• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆನೆಟರ್, ಉಪಾಧ್ಯಕ್ಷ, POTUS ಬೈಡನ್ ಜತೆ ಒಬಾಮಾ ಗೆಳೆತನ

|

ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಳ್ಳಲು ಸಿದ್ಧರಾಗುತ್ತಿರುವ ಜೋಸೆಫ್ ಬೈಡನ್ ಅವರು ಅಮೆರಿಕಾದ ಇತಿಹಾಸದಲ್ಲಿ ಆರನೇ ಕಿರಿಯ ಸೆನೆಟರ್, ನಾಲ್ಕನೇ ಹಿರಿಯ ಸೆನೆಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ. ಸೆನೆಟರ್ ಬೈಡನ್ ಅವರು 47ನೇ ಉಪಾಧ್ಯಕ್ಷರಾಗಿ ನಂತರ 46ನೇ ಅಧ್ಯಕ್ಷರಾಗಿ ಆಯ್ಕೆಯಾಗುವುದರ ಹಿಂದೆ ಆಪ್ತ ಮಿತ್ರ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿದ್ದಾರೆ.

2002ರಲ್ಲಿ ಕೊಲ್ಲಿ ಯುದ್ಧದ ಬಗ್ಗೆ ಮಸೂದೆಗೆ ಬೆಂಬಲ ನೀಡಿರಲಿಲ್ಲ. 2007 ರಲ್ಲಿ ಯು.ಎಸ್. ಪಡೆಗಳ ಸಂಚಲನವನ್ನು ವಿರೋಧಿಸಿದರು. 2011 ರಲ್ಲಿ ಯುಎಸ್ ಸೈನ್ಯವನ್ನು ಹಿಂತೆಗೆದುಕೊಳ್ಳುವ ಮೂಲಕ ಇರಾಕ್ ಕಡೆಗೆ ಯುಎಸ್ ನೀತಿಯನ್ನು ರೂಪಿಸಲು ಸಹಾಯ ಮಾಡಿದರು. ಮಹಿಳೆಯರ ಮೇಲಿನ ದೌರ್ಜನ್ಯ ಕಾಯ್ದೆಯನ್ನು ಅಂಗೀಕರಿಸುವ ಪ್ರಯತ್ನಕ್ಕೆ ಕಾರಣರಾದರು. 1988 ರ ಡೆಮಾಕ್ರಟಿಕ್ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ಸ್ಪರ್ಧಿಸಿದ್ದರು. ಜನವರಿ 31, 2007 ರಂದು ಅವರು ಎರಡನೇ ಅವಧಿಗೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದರು. ಆರ್ಥಿಕ ಬಲ, ಜನಬಲ ಸಿಗದೆ ಮತ್ತೆ ರೇಸಿನಲ್ಲಿ ಹಿಂದೆ ಉಳಿದರು.

ಅಮೆರಿಕದ 46ನೇ ಅಧ್ಯಕ್ಷ ಜೋಸೆಫ್ ಬೈಡನ್ ವ್ಯಕ್ತಿಚಿತ್ರ

ಡೆಮಾಕ್ರಟಿಕ್ ಅಭ್ಯರ್ಥಿಗಳ ರಾಷ್ಟ್ರೀಯ ಚುನಾವಣೆಯಲ್ಲಿ ಅವರು ಐದನೇ ಸ್ಥಾನ ಗಳಿಸಿದರು ಮತ್ತು ಸ್ಪರ್ಧೆಯಿಂದ ಹಿಂದೆ ಸರಿದರು. ವಿಫಲವಾದರೂ, ಬೈಡನ್ ಮೌಲ್ಯ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಬೈಡನ್ ಮತ್ತು ಒಬಾಮಾ ನಡುವಿನ ಸಂಬಂಧ ಗಟ್ಟಿಯಾಯಿತು. 2008 ರಲ್ಲಿ ಡೆಮಾಕ್ರಟಿಕ್ ಅಧ್ಯಕ್ಷೀಯ ನಾಮಿನಿ ಬರಾಕ್ ಒಬಾಮ ಅವರ ಮಿತ್ರರಾಗಿ ಬೈಡನ್ ಜೊತೆಗಿದ್ದರು. 2009 ರಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.

