗುತ್ತದೆ, ಆದರೆ ಕೊರೊನಾ ಸೋಂಕಿನಿಂದಾಗುವ ದುಷ್ಪರಿಣಾಮ ದೀರ್ಘಕಾಲ ಇರುವಂಥದ್ದಾಗಿದ್ದು, ಇಡೀ ದೇಹದ ಮೇಲೆ ದುಷ್ಪರಿಣಾಮ ಬೀರಲಿದೆ, ಸಾವಿಗೂ ಕಾರಣವಾಗಲಿದೆ'' ಎಂದು ಡಾ. ಸ್ಟಾರ್ಟ್ ಬರ್ಗರ್ ಹೇಳಿದ್ದಾರೆ.
ಮಾಡೆರ್ನಾ ಹಾಗೂ ಫೈಜರ್ ಲಸಿಕೆ ಪಡೆಯುವುದರಿಂದ ಹೃದಯ ಸಂಬಂಧಿ ಕಾಯಿಲೆ ಶುರುವಾಗುತ್ತದೆ ಎಂದು ಹೇಳಲಾಗಿತ್ತು. ಭಾರತದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್ V ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+