5ನೇ ಹಂತದ ಚುನಾವಣೆ ಕಣದಲ್ಲಿರುವ ಪ್ರಮುಖ ಕ್ಷೇತ್ರಗಳು, ಅಭ್ಯರ್ಥಿಗಳ ಪಟ್ಟಿ

ಲಕ್ನೋ ಫೆಬ್ರವರಿ 27: ಉತ್ತರ ಪ್ರದೇಶದ 12 ಜಿಲ್ಲೆಗಳ 61 ವಿಧಾನಸಭಾ ಸ್ಥಾನಗಳಿಗೆ 692 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಐದನೇ ಹಂತದ ಮತದಾನ ಇಂದು ಆರಂಭಗೊಂಡಿದೆ. ಉತ್ತರ ಪ್ರದೇಶ ವಿಧಾನಸಭೆಯ ಒಟ್ಟು 403 ಸ್ಥಾನಗಳ ಪೈಕಿ 292 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಈ ಹಂತದಲ್ಲಿ, ಸುಲ್ತಾನ್‌ಪುರ, ಚಿತ್ರಕೂಟ, ಪ್ರತಾಪ್‌ಗಢ, ಕೌಶಾಂಬಿ, ಪ್ರಯಾಗ್‌ರಾಜ್, ಬಾರಾಬಂಕಿ, ಬಹ್ರೈಚ್, ಶ್ರಾವಸ್ತಿ ಮತ್ತು ಗೊಂಡಾ ಜಿಲ್ಲೆಗಳಲ್ಲಿ 2.24 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಅಮೇಥಿ ಮತ್ತು ರಾಯ್‌ಬರೇಲಿಯನ್ನು ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು ಮತ್ತು ರಾಮಮಂದಿರ ನಿರ್ಮಾಣ ಹೋರಾಟದ ಕೇಂದ್ರಬಿಂದು ಅಯೋಧ್ಯೆದಲ್ಲಿ ಕೂಡ ಈ ಹಂತದಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು ಸಂಜೆ 6ರವರೆಗೆ ಮತದಾನ ನಡೆಯಲಿದೆ.

ಕೌಶಂಬಿ ಜಿಲ್ಲೆಯ ಸಿರತು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಐದನೇ ಹಂತದ ಕಣದಲ್ಲಿ ಪ್ರಮುಖರು. ಅವರು ಅಪ್ನಾ ದಳ (ಕಾಮರವಾಡಿ) ಅಭ್ಯರ್ಥಿ ಪಲ್ಲವಿ ಪಟೇಲ್ ಅವರನ್ನು ಎದುರಿಸುತ್ತಿದ್ದಾರೆ. ಅಲಹಾಬಾದ್ ಪಶ್ಚಿಮದಿಂದ ಸಿದ್ಧಾರ್ಥ್ ನಾಥ್ ಸಿಂಗ್, ಪಟ್ಟಿಯಿಂದ (ಪ್ರತಾಪಗಢ) ರಾಜೇಂದ್ರ ಸಿಂಗ್, ಅಲಿಯಾಸ್ ಮೋತಿ ಸಿಂಗ್, ಅಲಹಾಬಾದ್ ದಕ್ಷಿಣದಿಂದ ನಂದ ಗೋಪಾಲ್ ಗುಪ್ತ ನಾಡಿ ಮತ್ತು ಮಂಕಾಪುರದಿಂದ (ಗೊಂಡಾ) ರಮಾಪತಿ ಶಾಸ್ತ್ರಿ ಕಣದಲ್ಲಿರುವ ಇತರೆ ಸಚಿವರು.