 ಅಧ್ಯಕ್ಷ ಸ್ಥಾನದ ಆಸೆ ಬಿಟ್ಟಿದ್ದ ಬೈಡನ್

ಅಧ್ಯಕ್ಷ ಸ್ಥಾನದ ಆಸೆ ಬಿಟ್ಟಿದ್ದ ಬೈಡನ್

ಅಧ್ಯಕ್ಷ ಸ್ಥಾನದ ಆಸೆ ಬಿಟ್ಟಿದ್ದ ಬೈಡನ್ ಅವರಿಗೆ ಮಹತ್ವದ ಸ್ಥಾನ ನೀಡುವುದಾಗಿ ಒಬಾಮಾ ಹೇಳಿದಾಗ ಬೈಡನ್ ಒಪ್ಪಿರಲಿಲ್ಲ. ಸೆನೆಟ್ ಸ್ಥಾನ ತ್ಯಜಿಸಿ ಉಪಾಧ್ಯಕ್ಷರಾದರೆ ಮುಂದೆ ಅಧ್ಯಕ್ಷ ಸ್ಥಾನ ಸಿಗುವುದೋ ಇಲ್ಲವೋ ಎಂಬ ಅನುಮಾನ ಕಾಡಿತ್ತು. ಆದರೆ, ಆಗಸ್ಟ್ 22, 2008 ರಂದು ಬರಾಕ್ ಒಬಾಮ ಅವರು ಬೈಡನ್ ನನ್ನ ಜೊತೆ ರೇಸ್ ನಲ್ಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು. ಆಯ್ಕೆಯ ಹಿಂದಿನ ತಂತ್ರವು ರಾಷ್ಟ್ರೀಯ ಭದ್ರತಾ ಅನುಭವ ಹೊಂದಿರುವವರ ಸೇವೆಗಳೊಂದಿಗೆ ವಿದೇಶಿ ನೀತಿಯನ್ನು ತುಂಬುವ ಬಯಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತು. ಆಗಸ್ಟ್ 27 ರಂದು, ಡೆನ್ವರ್‌ನಲ್ಲಿ ನಡೆದ 2008 ರ ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್‌ನಲ್ಲಿ ಬಿಡೆನ್ ಅಧಿಕೃತವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

 ಉಪಾಧ್ಯಕ್ಷರಾಗಿ ಎರಡನೇ ಅವಧಿ ಪೂರ್ಣಗೊಳಿಸಿದರು

ಉಪಾಧ್ಯಕ್ಷರಾಗಿ ಎರಡನೇ ಅವಧಿ ಪೂರ್ಣಗೊಳಿಸಿದರು

ಉಪಾಧ್ಯಕ್ಷರಾಗಿ ಎರಡನೇ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಬೈಡನ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಸೇರಿದರು, ಅಲ್ಲಿ ಅವರನ್ನು ಅಧ್ಯಕ್ಷೀಯ ಅಭ್ಯಾಸದ ಪ್ರಾಧ್ಯಾಪಕರಾಗಿ ಬೆಂಜಮಿನ್ ಫ್ರಾಂಕ್ಲಿನ್ ಎಂದು ಹೆಸರಿಸಲಾಯಿತು. ಪಕ್ಷದ ಪ್ರಸ್ತಾಪವನ್ನು ಅನುಸರಿಸಿ ಅವರು ಡೆಮಾಕ್ರಟಿಕ್ ಅಭ್ಯರ್ಥಿಗಳ ಕ್ಷೇತ್ರಕ್ಕೆ ಪ್ರವೇಶಿಸಿದರು ಮತ್ತು 2019 ರ ಏಪ್ರಿಲ್ 25 ರಂದು ಅಧ್ಯಕ್ಷ ಸ್ಥಾನಕ್ಕೆ 2020 ರ ಉಮೇದುವಾರಿಕೆಯನ್ನು ಘೋಷಿಸಿದರು. 2019 ರ ಉದ್ದಕ್ಕೂ ಅವರನ್ನು ಪಕ್ಷದ ಮುಂಚೂಣಿಯಲ್ಲಿ ಗುರುತಿಸಲಾಯಿತು. ತಮ್ಮದೇ ಪಕ್ಷದ ಚುನಾವಣೆಯಲ್ಲಿ ಅವರು ಯುನೈಟೆಡ್ ಸ್ಟೇಟ್ಸ್ ರಾಜ್ಯದಲ್ಲಿ ನಡೆದ 26 ಸ್ಪರ್ಧೆಗಳಲ್ಲಿ 18 ರಲ್ಲಿ ಗೆದ್ದರು. ಬೈಡನ್ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಅಭ್ಯರ್ಥಿಯಾದರು. ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಅಭ್ಯರ್ಥಿಯಾಗಿರುವ ಜೋ ಬೈಡನ್ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ದಾಖಲಿಸಿದರು.

