ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಂಬಾಟ್ ಮಗಾ: 30 ನಿಮಿಷದಲ್ಲಿ ಈ ಸಮೋಸಾ ತಿನ್ನೋರಿಗೆ 51,000 ರೂ. ಬಹುಮಾನ!

|
Google Oneindia Kannada News

ಲಕ್ನೋ, ಜುಲೈ 8: ಈಗಿನ ಜಮಾನಾದಲ್ಲಿ ಜನರ ಬದುಕಿನ ವೈಖರಿನೇ ಬದಲಾಗಿ ಹೋಗಿದೆ. ಫ್ಯಾಷನ್ ನಡುವೆ ಬ್ಯುಸಿ ಬದುಕಿಗೆ ಅಂಟಿಕೊಂಡಿರುವ ಯುವಕ-ಯುವತಿಯರಿಗೆ ಊಟಕ್ಕಿಂತ ಉಪ್ಪಿನಕಾಯಿ ಮೇಲೆಯೇ ವ್ಯಾಮೋಹ ಜಾಸ್ತಿ. ಅಂದರೆ ಬೇರೇನೂ ಇಲ್ಲ, ಅದೇ ಸಂಜೆ ನಾಲಿಗೆ ಚಪ್ಪರಿಸುತ್ತಾ ತಿನ್ನುವ ಸ್ನ್ಯಾಕ್ಸ್.

ಪಾನಿಪುರಿ, ಗೋಬಿ ಮಂಚೂರಿ, ಪಾಪ್ ಕಾರ್ನ್ಸ್ ಹೀಗೆ ಸ್ನ್ಯಾಕ್ಸ್ ಸಾಲು ಬೆಳೆಯುತ್ತಾ ಹೋಗುತ್ತದೆ. ಈ ಪಟ್ಟಿಯಲ್ಲೇ ಫೇಮಸ್ ಆಗಿರುವ ಮತ್ತೊಂದು ಅಚ್ಚುಮೆಚ್ಚಿನ ತಿಂಡಿಯೇ ಸಮೋಸಾ. ಈ ಸಮೋಸಾ ಇದೀಗ ಮತ್ತೊಂದು ರೀತಿಯಲ್ಲಿ ಸದ್ದು ಮಾಡುತ್ತಾ ಸುದ್ದಿ ಆಗಿದೆ.

ಈದ್ 2022: ದೇಶದಾದ್ಯಂತ ರಂಜಾನ್ ಸಂಭ್ರಮ, ಶಾಂತಿಗಾಗಿ ಪ್ರಾರ್ಥನೆಈದ್ 2022: ದೇಶದಾದ್ಯಂತ ರಂಜಾನ್ ಸಂಭ್ರಮ, ಶಾಂತಿಗಾಗಿ ಪ್ರಾರ್ಥನೆ

ಉತ್ತರ ಪ್ರದೇಶದಲ್ಲಿ ಸಮೋಸಾ ತಿಂದೋರು ಜಸ್ಟ್ 30 ನಿಮಿಷದಲ್ಲೇ ಸಾಹುಕಾರ್ ಆಗಬಹುದು. ಇಂಥದೊಂದು ಡಿಫರೆಂಟ್ ಆಫರ್ ಅನ್ನು ಹೋಟೆಲ್ ಮಾಲೀಕರೊಬ್ಬರು ತಮ್ಮ ಗ್ರಾಹಕರಿಗಾಗಿ ಇಟ್ಟಿದ್ದಾರೆ. ಒಂದು ಸಮೋಸಾ ತಿಂದೋರಿಗೆ ಬರೋಬ್ಬರಿ 51,000 ರೂಪಾಯಿ ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ. ಅಸಲಿಗೆ ಏನಿದು ಸಮೋಸಾ ಚಾಲೆಂಜ್ ಅಂತಾ ತಿಳಿದುಕೊಳ್ಳುವುದಕ್ಕೆ ವರದಿಯನ್ನೊಮ್ಮೆ ಓದಿ.

ಎಂಟು ಕೆಜಿ ತೂಕದ ಸಮೋಸಾ ತಿನ್ನೋನೇ ಸಾಹುಕಾರ!

ಎಂಟು ಕೆಜಿ ತೂಕದ ಸಮೋಸಾ ತಿನ್ನೋನೇ ಸಾಹುಕಾರ!

ಮೀರತ್‌ನಲ್ಲಿ ಇರುವ ಕುರ್ತಿ ಬಜಾರ್ ಪ್ರದೇಶದ ಅದೊಂದು ಸಮೋಸಾ ಅಂಗಡಿ ಈಗ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ. ಈ ಅಂಗಡಿಯಲ್ಲಿ ಒಂದು ಸಮೋಸಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಬರೋಬ್ಬರಿ ಎಂಟು ಕೆಜಿ ತೂಕದ ಸಮೋಸಾವನ್ನು ಅರ್ಧ ಗಂಟೆಯಲ್ಲಿ ತಿಂದವರು ಮರು ನಿಮಿಷದಲ್ಲಿಯೇ 51,000 ರೂಪಾಯಿ ಒಡೆಯರಾಗುತ್ತಾರೆ. ಇಂಥದೊಂದು ಬಂಪರ್ ಆಫರ್ ಅನ್ನು ಸ್ವತಃ ಅಂಗಡಿ ಮಾಲೀಕರೇ ಘೋಷಿಸಿದ್ದಾರೆ.

ಸಮೋಸಾ ತಿಂದರೆ 51 ಸಾವಿರ ರೂಪಾಯಿ ಬಹುಮಾನ

ಸಮೋಸಾ ತಿಂದರೆ 51 ಸಾವಿರ ರೂಪಾಯಿ ಬಹುಮಾನ

ಉತ್ತರ ಪ್ರದೇಶದಲ್ಲಿ ಸಮೋಸಾ ಪ್ರಿಯರನ್ನು ಆಕರ್ಷಿಸುವುದಕ್ಕಾಗಿ ಅಂಗಡಿ ಮಾಲೀಕರು ಬಂಪರ್ ಆಫರ್ ಅನ್ನು ಘೋಷಿಸಿದ್ದರು. ಬರೋಬ್ಬರಿ 8 ಕೆಜಿ ತೂಕದ ಸಮೋಸಾವನ್ನು ಸಿದ್ಧಪಡಿಸಿದ್ದು, ಅದನ್ನು 30 ನಿಮಿಷದಲ್ಲಿ ತಿಂದು ಮುಗಿಸುವ ವ್ಯಕ್ತಿಗೆ 51 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಇನ್ನೊಂದು ವಿಶೇಷ ಎಂದರೆ 8 ಕೆಜಿಯಲ್ಲಿ ಸಿದ್ಧಪಡಿಸಲಾಗಿರುವ ಇದಕ್ಕೆ ಬಾಹುಬಲಿ ಸಮೋಸಾ ಎಂದು ಹೆಸರು ಇಡಲಾಗಿದೆ.

ಬಾಹುಬಲಿ ಸಮೋಸಾದ ಬಗ್ಗೆ ಮಾಲೀಕನ ಮಾತು

ಬಾಹುಬಲಿ ಸಮೋಸಾದ ಬಗ್ಗೆ ಮಾಲೀಕನ ಮಾತು

ನಮ್ಮ ಅಂಗಡಿಯಲ್ಲಿ ಸಿದ್ಧಪಡಿಸುವ ಸಮೋಸಾವನ್ನು ಚಿರಪರಿಚಿತಗೊಳಿಸುವ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದೆ. ಈ ವೇಳೆ ಏನಾದರೂ ವಿಭಿನ್ನ ಪ್ರಯತ್ನವನ್ನು ಮಾಡುವುದಕ್ಕೆ ಬಯಸಿದ್ದೇನು. ಆಗ ಹೊಡೆದಿದ್ದೇ ಈ ವಿನೂತನ ಐಡಿಯಾ. ಮೊದಲು ನಾವು ನಾಲ್ಕು ಕೆಜಿಯ ಸಮೋಸಾವನ್ನು ಮಾಡಲು ಪ್ರಾರಂಭಿಸಿದೆವು. ನಂತರದಲ್ಲಿ ಅದನ್ನು ಎಂಟು ಕೆಜಿಗೆ ಹೆಚ್ಚಿಸಿದೆವು, ಎಂದು ಮೀರತ್ ನಲ್ಲಿರುವ ಅಂಗಡಿ ಮಾಲೀಕ ಶುಭಂ ತಿಳಿಸಿದ್ದಾರೆ.

ಬಾಹುಬಲಿ ಸಮೋಸಾಗೆ ಖರ್ಚಾಗಿದ್ದು ಎಷ್ಟು ಹಣ?

ಬಾಹುಬಲಿ ಸಮೋಸಾಗೆ ಖರ್ಚಾಗಿದ್ದು ಎಷ್ಟು ಹಣ?

