ಅವಿಸ್ಮರಣೀಯ 2020: ಡಲ್ಗೋನಾ ಕಾಫಿ ಚಾಲೆಂಜ್
ಇಥಿಯೋಪಿಯಾದಲ್ಲಿ ಮೊದಲಿಗೆ ಬಳಕೆಯಾದ ಕಾಫಿ ಕುಡಿಯುವ ಚಟ ದೇಶ, ಭಾಷೆ, ಪಂಥ ಮೀರಿ ಬೆಳೆದಿದೆ. ಬಗೆ ಬಗೆ ಕಾಫಿ ಇಂದು ಲಭ್ಯವಿದ್ದು, ಬ್ರೆಜಿಲ್, ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಕಾಫಿ ಪ್ರಮುಖ ಬೆಳೆ. 2020ರ ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಒಂದು ಬಗೆಯ ಕಾಫಿ ಸಕತ್ ಟ್ರೆಂಡಿಂಗ್ ಆಗಿತ್ತು. ಅದೇ ದಕ್ಷಿಣ ಕೊರಿಯಾದ ಡಾಲ್ಗೊನಾ ಕಾಫಿ.
2020ರಲ್ಲಿ ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳು ಹಲವು ಬಗೆಯ ಚಾಲೆಂಜ್ ಸ್ವೀಕರಿಸಿದ್ದರು. ಎಲ್ಲರನ್ನು ಮನೆಯಲ್ಲೇ ಕಟ್ಟಿ ಹಾಕಿದ್ದ ಲಾಕ್ಡೌನ್ ಸಂದರ್ಭದಲ್ಲಿ ಕುತೂಹಲಕಾರಿ ಚಾಲೆಂಜ್ ಗಳು ಕಾಣಲು ಸಿಕ್ಕವು. ಕೈಗಳನ್ನು ಸ್ವಚ್ಛವಾಗಿ ತೊಳೆಯುವ ಚಾಲೆಂಜ್, ಡಾಲ್ಗೊನಾ ಕಾಫಿ ಚಾಲೆಂಜ್, ಸೀರೆಯ ಚಾಲೆಂಜ್, ಕ್ವಾರಂಟೈನ್ ಪಿಲ್ಲೋ ಚಾಲೆಂಜ್, ಮಿ ಅಟ್ 20 ಚಾಲೆಂಜ್, ದಿ ಗೆಸ್ಚರ್ ಚಾಲೆಂಜ್, ಕ್ವಾರಂಟೈನ್ ಡ್ಯಾನ್ಸ್ ಚಾಲೆಂಜ್, ಟಾಯ್ಲೆಟ್ ಪೇಪರ್ ಚಾಲೆಂಜ್, ಪಾಸ್‌ಮಿ ದ ಬ್ರಷ್ ಚಾಲೆಂಜ್, ಟ್ರಾವೆಲ್ ಚಾಲೆಂಜ್ ಹೀಗೆ ಹತ್ತು ಹಲವಾರು ಸವಾಲುಗಳನ್ನು ಸ್ವೀಕರಿಸಿ ಜನ ತಮ್ಮ ಸೃಜನಶೀಲತೆ ಪ್ರದರ್ಶಿಸಿದರು.
ಲಾಕ್ ಡೌನ್ ಡ್ರಿಂಕ್ ಅಥವಾ ಕ್ಯಾರೆಂಟೈನ್ ಕಾಫಿ ಎಂದು ಕರೆಸಿಕೊಂಡ ಕ್ಲೌಡ್ ಕಾಫಿ ಅಥವಾ ಡಲ್ಗೊನಾ ಕಾಫಿ ಭಾರತದ ಫೆಂಟಿ ಹ್ಯೂ ಕಾಫಿ ಅಥವಾ ಇದನ್ನು ಬೀಟನ್ ಕಾಫಿಗೆ ಹೋಲಿಸಬಹುದು. ಕಾಫಿಯಲ್ಲಿ ಹಾಲು ಮಿಶ್ರಣ ಮಾಡುವ ಬದಲು ಮೊದಲೇ ಡಲ್ಗೊನಾ ಮಿಶ್ರಣ ತಯಾರಿಸಿ ನಂತರ ಹಾಲಿನ ಮೇಲೆ ಹಾಕಲಾಗುತ್ತದೆ.