ಅಮೆರಿಕ ಮಾಜಿ ಅಧ್ಯಕ್ಷ ಒಬಾಮ ಅವರೊಂದಿಗೆ ಬೈಡೆನ್ ದೂರವಾಣಿ ಕರೆ

 ಟ್ರಂಪ್ ವೈರಿ ಬೈಡನ್ ಮಿತ್ರ ಒಬಾಮಾ

ಟ್ರಂಪ್ ವೈರಿ ಬೈಡನ್ ಮಿತ್ರ ಒಬಾಮಾ

ಪ್ರತಿಸ್ಪರ್ಧಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಕಳೆದ ಚುನಾವಣಾ ಪ್ರಚಾರದ ಸಮಯದಲ್ಲಿ ಮುಸ್ಲಿಮರನ್ನು ಯುನೈಟೆಡ್ ಸ್ಟೇಟ್ಸ್ ಗೆ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸುವುದು, ಅಕ್ರಮ ವಲಸೆ ತಡೆಗಟ್ಟಲು ಮೆಕ್ಸಿಕನ್ ಗಡಿಯಲ್ಲಿ ಗೋಡೆ ನಿರ್ಮಿಸುವ ಉದ್ದೇಶವನ್ನು ಬೈಡನ್ ಬಲವಾಗಿ ಖಂಡಿಸಿದ್ದರು. 2016 ರಿಂದ 2019ರ ತನಕ ಬೈಡನ್ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿತ್ತು. ಏಪ್ರಿಲ್ ತಿಂಗಳಲ್ಲಿ ಅಧ್ಯಕ್ಷ ಸ್ಥಾನ ರೇಸಿನಲ್ಲಿ ಇರುವುದಾಗಿ ಘೋಷಿಸಿದ ಬೈಡನ್ ಗೆ ಸಹಜವಾಗಿ ಮಿತ್ರ ಬರಾಕ್ ಒಬಾಮಾ ಬೆಂಬಲಕ್ಕೆ ನಿಂತರು. ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿ, ಬೈಡನ್ ಪರ ಪ್ರಚಾರ ನಡೆಸಿದರು. ಒಬಾಮಾ ಕೇರ್ ಹಾಳುಗೆಡವಿದ ಟ್ರಂಪ್ ವಿರುದ್ಧ ಇದ್ದ ಸಿಟ್ಟನ್ನು ಒಬಾಮಾ ಅವರು ಪ್ರಚಾರ ವೇಳೆ ಸರಿಯಾಗಿ ಬಳಸಿಕೊಂಡರು.

 ಗರ್ಭಪಾತ ಕಾಯ್ದೆ ಕಿರಿಕ್, ಸ್ವಿಂಗ್ ಸ್ಟೇಟ್ಸ್

ಗರ್ಭಪಾತ ಕಾಯ್ದೆ ಕಿರಿಕ್, ಸ್ವಿಂಗ್ ಸ್ಟೇಟ್ಸ್

ಗರ್ಭಪಾತ ಕಾಯ್ದೆಯನ್ನು ವಿರೋಧಿಸಿದ್ದ ಬೈಡನ್ ಅವರು ಕ್ಯಾಥೋಲಿಕ್ ಗಳ ವಿರೋಧ ಕಟ್ಟಿಕೊಂಡರು. ಸ್ವಂತ ಪ್ರಾಂತ್ಯ ಪೆನ್ಸಿಲ್ವೇನಿಯಾದ ಸ್ಕ್ರಾಂಟನ್ ನಲ್ಲಿ ಚರ್ಚ್ ಪ್ರವೇಶ ನಿರ್ಬಂಧಿಸಲಾಯಿತು. ಸ್ವಿಂಗ್ ಸ್ಟೇಟ್ ನಲ್ಲಿ ಈ ರೀತಿ ಡೆಮಾಕ್ರೆಟಿಕ್ ಗಳಿಗೆ ಭಾರಿ ಹಿನ್ನಡೆಯುಂಟಾಗಿತ್ತು. ಜನಪ್ರತಿನಿಧಿಯೊಬ್ಬರ ಈ ರೀತಿ ಹೇಳಿಕೆ ಸಾರ್ವಜನಿಕರು ಒಪ್ಪುವಂತದ್ದಲ್ಲ ಎಂದು ಬಿಷಪ್ ಸಲ್ಟಾರೆಲಿ ಪ್ರತಿಕ್ರಿಯಿಸಿದ್ದರು. ಆದರೆ, ಬೈಡನ್ ಸ್ಪಷ್ಟನೆ ನೀಡಿ ಗರ್ಭಪಾತವನ್ನು ವೈಯಕ್ತಿಕವಾಗಿ ವಿರೋಧಿಸುತ್ತೇನೆ. ನನ್ನ ಸ್ವಂತ ಅಭಿಪ್ರಾಯವನ್ನು ಜನಪ್ರತಿನಿಧಿಯಾಗಿ ಹೇರುವುದಿಲ್ಲ ಎಂದಿದ್ದರು. ಮಧ್ಯಮ ವರ್ಗೀಯ ಜನತೆ, ಸ್ವಿಂಗ್ ಸ್ಟೇಟ್ ಗಳಲ್ಲಿ ಬೈಡನ್ ಜನಪ್ರಿಯತೆ ಹೆಚ್ಚಾಗಿದ್ದು ಇಂದು ಫಲ ನೀಡತು. ಒಬಾಮಾ-ಬೈಡನ್ ಜೋಡಿ 53% ಜನಪ್ರಿಯ ಮತ ಹಾಗೂ 365ಎಲೆಕ್ಟೋರಲ್ ಮತಗಳಿಸಿ ಮೆಕ್ ಕೈನ್ -ಪಾಲಿನ್ ಜೋಡಿಯನ್ನು ಸೋಲಿಸಿತು. ಇದು 2020ರಲ್ಲೂಬೈಡನ್ ಗೆ ಲಾಭವಾಯಿತು. ಅಂತಿಮ ಗೆಲುವಿಗೆ ಪೆನ್ಸಿಲ್ವೇನಿಯಾವೇ ಕಾರಣವಾಯಿತು.

ಅಧ್ಯಕ್ಷ ಹೋರಾಟದಲ್ಲಿ ಗೆದ್ದ ಬೈಡನ್ ಭಾವುಕ ಮಾತು

  BJP ಸಿಬಿಐ ನಾ miss use ಮಾಡ್ತಿದಾರೆ!! | Oneindia Kannada
   ಅಂತಿಮ ಫಲಿತಾಂಶ

  ಅಂತಿಮ ಫಲಿತಾಂಶ

  ಪೆನ್ಸಿಲ್ವೇಲಿಯಾದ ಫಲಿತಾಂಶ ಹೊರಬಂದಿದ್ದು, ಅಧ್ಯಕ್ಷರಾಗಲು ಅಗತ್ಯವಿದ್ದ ಎಲೆಕ್ಟೊರಲ್ ಮತಗಳ ಗಡಿ ದಾಟುವಲ್ಲಿ ಬೈಡೆನ್ ಅವರಿಗೆ ನೆರವಾಗಿದೆ. ಪೆನ್ಸಿಲ್ವೇನಿಯಾದ 3,350,504 ಮತ 20 ಎಲೆಕ್ಟೋರಲ್ ಮತ, 49.7% ಮತಗಳಿಕೆಯೊಂದಿಗೆ ಬೈಡೆನ್ 290 ಎಲೆಕ್ಟೊರಲ್ ಮತಗಳನ್ನು ಪಡೆದಿದ್ದಾರೆ. ಟ್ರಂಪ್ ಇಲ್ಲಿ 3,312,991 ಮತ, 49.1% ಮತ ಗಳಿಕೆ ಗಳಿಸಿ ಸೋತಿದ್ದಾರೆ. ಒಟ್ಟಾರೆ, ಬೈಡನ್ 74,939,396 (50.6%) ಮತಗಳು ಪಡೆದರೆ, ಟ್ರಂಪ್ 70,636,322 (47.7%) ಗಳಿಸಿದ್ದಾರೆ.

  English summary
  Joseph Robinette Biden Jr. (born November 20, 1942) is the president-elect of the United States. A member of the Democratic Party. Here is glimpse of his Political Journey with Ex President Barack Obama.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X