ಮನೆಯ ಮೆಟ್ಟಿಲುಗಳ ಕೆಳಗಿನ ಜಾಗದಲ್ಲಿ ಈ ತಪ್ಪು ಮಾಡಬೇಡಿ: ವಾಸ್ತು ಪ್ರಕಾರ ಏನು ಮಾಡಬೇಕು?

ಮನೆ ನಿರ್ಮಾಣದಲ್ಲಿ ವಾಸ್ತು ಶಾಸ್ತ್ರಕ್ಕೆ ಮಹತ್ವ ನೀಡುವವರ ಸಂಖ್ಯೆ ಸಾಕಷ್ಟಿದೆ. ಅದರಲ್ಲೂ ಮೆಟ್ಟಿಲುಗಳ ಕೆಳಗಿನ ಖಾಲಿ ಜಾಗವನ್ನು ಹೇಗೆ ಬಳಸಬೇಕು ಎಂಬುದು ಹಲವರಲ್ಲಿ ಗೊಂದಲ ಸಹಜವಾಗಿ ಇರುತ್ತದೆ. ಮನೆ ಕಟ್ಟುವಾಗ ಜಾಗ ಉಳಿಸುವ ಉದ್ದೇಶದಿಂದ ಅನಗತ್ಯ ವಸ್ತುಗಳನ್ನು ಅಲ್ಲಿ ಸಂಗ್ರಹಿಸುವುದು ಅಥವಾ ಬೇರೆ ರೀತಿಯಲ್ಲಿ ಬಳಸುವುದು ವಾಸ್ತು ಪ್ರಕಾರ ಶುಭವಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಮೆಟ್ಟಿಲುಗಳ ಕೆಳಗಿನ ಜಾಗದಲ್ಲಿ ಏನು ಇಡಬೇಕು? ಯಾವ ವಸ್ತುಗಳನ್ನು ಇಡಬಾರದು? ಮನೆಯಲ್ಲಿನ ಸಕಾರಾತ್ಮಕ ವಾತಾವರಣ ಮತ್ತು ಸಮೃದ್ಧಿಗಾಗಿ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಮನೆ ನಿರ್ಮಾಣದ ಸಮಯದಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯ ಎಂದು ಹಲವರು ನಂಬುತ್ತಾರೆ. ಸರಿಯಾದ ರೀತಿಯಲ್ಲಿ ಮನೆ ನಿರ್ಮಿಸಿದರೆ, ಆ ಮನೆಯಲ್ಲಿ ವಾಸಿಸುವ ಕುಟುಂಬದ ಸದಸ್ಯರ ಜೀವನದಲ್ಲಿ ಸುಖ, ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಅನೇಕರು ಮನೆ ಕಟ್ಟುವಾಗ ಜಾಗ ಉಳಿಸುವ ಉದ್ದೇಶದಿಂದ ವಾಸ್ತು ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ವಿಶೇಷವಾಗಿ ಮೆಟ್ಟಿಲುಗಳ ಕೆಳಗಿನ ಖಾಲಿ ಜಾಗವನ್ನು ಬಳಸುವ ಸಂದರ್ಭದಲ್ಲಿ ಮಾಡುವ ಸಣ್ಣ ತಪ್ಪುಗಳು ವಾಸ್ತು ದೋಷಗಳಿಗೆ ಕಾರಣವಾಗಬಹುದು.

Under Home Staircase Avoid These Mistakes Under Your Home Staircase What Does Vastu Recommend

ಬಹುತೇಕ ಮನೆಗಳಲ್ಲಿ ಮೆಟ್ಟಿಲುಗಳ ಕೆಳಗಿನ ಭಾಗವನ್ನು ಸ್ಟೋರ್ ರೂಮ್‌ ಆಗಿ ಬಳಸುವುದನ್ನು ಕಾಣಬಹುದು. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ಸೂಕ್ತವಲ್ಲ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಬಳಕೆಯಿಲ್ಲದ ವಸ್ತುಗಳನ್ನು ಅಲ್ಲಿ ಸಂಗ್ರಹಿಸುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದರಿಂದ ಮನೆಯಲ್ಲಿ ವಾಸಿಸುವವರಿಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ. ಆರ್ಥಿಕ ಸಮಸ್ಯೆಗಳು, ಮಾನಸಿಕ ಒತ್ತಡ ಹಾಗೂ ಕುಟುಂಬ ಸದಸ್ಯರಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬ ಅಭಿಪ್ರಾಯವಿದೆ. ಆದ್ದರಿಂದ ಮೆಟ್ಟಿಲುಗಳ ಕೆಳಗಿನ ಜಾಗವನ್ನು ಹೇಗೆ ಬಳಸಬೇಕು, ಯಾವ ವಸ್ತುಗಳನ್ನು ಇಡಬಹುದು ಮತ್ತು ಯಾವುದನ್ನು ತಪ್ಪಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

ವಾಸ್ತು ಪ್ರಕಾರ ಮೆಟ್ಟಿಲುಗಳ ಕೆಳಗಿನ ಪ್ರದೇಶವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಲ್ಲಿ ಭಾರವಾದ ವಸ್ತುಗಳನ್ನು ಇಡಬಾರದು. ಅಗತ್ಯವಿದ್ದರೆ ಹಗುರವಾದ ವಸ್ತುಗಳನ್ನು ಮಾತ್ರ ಸಂಗ್ರಹಿಸಬಹುದು. ಆ ಜಾಗವನ್ನು ಸುಂದರವಾಗಿ ರೂಪಿಸಲು ಪ್ರಯತ್ನಿಸಬೇಕು. ಕಡಿಮೆ ಬೆಳಕು ನೀಡುವ ಅಲಂಕಾರಿಕ ದೀಪಗಳು, ಶೋ ಪೀಸ್‌ಗಳನ್ನು ಇಡಬಹುದು. ಇದರಿಂದ ಮನೆಯ ವಾತಾವರಣದಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ಮತ್ತು ಮನೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಮೆಟ್ಟಿಲುಗಳ ಕೆಳಗಿನ ಜಾಗದಲ್ಲಿ ಸರಿಯಾದ ಗಾಳಿ ಮತ್ತು ಬೆಳಕು ಇರುವ ವ್ಯವಸ್ಥೆ ಇದ್ದರೆ, ಅಲ್ಲಿ ಸಣ್ಣ ಸಣ್ಣ ಒಳಾಂಗಣ ಸಸ್ಯಗಳನ್ನು ಬೆಳೆಸಬಹುದು. ಇದರಿಂದ ಆ ಪ್ರದೇಶದಲ್ಲಿನ ವಾಸ್ತು ದೋಷಗಳು ಕಡಿಮೆಯಾಗುತ್ತವೆ ಎಂದು ನಂಬಲಾಗುತ್ತದೆ. ಆ ಜಾಗವನ್ನು ವ್ಯರ್ಥ ಮಾಡದೆ ಪುಸ್ತಕದ ಕಪಾಟು ಅಥವಾ ಮಕ್ಕಳ ಓದುವ ಸ್ಥಳವನ್ನಾಗಿ ಪರಿವರ್ತಿಸಬಹುದು. ಆದರೆ ಅಲ್ಲಿ ಧೂಳು ಮತ್ತು ಕೊಳಕು ಸಂಗ್ರಹವಾಗದಂತೆ ಪ್ರತಿದಿನ ಸ್ವಚ್ಛಗೊಳಿಸುವುದು ಮುಖ್ಯ.

ವಾಸ್ತು ಪ್ರಕಾರ ಮೆಟ್ಟಿಲುಗಳ ಕೆಳಗೆ ಹಣ ಇಡುವ ಬೀರೋ ಅಥವಾ ಲಾಕರ್‌ಗಳನ್ನು ಇಡಬಾರದು. ಇದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಕೆಲವು ಮನೆಗಳಲ್ಲಿ ಜಾಗದ ಕೊರತೆಯಿಂದ ಮೆಟ್ಟಿಲುಗಳ ಕೆಳಗೆ ಪೂಜಾ ಕೋಣೆ ನಿರ್ಮಿಸುತ್ತಾರೆ. ಆದರೆ ವಾಸ್ತು ಪ್ರಕಾರ ಇದು ಸರಿಯಲ್ಲ ಎಂದು ಹೇಳಲಾಗುತ್ತದೆ. ಮೆಟ್ಟಿಲುಗಳ ಕೆಳಗೆ ಪೂಜಾ ಸ್ಥಳ ನಿರ್ಮಿಸುವುದರಿಂದ ಮನೆಯ ಶಾಂತಿ ಮತ್ತು ನೆಮ್ಮದಿಗೆ ತೊಂದರೆ ಉಂಟಾಗಬಹುದು ಎಂದು ನಂಬಲಾಗುತ್ತದೆ.

ಅದೇ ರೀತಿ ಮೆಟ್ಟಿಲುಗಳ ಕೆಳಗೆ ಅಡುಗೆ ಮನೆ ಅಥವಾ ಗ್ಯಾಸ್ ಸ್ಟೌವ್ ಇಡುವುದನ್ನು ತಪ್ಪಿಸಬೇಕು. ಅಲ್ಲಿ ಅಟ್ಯಾಚ್ಡ್ ಬಾತ್‌ರೂಮ್ ಅಥವಾ ಶೌಚಾಲಯ ನಿರ್ಮಿಸುವುದೂ ವಾಸ್ತು ದೋಷ ಎಂದು ಪರಿಗಣಿಸಲಾಗುತ್ತದೆ. ಮೆಟ್ಟಿಲುಗಳ ಕೆಳಗೆ ಹಳೆಯ, ಮುರಿದ ವಸ್ತುಗಳು, ಚಪ್ಪಲಿಗಳು, ಕಟ್ಟಿಗೆ ಅಥವಾ ಅನಗತ್ಯ ಕಸವನ್ನು ಯಾವುದೇ ಕಾರಣಕ್ಕೂ ಇಡಬಾರದು. ಮನೆಯ ಅಭಿವೃದ್ಧಿ ಮತ್ತು ಕುಟುಂಬದ ಸದಸ್ಯರ ಪ್ರಗತಿ, ಮೆಟ್ಟಿಲುಗಳ ಕೆಳಗಿನ ಜಾಗವನ್ನು ನಾವು ಎಷ್ಟು ಯೋಜನಾಬದ್ಧವಾಗಿ ಬಳಸುತ್ತೇವೆ ಎಂಬುದರ ಮೇಲೂ ಅವಲಂಬಿತವಾಗಿದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಆದ್ದರಿಂದ ಮೆಟ್ಟಿಲುಗಳ ಕೆಳಗಿನ ಪ್ರದೇಶದಲ್ಲಿ ಅನಗತ್ಯ ವಸ್ತುಗಳನ್ನು ಸಂಗ್ರಹಿಸದೆ, ವಾಸ್ತು ನಿಯಮಗಳಿಗೆ ಅನುಗುಣವಾಗಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು ಬಳಸುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+