ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಸೋತರೂ ಪ್ರಭಾವಳಿ ಮಸುಕಾಗದು: ಇದು ಟ್ರಂಪಿಸಂ ಯುಗ!

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರತಿ ದೇಶಕ್ಕೂ ಕುತೂಹಲ ಮೂಡಿಸಿರುವ ಸಂಗತಿ. ರಿಪಬ್ಲಿಕನ್ ಪಕ್ಷ ಮತ್ತು ಡೆಮಾಕ್ರಟಿಕ್ ಪಕ್ಷಗಳ ಅಭ್ಯರ್ಥಿಗಳಲ್ಲಿ ಒಬ್ಬರು ಈ ಸ್ಥಾನದಲ್ಲಿ ಕೂರುತ್ತಾರೆ. ಪಕ್ಷದ ನೀತಿ, ಧೋರಣೆಗಳ ಜತೆಗೆ ವ್ಯಯಕ್ತಿಕವಾಗಿ ಅಧ್ಯಕ್ಷರ ನಿಲುವುಗಳೂ ಜಗತ್ತಿನ ಇತರೆ ದೇಶಗಳೊಂದಿಗಿನ ಸಂಬಂಧಗಳನ್ನು ನಿರ್ಧರಿಸುತ್ತದೆ. ಹೀಗಾಗಿ ಈ ಬಾರಿಯ ಚುನಾವಣೆ ಕೂಡ ಭಾರತ ಸೇರಿದಂತೆ ಎಲ್ಲ ದೇಶಗಳ ಭವಿಷ್ಯದ ರಾಜಕೀಯದ ಮೇಲೆ ಇದು ಪರಿಣಾಮ ಬೀರಲಿದೆ. ಕಳೆದ ಬಾರಿ ಡೊನಾಲ್ಡ್ ಟ್ರಂಪ್ ಅರ್ಧದಷ್ಟು ಜನಪ್ರಿಯ ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ಅವರಿಗೆ ಭಾರಿ ಮುಖಭಂಗ ಉಂಟಾಗಿದೆ.

ಡೊನಾಲ್ಡ್ ಟ್ರಂಪ್ 2016ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗಿನಿಂದ ಈ ನಾಲ್ವು ವರ್ಷಗಳಲ್ಲಿ ಅವರ ಸ್ವಭಾವ ಬದಲಾಗಿಲ್ಲ. ಮೂರ್ಖತನ, ಹುಚ್ಚುತನ, ಅಧಿಕಾರದ ದಾಹ, ಭ್ರಷ್ಟಾಚಾರ ಮತ್ತು ಲೈಂಗಿಕ ಹಗರಣಗಳು ಅವರ ವ್ಯಕ್ತಿತ್ವದ ಮೇಲೆ ಟೀಕೆ ಮತ್ತು ಆರೋಪಗಳನ್ನು ಸುರಿಸುತ್ತಲೇ ಇದೆ. ಜಾಗತಿಕವಾಗಿ ದೇಶವನ್ನು ದುರ್ಬಲಗೊಳಿಸಿದ್ದಲ್ಲದೆ, ಇನ್ನೊಂದೆಡೆ ಪ್ರಬಲವಾಗಿ ಬೆಳೆಯುತ್ತಿರುವ ಸೂಪರ್ ಪವರ್ ಆಕಾಂಕ್ಷಿ ಚೀನಾ ಎದುರು ತನ್ನ ಶಕ್ತಿ ಕಳೆದುಕೊಳ್ಳುವಂತೆ ಮಾಡಿದ್ದಾರೆ ಎಂಬ ಆರೋಪವಿದೆ. ಆದರೂ ಅವರಿಗೆ ಸುಮಾರು 70 ಮಿಲಿಯನ್ ಮತಗಳು (ಏಳು ಕೋಟಿ) ಬಿದ್ದಿವೆ.

ವಂಚನೆ ಆರೋಪಕ್ಕೆ ಸಿಗದ ಬೆಂಬಲ: ಸ್ವಪಕ್ಷೀಯರಿಂದಲೇ ಟ್ರಂಪ್‌ಗೆ ಮುಜುಗರ ವಂಚನೆ ಆರೋಪಕ್ಕೆ ಸಿಗದ ಬೆಂಬಲ: ಸ್ವಪಕ್ಷೀಯರಿಂದಲೇ ಟ್ರಂಪ್‌ಗೆ ಮುಜುಗರ

ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಜನರಿಂದ ತೀವ್ರ ಛೀಮಾರಿಗೆ ಒಳಗಾದ ಟ್ರಂಪ್ ರಾಜಕಾರಣದ ಭವಿಷ್ಯವನ್ನು ಮತದಾನಪರಿಣತರು, ಸಾರ್ವಜನಿಕ ಅಭಿಪ್ರಾಯ ಸಂಗ್ರಹಕಾರರು, ಚಿಂತಕರ ಚಾವಡಿಗಳು ಈ ಬಾರಿಯ ಚುನಾವಣೆಯಲ್ಲಿ ಜೋ ಬೈಡೆನ್ ಗೆಲುವನ್ನು ಆಗಲೇ ಬರೆದಿದ್ದರು. ಟ್ರಂಪ್ ಅವರನ್ನು ನೆಲಕಚ್ಚಿಸುವ 'ನೀಲಿ ಅಲೆ' ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಆವರಿಸಲಿದೆ ಎಂಬ ಭರವಸೆ ನೀಡಿದ್ದರು. ಮುಂದೆ ಓದಿ.

ಯುಎಸ್ಎ ಫಲಿತಾಂಶದ ದಾರಿ ತಪ್ಪಿಸುತ್ತಿದ್ದಾರೆಯೇ ಟ್ರಂಪ್? ಯುಎಸ್ಎ ಫಲಿತಾಂಶದ ದಾರಿ ತಪ್ಪಿಸುತ್ತಿದ್ದಾರೆಯೇ ಟ್ರಂಪ್?

ಹೀನಾಯ ಸೋಲು ನಿರೀಕ್ಷಿಸಿದ್ದರು

ಹೀನಾಯ ಸೋಲು ನಿರೀಕ್ಷಿಸಿದ್ದರು

ಆದರೆ, ಈ ಎಲ್ಲ ಊಹೆಗಳು, ಪ್ರತಿಪಾದನೆಗಳು ಭಾಗಶಃ ತಲೆಕೆಳಗಾಗಿದೆ. ಬೈಡೆನ್ ಗೆಲುವಿನ ಹಾದಿಯಲ್ಲಿದ್ದರೂ ಡೊನಾಲ್ಡ್ ಟ್ರಂಪ್ ಅವರ ಹೀನಾಯ ಸೋಲನ್ನು ಊಹಿಸಿದ್ದವರಿಗೆ ಅಚ್ಚರಿ ಮೂಡಿಸಿದೆ. ಅಧ್ಯಕ್ಷೀಯ ಚುನಾವಣೆ ರೇಸ್ ಇಷ್ಟು ಪ್ರಬಲವಾಗಿರುತ್ತದೆ ಎಂದು ಕಲ್ಪಿಸಿಕೊಂಡಿರಲಿಲ್ಲ. ಈ ಪಿಡುಗಿನ ನಡುವೆಯೂ ಇಷ್ಟೊಂದು ಸಂಖ್ಯೆಯಲ್ಲಿ ಮತದಾರರು ಹೊರಬಂದು ಮತ ಹಾಕುತ್ತಾರೆ ಎಂದು ಊಹಿಸಿದ್ದರೇ? ಫ್ಲೋರಿಡಾ, ನಾರ್ತ್ ಕರೋಲಿನಾ, ಪೆನ್ಸಿಲ್ವೇನಿಯಾ, ವಿಸ್ಕನ್ಸಿನ್, ಮಿಚಿಗನ್ ಮತ್ತು ನೆವಾಡಗಳಲ್ಲಿನ ಪೈಪೋಟಿ ನೋಡಿ. ಟ್ರಂಪ್ ಸುಲಭದ ತುತ್ತಾಗಲಿಲ್ಲ.

