V.Somanna Profile: ಪ್ರಭಾವಿ ಲಿಂಗಾಯತ ರಾಜಕಾರಣಿ ವಿ. ಸೋಮಣ್ಣನವರ ವ್ಯಕ್ತಿ ಚಿತ್ರಣ
ವಿ. ಸೋಮಣ್ಣನವರ ಕುರಿತ ಒಂದು ಪರಿಚಯವನ್ನು ಇಲ್ಲಿ ನೀಡಲಾಗಿದೆ. ಅವರ ರಾಜಕೀಯದ ಹಾದಿಯ ಬಗ್ಗೆ ಇಲ್ಲಿ ವಿವರಿಸಲಾಗಿದೆ ಗಮನಿಸಿ.
ಬೆಂಗಳೂರು, ಫೆಬ್ರವರಿ, 28: ಪ್ರಸ್ತುತ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಉಸ್ತವಾರಿ ಸಚಿವರಾಗಿರುವ ವಿ.ಸೋಣ್ಣನವರ ಪರಿಚಯದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ವಿ. ಸೋಮಣ್ಣನವರ ಕುರಿತ ಒಂದು ಪರಿಚಯವನ್ನು ಇಲ್ಲಿ ನೀಡಲಾಗಿದೆ.
ಹಾಗೆಯೇ ವಿ. ಸೋವಣ್ಣನವರ ರಾಜಕೀಯದ ಹಾದಿ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಇವರು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ಎಲ್ಲಾ ಪಕ್ಷದ ನಾಯಕರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಹಾಗಾದರೆ ಇವರ ವ್ಯಕ್ತಪರಿಚಯವನ್ನು ಇಲ್ಲಿ ನೋಡೋಣ ಬನ್ನಿ.

ಐದು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾದ ವಿ. ಸೋಮಣ್ಣ ಅಪಾರ ರಾಜಕೀಯ ಅನುಭವವನ್ನು ಹೊಂದಿದ್ದಾರೆ. ಹಾಗೆಯೇ ಬೆಂಗಳೂರಿನ ರಾಜಕೀಯದ ಮೇಲೆ ಭಾರಿ ಹಿಡಿತ ಹೊಂದಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಸೇರಿದರು.
ವಿ. ಸೋಮಣ್ಣನವರ ವಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಇವರು ಜುಲೈ 20, 1950ರಲ್ಲಿ ದೊಡ್ಡಮರಳವಾಡಿಯಲ್ಲಿ ಜನಿಸಿದ್ದಾರೆ. ಹಾಗೆಯೇ ವಿವಿ ಪುರ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಮುಗಿಸಿದ್ದಾರೆ. ಇವರ ತಂದೆ ದಿ. ವೀರಣ್, ಕೆಂಪಮ್ಮ ತಾಯಿಯಾಗಿದ್ದಾರೆ.
ವಿ. ಸೋಮಣ್ಣನವರ ರಾಜಕೀಯದ ಹಾದಿ
ಇವರು ಬೆಂಗಳೂರು ನಗರಾಭಿವೃದ್ಧಿ, ಆಹಾರ, ತೋಟಗಾರಿಕೆ, ವಸತಿ ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆಯೂ ಮತ್ತೆ ಸಚಿವರಾಗಿ ಅದೇ ಖಾತೆಯನ್ನು ನಿಭಾಯಿಕೊಂಡು ಬಂದಿದ್ದಾರೆ.

ಶಿಕ್ಷಣದ ವಿವರ ಇಲ್ಲಿದೆ
ಕಾಲೇಜು ದಿನಗಳಲ್ಲಿಯೇ ವಿದ್ಯಾರ್ಥಿ ಸಂಘಟನೆಗಳ ನಾಯಕರಾಗಿದ್ದ ವಿ. ಸೋಮಣ್ಣ, 1983ರಲ್ಲಿ ಬೆಂಗಳೂರಿನ ವಿಜಯನಗರದಿಂದ ಮಹಾನಗರ ಪಾಲಿಕೆ ಸದಸ್ಯರಾಗಿ, ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಈ ಮೂಲಕ ಸಂಘಟನಾ ಚತುರ ಅಂತಲೇ ಹೆಸರು ಪಡೆದಿದ್ದಾರೆ. ಇನ್ನು1994ರಲ್ಲಿ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸುವ ಮೂಲಕ ದಾಖಲೆ ಬಹುಮತದಿಂದ ಶಾಸಕರಾಗಿ ಆಯ್ಕೆಯಾದರು. 1996ರಲ್ಲಿ ಬಂದೀಖಾನೆ ಸಚಿವರಾಗಿ ಹಾಗೂ 1999ರಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ
ಯಾವೆಲ್ಲ ಖಾತೆಗಳನ್ನು ನಿಭಾಯಿಸಿದ್ದಾರೆ?
ನಂತರ 1999ರ ಚುನಾವಣೆಯಲ್ಲಿ ಬಿನ್ನಿಪೇಟೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದರು. 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, 2008ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ 4ನೇ ಬಾರಿ ಆಯ್ಕೆಯಾದರು. ಬಳಿಕ ಬಿಜೆಪಿ ಸೇರಿದ ವಿ. ಸೋಮಣ್ಣ ವಸತಿ ಸಚಿವರಾದರು.
ಜೂನ್ 2010ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದದರು. ಬಳಿಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾಗಿ, 2010 ರಿಂದ 2013ರ ತನಕ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದರು. 2021ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರ್ಪಡೆಯಾದ ವಿ. ಸೋಮಣ್ಣ, ವಸತಿ ಇಲಾಖೆ, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಹೊಣೆಹೊತ್ತುಕೊಂಡು.
2019-2020ರವರೆಗೆ ಕರ್ನಾಟಕ ಸರ್ಕಾರದಲ್ಲಿ ರೇಷ್ಮೆ ಸಚಿವರಾಗಿ ಕಾರ್ಯನಿರ್ವಹಿಸಿದರು. 2019-2020ರವರೆಗೆ ತೋಟಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದರು. ಅದೇ 2019ರಲ್ಲಿ ವಸತಿ ಸಚಿವರಾಗಿ ವಿ. ಸೋಮಣ್ಣ ಬಿ. ಎಸ್. ಯಡಿಯೂರಪ್ಪನವರ ಸಂಪುಟವನ್ನು ಸೇರಿದರು. ನಂತರ ಸಿಎಂ ಬೊಮ್ಮಾಯಿ ಸಂಪುಟ ಸೇರಿದ ಇವರು ಇಂದಿನವರೆಗೂ ವಸತಿ ಸಚಿವರು ಮತ್ತು ಮೂಲಸೌಕರ್ಯ ಮತ್ತು ಅಭಿವೃದ್ಧಿ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಹೀಗೆ ವಿ. ಸೋಮಣ್ಣನವರ ರಾಜಕೀಯ, ಶಿಕ್ಷಣದ ಬಗ್ಗೆ ವಿವರಿಸಲಾಗಿದೆ.












Click it and Unblock the Notifications