ದುಬಾರಿ ಟೊಮೊಟೊವನ್ನು ಕಿವಿಯೋಲೆ ಮಾಡಿಕೊಂಡ ಉರ್ಫಿ ಜಾವೇದ್
ವಿಶಿಷ್ಟವಾದ ಅರೆ ಬರೆ ಉಡಿಗೆಯಲ್ಲಿ ನೋಡುಗರ ಗಮನ ಸೆಳೆಯುವ ಬಾಲಿವುಡ್ ನಟಿ ಉರ್ಫಿ ಜಾವೇದ್ ಸದ್ಯ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಇತ್ತೀಚಿಗೆ ಟೊಮೆಟೊ ಬೆಲೆ ಹೆಚ್ಚಾಗಿರುವ ವಿಚಾರ ತಮಗೆಲ್ಲರಿಗೂ ತಿಳಿದೇ ಇದೆ. ಇದೇ ಟೊಮೆಟೊವನ್ನು ಸದ್ಯ ಉರ್ಫಿ ತನ್ನ ಕಿವಿಯೋಲೆಯನ್ನಾಗಿ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ನಟಿ, ಮಾಡೆಲ್ ಉರ್ಫಿ ಜಾವೇದ್ ಈ ಹೆಸರು ಕೇಳಿದ್ರೆ ಅರೆಕ್ಷಣ ತಲೆಯಲ್ಲಿ ಬರೋದು ಚಿತ್ರ ವಿಚಿತ್ರ ಬಟ್ಟೆ ತೊಟ್ಟ ಫೋಟೋಗಳು. ಈ ರೀತಿ ವಿಚಿತ್ರವಾದ ಉಡುಪುಗಳನ್ನು ಧರಿಸಿಯೇ ಉರ್ಫಿ ಎಲ್ಲರ ಗಮನಸೆಳೆದಿದ್ದಾರೆ. ಪ್ರತಿ ಬಾರಿಯೂ ತನ್ನ ವಿವಾದಾತ್ಮಕ ಫ್ಯಾಷನ್‌ನೊಂದಿಗೆ ಟ್ರೋಲ್ ಆಗುತ್ತಾರೆ. ಅವರು ಕೆಲವೊಮ್ಮೆ ಕಸದ ಚೀಲಗಳು, ದವಸ ದಾನ್ಯಗಳು, ಬಟ್ಟೆಗೆ ಹಾಕುವ ಕ್ಲಿಪ್, ಸೇಫ್ಟಿ ಪಿನ್‌ಗಳೊಂದಿಗೆ ಉಡುಪುಗಳನ್ನು ಧರಿಸಿದ್ದು ಇದೆ.

ವಿಶಿಷ್ಟವಾದ ಫ್ಯಾಶನ್ ಮೂಲಕ ಹೆಸರುವಾಸಿಯಾಗಿರುವ ಉರ್ಫಿ ಜಾವೇದ್ ಅವರು ಸದ್ಯ ತಮ್ಮ ಕಿವಿಯೋಲೆಗಳಾಗಿ ಟೊಮೆಟೊಗಳನ್ನು ಆಯ್ಕೆ ಮಾಡಿಕೊಂಡಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕಿವಿಯೋಲೆಗಳಷ್ಟೇ ಅಲ್ಲ, ಹಸಿ ಟೊಮೆಟೊವನ್ನು ತಿನ್ನುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. "ಟೊಮೆಟೊಗಳು ಹೊಸ ಚಿನ್ನ" ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಅವರ ಪೋಸ್ಟ್ ವೈರಲ್ ಆಗಿದೆ. ಬಳಕೆದಾರರು ಇದಕ್ಕೆ ಹಲವಾರು ಕಾಮೆಂಟ್‌ಗಳನ್ನು ನೆಟ್ಟಿಗರು ಮಾಡಿದ್ದಾರೆ. ಈ ಪೋಸ್ಟ್‌ಗೆ ಸುನೀಲ್ ಶೆಟ್ಟಿ ಅವರ ಚಿತ್ರವನ್ನು ಸೇರಿಸಲಾಗಿದೆ. ಅದರಲ್ಲಿ 'ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೆಲೆಗಳಿಂದ ಕಡಿಮೆ ಟೊಮೆಟೊಗಳನ್ನು ತಿನ್ನುವುದು' ಎಂದು ಬರೆಯಲಾಗಿದೆ.

ಕುತೂಹಲಕಾರಿಯಾಗಿ ದೇಶಾದ್ಯಂತ ಟೊಮೆಟೊ ಬೆಲೆಗಳು ಗಗನಕ್ಕೇರುತ್ತಿರುವ ಸಮಯದಲ್ಲಿ ಉರ್ಫಿಯ ಟೊಮೆಟೊ ಕಿವಿಯೋಲೆಗಳು ಅಲೆಗಳನ್ನು ಸೃಷ್ಟಿಸಿದೆ. ಮುಂಬೈನಲ್ಲಿ ಪ್ರಸ್ತುತ ಟೊಮೆಟೊ ಪ್ರತಿ ಕಿಲೋಗ್ರಾಂಗೆ 194 ರೂಪಾಯಿ ಇದೆ. ದೆಹಲಿಯಲ್ಲಿ ಕೆಜಿಗೆ 158 ರೂ.ಗೆ ಮಾರಾಟವಾಗುತ್ತಿದೆ.
ನಟಿ ಯಾವಾಗ ಮತ್ತು ಏನು ಧರಿಸುತ್ತಾಳೆ ಎಂಬುದು ಯಾರಿಗೂ ತಿಳಿದಿಲ್ಲ. ಉರ್ಫಿ ಅನೇಕ ವಸ್ತುಗಳಿಂದ ತನಗಾಗಿ ಡ್ರೆಸ್ ಸಿದ್ಧಪಡಿಸಿದ್ದಾಳೆ. ಆಕೆಯ ಈ ಪ್ರಯೋಗಗಳಿಂದಾಗಿ ಪ್ರತಿ ಬಾರಿಯೂ ಟ್ರೋಲ್ ಗೆ ಒಳಗಾಗುತ್ತಾಳೆ. ಮತ್ತೊಮ್ಮೆ ಉರ್ಫಿ ತನ್ನ ಲುಕ್‌ನಿಂದ ಹೊರಬಂದಿದ್ದಾಳೆ. ಇವರ ಇತ್ತೀಚೆಗೆ ಲೇಟೆಸ್ಟ್ ಲುಕ್ ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ನಟಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಉರ್ಫಿ ಜಾವೇದ್ ಅವರ ಹೊಸ ವೀಡಿಯೊ ಕಾಣಿಸಿಕೊಂಡಿದೆ. ಈ ವಿಡಿಯೋದಲ್ಲಿ ನೀವು ಉರ್ಫಿ ಅವರ ಹೊಸ ಅವತಾರವನ್ನು ನೋಡಬಹುದು. ಅವಳು ಕೆಂಪು ಬಣ್ಣದ ಹೃದಯದ ಆಕಾರದ ಬ್ರೇಲೆಟ್ ಅನ್ನು ತಯಾರಿಸಿದ್ದಳು. ಇದರೊಂದಿಗೆ ಎರಡು ಕೈಗಳ ಬದಿಯಲ್ಲಿ ಕೆಂಪು ಬಣ್ಣದ ದುಪಟ್ಟಾದಿಂದ ತಲೆಯನ್ನು ಮುಚ್ಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ನಟಿ ಬಿಳಿ ಬಣ್ಣದ ಉಡುಗೆಯನ್ನು ತೊಟ್ಟಿದ್ದಾರೆ.












Click it and Unblock the Notifications