Nilgiri (Eucalyptus) Oil Benefits: ಅಬ್ಬಾಬ್ಬ.. ನೀಲಗಿರಿ ಎಣ್ಣೆಯಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?
ನೀಲಗಿರಿ ಮರಗಳು ಮೊದಲು ಆಸ್ಟ್ರೇಲಿಯಾ ದೇಶದಲ್ಲಿ ಕಂಡು ಬಂದವು, ನಂತರ ವಿಶ್ವದ ಎಲ್ಲಾ ಮೂಲೆಗಳಲ್ಲಿ ಕೂಡ ಹಬ್ಬಕೊಂಡು ಬಿಟ್ಟಿತು. ಸಾಮಾನ್ಯವಾಗಿ ಎಲ್ಲಾ ಖುತುವಿನಲ್ಲೂ ಕೂಡ ಹಚ್ಚ ಹಸಿರಾಗಿ ಕಂಗೊಳಿಸುವ ಈ ನೀಲಗಿರಿಯ ಎಲೆಗಳು ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಅನೇಕ ರೀತಿಯ ಔಷಧಿಯ ತಯಾರಿಕೆಯಲ್ಲಿ ಉಪಯೋಗಕ್ಕೆ ಬರುತ್ತಿದೆ.
ನೀಲಗಿರಿಯಲ್ಲಿ ಹಲವು ಔಷದ ಗುಣಗಳಿದ್ದು, ಮನುಷ್ಯರಿಗೆ ಎದುರಾಗುವ ನೆಗಡಿ, ಶೀತ, ಕೆಮ್ಮು, ಕಫ ಸಮಸ್ಯೆಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಅಷ್ಟೇ ಅಲ್ಲದೆ, ಮಾಂಸ ಖಂಡಗಳ ಸೆಳೆತ, ಅಥವಾ ವಯಸ್ಸಾದಾಗ ಕಾಡುವ ಮೈಕೈ ನೋವು ಹಾಗೂ ಕೀಲು ನೋವುಗಳು ತ್ವರಿತವಾಗಿ ಶಮನ ಮಾಡುವ ಗುಣವನ್ನ ಹೊಂದಿದೆ.

ನೀಲಗಿರಿ ಎಣ್ಣೆಯಿಂದಾಗುವ ಪ್ರಯೋಜನಗಳು
ಕೀಲು ನೋವು ನಿವಾರಣೆ
ನೀಲಗಿರಿ ಎಣ್ಣೆಯೂ ಕೀಲು ನೋವನ್ನು ನಿವಾರಿಸುತ್ತದೆ. ಅಸ್ಥಿಸಂಧಿವಾತ ಮತ್ತು ಸಂಧಿವಾತದಂತಹ ಪರಿಸ್ಥಿತಿಗಳಿಂದ ನೋವನ್ನು ಶಮನಗೊಳಿಸಲು ಈ ಎಣ್ಣೆಯನ್ನ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೀಲು ನೋವಿನ ಸಮಸ್ಯೆ ಎಲ್ಲರಿಗೂ ಕಂಡು ಬರುತ್ತಿದೆ. ನೀಲಗಿರಿ ಎಣ್ಣೆ ಯನ್ನು ಒಮ್ಮೆ ನೋವಿರುವ ಜಾಗಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡುತ್ತಾ ಬರುವ ಅಭ್ಯಾಸ ವನ್ನು ಇಟ್ಟುಕೊಳ್ಳಿ.
ಮುಖ್ಯವಾಗಿ ನೀಲಗಿರಿ ಎಣ್ಣೆಯಲ್ಲಿ ಆಂಟಿ - ಇನ್ಫಾಮೇಟರಿ ಗುಣ ಲಕ್ಷಣಗಳು, ಯಥೇಚ್ಛವಾಗಿ ಕಂಡು ಬರುವು ದರಿಂದ, ಮನುಷ್ಯನಲ್ಲಿ ಕಂಡುಬರುವ ದೀರ್ಘಕಾಲಿನ ನೋವಿನ ಸಮಸ್ಯೆಯನ್ನು ಬೇಗನೇ ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇನ್ನು ಪ್ರತಿದಿನ ಸ್ನಾನ ಮಾಡುವಾಗ ನಿಮ್ಮ ನೀರಿನ ಬಕೆಟ್‍ಗೆ ಕೆಲವು ಹನಿ ಗಳಷ್ಟು ನೀಲಗಿರಿ ಎಣ್ಣೆಯನ್ನು ಹಾಕಿ, ಈ ನೀರಿನಿಂದ ಸ್ನಾನ ಮಾಡುವ ಅಭ್ಯಾಸ ಮಾಡಿಕೊಂಡರೆ, ಕೀಲು ನೋವು, ಮೂಳೆಗಳಲ್ಲಿ ಕಂಡು ಬರುವ ಉರಿಯೂತ ಮತ್ತು ಮೈ ಕೈ ನೋವು ದೂರವಾಗಲು ಸಹಾಯಕವಾಗುತ್ತದೆ.