ಕೆಂಪು ಅಲೆಯ ಸಾಧ್ಯತೆ ಇತ್ತು

ಕೆಂಪು ಅಲೆಯ ಸಾಧ್ಯತೆ ಇತ್ತು

ಹಾಗಾದರೆ ಅಮೆರಿಕನ್ನರು ಟ್ರಂಪ್ ಅವರ ಅದಕ್ಷತೆ, ಅಪ್ರಾಮಾಣಿಕತೆ, ಆಡಳಿತ ವೈಫಲ್ಯಗಳನ್ನು ಒಪ್ಪಿಕೊಂಡಿದ್ದಾರೆಯೇ? ಈ ಪ್ರಶ್ನೆ ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿದೆ. ಕೊರೊನಾ ವೈರಸ್ ಪಿಡುಗು ಇಡೀ ಜಗತ್ತಿಗೆ ಬಂದಿದ್ದರೂ, ಡೊನಾಲ್ಡ್ ಟ್ರಂಪ್ ಅದನ್ನು ನಿಭಾಯಿಸಿದ ಬಗೆ ತೀರಾ ಕಳಪೆಯಾಗಿತ್ತು. ಬಹುಶಃ ಈ ಸೋಂಕು ಬಾರದೆ ಹೋಗಿದ್ದರೆ, ಅಥವಾ ಟ್ರಂಪ್ ಅದರ ನಿರ್ವಹಣೆಯಲ್ಲಿ ತುಸು ಮುತುವರ್ಜಿ ತೋರಿದ್ದರೆ ಎಲ್ಲೆಡೆ 'ಕೆಂಪು ಅಲೆ'ಯೇ ಕಾಣುತ್ತಿತ್ತೇನೋ. ಅಮೆರಿಕ ಮಾತ್ರವಲ್ಲ, ಜಾಗತಿಕ ರಾಜಕೀಯಕ್ಕೂ ಹೊಸ ವ್ಯಾಖ್ಯಾನ ನೀಡುತ್ತಿತ್ತೇನೋ?

ಡೊನಾಲ್ಡ್ ಟ್ರಂಪ್ ಸೋತರೆ ಮರು ಆಯ್ಕೆಯಾಗದ ಅಧ್ಯಕ್ಷರ ಸಾಲಿಗೆ ಸೇರ್ಪಡೆಡೊನಾಲ್ಡ್ ಟ್ರಂಪ್ ಸೋತರೆ ಮರು ಆಯ್ಕೆಯಾಗದ ಅಧ್ಯಕ್ಷರ ಸಾಲಿಗೆ ಸೇರ್ಪಡೆ

ಆಗ ಜಗತ್ತಿಗೆ ಗೊತ್ತಿರಲಿಲ್ಲ

ಆಗ ಜಗತ್ತಿಗೆ ಗೊತ್ತಿರಲಿಲ್ಲ

ಟೆಕ್ಸಾಸ್‌ನಲ್ಲಿ 'ಹೌಡಿ, ಮೋದಿ!' ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಅವರ ಕೈಹಿಡಿದು ಪ್ರಧಾನಿ ನರೇಂದ್ರ ಮೋದಿ ಓಡಾಡಿದ ಕ್ಷಣ ನೆನಪಿದೆಯೇ? ವುಹಾನ್‌ನಲ್ಲಿ ವೈರಸ್ ಒಂದು ತನ್ನ ಚಟುವಟಿಕೆ ಆರಂಭಿಸಿದೆ ಎನ್ನುವುದು ಯಾರಿಗೂ ಆಗ ತಿಳಿದಿರಲಿಲ್ಲ, ಬಹುಶಃ ಕ್ಸಿ ಜಿನ್ ಪಿಂಗ್ ಆಡಳಿತ ವಲಯದ ಹೊರತಾಗಿ.

ಜಗತ್ತಿನಲ್ಲಿಯೇ ವೈರಸ್ ಅನ್ನು ಅತ್ಯಂತ ಕೆಟ್ಟದಾಗಿ ನಿಭಾಯಿಸಿದ್ದು ಅಮೆರಿಕ ಎಂಬ ಕುಖ್ಯಾತಿ ಟ್ರಂಪ್‌ಗೆ ಸುತ್ತಿಕೊಂಡಿದೆ. ಈ ಮುಕ್ತ ಜಗತ್ತಿನಲ್ಲಿ ಅಮೆರಿಕವು ಅತ್ಯಂತ ಆಧುನಿಕ ಸುಸಜ್ಜಿತ ಆರೋಗ್ಯ ಮೂಲಸೌಕರ್ಯ ಹೊಂದಿದೆ ಎನ್ನುವುದೂ ಟ್ರಂಪ್ ಮನದಲ್ಲಿ ಇರಲಿಲ್ಲ. ಅವರು ಈ ಸವಾಲನ್ನು ಕ್ಷುಲ್ಲಕ ಎಂದು ಪರಿಗಣಿಸಿದರು. ವೈಜ್ಞಾನಿಕವಾಗಿ ಸಾಬೀತಾಗದ ಔಷಧಗಳನ್ನು ತಾವೇ ಸೂಚಿಸಿದರು. ಮಾಸ್ಕ್ ಧರಿಸುವುದನ್ನು ರಾಜಕೀಯಗೊಳಿಸಿದರು. ಸ್ವತಃ ವೈರಸ್ ಸೋಂಕಿಗೆ ತುತ್ತಾದರು. ಇದು ಅವರ ಆಡಳಿತ ವೈಖರಿಯ ಒಂದು ಸಾಂಕೇತಿಕ ದೃಷ್ಟಾಂತ.