ಮೀರತ್ ಮಾರುಕಟ್ಟೆಯಲ್ಲಿ ಫೇಮಸ್ ಆಗಿರುವ ಬಾಹುಬಲಿ ಸಮೋಸಾವನ್ನು ವಿಭಿನ್ನ ಮತ್ತು ವಿಶೇಷವಾಗಿ ಸಿದ್ಧಪಡಿಸಲಾಗುತ್ತದೆ. ಈ ಸಮೋಸಾದಲ್ಲಿ ಆಲೂಗಡ್ಡೆ, ಬಟಾಣಿ, ಕಾಟೇಜ್ ಚೀಸ್ ಮತ್ತು ಡ್ರೈ ಫ್ರೂಟ್ಸ್ ಅನ್ನು ತುಂಬಿ ಸಿದ್ಧಪಡಿಸಲಾಗುತ್ತದೆ. ಬಾಹುಬಲಿ ಸಮೋಸಾ ಸಿದ್ಧಪಡಿಸುವುದಕ್ಕೆ ಬರೋಬ್ಬರಿ 1,100 ರೂಪಾಯಿ ಖರ್ಚು ಮಾಡಲಾಗುತ್ತದೆ. ಇಲ್ಲಿಯವರೆಗೆ ಯಾರೂ ಈ ಸಮೋಸಾವನ್ನು 30 ನಿಮಿಷದಲ್ಲಿ ತಿಂದು ಮುಗಿಸುವ ಸವಾಲನ್ನು ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಅದಕ್ಕಾಗಿ ಅನೇಕ ಜನರು ಪ್ರಯತ್ನಿಸಿದರೂ ಚಾಲೆಂಜ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇಲ್ಲಿಂದ ಮುಂದೆ ನಾವು 10 ಕೆಜಿಯ ಸಮೋಸಾವನ್ನು ಕೂಡಾ ತಯಾರಿಸಲು ಯೋಜನೆ ಹಾಕಿಕೊಂಡಿದ್ದೇವೆ," ಎಂದು ಅಂಗಡಿ ಮಾಲೀಕ ಶುಭಂ ಹೇಳಿದ್ದಾರೆ.

ಸಮೋಸಾ ಅಂಗಡಿ ರಾತ್ರೋರಾತ್ರಿ ಫುಲ್ ಫೇಮಸ್!

ಸಮೋಸಾ ಅಂಗಡಿ ರಾತ್ರೋರಾತ್ರಿ ಫುಲ್ ಫೇಮಸ್!

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ಅಂಗಡಿಯ ವ್ಯಾಪಾರ ಫುಲ್ ಡಲ್ ಹೊಡೆದಿತ್ತು. ಸಮೋಸಾದ ಅಂಗಡಿಯತ್ತ ಆಗಮಿಸುವ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿತ್ತು. ಈ ಹಿನ್ನೆಲೆ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಮಾಡಿದ ವಿನೂತನ ಪ್ರಯತ್ನ ಈಗ ಯಶಸ್ವಿಯಾಗಿದೆ.

ನೂರಾರು ಸಂಖ್ಯೆಯಲ್ಲಿ ಗ್ರಾಹಕರು ತಮ್ಮ ಅಂಗಡಿಯತ್ತ ಆಗಮಿಸುತ್ತಿದ್ದಾರೆ. ಬಾಹುಬಲಿ ಸಮೋಸಾ ಚಾಲೆಂಜ್ ಸ್ವೀಕರಿಸುವುದಕ್ಕಾಗಿ ಗ್ರಾಹಕರು ಅಂಗಡಿಗೆ ಧಾವಿಸುತ್ತಿದ್ದಾರೆ. ಅಲ್ಲದೇ ದೇಶದ ನಾನಾ ಭಾಗಗಳಿಂದ ಫುಡ್ ಬ್ಲಾಗರ್‌ಗಳು ಬಾಹುಬಲಿ ಸಮೋಸಾ ನೋಡಲು ಬರುತ್ತಿದ್ದು, ರೀಲ್ ಗಳನ್ನು ಮಾಡುತ್ತಿದ್ದಾರೆ," ಎಂದು ಅಂಗಡಿ ಮಾಲೀಕ ಶುಭಂ ಸಂತಸ ವ್ಯಕ್ತಪಡಿಸಿದ್ದಾರೆ.

Recommended Video

ಹೂಡಾ ಹೊಡೆದ ಶಾಟ್ ಗೆ ನಡುಗಿದ ರವಿಶಾಸ್ತ್ರಿ | *Cricket | OneIndia Kannada

English summary
Uttar Pradesh Bahubali Samosa Challenge; Eat in 30 minutes and Get Rs 51,000 Prize. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X