ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಚುನಾವಣಾ ಅಭಿಪ್ರಾಯ ಸಂಗ್ರಹ: ಮುಂದಿನ ಸಿಎಂ ಯೋಗಿ ಆದಿತ್ಯನಾಥ್?

|
Google Oneindia Kannada News

ಲಕ್ನೋ, ಜನವರಿ 21: ಉತ್ತರ ಪ್ರದೇಶದಲ್ಲಿ ಇನ್ನು ಕೆಲವೇ ವಾರಗಳಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲ ಪ್ರಮುಖ ಪಕ್ಷಗಳು ಚುನಾವಣಾ ಕಣಕ್ಕಿಳಿದಿವೆ. 2024 ರ ಸಾರ್ವತ್ರಿಕ ಚುನಾವಣೆಗೆ ಇದನ್ನು ಸೆಮಿಫೈನಲ್ ಎಂದು ಪರಿಗಣಿಸಲಾಗಿದೆ. ಈ ವೇಳೆ ಕೆಲ ಸಮೀಕ್ಷೆಗಳನ್ನು ಮಾಡಲಾಗಿದೆ. ಇದು ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳಿಗೆ ಒಂದು ಪ್ರಮುಖ ಸಮೀಕ್ಷೆಯಾಗಿದೆ. ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಲು ಹೊರಟಿದೆ.

ಈ ಬಾರಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಸ್‌ಪಿ ನಡುವೆ ಭಾರೀ ಪೈಪೋಟಿ ನಡೆಯಲಿದೆ ಎಂದು ಎಲ್ಲ ಸಮೀಕ್ಷೆಗಳು ಹೇಳಿವೆ. ಹಾಗಾದರೆ, ಬಿಜೆಪಿಯ ಯೋಗಿ ಆದಿತ್ಯನಾಥ್ ಮತ್ತೆ ಸಿಎಂ ಆಗಬೇಕೆಂದು ಎಷ್ಟು ಶೇಕಡಾ ಜನರು ಬಯಸುತ್ತಾರೆ? ಜೀ ನ್ಯೂಸ್‌ನ ಸಮೀಕ್ಷೆಯ ಪ್ರಕಾರ, ಯುಪಿಯ 47 ಪ್ರತಿಶತದಷ್ಟು ಜನರು ಯೋಗಿ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನವನ್ನು ಆಕ್ರಮಿಸುವುದನ್ನು ನೋಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಅಖಿಲೇಶ್ ಯಾದವ್ ಎರಡನೇ ಸ್ಥಾನಕ್ಕೆ ಬಂದಿದ್ದು, ಶೇ.35ರಷ್ಟು ಜನರು ಮುಂದಿನ ಸಿಎಂ ಆಗಬೇಕೆಂದು ಬಯಸಿದ್ದಾರೆ. ಚುನಾವಣೆಗೆ ಸ್ಪರ್ಧಿಸದ ಬಿಎಸ್ಪಿಯ ಮಾಯಾವತಿ ಮುಂದಿನ ಸಿಎಂ ಆಗಬೇಕೆಂದು ಶೇ.7ರಷ್ಟು ಜನ ಬಯಸಿದ್ದಾರೆ. ಕೊನೆಯದಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜ್ಯದ ಉನ್ನತ ಸ್ಥಾನವನ್ನು ಆಕ್ರಮಿಸುವುದನ್ನು ನೋಡಲು ಶೇಕಡಾ ಐದು ಜನರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

India Today Poll: ಯೋಗಿ ಆದಿತ್ಯನಾಥ್ ಪರ ಶೇ.49ರಷ್ಟು ಮಂದಿ ಬೆಂಬಲ
ಅವಧ್‌ನಲ್ಲಿ (ಲಕ್ನೋ, ಪ್ರಯಾಗರಾಜ್, ಅಯೋಧ್ಯೆ ಸೇರಿದಂತೆ ಇತರವುಗಳನ್ನು ಒಳಗೊಂಡಂತೆ), ಪೂರ್ವಾಂಚಲದಲ್ಲಿ ಶೇಕಡಾ 48, ಬುಂದೇಲ್‌ಖಂಡದಲ್ಲಿ ಶೇಕಡಾ 50, ರುಹೇಕಂಡ್‌ನಲ್ಲಿ ಶೇಕಡಾ 47, ಮಧ್ಯ ಯುಪಿಯಲ್ಲಿ ಶೇಕಡಾ 47 ಮತ್ತು ಶೇಕಡಾ 43 ರಷ್ಟು ಪ್ರತಿಸ್ಪಂದಕರು ಯೋಗಿ ಮುಂದಿನ ಸಿಎಂ ಎಂದು ಬಯಸುತ್ತಾರೆ ಎಂದು ಸಮೀಕ್ಷೆಯು ಹೇಳುತ್ತದೆ. ಇನ್ನೂ ಉತ್ತರ ಪ್ರದೇಶದ ಮುಂದಿನ ಸಿಎಂ ಆಗಬೇಕೆಂದು ಪಶ್ಚಿಮ ಯುಪಿಯ ಅವಧ್‌ನಲ್ಲಿ ಶೇ.34 ಪ್ರತಿಶತದಷ್ಟು ಜನರು (ಲಕ್ನೋ, ಪ್ರಯಾಗ್‌ರಾಜ್, ಅಯೋಧ್ಯೆ ಸೇರಿದಂತೆ), ಪೂರ್ವಾಂಚಲದಲ್ಲಿ 35 ಪ್ರತಿಶತ, ಬುಂದೇಲ್‌ಖಂಡದಲ್ಲಿ 31 ಪ್ರತಿಶತ, ರುಹೆಖಂಡ್‌ನಲ್ಲಿ 37 ಪ್ರತಿಶತ, ಮಧ್ಯ ಯುಪಿಯಲ್ಲಿ 35 ಪ್ರತಿಶತ ಮತ್ತು ಪಶ್ಚಿಮ ಯುಪಿಯಲ್ಲಿ 41 ಪ್ರತಿಶತ ಜನರು ಅಖಿಲೇಶ್‌ ಯಾದವ್‌ ಮುಂದಿನ ಸಿಎಂ ಆಗಬೇಕು ಎಂದು ಬಯಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

UP Elections Opinion Poll: What Percentage of People Want BJP’s Yogi Adityanath to Return as CM?

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಕಣ ರಣರೋಚಕ ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯದ ಮೈನ್‌ಪುರಿ ಜಿಲ್ಲೆಯ ಕರ್ಹಾಲ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸ್ಪರ್ಧಿಸಲಿದ್ದಾರೆ ಎಂದು ಪಕ್ಷ ಘೋಷಿಸಿದೆ. ಫೆಬ್ರವರಿ 20 ರಂದು ಕರ್ಹಾಲ್‌ನಲ್ಲಿ ಮತದಾನ ನಡೆಯಲಿದೆ.

ಉತ್ತರ ಪ್ರದೇಶದ ಅಜಂಗಢ ಕ್ಷೇತ್ರದ ಲೋಕಸಭಾ ಸಂಸದರಾಗಿರುವ ಅಖಿಲೇಶ್ ಯಾದವ್ ಈವರೆಗೂ ರಾಜ್ಯ ಚುನಾವಣೆಗಳಲ್ಲಿ ಸ್ಪರ್ಧಿಸಿಯೇ ಇಲ್ಲ. ಈ ಹಿಂದೆ 2012ರಲ್ಲಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ವೇಳೆ ವಿಧಾನ ಪರಿಷತ್ ಮೂಲಕ ಆಯ್ಕೆ ಆಗಿದ್ದರು. ಇದೀಗ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದು, ಕದನ ಕೌತುಕವನ್ನು ಕೆರಳಿಸಿದೆ.

ಇನ್ನೂ ಮುಂದಿನ ತಿಂಗಳು ನಡೆಯಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯುಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್‌ಪುರದಿಂದ ಸ್ಪರ್ಧಿಸಲಿದ್ದಾರೆ.ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

Recommended Video

Indian Maharajas ತಮ್ಮ ಮೊದಲನೇ ಪಂದ್ಯದಲ್ಲೇ ಗೆದ್ದಿದ್ದು ಹೀಗೆ | Oneindia Kannada

ZEE News Opinion Poll: ಉತ್ತರ ಪ್ರದೇಶ ಚುನಾವಣೆಯಲ್ಲಿ ಯಾರಿಗೆ ಮತದಾರರ ಮಣೆ?
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

English summary
All the polls have indicated that there is a fight between BJP and SP. So, what percentage of people want BJP's Yogi Adityanath to return as the CM?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X