Budget 2022; ಪಿಎಂ ಗತಿಶಕ್ತಿ ರಾಷ್ಟ್ರೀಯ ಯೋಜನೆ ವಿವರಗಳು
ನವದೆಹಲಿ, ಫೆಬ್ರವರಿ 01; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಬಜೆಟ್ ಭಾಷಣದಲ್ಲಿ ಪಿಎಂ ಗತಿಶಕ್ತಿ ಯೋಜನೆ ಬಗ್ಗೆ ಅವರು ವಿಷಯ ಪ್ರಸ್ತಾಪಿಸಿದರು. ವಿವಿಧ ವಲಯಗಳ ಘೋಷಣೆಗಳನ್ನು ಮಾಡುವಾಗ ಈ ಯೋಜನೆ ಬಗ್ಗೆ ಅವರು ಪ್ರಸ್ತಾಪ ಮಾಡಿದರು.
ಮಂಗಳವಾರ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದರು. ಪಿಎಂ ಗತಿಶಕ್ತಿ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು 25,000 ಕಿ. ಮೀ. ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿದರು. ಪಿಎಂ ಗತಿಶಕ್ತಿ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ ಸರಕು ಸಾಗಣೆಗಾಗಿ 100 ಕಾರ್ಗೊ ರೈಲು ನಿಲ್ದಾಣಗಳನ್ನು ಸಹ ನಿರ್ಮಾಣ ಮಾಡಲಾಗುತ್ತದೆ ಎಂದು ಬಜೆಟ್ ಭಾಷಣದಲ್ಲಿ ಹೇಳಿದರು.
2021ರ ಅಕ್ಟೋಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಪ್ರಗತಿ ಮೈದಾನದಲ್ಲಿ ಪಿಎಂ ಗತಿಶಕ್ತಿ ಯೋಜನೆಗೆ ಚಾಲನೆ ನೀಡಿದರು. ದೇಶದ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಇದೊಂದು ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಲಾಗುತ್ತಿದೆ. ಬಹುಮಾದರಿ ಸಂಪರ್ಕ ಏರ್ಪಡಿಸುವ 100 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆ ಇದಾಗಿದೆ. ಸಾಗಣೆ ವೆಚ್ಚ ಕಡಿಮೆ ಮಾಡುವ, ಆರ್ಥಿಕತೆ ಉತ್ತೇಜಿಸುವ ಜೊತೆ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಗುರಿಯನ್ನು ಯೋಜನೆ ಹೊಂದಿದೆ.

ಯೋಜನೆಯು ಎಲ್ಲಾ ಸಂಬಂಧಿತ ಇಲಾಖೆಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಮೂಲಕ ಯೋಜನೆ ಪೂರ್ಣಗೊಳಿಸಲು ಹೆಚ್ಚು ಶಕ್ತಿ ಮತ್ತು ವೇಗವನ್ನು ನೀಡುತ್ತದೆ. ಈ ಮೂಲಕ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಮೂಲಸೌಕರ್ಯ ಯೋಜನೆಗಳನ್ನು ಒಂದೇ ದೃಷ್ಟಿಕೋನದಿಂದ ವಿನ್ಯಾಸಗೊಳಿಸಿ ಕಾರ್ಯಗತಗೊಳಿಸಲಾಗುತ್ತದೆ.
ದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹಲವು ಸಮಸ್ಯೆಗಳಿವೆ. ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆಯೂ ಇದೆ. ಒಮ್ಮೆ ರಸ್ತೆ ನಿರ್ಮಾಣ ಮಾಡಿದರೆ ಇತರ ಸಂಸ್ಥೆಗಳು ಕೇಬಲ್ ಅಳವಡಿಕೆಗಾಗಿ, ಅನಿಲ ಕೊಳವೆ ಮಾರ್ಗ ನಿರ್ಮಿಸಲು ಮತ್ತೆ ರಸ್ತೆಯನ್ನು ಅಗೆಯುತ್ತಾರೆ. ಇದರಿಂದ ಅನಾನುಕೂಲತೆ ಆಗುವುದಷ್ಟೇ ಅಲ್ಲ, ಇದು ಆರ್ಥಿಕ ವೆಚ್ಚವೂ ಆಗುತ್ತದೆ.
ಇಂತಹ ಸಮನ್ವಯತೆ ಕೊರತೆ ಪರಿಹರಿಸಲು ಯೋಜನೆ ನೆರವಾಗಲಿದದೆ. ಕೇಬಲ್, ಕೊಳವೆ ಮಾರ್ಗ ಅಳವಡಿಕೆ ಇತ್ಯಾದಿಗಳನ್ನು ಏಕಕಾಲದಲ್ಲಿ ಪೂರ್ಣಗೊಳಿಸಲು ಸಮನ್ವಯತೆ ತರಲು ಪ್ರಯತ್ನ ನಡೆದಿದೆ. ಈ ಯೋಜನೆಯಡಿ ಅನುಮೋದನೆ ಪ್ರಕ್ರಿಯೆ, ಬಹು ನಿಯಂತ್ರಣ ಅನುಮತಿ ಇತ್ಯಾದಿಗಳನ್ನೂ ಪರಿಹರಿಸಲು ಕ್ರಮ ಕೊಳ್ಳಲಾಗಿದೆ. ಮೂಲಸೌಕರ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಯೋಜನೆಯಡಿ ಕೇಂದ್ರದ ವಿವಿಧ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳ ಅಂದರೆ ಭಾರತ್ ಮಾಲಾ, ಸಾಗರ ಮಾಲಾ, ಒಳನಾಡ ಜಲ ಸಾರಿಗೆ, ಒಣ/ ಭೂಮಿ ಬಂದರುಗಳು, ಉಡಾನ್ ಇತ್ಯಾದಿ, ರಕ್ಷಣಾ ಕಾರಿಡಾರ್, ವಿದ್ಯುನ್ಮಾನ ಉದ್ಯಾನಗಳು, ಕೈಗಾರಿಕಾ ಕಾರಿಡಾರ್, ಮೀನುಗಾರಿಕೆ, ಕೃಷಿ ವಲಯಗಳನ್ನು ಮೂಲಸೌಕರ್ಯ ಯೋಜನೆಗಳಲ್ಲಿ ಸೇರ್ಪಡೆ ಮಾಡಲಾಗುತ್ತದೆ.
ಈ ಮೂಲಕ ಪ್ರತ್ಯೇಕವಾಗಿ ಯೋಜನೆ, ವಿನ್ಯಾಸ ಮಾಡುವುದರ ಬದಲಾಗಿ, ಯೋಜನೆಗಳನ್ನು ಸಮಾನ ದೃಷ್ಟಿಯೊಂದಿಗೆ ವಿನ್ಯಾಸ ಮಾಡಿ ಅನುಷ್ಠಾನಗೊಳಿಸಲಾಗುತ್ತದೆ. ಇದರಿಂದಾಗಿ ಕಾಮಗಾರಿಗೆ ವೇಗ, ಶಕ್ತಿ ದೊರೆಯುವ ಜೊತೆಗೆ ಆರ್ಥಿಕ ವೆಚ್ಚ ಸಹ ಕಡಿಮೆಯಾಗುತ್ತದೆ.
6 ಪ್ರಮುಖ ಅಂಶಗಳು; ಪಿಎಂ ಗತಿಶಕ್ತಿ ಯೋಜನೆ ಸಮಗ್ರತೆ, ಆದ್ಯತೆ, ಅತ್ಯಂತ ಪ್ರಶಸ್ತವಾಗಿಸುವುದು, ಸಮನ್ವಯತೆ, ವಿಶ್ಲೇಷಣಾತ್ಮಕತೆ, ಕ್ರಿಯಾತ್ಮಕತೆ ಎಂಬ ಆರು ಅಂಶಗಳನ್ನು ಒಳಗೊಂಡಿದೆ. ಉತ್ತಮ ಮೂಲಸೌಕರ್ಯದ ಜೊತೆಗೆ ಜನರ ಜೀವನಮಟ್ಟವನ್ನು ಉತ್ತಮಪಡಿಸುವ ಮತ್ತು ಅದರ ಜೊತೆಗೆ ವಾಣಿಜ್ಯೋದ್ಯಮಕ್ಕೂ ದಾರಿ ಮಾಡಿಕೊಡುವುದು ಯೋಜನೆಯ ಉದ್ದೇಶವಾಗಿದೆ.
ಬಹು ಮಾದರಿ ಸಂಪರ್ಕ, ಜನರ ಸಂಚಾರ, ಸರಕು ಮತ್ತು ಸೇವೆಗಳ ಸಾಗಾಟವನ್ನು ಒಂದು ಸಾರಿಗೆ ಮಾಧ್ಯಮದಿಂದ ಮತ್ತೊಂದಕ್ಕೆ ಸಾಗಿಸಲು ಸಮಗ್ರ ಮತ್ತು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಇದು ಮೂಲಸೌಕರ್ಯದ ಕೊನೆಯ ಮೈಲಿಯ ಸಂಪರ್ಕಕ್ಕೆ ಅನುವು ಮಾಡಿಕೊಡಲಿದ್ದು, ಜನರ ಸಂಚಾರದ ಸಮಯವನ್ನು ಸಹ ತಗ್ಗಿಸಲಿದೆ.
ಮುಂಬರುವ ಸಂಪರ್ಕ ಯೋಜನೆಗಳು, ಇತರ ವ್ಯಾಪಾರ ತಾಣಗಳು, ಕೈಗಾರಿಕಾ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಪರಿಸರದ ಕುರಿತು ಸಾರ್ವಜನಿಕ ಮತ್ತು ವ್ಯಾಪಾರ ಸಮುದಾಯದ ಮಾಹಿತಿಯನ್ನು ಯೋಜನೆ ಒದಗಿಸುತ್ತದೆ. ಇದು ಹೂಡಿಕೆದಾರರಿಗೆ ತಮ್ಮ ವ್ಯಾಪಾರಕ್ಕೆ ಸೂಕ್ತ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯಕವಾಗಿದೆ.
ಯೋಜನೆಯಡಿ ಉದ್ಯೋಗವಕಾಶಗಳನ್ನು ಸೃಷ್ಟಿಸಲಾಗುತ್ತದೆ ಮತ್ತು ಆರ್ಥಿಕತೆಗೆ ಉತ್ತೇಜನ ನೀಡುತ್ತದೆ. ಸಾಗಣೆ ವೆಚ್ಚವನ್ನು ಕಡಿತಗೊಳಿಸುವ ಮೂಲಕ ಮ ಸ್ಥಳೀಯ ಉತ್ಪನ್ನಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ. ಸ್ಥಳೀಯ ಉದ್ಯಮ ಮತ್ತು ಗ್ರಾಹಕರಿಗೆ ಸರಿಯಾದ ಸಂಪರ್ಕವನ್ನು ಖಚಿತಪಡಿಸುತ್ತದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications