ಉಕ್ರೇನ್ ಯುದ್ಧ: ರಷ್ಯಾದ ತೈಲ ಖರೀದಿ ಮಾಡುವ, ಮಾಡದ ದೇಶಗಳು ಯಾವುದು?
ಉಕ್ರೇನ್ ಮೇಲೆ ರಷ್ಯಾವು ದಾಳಿ ನಡೆಸಿದ ಬಳಿಕ ಹಲವಾರು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧವನ್ನು ವಿಧಿಸಿದೆ. ಈ ನಡುವೆ ಇನ್ನು ಕೆಲವು ರಾಷ್ಟ್ರಗಳು ಎಂದಿನಂತೆ ರಷ್ಯಾದೊಂದಿಗೆ ಆರ್ಥಿಕ ವ್ಯವಹಾರವನ್ನು ನಡೆಸುತ್ತಿದೆ. ಪ್ರಮುಖವಾಗಿ ರಷ್ಯಾವು ತೈಲ ರಫ್ತುದಾರ ರಾಷ್ಟ್ರವಾಗಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಬಳಿಕ ಕೆಲವು ರಾಷ್ಟ್ರಗಳು ರಷ್ಯಾದಿಂದ ತೈಲವನ್ನು ಖರೀದಿ ಮಾಡುವುದನ್ನು ಸ್ಥಗಿತ ಮಾಡಿದರೆ, ಇನ್ನೂ ಕೆಲವು ರಾಷ್ಟ್ರಗಳು ತೈಲವನ್ನು ಖರೀದಿ ಮಾಡುವುದನ್ನು ಮುಂದುವರಿಸಿದೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು ಖರೀದಿದಾರರ ಸ್ವಯಂಪ್ರೇರಿತ ಕ್ರಮಗಳು ಅದರ ಕಚ್ಚಾ ತೈಲ ಮತ್ತು ತೈಲ ಉತ್ಪನ್ನಗಳ ಮಾರಾಟದ ಮೇಲೆ ಪ್ರಭಾವ ಬೀರಲು ಪ್ರಾರಂಭ ಮಾಡಿದೆ. ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಕೆಲವೇ ದೇಶಗಳು ಸಂಪೂರ್ಣ ನಿಷೇಧವನ್ನು ವಿಧಿಸಿವೆ. ಯುರೋಪ್‌ನಲ್ಲಿ ಕೆಲವು ರಾಷ್ಟ್ರಗಳು ಪ್ರತಿಷ್ಠೆಯನ್ನು ಕಾಪಾಡುವ ನಿಟ್ಟಿನಲ್ಲಿ ರಷ್ಯಾದ ತೈಲವನ್ನು ದೂರವಿರಿಸಿದ್ದಾರೆ. ರಷ್ಯಾವು ಉಕ್ರೇನ್ ಮೇಲೆ ದಾಳಿ ಮಾಡಿದ ಬಳಿಕ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಏರಿಕೆ ಕಾಣುತ್ತಿದೆ. ಈ ಸಮಯಕ್ಕೆ 107.9 ಡಾಲರ್ ಪ್ರತಿ ಬ್ಯಾರೆಲ್ ನಂತಿದೆ (1 USD=75.95 ರುಪಾಯಿ).
ದಿನಕ್ಕೆ ಸುಮಾರು 2.5 ಮಿಲಿಯನ್ ಬ್ಯಾರೆಲ್‌ಗಳು (bpd) ರಷ್ಯಾದ ತೈಲ ಮತ್ತು ಉತ್ಪನ್ನಗಳು ಏಪ್ರಿಲ್‌ನಲ್ಲಿ ಮಾರುಕಟ್ಟೆಯಲ್ಲಿ ವಹಿವಾಟಿಗೆ ಒಳಗಾಗದೆ ಇರಬಹುದು, ಇಷ್ಟೂ ಪ್ರಮಾಣದ ತೈಲವು ಮಾರಾಟವಾಗದೆ ಇರಬಹುದು ಎಂದು ಇಂಟರ್‌ನ್ಯಾಶನಲ್ ಎನರ್ಜಿ ಏಜೆನ್ಸಿ ಅಂದಾಜಿಸಿದೆ. ಆದಾಗ್ಯೂ, ರಷ್ಯಾದ ಅಧಿಕಾರಿಗಳು, ಸರಬರಾಜು ಸ್ಥಿರವಾಗಿ ಇರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ ತೈಲ ರಫ್ತು ಮತ್ತು ದೇಶದ ಪಶ್ಚಿಮ ಬಂದರುಗಳು ಮತ್ತು ಡ್ರುಜ್ಬಾ ಪೈಪ್‌ಲೈನ್‌ನಿಂದ ಸಾಗಣೆಯು ಎರಡನೇ ತ್ರೈಮಾಸಿಕದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಹಾಗಾದರೆ ಯಾವೆಲ್ಲಾ ದೇಶಗಳು ರಷ್ಯಾದಿಂದ ತೈಲವನ್ನು ಖರೀದಿ ಮಾಡುತ್ತಿದೆ ಹಾಗೂ ರಷ್ಯಾದಿಂದ ತೈಲ ಖರೀದಿಯನ್ನು ಸ್ಥಗಿತ ಮಾಡಿದೆ ಎಂದು ತಿಳಿಯಲು ಮುಂದೆ ಓದಿ...

ಬಲ್ಗೇರಿಯಾ, ಚೀನಾ, ಯೂರೋಪ್ ಒಕ್ಕೂಟ, ಫ್ರಾನ್ಸ್
ರಷ್ಯಾದ ಲುಕೋಯಿಲ್ (LKOH.MM) ಒಡೆತನದ ನೆಫ್ಟೋಚಿಮ್ ಬರ್ಗಾಸ್ ತೈಲ ಸಂಸ್ಕರಣ ಸಂಸ್ಥೆಯು ಅಗತ್ಯವಿದ್ದರೆ ಶೇಕಡ 100 ರಷ್ಟು ರಷ್ಯಾದಲ್ಲದ ಕಚ್ಚಾ ತೈಲವನ್ನು ಬಳಸಬಹುದು. ಆದರೆ ಪ್ರಸ್ತುತ ಶೇಕಡ 40ರಷ್ಟು ರಷ್ಯಾವನ್ನು ಹೊರತುಪಡಿಸಿ ಬೇರೆ ದೇಶದ ತೈಲವನ್ನು ಬಳಸಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯುರೋಪಿಯನ್ ಒಕ್ಕೂಟದ ನಂತರ ಚೀನಾ ಎರಡನೇ ಅತಿದೊಡ್ಡ ರಷ್ಯಾದ ತೈಲ ಆಮದುದಾರ ರಾಷ್ಟ್ರವಾಗಿದೆ. ಈ ಉಭಯ ದೇಶಗಳ ನಡುವೆ ತೈಲ ಸಾಗಣೆಯು ಇನ್ನೂ ಹೆಚ್ಚಾಗಬಹುದು. ತೈಲ ಉತ್ಪಾದನೆಯನ್ನು ಮೇಲ್ವಿಚಾರಣೆ ಮಾಡುವ ಪೆಟ್ರೋ-ಲಾಜಿಸ್ಟಿಕ್ಸ್, ಚೀನಾಕ್ಕೆ ಹೆಚ್ಚು ರಷ್ಯಾದ ಕಚ್ಚಾ ತೈಲವನ್ನು ಸರಬರಾಜು ಮಾಡಲು ಮುಂದಾಗಿದೆ.
ಯುರೋಪ್ ಒಕ್ಕೂಟವು ಶೇಕಡ 40ರಷ್ಟು ಅನಿಲ ಹಾಗೂ ಶೇಕಡ 27ರಷ್ಟು ಕಚ್ಚಾ ತೈಲ ಆಮದುಗಳಿಗೆ ರಷ್ಯಾವನ್ನು ಅವಲಂಬಿಸಿರುವ ರಾಷ್ಟ್ರವಾಗಿದೆ. ಯುರೋಪ್ ತನ್ನ ತೈಲ ಮತ್ತು ಅನಿಲಕ್ಕಾಗಿ ರಷ್ಯಾವನ್ನು ಹೆಚ್ಚು ಅವಲಂಬಿಸಿದೆ. 2021 ರಲ್ಲಿ, ಯುರೋಪಿಯನ್ನರು ಬಳಕೆ ಮಾಡಿದ ಐದನೇ ಎರಡು ಭಾಗವು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದೆ. ಫ್ರಾನ್ಸ್ ಒಟ್ಟು ಆಮದು ಮಾಡಿದ ಕಚ್ಚಾ ತೈಲಗಳ ಪೈಕಿ ಶೇಕಡ 9.5ರಷ್ಟು ರಷ್ಯಾದ ಕಚ್ಚಾ ತೈಲವಾಗಿದೆ. ಆದರೆ ಫ್ರೆಂಚ್ ಅಸೋಸಿಯೇಷನ್ ಆಫ್ ಪೆಟ್ರೋಲಿಯಂ ಇಂಡಸ್ಟ್ರಿ (Ufip) ಪರ್ಯಾಯ ಸರಬರಾಜುದಾರರ ಮೇಲೆ ಅವಲಂಬಿತವಾಗಬಹುದು ಎಂದು ಹೇಳಿದೆ. ಈಗಾಗಾಲೇ ರಷ್ಯಾದಿಂದ ಡೀಸೆಲ್ ಖರೀದಿ ಕಡಿಮೆ ಮಾಡುತ್ತಾ ಬರುತ್ತಿದೆ.

ಜರ್ಮನಿ, ಭಾರತ, ನೆದರ್‌ಲ್ಯಾಂಡ್, ಪೋಲೆಂಡ್, ಟರ್ಕಿ
ಜರ್ಮನಿಯ ಅತಿ ದೊಡ್ಡ ತೈಲ ಸಂಸ್ಕರಣಾ ಸಂಸ್ಥೆ ಮಿರೊವು ರಷ್ಯಾದ ಕಚ್ಚಾ ತೈಲವನ್ನು ಸುಮಾರು ಶೇಕಡ 14ರಷ್ಟು ಖರೀದಿ ಮಾಡಿದೆ. ಜರ್ಮನಿಯ PCK Schwedt ಸಂಸ್ಕರಣಾಗಾರ, 54% ರೋಸ್ನೆಫ್ಟ್ (ROSN.MM) ಒಡೆತನದಲ್ಲಿದೆ. ಡ್ರುಜ್ಬಾ ಪೈಪ್‌ಲೈನ್‌ನ ಮೂಲಕ ತೈಲ ಖರೀದಿ ಮಾಡುತ್ತಿದೆ. ವ್ಯಾಪಾರ ಮೂಲಗಳ ಪ್ರಕಾರ, ಭಾರತದ ಸ್ಟೇಟ್ ರಿಫೈನರ್ 2 ಮಿಲಿಯನ್ ಬ್ಯಾರೆಲ್ ರಷ್ಯಾದ ಯುರಲ್ಸ್ ಅನ್ನು ಖರೀದಿ ಮಾಡಿದ್ದು, ಮೇ ತಿಂಗಳಿನಲ್ಲಿ ಭಾರತಕ್ಕೆ ಆಮದು ಆಗಲಿದೆ. ಭಾರತದ ಅಗ್ರ ತೈಲ ಸಂಸ್ಕರಣಾ ಸಂಸ್ಥೆ ಇಂಡಿಯನ್ ಆಯಿಲ್ ಕೂಡಾ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ. ಮೇ ತಿಂಗಳ ವೇಳೆಗೆ 3 ಮಿಲಿಯನ್ ಬ್ಯಾರೆಲ್ ಯುರಲ್ಸ್ ಆಮದು ಆಗಲಿದೆ.
ಡಚ್ ಸರ್ಕಾರ ಅಥವಾ ರೋಟರ್‌ಡ್ಯಾಮ್ ಬಂದರು ರಷ್ಯಾದ ತೈಲವನ್ನು ನಿಷೇಧಿಸಿಲ್ಲ. ರೋಟರ್‌ಡ್ಯಾಮ್ ಮೂಲಕ ಹಾದುಹೋಗುವ ತೈಲದ ಸುಮಾರು ಶೇಕಡ 30ರಷ್ಟು ರಷ್ಯಾದ ತೈಲವಾಗಿದೆ. ವಾರ್ಷಿಕವಾಗಿ ಸುಮಾರು 20 ಮಿಲಿಯನ್ ಟನ್ ರಷ್ಯಾದ ತೈಲ ಉತ್ಪನ್ನಗಳು ಬಂದರಿನ ಮೂಲಕ ಸಾಗುತ್ತದೆ. ಪೋಲೆಂಡ್‌ನ ಅತಿದೊಡ್ಡ ತೈಲ ಸಂಸ್ಕರಣಾ ಸಂಸ್ಥೆಯು ಪೋಲೆಂಡ್, ಲಿಥುವೇನಿಯಾ ಮತ್ತು ಜೆಕ್ ರಿಪಬ್ಲಿಕ್‌ನಲ್ಲಿನ ತನ್ನ ಸಂಸ್ಕರಣ ಸಂಸ್ಥೆಗಳಿಗಾಗಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿದೆ ಎಂದು ಹೇಳಿದೆ. ಆದರೆ ರಷ್ಯಾದ ಪೂರೈಕೆಯ ಸಂಪೂರ್ಣವಾಗಿ ರದ್ದು ಮಾಡಲು ಕೂಡಾ ಸಿದ್ಧವಾಗಿದ್ದೇವೆ ಎಂದು ತಿಳಿಸಿದೆ. ರಷ್ಯಾದ ಕಚ್ಚಾ ಮತ್ತು ಸಂಬಂಧಿತ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸುವ ಯಾವುದೇ ಯೋಜನೆಯನ್ನು ಟರ್ಕಿ ಹೊಂದಿಲ್ಲ. ಇದು ಮಾಸ್ಕೋ ಮೇಲಿನ ನಿರ್ಬಂಧಗಳನ್ನು ವಿರೋಧ ಮಾಡುತ್ತಲೇ ಬಂದಿದೆ. ಟುಪ್ರಾಸ್ (TUPRS.IS) ಟರ್ಕಿಯ ಅತಿದೊಡ್ಡ ಸಂಸ್ಕರಣಾ ಸಂಸ್ಥೆಯು ರಷ್ಯಾದಿಂದಲೇ ತೈಲ ಖರೀದಿ ಮಾಡುತ್ತಿದೆ.

ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ
ಉಕ್ರೇನ್ ಹಾಗೂ ರಷ್ಯಾದ ಸಂಘರ್ಷ ಪ್ರಾರಂಭವಾದಾಗಿನಿಂದ ರಷ್ಯಾದ ಕಚ್ಚಾ ತೈಲ ಅಥವಾ ಉತ್ಪನ್ನಗಳನ್ನು ಖರೀದಿಸಿಲ್ಲ ಎಂದು ಆಸ್ಟ್ರೇಲಿಯನ್ ರಿಫೈನರ್ ಎಎಂಪಿಒಎಲ್ ಹೇಳಿದೆ. ಇನ್ನು ಶೆಲ್ ಬ್ರಾಂಡ್ ಅಡಿಯಲ್ಲಿ ಆಸ್ಟ್ರೇಲಿಯಾದಲ್ಲಿ ಕಾರ್ಯನಿರ್ವಹಿಸುವ ರಿಫೈನರ್ ವಿವಾ ಎನರ್ಜಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿದೆ. ಬ್ರಿಟಿಷ್ ಪ್ರಮುಖ ತೈಲ ಕಂಪನಿ ಬಿಪಿ ಕೂಡಾ ರಷ್ಯಾದಿಂದ ತೈಲ ಖರೀದಿಯನ್ನು ಸ್ಥಗಿತ ಮಾಡಿದೆ. ಯಾವುದೇ ಹೊಸ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. 2022 ರ ಅಂತ್ಯದ ವೇಳೆಗೆ ರಷ್ಯಾದ ತೈಲ ಆಮದುಗಳನ್ನು ಹಂತಹಂತವಾಗಿ ನಿಲ್ಲಿಸುವುದಾಗಿ ಬ್ರಿಟನ್ ಹೇಳಿದೆ. ಇನ್ನು ಕೆನಡಾ ರಷ್ಯಾದ ಕಚ್ಚಾ ಆಮದುಗಳನ್ನು ನಿಷೇಧಿಸುವುದಾಗಿ ಹೇಳಿದೆ. ಕೆನಡಾ 2019 ರಿಂದ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿಲ್ಲ, ಆದರೆ 2021 ರಲ್ಲಿ ನಾಫ್ತಾ, ಡೀಸೆಲ್ ಮತ್ತು ಗ್ಯಾಸೋಲಿನ್ ಅನ್ನು ಖರೀದಿಸಿತು.

ಸ್ಪೇನ್, ಯುನೈಟೆಡ್ ಸ್ಟೇಟ್ಸ್
ಅಬುಧಾಬಿ ಸ್ಟೇಟ್ ಫಂಡ್ ಮುಬಡಾಲಾ ಮತ್ತು ಖಾಸಗಿ ಇಕ್ವಿಟಿ ಸಂಸ್ಥೆ ಕಾರ್ಲೈಲ್ ಒಡೆತನದ ಸ್ಪ್ಯಾನಿಷ್ ಸಂಸ್ಥೆಯು ರಷ್ಯಾದ ಕಚ್ಚಾ, ನೈಸರ್ಗಿಕ ಅನಿಲ ಮತ್ತು ತೈಲ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿದೆ. ಇನ್ನು ಸ್ಪ್ಯಾನಿಷ್ ಸಂಸ್ಥೆ ರೆಪ್‌ಸೋಲ್ ಸ್ಪಾಟ್ ಮಾರುಕಟ್ಟೆಯಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿದೆ. ವಿಶ್ವದ ಅತಿದೊಡ್ಡ ತೈಲ ಗ್ರಾಹಕ ಯುನೈಟೆಡ್ ಸ್ಟೇಟ್ಸ್ ಮಾರ್ಚ್ 8 ರಂದು ರಷ್ಯಾದ ತೈಲ ಮತ್ತು ಅನಿಲ ಆಮದುಗಳ ಮೇಲೆ ವ್ಯಾಪಕ ನಿಷೇಧವನ್ನು ವಿಧಿಸಿತು. ರಷ್ಯಾದ ಅನಿಲ ಅಥವಾ ತೈಲಕ್ಕಾಗಿ ಹೊಸ ಪೂರೈಕೆ ಒಪ್ಪಂದಗಳನ್ನು ನಿಲ್ಲಿಸುವುದಾಗಿ ಜರ್ಮನ್ ಯುಟಿಲಿಟಿ ಹೇಳಿದೆ. ಇನ್ನು ಫ್ರೆಂಚ್ ಕಂಪನಿ ಟೋಟಲ್ ಎನರ್ಜಿ ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications