ಉತ್ತರ ಪ್ರದೇಶ ಬಿಜೆಪಿ ಕೋಟೆಯಾಗಿ ಉಳಿಯಲಿದೆಯೇ?

ಲಕ್ನೋ, ಜನವರಿ 30; ಅದು 2021ರ ಏಪ್ರಿಲ್ ಮೊದಲ ವಾರದಲ್ಲಿ ಕೋವಿಡ್ ಎರಡನೇ ಅಲೆ ಶುರುವಾಗುತ್ತಿದ್ದ ಸಮಯ. ಇತ್ತ ಪೂರ್ವ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಆಮ್ಲಜನಕದ ಹಾಸಿಗೆಯೊಂದನ್ನು ಆಕೆ ಪಡೆದುಕೊಂಡಿದ್ದಳು. ಆದರೆ ಅದೆಲ್ಲವೂ ಸ್ವಲ್ಪದರಲ್ಲೇ ನಿಷ್ಪ್ರಯೋಜಕವಾಯಿತು.

ಆಸ್ಪತ್ರೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದಂತೆ ಸ್ವಾತಿಯ ಆರೋಗ್ಯವೂ ಹದಗೆಟ್ಟಿತು. "ಆಕ್ಸಿಜನ್ ಮಾಸ್ಕ್ ಹಾಕಿದ ಪರಿಣಾಮ ಅವಳಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ'' ಎಂದು ರೋಹಿತ್ ಹೇಳುತ್ತಾರೆ. ಈ ನಡುವೆ ಆಸ್ಪತ್ರೆಯಲ್ಲೇ ತನ್ನ ದಿನಚರಿಯನ್ನು ಸ್ವಾತಿ ಡೈರಿಯಲ್ಲಿ ಬರೆಯುತ್ತಿದ್ದಳು.‌ ತನ್ನ ಆರೋಗ್ಯದ ಬಗ್ಗೆ ಕಾಳಜಿ ತೋರುವಂತೆ ವೈದ್ಯರಿಗೆ ಮನವಿ ಮಾಡಿದ್ದಳು. ಇದು ಡೈರಿಯಲ್ಲಿ ದಾಖಲಾಗಿತ್ತು.‌ ಆಕೆಯ ಬರವಣಿಗೆ ಕಂಡು ನಾವು ಆತಂಕಗೊಂಡೆವು. ಆದರೆ, ಐದನೇ ದಿನ, ಸ್ವಾತಿ 'ಸೀತಾ-ರಾಮ್', 'ಸೀತಾ-ರಾಮ್' ಎಂದು ಬರೆಯಲು ಶುರು ಮಾಡಿದಳು.

ಆದರೆ, ಅವಳ ಈ ಪಠಣ ಕೆಲಸ ಮಾಡಲಿಲ್ಲ. ಆಸ್ಪತ್ರೆಗೆ ದಾಖಲಾದ ಸುಮಾರು ಒಂದು ವಾರದ ನಂತರ‌ ಸ್ವಾತಿ ನಿಧನಳಾದಳು. ಆಕೆಗೆ 28 ​​ವರ್ಷ ವಯಸ್ಸಾಗಿತ್ತು. ಆಸ್ಪತ್ರೆಯವರು ಸ್ವಾತಿಯ ಎಲ್ಲಾ ವಸ್ತುಗಳನ್ನು ಕುಟುಂಬಕ್ಕೆ ಹಿಂದಿರುಗಿಸಿದರು. ಆದರೆ, ಅವಳ ಡೈರಿ ಕಾಣೆಯಾಗಿತ್ತು. "ನಾವು ಡೈರಿಯನ್ನು ಮರಳಿ ಪಡೆಯುವವರೆಗೆ ಮೃತದೇಹವನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆವು" ಎಂದು ರೋಹಿತ್ ಹೇಳುತ್ತಾರೆ.

"ಬಹುಶಃ ಸ್ವಾತಿ ಬರೆದ ಆ ಡೈರಿ ಆಸ್ಪತ್ರೆಯೊಳಗಿನ ಅವ್ಯವಸ್ಥೆಯನ್ನು ಬಹಿರಂಗಪಡಿಸುತ್ತದೆ ಎಂದು ಅವರು ಹೆದರಿದ್ದರು. ನಮ್ಮ ಅವರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಅಂತಿಮವಾಗಿ ಆಸ್ಪತ್ರೆ ಸಿಬ್ಬಂದಿ ಪಶ್ಚಾತ್ತಾಪ ಪಟ್ಟು ಅವಳ ದಿನಚರಿಯನ್ನು ಹಿಂದಿರುಗಿಸಿದನು. ಆಶ್ಚರ್ಯವೆಂದರೆ ಅವಳು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಬರೆದಿದ್ದ ಪುಟಗಳೇ ಮಾಯವಾಗಿದ್ದವು. ಅದನ್ನು ಯಾರೋ ಹರಿದು ಹಾಕಿದ್ದರು" ಎನ್ನುತ್ತಾರೆ ರೋಹಿತ್.

ಬ್ರಾಹ್ಮಣ ಸಮುದಾಯದ ರೋಹಿತ್ ವಾರಣಾಸಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ನಾರಾಯಣಪುರ ಗ್ರಾಮದ ರೈತ. ರೋಹಿತ್ಗೆ ಆಗಿರುವ ಘೋರ ಅನುಭವಕ್ಕೆ ಇನ್ನೂ ಒಂದು ವರ್ಷವೂ ತುಂಬಿಲ್ಲ. ಆಗಲೇ ಏಳು ಹಂತದಲ್ಲಿ ನಡೆಯುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ. ರಾಜ್ಯ ಸರಕಾರ ಆರೋಗ್ಯ ವಿಚಾರದಲ್ಲಿ ಒಂದೊಳ್ಳೆ ಯೋಜನೆ ಹಾಕಿಕೊಳ್ಳಲಿಲ್ಲ. ಅಸಮರ್ಪಕ ವ್ಯವಸ್ಥೆಯಿಂದ ಜನರಿಗೆ ಕನಿಷ್ಠ ಮೂಲಸೌಕರ್ಯ ತಲುಪಲಿಲ್ಲ. ಇದನ್ನು ರೋಹಿತ್ ವೈಯಕ್ತಿಕವಾಗಿ ಎದುರಿಸಿದರು ಮತ್ತು ಆಳವಾಗಿ ಅನುಭವಿಸಿದರು. (ಮಾಹಿತಿ ಕೃಪೆ; Business Journal)

2ನೇ ಅವಧಿಗೆ ಯೋಗಿ ಸರ್ಕಾರ ಅರ್ಹವಾಗಿದೆ

2ನೇ ಅವಧಿಗೆ ಯೋಗಿ ಸರ್ಕಾರ ಅರ್ಹವಾಗಿದೆ

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು ಎರಡನೇ ಅವಧಿಗೆ ಅಧಿಕಾರಕ್ಕೆ ಬರಲು ಅರ್ಹವಾಗಿದೆ ಎಂದು ರೋಹಿತ್ ನಂಬುತ್ತಾರೆ. "ಕಳೆದ ಐದು ವರ್ಷಗಳಲ್ಲಿ ಏನೂ ಕೆಲಸಗಳು ನಡೆದೇ ಇಲ್ಲ ಎಂದು ಹೇಳಲಾಗುವುದಿಲ್ಲ" ಎಂದು ರೋಹಿತ್ ಹೇಳುತ್ತಾರೆ.

"ನಮ್ಮ ಹಳ್ಳಿಯಲ್ಲಿ ಮೊದಲಿಗಿಂತಲೂ ವಿದ್ಯುತ್ ಸರಬರಾಜು ಹೆಚ್ಚು ನಿಯಮಿತವಾಗಿದೆ. ಈ ಮೊದಲು ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ ಮಾತ್ರ ವಿದ್ಯುತ್ ಸಿಗುತ್ತಿತ್ತು. ರಸ್ತೆಗಳು ಉತ್ತಮಗೊಂಡಿವೆ. ನಾವು ಮೂರು ವರ್ಷಗಳ ಹಿಂದೆ ವಾರಣಾಸಿ ನಗರದಲ್ಲಿ ವಾಸಿಸುತ್ತಿದ್ದೆವು. ಆದರೆ ವಿದ್ಯುತ್ ಅನ್ನು ಕ್ರಮಬದ್ಧಗೊಳಿಸಿ, ಮೂಲಸೌಕರ್ಯಗಳಲ್ಲಿ ಸುಧಾರಣೆ ತಂದ ನಂತರ ನಾವು ಮತ್ತೆ ಗ್ರಾಮಕ್ಕೆ ಮರಳಿದ್ದೇವೆ" ಎನ್ನುತ್ತಾರೆ.

ಗ್ರಾಮಾಂತರ ಪದೇಶಕ್ಕೆ ಘಾಸಿ

ಗ್ರಾಮಾಂತರ ಪದೇಶಕ್ಕೆ ಘಾಸಿ

ಕೊರೊನಾ ಎರಡನೇ ಅಲೆಯು ಗ್ರಾಮಾಂತರ ಪ್ರದೇಶವನ್ನು ಹೆಚ್ಚು ಘಾಸಿಗೊಳಿಸಿತು. ಭಾರತದಲ್ಲಿ ಒಂದೇ ಒಂದು ರಾಜ್ಯವೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದಾಗ್ಯೂ ಉತ್ತರ ಪ್ರದೇಶದ ಸಾಮೂಹಿಕ ಅಂತ್ಯಸಂಸ್ಕಾರ ಮತ್ತು ನೀರಿನಲ್ಲಿ ತೇಲುತ್ತಿರುವ ದೇಹಗಳ ಚಿತ್ರಗಳು ಭಯಾನಕವಾಗಿದ್ದು, ರಾಜ್ಯದಲ್ಲಿ ಕೋವಿಡ್ ಸಾವಿನ ಸಂಖ್ಯೆ ಇತರ ರಾಜ್ಯಗಳಿಗಿಂತ ಹೆಚ್ಚಾಯಿತು. ಇದು ಹಾಲಿ ಸರ್ಕಾರದ ಪತನ ಎಂದು ಹಲವರು ಭಾವಿಸಿದ್ದರು. ಆದಾಗ್ಯೂ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ತೊಲಗಿಸುವುದು ಕಷ್ಟಸಾಧ್ಯ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಅನೇಕ ಹಿಂದೂ ಮತದಾರರು‌ ನಾನಾ ದುರಂತಗಳನ್ನು ಎದುರಿಸಿದ್ದರೂ ಅಥವಾ ಕಂಡಿದ್ದರೂ ಅಧಿಕಾರದಲ್ಲಿರುವವರ ಮೇಲೆ ನಂಬಿಕೆಯನ್ನು ಕಳೆದುಕೊಂಡಿಲ್ಲ.

ಬಿಎಸ್‌ಪಿ ಮತ್ತು ಎಸ್‌ಪಿ

ಬಿಎಸ್‌ಪಿ ಮತ್ತು ಎಸ್‌ಪಿ

ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಬಹುದಾದ ಎರಡು ಪ್ರಮುಖ ಸವಾಲುಗಳೆಂದರೆ ಮಾಯಾವತಿ ನೇತೃತ್ವದ ಬಿಎಸ್‌ಪಿ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ. 2007 ರಲ್ಲಿ ಮುಖ್ಯಮಂತ್ರಿಯಾದ ಮಾಯಾವತಿ ಮತಗಳ ಹಂಚಿಕೆಯನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ. ಇತ್ತ ಬಿಜೆಪಿ ಮತ್ತು ಎಸ್‌ಪಿ ನಡುವಿನ ಸ್ಪರ್ಧೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 2017ರಲ್ಲಿ 403 ಕ್ಷೇತ್ರಗಳಲ್ಲಿ 312 ಕ್ಷೇತ್ರಗಳಲ್ಲಿ ಗೆದ್ದ ಬಿಜೆಪಿ ಭಾರಿ ಬಹುಮತದೊಂದಿಗೆ ಅಧಿಕಾರ ಹಿಡಿಯಿತು. ಯಾದವೇತರ ಓಬಿಸಿ ಮತಗಳು ಮತ್ತು ಜಾತವೇತರ ದಲಿತರ ಮತಗಳನ್ನು ಒಟ್ಟುಗೂಡಿಸುವ ಮೂಲಕ ಬಿಜೆಪಿ ರಾಜ್ಯದಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು. ‌ಹಿಂದೂ ಮೇಲ್ಜಾತಿ ವೋಟುಗಳು ಪ್ರಧಾನ ಪಾತ್ರ ವಹಿಸಿತು. ಇವುಗಳೇ ಬಿಜೆಪಿ ಪ್ರಮುಖ ಮತಬ್ಯಾಂಕ್ ಆಗಿ ರೂಪುಗೊಂಡವು. ಸದ್ಯ ಅಖಿಲೇಶ್ ಪಕ್ಷ ಮತ್ತೆ ಅಧಿಕಾರ ಬರಬೇಕಾದರೆ ಪ್ರತಿ ಕ್ಷೇತ್ರದಲ್ಲಿ ಮುಸ್ಲಿಮರು ಮತ್ತು ಯಾದವರ ಮತಗಳ ಹಂಚಿಕೆಯನ್ನು ಗಮನಿಸಬೇಕಾಗುತ್ತದೆ.

ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆ

ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆ

ಉತ್ತರ ಪ್ರದೇಶದ ವಾರಣಾಸಿಯಿಂದ ಸುಮಾರು 800 ಕಿ. ಮೀ. ದೂರದಲ್ಲಿವ ವ್ಯಕ್ತಿಯೊಬ್ಬರು ಈ ಚುನಾವಣೆಯಲ್ಲಿ ಕೋವಿಡ್ ತಪ್ಪು ನಿರ್ವಹಣೆ, ಏರುತ್ತಿರುವ ಹಣದುಬ್ಬರ ಅಥವಾ ನಿರುದ್ಯೋಗ ಸಮಸ್ಯೆ ಬಿಜೆಪಿಗೆ ಯಾಕೆ ಹೆಚ್ಚು ವ್ಯತ್ಯಾಸವನ್ನು ಮಾಡುವುದಿಲ್ಲ ಎಂಬುದನ್ನು ವಿವರಿಸುತ್ತಾರೆ. "ಬಿಜೆಪಿ ನಾಯಕ ನಮ್ಮ ಜೀವನವನ್ನು ಶೋಚನೀಯಗೊಳಿಸುತ್ತಿದ್ದರೂ. ನಮ್ಮ ಜಾತಿಯಿಂದ ಬಂದ ನಾಯಕರಾದ ಕಾರಣ ನಾವು ಹೆಚ್ಚು ಭರವಸೆ ಹೊಂದಿದ್ದೇವೆ" ಎಂದು ಅವರು ಹೇಳುತ್ತಾರೆ. "

ಈ ವ್ಯಕ್ತಿಯು 2021ರ ಏಪ್ರಿಲ್‌ನಲ್ಲಿ ಕೋವಿಡ್ ನಿಂದ ತನ್ನ ಸಹೋದರನನ್ನು ಕಳೆದುಕೊಂಡನು. ಮೃತ ವ್ಯಕ್ತಿ ಶಿಕ್ಷಕರಾಗಿದ್ದರು. ಎರಡನೇ ಅಲೆಯ ನಡುವೆಯೇ ಪಂಚಾಯತ್ ಚುನಾವಣೆಯನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿ ಶಿಕ್ಷಕರನ್ನು ಶಾಲೆಗಳಿಗೆ ಹಾಜರಾಗುವಂತೆ ಸೂಚಿಸಿತು. ನನ್ನ ಸಹೋದರ ಮತದಾನವನ್ನು ನಡೆಸುವ ಶಿಕ್ಷಕರ ತರಬೇತಿಯನ್ನು ನಡೆಸಿದ್ದನು'' ಎಂದು ಅವರು ಹೇಳುತ್ತಾರೆ.

ಈತನ ಸಹೋದರ ಪಶ್ಚಿಮ ಉತ್ತರ ಪ್ರದೇಶದ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ಕೊರೊನಾ ಸೋಂಕಿಗೆ ಒಳಗಾಗಿ ಉಸಿರಾಟ ಸಮಸ್ಯೆಯಿಂದ ನಿಧನರಾದರು. "ನಾನು ನನ್ನ ಸಹೋದರನಿಗೆ ತುಂಬಾ ಆಪ್ತನಾಗಿದ್ದೆ. ಅವನಿಗೆ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳು ಇದ್ದಾರೆ. ನಮ್ಮ ಬದುಕು ಮೊದಲಿನಂತೆ ಆಗಲು ತುಂಬಾ ಸಮಯಬೇಕು. ಆದರೆ, ಇದು ನಮ್ಮ ಮತದಾನದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಭಾವಿಸುತ್ತೇನೆ" ಎನ್ನುತ್ತಾರೆ.

ಬಿಜೆಪಿಗೆ ಮತ ಹಾಕಲಿದ್ದಾರೆ

ಬಿಜೆಪಿಗೆ ಮತ ಹಾಕಲಿದ್ದಾರೆ

ಈತ ಠಾಕೂರ್ ಮನೆತನಕ್ಕೆ ಸೇರುತ್ತಾನೆ. ಈ ಸಮುದಾಯವು ಸಾಂಪ್ರದಾಯಿಕವಾಗಿ ಬಿಜೆಪಿಗೆ ಮತವನ್ನು ಹಾಕಿಕೊಂಡು ಬಂದಿದೆ. ಈ ಹಿಂದೆ ರಾಜನಾಥ್ ಸಿಂಗ್ ಪ್ರಮುಖ ಠಾಕೂರ್ ನಾಯಕರಾಗಿದ್ದರು. ಪ್ರಸ್ತುತ ಸ್ವತಃ ಯೋಗಿ ಆದಿತ್ಯನಾಥ ಠಾಕೂರ್ ಸಮುದಾಯದ ಮುಖ್ಯಮಂತ್ರಿಯಾಗಿದ್ದಾರೆ. "ಈ ಸರ್ಕಾರವು ಉದ್ಯೋಗ ಅಥವಾ ಕೋವಿಡ್ ಸಮಯದಲ್ಲಿ ಆಕ್ಸಿಜನ್ ಒದಗಿಸಲಿಲ್ಲವೆಂದು ನಾನು ಬೇರೆಯವರಿಗೆ ಮತ ಹಾಕಿದರೆ, ಆ ಮತಕ್ಕೆ ಬೆಲೆ ಇರುವುದಿಲ್ಲ" ಎಂದು ಹೇಳುತ್ತಾರೆ.

"ಬೇರೆ ಪಕ್ಷದ ಶಾಸಕರು ತಮಗೆ ನೀವು ವೋಟು ಹಾಕಿದ್ದೀರಾ ಎಂದು ನಂಬುತ್ತಾರೆಯೇ? ಎಂದು ಪ್ರಶ್ನಿಸಿದೆ. ನನ್ನ ಸಮುದಾಯದವರು ಹೆಚ್ಚಾಗಿ ಬಿಜೆಪಿಗೆ ಮತ ಹಾಕುತ್ತಾರೆ. ಅದು ಎಲ್ಲರಿಗೂ ಗೊತ್ತು. ಆದ್ದರಿಂದ, ನಮ್ಮ ಸಮುದಾಯವನ್ನು ಪ್ರತಿನಿಧಿಸುವ ವ್ಯಕ್ತಿಗೆ ಮತ ಹಾಕಲು ನಾವು ಇಚ್ಚಿಸುತ್ತೇವೆ" ಎನ್ನುತ್ತಾರೆ.

"ಕೋವಿಡ್ ಸಮಯದಲ್ಲಿ ರಾಜ್ಯ ಸರ್ಕಾರವು ಉತ್ತಮವಾಗಿ ಕಾರ್ಯನಿರ್ವಹಿಸಬಹುದಿತ್ತು. ಆದರೆ ಆದಿತ್ಯನಾಥ್ ವಿರುದ್ಧ ಕನಿಷ್ಠ ಭ್ರಷ್ಟಾಚಾರ ಪ್ರಕರಣವೂ ಇಲ್ಲ. ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದರೂ ಸಾಂಕ್ರಾಮಿಕ ಸಮಯದಲ್ಲಿ ರಾಜ್ಯವು ಸಮಾನವಾಗಿ ನಷ್ಟವನ್ನು ಅನುಭವಿಸುತ್ತಿತ್ತು" ಎಂದು ಅಭಿಪ್ರಾಯ ಪಟ್ಟರು.

ಉತ್ತರ ಪ್ರದೇಶದಲ್ಲಿ ಮಾತ್ರ ಕೋವಿಡ್ ಬಂದಿಲ್ಲ

ಉತ್ತರ ಪ್ರದೇಶದಲ್ಲಿ ಮಾತ್ರ ಕೋವಿಡ್ ಬಂದಿಲ್ಲ

ಹಾಪುರ್ ಜಿಲ್ಲೆಯ ಧೌಲಾನಾ ಬ್ಲಾಕ್‌ನ ಪರ್ತಾಪುರ್ ಗ್ರಾಮದ 40 ವರ್ಷದ ಆದೇಶ್ ಸಿಂಗ್, ರಾಜ್ಯದಲ್ಲಿ ಸಂಪನ್ಮೂಲಗಳ ಕೊರತೆಯಿದೆ ಎಂದು ಹೇಳುತ್ತಾರೆ, ಇದು ಕೋವಿಡ್ ಸಮಯದಲ್ಲಿ ಅವ್ಯವಸ್ಥೆಗೆ ಕಾರಣವಾಯಿತು. ಎರಡನೇ ಅಲೆಯಲ್ಲಿ ಅವರು ತಮ್ಮ ಅವಿಭಕ್ತ ಕುಟುಂಬದ ಮೂವರು ಹಿರಿಯರನ್ನು ಕಳೆದುಕೊಂಡರು. ತಮ್ಮ ಜಿಲ್ಲೆ ಅಥವಾ ನೆರೆಹೊರೆ ಊರಿನಿಂದಲೂ ಆಕ್ಸಿಜನ್ ಬೆಡ್ ಸಿಗಲಿಲ್ಲ. "ನಾವು ಸಾಕಷ್ಟು ಕರೆಗಳನ್ನು ಮಾಡಿದ್ದೇವೆ. ಆದರೂ ಪ್ರಯೋಜನ ಆಗಲಿಲ್ಲ. ರಾಜ್ಯದಲ್ಲಿ ಸೀಮಿತ ಸಂಪನ್ಮೂಲಗಳಿದ್ದರೂ ಹೆಚ್ಚಿನ ಕೆಲಸ ಮಾಡಿದ್ದಾರೆ" ಎಂದರು.

ಠಾಕೂರ್ ಕೂಡ ಆಗಿರುವ ಆದೇಶ್, "ಉತ್ತರ ಪ್ರದೇಶ ಮಾತ್ರ ಕೋವಿಡ್ ನೋವು ಅನುಭವಿಸಿದ ರಾಜ್ಯವಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ನಿಂದ ಸಾಯುತ್ತಿದ್ದಾರೆ. ಇತರರಿಗೆ ಹೋಲಿಸಿದರೆ, ಉತ್ತರ ಪ್ರದೇಶವು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದೆ" ಎನ್ನುತ್ತಾರೆ.

ಆದೇಶ್ 50 ಕಿ. ಮೀ. ದೂರದ ನೋಯ್ಡಾದಲ್ಲಿ ಕೆಲಸ ಮಾಡುತ್ತಾರೆ. ಕಳೆದ ಐದು ವರ್ಷಗಳಲ್ಲಿ ಹೆದ್ದಾರಿಯ ಸ್ಥಿತಿ ಗಣನೀಯವಾಗಿ ಸುಧಾರಿಸಿದೆ.‌ ನಾನು ಈಗ ಕೇವಲ ಒಂದು ಗಂಟೆಯೊಳಗೆ ಕಚೇರಿಯನ್ನು ತಲುಪುತ್ತೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೂಡ ಸುಧಾರಿಸಿದೆ. ಪೊಲೀಸರು ಹೆಚ್ಚು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ದೂರುಗಳನ್ನು ಸ್ವೀಕರಿಸುತ್ತಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಹೀಗಿರಲಿಲ್ಲ ಎಂದು ವಿಶ್ಲೇಷಿಸುತ್ತಾರೆ.

ಈ ಅಭಿಪ್ರಾಯಗಳು ಕೇಳಿ ಬಂದರು. ಸಾಮಾಜಿಕ ಕಾರ್ಯಕರ್ತರು ಬೇರೆಯದೆ ವಿಚಾರ ‌ಮಂಡಿಸುತ್ತಾರೆ. ಆದಿತ್ಯನಾಥ್ ಉತ್ತರ ಪ್ರದೇಶ ರಾಜ್ಯದ ಸಿಎಂ‌ ಆದಾಗಿನಿಂದ, ಕಾನೂನು ಮತ್ತು ಸುವ್ಯವಸ್ಥೆ ತೀವ್ರಗಾಮಿ ಬಲಪಂಥೀಯ ಸಂಘಟನೆಗಳ ವಿಸ್ತರಣೆಯಾಗಿದೆ. ಮುಸ್ಲಿಂ ಮಾರಾಟಗಾರರು ಮತ್ತು ಜಾನುವಾರು ವ್ಯಾಪಾರಿಗಳ ಮೇಲೆ ದಾಳಿ ಮಾಡಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರತಿಭಟನೆಗಳ ಸಂದರ್ಭದಲ್ಲಿ ನಕಲಿ ಎನ್‌ಕೌಂಟರ್‌ಗಳು ಆಗಿವೆ. ಮಾನವ ಹಕ್ಕುಗಳ ಉಲ್ಲಂಘನೆಗಳು ವರದಿಯಾಗಿವೆ ಎಂದು ಹೇಳುತ್ತಾರೆ.