ತಲೆನೋವು ಶಮನ
ಹೌದು, ನೀಲಗಿರಿ ಎಣ್ಣೆಯು ತಲೆನೋವಿಗೆನ ಸಮಸ್ಯೆಗೆ ಪರಿಹಾರವನ್ನ ನೀಡುತ್ತದೆ. ಸೈನಸ್ ನಿಂದಾಗಿ ಕಾಡುವಂತಹ ತಲೆನೋವಿಗೆ ಇದು ತುಂಬಾ ಒಳ್ಳೆಯದು. ಕೆಲವೊಂದು ಸಲ ಸೈನಸ್ ನ ಉರಿಯೂತದಿಂದ ತಲೆನೋವು ಕಾಡುವುದು. ಇದು ಕಟ್ಟಿರುವಂತಹ ಸೈನಸ್ ನ್ನು ಬಿಡುಗಡೆ ಮಾಡುವುದು ಮತ್ತು ತಲೆನೋವು ನಿವಾರಿಸುವುದು. ಬಿಸಿ ನೀರಿಗೆ ಕೆಲವು ಹನಿ ನೀಲಗಿರಿ ಎಣ್ಣೆ ಹಾಕಿಕೊಳ್ಳಿ. ತಲೆಗೆ ಟವೆಲ್ ಹಾಕಿಕೊಂಡು ಮುಚ್ಚಿಕೊಳ್ಳಿ. ಅಲ್ಲದೇ ಸ್ವಲ್ಪ ತೆಂಗಿನ ಎಣ್ಣೆ ಮತ್ತು ಕೆಲವು ಹನಿ ನೀಲಗಿರಿ ಎಣ್ಣೆ ಮಿಶ್ರಣ ಮಾಡಿಕೊಂಡು ಹಣೆಗೆ ಮಸಾಜ್ ಮಾಡಿದರೆ, ತಲೆನೋವು ನಿವಾರಣೆಯಾಗಲು ಸಹಾಯಕವಾಗುತ್ತದೆ.
ಶೀತ, ಕಫ ಕಟ್ಟುವಿಕೆ ನಿವಾರಣೆ
ಅನೇಕ ವರ್ಷಗಳಿಂದ, ಕೆಮ್ಮನ್ನು ನಿವಾರಿಸಲು ನೀಲಗಿರಿ ಎಣ್ಣೆಯನ್ನು ಬಳಸಲಾಗುತ್ತದೆ. ನೆಗಡಿ ಮೂಗು ಕಟ್ಟುವಿಕೆ ಸಮಸ್ಯೆ ಇದ್ದರೆ ಮೊದಲೇ ಹೇಳಿದ ಹಾಗೆ ನೀಲಗಿರಿ ಎಲೆಗಳ ಎಣ್ಣೆಯಲ್ಲಿ ಶೀತ, ನೆಗಡಿ, ಕೆಮ್ಮಿನಂತಹ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತದೆ. ಶೀತ ಮತ್ತು ಕಫ ಕಟ್ಟುವಿಕೆ ನಿವಾರಣೆ ನೀಲಗಿರಿ ಎಣ್ಣೆಯಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಶೀತ ಮತ್ತು ಕಫ ಕಟ್ಟಿರುವುದನ್ನು ನಿವಾರಣೆ ಮಾಡಲು ನೆರವಾಗುವುದು.
ಇನ್ನು ಎದೆಯಲ್ಲಿ ಕಂಡು ಬರುವ ಕಫದ ಸಮಸ್ಯೆ ಕೂಡ ನಿವಾರಿಸಿ, ಶ್ವಾಸಕೋಶವನ್ನು ಆರೋಗ್ಯ ಕರವಾಗಿಡುತ್ತದೆ. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಕೂಡ ಇದು ಇನ್ಫಾಮೇಟರಿ ಏಜೆಂಟ್ ಆಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತದೆ.ಒಂದು ಪಾತ್ರೆಯಲ್ಲಿ ಸ್ವಲ್ಪ ಬಿಸಿಯಾಗಿರುವ ನೀರನ್ನು ಹಾಕಿ, ಅದಕ್ಕೆ ಕೆಲವು ಹನಿಗಳಷ್ಟು ನೀಲಗಿರಿ ಎಣ್ಣೆಯನ್ನು ಹಾಕಿ, ಅದರಿಂದ ಹೊರಬರುವ ನೀರಿನ ಆವಿಯನ್ನು ಮೂಗು ಹಾಗೂ ಬಾಯಿಯ ಮೂಲಕ ಒಳಗೆ ತೆಗೆದುಕೊಳ್ಳಿ ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರವನ್ನ ನೀಡುತ್ತದೆ. ಸೊಳ್ಳೆಗಳು ಮತ್ತು ಇತರ ಕಚ್ಚುವ ಕೀಟಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿಯಾದ ರೋಗಗಳನ್ನು ತರುತ್ತದೆ. ಕೀಟಗಳ ಕಡಿತವನ್ನು ತಪ್ಪಿಸಿಕೊಳ್ಳಲು ನೀಲಗಿರಿ ಎಣ್ಣೆಯೂ ನಮ್ಮ ಅತ್ಯುತ್ತಮ ರಕ್ಷಣೆಯಾಗಿದೆ.
ಗಂಟು ಮತ್ತು ಸ್ನಾಯು ನೋವು ನಿವಾರಣೆ
ನೀಲಗಿರಿ ಎಣ್ಣೆಯು ಗಂಟು ಮತ್ತು ಸ್ನಾಯು ನೋವಿಗೆ ಶಮನಗೊಳಿಸಲು ಸಹಾಯಕವಾಗಿದೆ. ನೀಲಗಿರಿ ಎಣ್ಣೆಯಲ್ಲಿ ಇರುವಂತಹ ನೋವು ನಿವಾರಕ ಮತ್ತು ಉರಿಯೂತ ಶಮನಕಾರಿ ಗುಣವು ಇದಕ್ಕೆ ಕಾರಣವಾಗಿದೆ. 2 ಅಥವಾ 3 ಚಮಚ ನೀಲಗಿರಿ ಎಣ್ಣೆಯನ್ನು 2 ಚಮಚ ಬಿಸಿ ತೆಂಗಿನ ಎಣ್ಣೆಗೆ ಹಾಕಿ. ನೀಲಗಿರಿ ಎಣ್ಣೆಯನ್ನ ಬಾಧಿತ ಜಾಗಕ್ಕೆ ಹಚ್ಚಿಕೊಂಡು ಸುಮಾರು 5ರಿಂದ 10 ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ ಇದರಿಂದ ಸಮಸ್ಯೆಗಳಿಗೆ ಪರಿಹಾರವನ್ನ ನೀಡುತ್ತದೆ.
ಗಾಯಗಳನ್ನು ಸೋಂಕು ರಹಿತಗೊಳಿಸಲು ಸಹಾಯಕ
ಆಸ್ಟ್ರೇಲಿಯಾದ ಮೂಲನಿವಾಸಿಗಳು ನೀಲಗಿರಿ ಎಲೆಗಳನ್ನು ಗಾಯಗಳಿಗೆ ಚಿಕಿತ್ಸೆ ನೀಡಲು ಮತ್ತು ಸೋಂಕನ್ನು ತಡೆಗಟ್ಟಲು ಬಳಸುತ್ತಿದ್ದರು. ನೀಲಗಿರಿ ಎಣ್ಣೆಯನ್ನು ಚರ್ಮದ ಮೇಲೆ ಉರಿಯೂತದ ವಿರುದ್ಧ ಹೋರಾಡಲು ಮತ್ತು ಗುಣಪಡಿಸುವಿಕೆಯನ್ನು ಉತ್ತೇಜಿಸಲು ಬಳಸಬಹುದು. ಇನ್ನೂ ನೀಲಗಿರಿ ಆಸ್ತಮಾ ಲಕ್ಷಣಗಳನ್ನು ತಡೆಯುವ ಸಾಧ್ಯತೆಯೂ ಇದೆ. ಅಲ್ಲದೇ ಹಲ್ಲಿನ ಕೊಳೆತಕ್ಕೆ ಕಾರಣವಾಗುವ ಬ್ಯಾಕ್ಟೀರಿಯವನ್ನ ತಡೆಗಟ್ಟುವ ಕೆಲಸವನ್ನ ಈ ನೀಲಗಿರಿ ಎಣ್ಣೆ ಮಾಡುತ್ತದೆ.












Click it and Unblock the Notifications