UP 5th phase polls: Key constituencies, prominent candidates

1993 ರಿಂದ ಕುಂದಾದಿಂದ ಶಾಸಕರಾಗಿರುವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಅವರು ಮತ್ತೊಮ್ಮೆ ತಮ್ಮ ಪಕ್ಷದ ಜನಸತ್ತಾ ದಳದಿಂದ ಕಣದಲ್ಲಿದ್ದಾರೆ, ಅವರ ವಿರುದ್ಧ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಹಳೆಯ ಸಹಾಯಕ ಗುಲ್ಶನ್ ಯಾದವ್ ಸ್ಪರ್ಧಿಸಿದ್ದಾರೆ. ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರ ತಾಯಿ ಮತ್ತು ಅಪ್ನಾ ದಳ (ಕೆ) ನಾಯಕ ಕೃಷ್ಣಾ ಪಟೇಲ್ ಪ್ರತಾಪ್‌ಗಢ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅಪ್ನಾ ದಳ (ಕೆ) ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ತನ್ನ ತಂದೆ ಸೋನೆಲಾಲ್ ಪಟೇಲ್ ಹೆಸರಿನ ಪಕ್ಷದ ಪ್ರತಿಸ್ಪರ್ಧಿ ಬಣದ ಮುಖ್ಯಸ್ಥೆ ಅನುಪ್ರಿಯಾ ಪಟೇಲ್, ಕೃಷ್ಣಾ ಪಟೇಲ್‌ಗೆ ಸವಾಲು ಹಾಕಲು ಬಿಜೆಪಿಗೆ ಸ್ಥಾನವನ್ನು ನೀಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರ ಮೋನಾ ಅವರು ಪ್ರತಾಪ್‌ಗಢದ ರಾಮ್‌ಪುರ ಖಾಸ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಕೊನೆಯ ಎರಡು ಹಂತದ ಚುನಾವಣೆಗಳು ಮಾರ್ಚ್ 3 ಮತ್ತು ಮಾರ್ಚ್ 7 ರಂದು ನಡೆಯಲಿದೆ. ಐದನೇ ಹಂತದ ಚುನಾವಣಾ ಪ್ರಚಾರದ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಚುನಾವಣಾ ಕ್ಷೇತ್ರಗಳಲ್ಲಿ ಪ್ರಚಾರ ಪೂರ್ಣಗೊಳಿಸಿದ್ದಾರೆ.

ಬಿಜೆಪಿ ಪ್ರತಿಸ್ಪರ್ಧಿಗಳಾದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಎಸ್‌ಪಿ ವರಿಷ್ಠೆ ಮಾಯಾವತಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಕ್ಷೇತ್ರಗಳಲ್ಲಿ ವ್ಯಾಪಕ ಪ್ರವಾಸ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ರಾಯ್ಬರೇಲಿ ಕ್ಷೇತ್ರದ ಮತದಾರರ ರ್‍ಯಾಲಿಯನ್ನು ಡಿಜಿಟಲ್ ಮೂಲಕ ಉದ್ದೇಶಿಸಿ ಮಾತನಾಡಿದ್ದರು.

ಶುಕ್ರವಾರದ ಅಂತಿಮ ಸುತ್ತಿನ ಪ್ರಚಾರದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜಂಟಿಯಾಗಿ ಅಮೇಥಿಯಲ್ಲಿ ರ್‍ಯಾಲಿಯನ್ನು ನಡೆಸಿದರು. ಅಮೇಥಿ, ಪ್ರಯಾಗ್‌ರಾಜ್, ಕೌಶಾಂಬಿ ಮತ್ತು ಬಹ್ರೈಚ್‌ನಲ್ಲಿ ಸರಣಿ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಖ್ಯವಾಗಿ ವೋಟ್ ಬ್ಯಾಂಕ್ ರಾಜಕೀಯ ಮತ್ತು 'ಪರಿವಾರವಾದ' ವಿಷಯಗಳ ಮೇಲೆ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಶುಕ್ರವಾರ ಸಂಜೆ ಐದನೇ ಹಂತದ ಪ್ರಚಾರ ಮುಕ್ತಾಯಗೊಂಡಿದ್ದು, ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅಜಯ್ ಕುಮಾರ್ ಶುಕ್ಲಾ ಶನಿವಾರ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+