ಟ್ರಂಪ್ ಪರ ಭಾರತೀಯರು?

ಟ್ರಂಪ್ ಪರ ಭಾರತೀಯರು?

ಅಮೆರಿಕದ ಮೆಟ್ರೋ ನಗರಗಳಲ್ಲಿ, ಹಳ್ಳಿಗಳಲ್ಲಿ ಮುಖ್ಯವಾಗಿ ರಿಪಬ್ಲಿಕನ್ ಪಕ್ಷದ ಪ್ರಭಾವ ಹೆಚ್ಚಿರುವ ಪ್ರದೇಶಗಳಲ್ಲಿರುವ ಭಾರತದ ಮೂಲ ಬೇರು ಹೊಂದಿರುವ ಜನರು, ಕೋವಿಡ್‌ನಿಂದ ಅತಿ ಹೆಚ್ಚು ಸಂಕಷ್ಟ ಅನುಭವಿಸಿದ ಪ್ರದೇಶಗಳ ಜನರು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ಟ್ರಂಪ್ ಪರ ಮತಚಲಾಯಿಸಿದ್ದಾರೆ.

ತತ್ವ ಸಿದ್ಧಾಂತಗಳ ಮರು ಸೃಷ್ಟಿ

ತತ್ವ ಸಿದ್ಧಾಂತಗಳ ಮರು ಸೃಷ್ಟಿ

ಭಾರತದಲ್ಲಿ ನರೇಂದ್ರ ಮೋದಿ ಅವರಂತೆಯೇ ಡೊನಾಲ್ಡ್ ಟ್ರಂಪ್ ಬಲಪಂಥೀಯ ಸಂಪ್ರದಾಯವಾದಿ ಪಕ್ಷವನ್ನು ಕೈಗೆ ತೆಗೆದುಕೊಂಡು ತಮ್ಮದೇ ಸ್ವಂತ ವ್ಯಕ್ತಿತ್ವದ ದೃಷ್ಟಿಯಿಂದ ಅದರ ತತ್ವ, ಸಿದ್ಧಾಂತ ಮತ್ತು ಕಾರ್ಯಸೂಚಿಗಳನ್ನು ಮರುರಚನೆ ಮಾಡಿದರು. ಇಬ್ಬರ ರಾಜಕೀಯ ನಡೆಗಳು, ಜನರನ್ನು ಎದುರುಗೊಳ್ಳುವ ರೀತಿ ಒಂದೇ ರೀತಿ ಇದೆ. ಇಬ್ಬರೂ ದುಡಿಯುವ ವರ್ಗಗಳನ್ನು ಒಲಿಸಿಕೊಳ್ಳುವುದರಲ್ಲಿ ಸಫಲರಾದರು. ಜತೆಗೆ ಕೆಳವರ್ಗಗಳನ್ನೂ ಸೆಳೆದರು.


ಚುನಾವಣಾ ದಿನದಿಂದ ಡೊನಾಲ್ಡ್ ಟ್ರಂಪ್ ಅಮೆರಿಕದ ದುಡಿಯುವ ವರ್ಗವನ್ನು ಉದ್ದೇಶಿಸಿ ಅನೇಕ ಆಕ್ರೋಶಭರಿತ ಹೇಳಿಕೆಗಳನ್ನು ನೀಡಿದರು. ಇದು ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ಮೋದಿ ಬೆಳೆಸಿಕೊಂಡ ಹೊಸ ರಾಜಕೀಯ ಮಾರ್ಗ. ಬಡಜನರಿಗೆ ಸಹಾಯ ಮಾಡುವಂತೆ, ದಕ್ಷತೆಯನ್ನು ನೀಡುವಂತೆ ತೋರಿಸುವುದು.

ರಿಪಬ್ಲಿಕನ್ ಪಕ್ಷದ ನೀತಿಗಳು

ರಿಪಬ್ಲಿಕನ್ ಪಕ್ಷದ ನೀತಿಗಳು

ಡೊನಾಲ್ಡ್ ಟ್ರಂಪ್ ಅವರು ರಿಪಬ್ಲಿಕನ್ ಪಕ್ಷವನ್ನು ಹೆಗಲ ಮೇಲೆ ಇರಿಸಿಕೊಂಡು ಅದರ ನಿಲುವುಗಳನ್ನೆಲ್ಲ ಕೊಡವಿಹಾಕಿದರು. ಉಚಿತ ವ್ಯಾಪಾರ, ಮುಕ್ತ ವಲಸೆ, ಜಾಗತೀಕರ, ಕಡಿಮೆ ಸುಂಕ, ವಿಶ್ವ ವ್ಯಾಪಿ ಅಧಿಕಾರ ಪ್ರದರ್ಶನ ಮತ್ತು ನೀತಿಗಳು ಇವುಗಳಲ್ಲಿ ಕಡಿಮೆ ತೆರಿಗೆ ಹೊರುತಪಡಿಸಿ ಉಳಿದೆಲ್ಲವನ್ನೂ ತೋರಿಸಿದರು. ಇತ್ತ ಬಿಜೆಪಿ ಕೂಡ ಮುಕ್ತ ಉದ್ಯಮಶೀಲತೆ, ಖಾಸಗೀಕರಣ, ಕಡಿಮೆ ತೆರಿಗೆ, ಸಂಪತ್ತು ಸೃಷ್ಟಿ ಮುಂತಾದವುಗಳನ್ನು ಬಳಸಿಕೊಳ್ಳುತ್ತಿದೆ. ಆದರೆ ಇವುಗಳೆಲ್ಲ ಅದು ನಗೆಗುದಿಗೆ ಇರಿಸಿದೆ.

ಟ್ರಂಪಿಸಂ ಏಳಿಗೆ

ಟ್ರಂಪಿಸಂ ಏಳಿಗೆ

ಅಮೆರಿಕ ಈಗ ಹೊಸ ಸಿದ್ಧಾಂತದ ಏಳಿಕೆಯನ್ನು ಕಾಣುತ್ತಿದೆ. ಅದು ಟ್ರಂಪಿಸಂ. ಟ್ರಂಪ್ ಚುನಾವಣೆಯಲ್ಲಿ ಸೋತರೂ ಅಮೆರಿಕದ ಹಿಂದಿನ ಸಾಂಪ್ರದಾಯಿಕ ಅಧ್ಯಕ್ಷರುಗಳಂತೆ ಅವರ ಖ್ಯಾತಿ ಕ್ಷೀಣಿಸಲಾರದು. ಏಕೆಂದರೆ ಅವರಲ್ಲಿ ಯಾವ ಸಾಂಪ್ರದಾಯಿಕತೆ ಇಲ್ಲ. ರಾಜಕೀಯ ಮುಖಂಡರಾಗಿ ಅವರು ತಮ್ಮದೇ ಪರಂಪರೆ ಸೃಷ್ಟಿಸಿದ್ದಾರೆ. ಅಮೆರಿಕ ಮಾತ್ರವಲ್ಲದೆ, ಇತರೆ ದೇಶಗಳಲ್ಲಿಯೂ ಅವರ ನಡವಳಿಕೆ ಪಾಠ ಕಲಿಸಿದೆ. ಪ್ರಜಾಪ್ರಭುತ್ವ ಜಗತ್ತಿನೆಲ್ಲೆಡೆ ರಾಜಕಾರಣಿಗಳಿಂದ ಅವರಿಂದ ಕಲಿಯಲಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಛಾಯೆ ಅವರ ಕುಟುಂಬವನ್ನು ಮಾತ್ರವಲ್ಲ, ರಿಪಬ್ಲಿಕನ್ ಪಕ್ಷವನ್ನೂ ಅಷ್ಟು ಸುಲಭವಾಗಿ ಬಿಡಲಾರದು. ಏಕೆಂದರೆ ಇಲ್ಲಿ ಕೆಲಸ ಮಾಡುತ್ತಿರುವುದು ಅವರ ಆಡಳಿತ ಯಶಸ್ಸಿನ ಪ್ರದರ್ಶನವಲ್ಲ, ಜನಪ್ರಿಯತೆ.

English summary
US Elections: President Donal Trump may lose the election to Joe Biden. But his popularity in America will not fade away easily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X