ಯೋಗಿ ಆದಿತ್ಯನಾಥ್ ಸೋತರೆ

ಯೋಗಿ ಆದಿತ್ಯನಾಥ್ ಸೋತರೆ

ಇತರೆ ಹಿಂದುಳಿದ ವರ್ಗದ ಸೋನಾರ್ ಸಮುದಾಯಕ್ಕೆ ಸೇರಿದ ಗಾಜಿಪುರದ ಜಲಾಲಾಬಾದ್ ಗ್ರಾಮದ 60 ವರ್ಷದ ಸಾವಿತ್ರಿ ವರ್ಮಾ, ಹಿಂದುತ್ವ ರಾಜಕಾರಣದ ಕಾರಣದಿಂದ ಆದಿತ್ಯನಾಥ್ ಅಭಿಮಾನಿ ಆಗಿದ್ದಾರೆ. ಬಿಜೆಪಿ ರಾಮಮಂದಿರವನ್ನು ನಿರ್ಮಿಸಿದೆ. ಇದು ಬೇರೆ ಯಾವುದೇ ಸರ್ಕಾರದ ಇದ್ದಾಗ ನಡೆದಿಲ್ಲ. ಅದಕ್ಕಾಗಿ ಎಷ್ಟೋ ವರ್ಷಗಳ ಕಾಲ ಕಾಯುತ್ತಿದ್ದೆವು. ಬಿಜೆಪಿಯವರಂತೆ ಹಿಂದೂಗಳನ್ನು ಬೇರೆ ಯಾವ ಪಕ್ಷವೂ ನೋಡಿಕೊಳ್ಳುವುದಿಲ್ಲ. ಆದಿತ್ಯನಾಥ್ ಸೋತರೆ ಅಂತಹ ಮುಖ್ಯಮಂತ್ರಿ ಸಿಗುವುದು ಕಷ್ಟ. ಆದಿತ್ಯನಾಥ್ ಸಿಎಂ ಆಗಿ ಬಂದಾಗಿನಿಂದ ರಾಜ್ಯದಲ್ಲಿ ಮುಸ್ಲಿಮರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಅಂಚಿನಲ್ಲಿಟ್ಟಿದೆ. ಗಾಜಿಯಾಬಾದ್‌ನ ಓಲಾ ಚಾಲಕ ಮೊಹಮ್ಮದ್ ಇಮ್ರಾನ್ ಹೆಸರನ್ನು ನೋಡಿದ ನಂತರ ಪ್ರಯಾಣಿಕರು ತಮ್ಮ ರೈಡ್ ಅನ್ನು ರದ್ದುಗೊಳಿಸಿದ್ದಾರೆ.

"ಕೋವಿಡ್ ಏಕಾಏಕಿ ಏರಿಕೆಯಾದ ಮೊದಲ ಕೆಲವು ತಿಂಗಳುಗಳಲ್ಲಿ, ಮುಸ್ಲಿಮರನ್ನು ಸೂಪರ್‌ಸ್ಪ್ರೆಡರ್‌ಗಳಂತೆ ನೋಡುತ್ತಿದ್ದರು" ಎಂದು ಅವರು ಹೇಳುತ್ತಾರೆ. "ತಬ್ಲಿಘಿ ಜಮಾತ್ ಘಟನೆಯ ನಂತರ ಇಲ್ಲಿನ ಮಾಧ್ಯಮಗಳು ಮತ್ತು ಹಲವಾರು ಬಲಪಂಥೀಯ ಸಂಘಟನೆಗಳು ನಮ್ಮನ್ನು ರಾಕ್ಷಸರಂತೆ ನೋಡಿದವು. ನಾವು ಎರಡನೇ ದರ್ಜೆಯ ನಾಗರಿಕರಾಗಿದೆವು. (ಮಾರ್ಚ್ 2020 ರಲ್ಲಿ, ಇಸ್ಲಾಮಿಕ್ ಮಿಷನರಿ ಆಂದೋಲನವಾದ ತಬ್ಲೀಘಿ ಜಮಾತ್, ಸಾರ್ವಜನಿಕ ಸಭೆಗಳ ಮೇಲೆ ನಿಷೇಧದ ಹೊರತಾಗಿಯೂ ದೆಹಲಿಯಲ್ಲಿ ಸಭೆಯನ್ನು ನಡೆಸಿತು. ಹೀಗೆ ಇವರೆಲ್ಲರೂ ಒಟ್ಟಿಗೆ ಸೇರಿದ ಕಾರಣದಿಂದ 4,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿತ್ತು.

ರಾಜ್ಯದಲ್ಲಿ ಬಿಜೆಪಿಯ ಉದಯವು ರಾಷ್ಟ್ರೀಯತೆ, ಹಿಂದುತ್ವ, ಪ್ರಚಾರ ಮತ್ತು ಕಲ್ಯಾಣ ರಾಜಕಾರಣದ ತಳಹದಿಯ ಮೇಲೆ ಆಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಇತ್ತೀಚಿನ ಸಂಶೋಧನೆಗಳ ಪ್ರಕಾರ, 2014 ರಿಂದ ಶುದ್ಧ ಅಡುಗೆ ಇಂಧನ, ನೈರ್ಮಲ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಗಮನಾರ್ಹವಾಗಿ ಹೆಚ್ಚಾಗಿದೆ. ಆದರೆ ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯಲ್ಲಿ ಇನ್ನಷ್ಟು ಪ್ರಗತಿ ಆಗಬೇಕಿದೆ.

ಸರ್ಕಾರದಿಂದ ಉಚಿತ ಪಡಿತರ ಹಂಚಿಕೆ

ಸರ್ಕಾರದಿಂದ ಉಚಿತ ಪಡಿತರ ಹಂಚಿಕೆ

ಜಲಾಲಾಬಾದ್‌ನ 70 ವರ್ಷದ ದಲಿತ ವ್ಯಕ್ತಿ ರಾಮ್ ಲಾಕ್‌ಡೌನ್ ನಂತರ ಎಲ್ಲವನ್ನೂ ಕಳೆದುಕೊಂಡರು. ಅವರು ಮನೆಯಿಂದ ಮನೆಗೆ, ಕಾಲೋನಿಗೆ ಕಾಲೋನಿಗೆ ಹೋಗಿ, ಜನರ ವಸ್ತುಗಳನ್ನು ಸ್ವಚ್ಛಗೊಳಿಸುತ್ತ ಕೂಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ನೊಂದಿಗೆ, ಅದು ಸಂಪೂರ್ಣವಾಗಿ ನಿಂತುಹೋಯಿತು. "ಎರಡು ವರ್ಷಗಳಿಂದ, ನಾನು ಯಾವುದೇ ಆದಾಯ ಇಲ್ಲ. ನನ್ನ ಮಕ್ಕಳೂ ಕೂಲಿ ಕೆಲಸ ಮಾಡುತ್ತಾರೆ. ಅವರಿಗೆ ತಮ್ಮ ಕುಟುಂಬವನ್ನೇ ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ನನ್ನನ್ನು ಹೇಗೆ ನೋಡಿಕೊಳ್ಳುತ್ತಾರೆ?" ಎಂದು ಪ್ರಶ್ನಿಸುತ್ತಾರೆ.

ವಿಚಿತ್ರವೆಂದರೆ, ತನಗೆ ಮತ್ತು ಅವನ ಮಕ್ಕಳಿಗೆ ಉದ್ಯೋಗದ ಕೊರತೆಗೆ ರಾಮ್ ರಾಜ್ಯ ಸರಕಾರವನ್ನು ದೂಷಿಸುವುದಿಲ್ಲ. ಆದರೆ ಈ ಅವಧಿಯಲ್ಲಿ ಬದುಕಲು ಸಹಾಯ ಮಾಡಿದ ರಾಜ್ಯಕ್ಕೆ ಕೃತಜ್ಞರಾಗಿರಬೇಕು ಎನ್ನುತ್ತಾರೆ. "ಈ ಕಠಿಣ ಸಮಯದಲ್ಲಿ ನಾವು ಸರ್ಕಾರದಿಂದ ಉಚಿತ ಪಡಿತರವನ್ನು ಪಡೆದುಕೊಂಡಿದ್ದೇವೆ. ಈ ಸರ್ಕಾರವು ಹಿರಿಯ ನಾಗರಿಕರ ಪಿಂಚಣಿಯನ್ನು ತಿಂಗಳಿಗೆ 500 ರಿಂದ 1,000ಕ್ಕೆ ದ್ವಿಗುಣಗೊಳಿಸಿದೆ"

ಆದಾಗ್ಯೂ, ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಹಲವು ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಸತತ ಎರಡು ಬಾರಿ ಯಾವ ಪಕ್ಷವೂ ಅಧಿಕಾರ ಚುಕ್ಕಾಣಿ ಹಿಡಿದಿಲ್ಲ. 2022 ರಲ್ಲಿ ಅತೃಪ್ತ ರೈತರು ಮತ್ತು ನಿರುದ್ಯೋಗಿ ಯುವಕರು ಇದಕ್ಕೆ ಅಡ್ಡಗಲಾಗಬಹುದು. ರೈತರು ಕೃಷಿ ಕಾಯಿದೆ ವಿರುದ್ಧ 1 ವರ್ಷಗಳ ಕಾಲ ಪ್ರತಿಭಟನೆ ನಡೆಸಿದರು. ಸೆಪ್ಟೆಂಬರ್ 2020ರಲ್ಲಿ ಪರಿಚಯಿಸಲಾದ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರಕಾರವೇನೋ ರದ್ದುಗೊಳಿಸಿತು. ಆದರೆ,‌ ಇದರಿಂದ‌ 700 ಜನರು ಮೃತಪಟ್ಟಿದ್ದಾರೆ.

ಈ ಬಿಲ್‌ಗಳು ಭಾರತದೊಳಗೆ ಕೃಷಿ ಉತ್ಪನ್ನಗಳನ್ನು ವ್ಯಾಪಾರ ಮಾಡುವ ವಿಧಾನವನ್ನು ಬದಲಾಯಿಸಲು ಅವಕಾಶ ಮಾಡಿಕೊಟ್ಟಿತ್ತು.‌ ರೈತರು ತಮ್ಮ ಉತ್ಪನ್ನಗಳನ್ನು ರಾಜ್ಯ-ನಿಯಂತ್ರಿತ ಸಗಟು ಮಾರುಕಟ್ಟೆಯ ಹೊರಗಿನ ಯಾವುದೇ ಖರೀದಿದಾರರಿಗೆ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದರು. 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದ ಪಶ್ಚಿಮ ಉತ್ತರ ಪ್ರದೇಶದ ರೈತರು ಬೃಹತ್ ಪ್ರತಿಭಟನೆಯ ಭಾಗವಾಗಿದ್ದರು.

ರಾಜ್ಯದಲ್ಲಿ ಉದ್ಯೋಗ ಸೃಷ್ಟಿ

ರಾಜ್ಯದಲ್ಲಿ ಉದ್ಯೋಗ ಸೃಷ್ಟಿ

ಭಾರತೀಯ ಕಿಸಾನ್ ಯೂನಿಯನ್‌ನ ಸದಸ್ಯನೂ ಆಗಿರುವ 27 ವರ್ಷದ ಬುಲಂದ್‌ಶಹರ್‌ನ ರೈತ ವೈಭವ್ ವರ್ಮಾ ಹೇಳುವಂತೆ,‌ "ಪ್ರತಿಭಟನೆಯ ಮುಂಚೂಣಿಯಲ್ಲಿರುವ ಸಂಘಟನೆಗಳ ರೈತರನ್ನು ಬಿಜೆಪಿ ಒಂದು ವರ್ಷದವರೆಗೆ ಹೇಗೆ ನಡೆಸಿಕೊಂಡಿದೆ ಎಂಬುದಕ್ಕೆ ಭಾರಿ ಬೆಲೆ ತೆರಲಿದೆ. ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಅವರು ನಮ್ಮ ಮತಗಳನ್ನು ಪಡೆಯಬಹುದು ಎಂದು ಭಾವಿಸಿದ್ದರೆ ಅದು ತಪ್ಪು. ಈ ಹಿಂದೆ ನಾವೆಲ್ಲರೂ ಬಿಜೆಪಿಯನ್ನು ಬೆಂಬಲಿಸಿದ್ದೆವು. ಆದರೆ ನಾವು ಮತ್ತೆ ಅವರ ಸರ್ವಾಧಿಕಾರದ ಹಿಂದೆ ಹೋಗಲಾರೆವು. ಈ ಸರ್ಕಾರ ಯಾವುದೇ ಉದ್ಯೋಗಗಳನ್ನು ಸೃಷ್ಟಿಸಿಲ್ಲ" ಎಂದು ಹೇಳುತ್ತಾರೆ.

ಮಾರ್ಚ್ 2017 ರಲ್ಲಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ, ರಾಜ್ಯದ ನಿರುದ್ಯೋಗ ದರವು CMIE ಪ್ರಕಾರ 2.4% ರಷ್ಟಿತ್ತು. ಡಿಸೆಂಬರ್ 2021 ರಲ್ಲಿ, ಇದು 4.9% ಗೆ ದ್ವಿಗುಣಗೊಂಡಿದೆ. ಈ ಡೇಟಾ ಕಣ್ಣಿಗೆ ಗೋಚರಿಸುತ್ತದೆ. ಪ್ರತಿ ದಿನ ಬೆಳಿಗ್ಗೆ, ಚಳಿಗಾಲದಲ್ಲೂ‌‌ ಬುಲಂದ್‌ಶಹರ್ ಮತ್ತು ಸುತ್ತಮುತ್ತಲಿನ ಕಾರ್ಮಿಕರು ನುಮಾಯಿಶ್ ಮೈದಾನದಲ್ಲಿ ಏನಾದರೂ ಕೆಲಸ ಸಿಗಬಹುದೆಂದು ಸೇರುತ್ತಾರೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಅವರೆಲ್ಲ ನಿರಾಶೆಯಿಂದ ಮನೆಗೆ ಹೋಗುತ್ತಾರೆ. "ನಾನು ಇಲ್ಲಿಗೆ ಬರಲು ಪ್ರತಿದಿನ 25 ರೂಪಾಯಿ ಖರ್ಚು ಮಾಡುತ್ತೇನೆ" ಎಂದು ಸಮೀಪದ ಬರಲ್ ಗ್ರಾಮದ 25 ವರ್ಷದ ದೀಪಕ್ ಕುಮಾರ್ ಹೇಳುತ್ತಾರೆ. "ನಾನು ಮನೆಯಲ್ಲಿ ಸುಮ್ಮನೆ ಕುಳಿತರೆ ಕನಿಷ್ಠ 25 ರೂ. ಉಳಿಸಬಹುದೆಂದು ನನಗೆ ಅನಿಸುತ್ತದೆ. ಏಕೆಂದರೆ ಇಲ್ಲಿ ಬಂದರೂ ನಮಗೆ ಯಾವುದೇ ಕೆಲಸವಿಲ್ಲ.

ನುಮಾಯಿಶ್ ಮೈದಾನಕ್ಕೆ ಯಾರಾದರೂ ಕೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಬಂದಾಗ, ಎಲ್ಲರ ಮುಖದಲ್ಲೂ ಉದ್ಯೋಗ ಸಿಗುವ ಆಸೆ ಕಣ್ಣುಗಳಲ್ಲಿ ಗೋಚರಿಸುತ್ತದೆ. "ಇದು ಉದ್ಯೋಗದಾತರು ನಮ್ಮನ್ನು ಹೇಗೆ ಶೋಷಣೆಗೆ ಗುರಿಪಡಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ನಮಗೆ ಯಾವುದೇ ಕೆಲಸವಿಲ್ಲ ಎಂದು ಅವರಿಗೆ ತಿಳಿದಿದೆ. ಆದ್ದರಿಂದ, ಅವರು ಸಾಮಾನ್ಯವಾಗಿ ನಮಗೆ 800 ಪಡೆಯುವ ಕೆಲಸಕ್ಕೆ 300 ರೂ. ಪಾವತಿಸುತ್ತಾರೆ. ಎರಡು ವರ್ಷಗಳ ಕಂಪ್ಯೂಟರ್ ಸೈನ್ಸ್ ಓದಿರುವ ದೀಪಕ್, ಆರ್ಥಿಕ ಕಾರಣಗಳಿಂದ ಶಿಕ್ಷಣವನ್ನು ಕೈಬಿಟ್ಟರು. ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರ ಯಾವುದೇ ಸಹಾಯ ಮಾಡಿಲ್ಲ. ಸರಕಾರ ಉಚಿತ ಪಡಿತರವನ್ನು ನೀಡುವ ಬದಲು, ನಮಗೆ ಕೆಲಸ ನೀಡಿ ಇದರಿಂದ ನಾವು ನಮ್ಮ ಸ್ವಂತ ದುಡ್ಡಿನಿಂದ ಪಡಿತರವನ್ನು ಖರೀದಿಸಬಹುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+