11ನೇ ಶತಮಾನ ಇಥಿಯೋಪಿಯಾದಲ್ಲಿ ಕಾಫಿ ಬೀಜ
ಕಾಫಿ ವಿಷಯಕ್ಕೆ ಬಂದರೆ, ಮೊದಲೇ ಹೇಳಿದಂತೆ ಇಥಿಯೋಪಿಯಾದಲ್ಲಿ ಸುಮಾರು11ನೇ ಶತಮಾನದಲ್ಲಿ ಕಾಫ (Kaffa) ಎಂಬ ಪ್ರಾಂತ್ಯದ ಕುರಿಗಾಹಿ ತಂದ ಈ ಹಣ್ಣು, ಬೀಜದ ಕಷಾಯವೇ ನಾವು ಕುಡಿಯುವ ಕಾಫಿ.
ಅಲ್ಲಿಂದ ಮುಂದೆ ಬೇರೆ ಕಡೆಗೆ ಕಾಫಿ ಪರಿಮಳ ಹಬ್ಬಲು ಶುರುವಾಗಿದೆ. ಯೆಮೆನ್, ಇಸ್ತಾನ್ ಬುಲ್, ವೆನಿಸ್, ಪ್ಯಾರೀಸ್, ಇಂಗ್ಲೆಂಡಿಗೆ ತಲುಪಿದೆ. ಇದೇ ಕಾಫಿ ಇಟಲಿ ತಲುಪಿ ಬಗೆ ಬಗೆ ರೀತಿಯಲ್ಲಿ ಬದಲಾವಣೆ ಹೊಂದಿದೆ. ಭಾರತದಲ್ಲಿ ಮೊದಲಿಗೆ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ಕಾಫಿ ಬಳಕೆಗೆ ಬಂದಿತು ಎನ್ನುತ್ತದೆ ಇತಿಹಾಸ.
| Array |
ಅಮ್ಮ ಮಾಡಿಕೊಡುವ ಫಿಲ್ಟರ್ ಕಾಫಿ ಬೆಸ್ಟ್
ಹುರಿಯದ ಕಾಫಿ ಬೀಜಗಳನ್ನು ಬೀಸಿ ನೀರಿನ ಸ್ಪ್ರೇ ಜೊತೆ ಬೆರೆಸಿ ತಯಾರಿಸಿದ ಕಷಾಯವನ್ನೇ ಎಕ್ಸ್ ಪ್ರೆಸೋ ಅಂತಾರೆ. ಎಕ್ಸ್ ಪ್ರೆಸೋಗೆ ಸ್ವಲ್ಪ ಹಾಲು ಬೆರೆಸಿದರೆ ಮಾಕಿಹಾತೋ.. ಅದಕ್ಕೆ ಸ್ಟೀಮ್ಡ್ ಹಾಲು ಬೆರಸಿದರೆ ಲಾಟ್ಟೆ, ಅದಕ್ಕೆ ಚಾಕಲೋಟ್ ಪುಡಿ ಬೆರಸಿದರೆ ಕೆಪಚಿನೋ. ಎಕ್ಸ್ ಪ್ರೆಸೋ ಹಾಟ್ ಚಾಕಲೋಟ್ ಸ್ಟೀಮ್ಡ್ ಹಾಲು ಬೆರಸಿದರೆ ಮೊಕಾ, ಕೊರೆತೋ, ಅಮೆರಿಕಾನೋ, ಡೆಪೋ, ಇನ್ಸ್ಟಂಗ್ ಕಾಫಿ ಹೀಗೆ ವಿಧವಿಧವಾದ ಕಾಫಿ ತಯಾರಾಗಿದೆ. ಉಡುಪಿ ಹೋಟೆಲ್ ಕಾಫಿ ಒಂಥರಾ ಇರುತ್ತೆ, ಬೈಟು ಕಾಫಿ ಇನ್ನೊಂದು ಥರಾ, ಒಟ್ಟಾರೆ, ಎಷ್ಟೇ ಬಗೆ ಬಗೆ ಬಂದರೂ ಮನೆಯಲ್ಲಿ ಅಮ್ಮ ಮಾಡಿಕೊಡುವ ಫಿಲ್ಟರ್ ಕಾಫಿ ಬೆಸ್ಟ್ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.
| Array |
ಈಗ ಡಾಲ್ಗೋನಾ ಕಾಫಿ ಕಥೆ ಏನು?
ಇದು ಮೊಕಾದ ಅಕ್ಕ ಪಕ್ಕ ಇರುವ ಲಾಟ್ಟೆಗಿಂತ ಉತ್ತಮವಾದ ಇನ್ ಸ್ಟಂಟ್ ಕಾಫಿ ಎನ್ನಬಹುದು. ಕೊವಿಡ್ 19 ಸಾಂಕ್ರಾಮಿಕ ಕಾಲದಲ್ಲಿ ಜನಪ್ರಿಯತೆ ಗಳಿಸಿದ್ದರಿಂದ 'ಲಾಕ್ ಡೌನ್ ಡ್ರಿಂಕ್' ಅಥವಾ ಕ್ಯಾರೆಂಟೈನ್ ಕಾಫಿ ಎಂದು ಇದನ್ನು ಹಲವಾರು ಮಂದಿ ಕರೆಯಲ್ಪಟ್ಟಿದೆ.ದೇಹದ ಆಲಸ್ಯ ಕಡಿಮೆ ಮಾಡಿ, ಉತ್ಸಾಹ ತುಂಬುತ್ತದೆ, ಅಲರ್ಟ್ ನೆಸ್ ಉಂಟು ಮಾಡುತ್ತದೆ. ದೇಹದ ಕೊಬ್ಬಿನಾಂಶ ಕರಗಿಸಿ, ತೂಕ ಕಡಿಮೆ ಮಾಡಿಕೊಳ್ಳಬಹುದು, ಕ್ಯಾನ್ಸರ್, ಹೃದಯಾಘಾತ ಪ್ರಮಾಣ ಕಡಿಮೆ ಎಂದು ಕಾಫಿ ಪ್ರಿಯರು ಗುಣಗಾನ ಮಾಡಿದ್ದಾರೆ.

Instant ಕಾಫಿ ವಿಥ್ ಕೌಡ್
ಈ ಕಾಫಿ ಮಾಡಲು ಮಾಮೂಲಿ ಕಾಫಿ ಪುಡಿ ಬಳಸಲು ಸಾಧ್ಯವಿಲ್ಲ. Instant ಕಾಫಿ ಪುಡಿ, ಸಕ್ಕರೆ ಮತ್ತು ಬಿಸಿನೀರನ್ನು ಸೇರಿಸಿದ ಮಿಶ್ರಣವನ್ನು ಬ್ಲೆಂಡ್ ಮಾಡಿಕೊಳ್ಳಬೇಕು. ನಂತರ ಬಿಸಿ ಅಥವಾ ತಣ್ಣನೆಯ ಹಾಲಿನ ಮೇಲೆ ದಪ್ಪ ಮಿಶ್ರಣದಿಂದ ಅಲಂಕರಿಸಲಾಗುತ್ತದೆ. ಹಾರ್ಲಿಕ್ಸ್ , ಮೈಲೋ ಪೌಡರ್ ಅಥವಾ ಬೋರ್ನ್‌ವಿಟಾ ಪೌಡರ್ ಅನ್ನು ಕೂಡ ಮೇಲೆ ಉದುರಿಸಬಹುದು. ಈ ಬೀಟನ್ ಕಾಫಿ, ಕ್ಲೌಡ್ ಕಾಫಿ ಬಗ್ಗೆ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆದಿದ್ದು 2020ರಲ್ಲೇ ಎನ್ನಬಹುದು. ಡಲ್ಗೊನಾ ಕಾಫಿ ಚಾಲೆಂಜ್ ಟ್ವಿಟ್ಟರ್, ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಎಲ್ಲೆಡೆ ಟ್ರೆಂಡ್ ನಲ್ಲಿತ್ತು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications