• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಅಜಾದ್ ಗೆ ನಮನ

By Mahesh
|

ಚಂದ್ರಶೇಖರ ಆಜಾದ್ ಅಥವಾ 'ಆಜಾದ್' ಎಂಬ ಹೆಸರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಜರಾಮರ. ಭಗತ್ ಸಿಂಗ್ ರನ್ನು ಮಾರ್ಗದರ್ಶಕರನ್ನಾಗಿಸಿಕೊಂಡು ಕ್ರಾಂತಿಕಾರಿಯಾಗಿ ಸ್ವಾತಂತ್ರ್ಯ ಸಂಗ್ರಾಮ ನಡೆಸಿದ ಚಂದ್ರಶೇಖರ ಸೀತಾರಮ್ ತಿವಾರಿ ಅಲಿಯಾಸ್ ಆಜಾದ್ ಅವರ ಸಂಸ್ಮರಣಾ ದಿನವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಸ್ಮರಿಸಲಾಗುತ್ತಿದೆ.

ಬ್ರಿಟಿಷರನ್ನು ಶಸ್ತ್ರಾಸ್ತ್ರಗಳ ಮೂಲಕವೇ ಎದುರಿಸಲು ಸಾಧ್ಯ ಎಂದು ನಂಬಿದ್ದ ಅಜಾದ್, ಉತ್ತರಪ್ರದೇಶದ ಪಂಡಿತರ ಮನೆಯಲ್ಲಿ ಹುಟ್ಟಿದರೂ ಕ್ರಾಂತಿಕಾರಿಯಾಗಿ ಕೈಲಿ ಬಂದೂಕು ಹಿಡಿದು ಹೋರಾಟಕ್ಕೆ ಧುಮುಕಿದವರು.

1919ರಲ್ಲಿ ಜಲಿಯಾನ್ ವಾಲಾ ಬಾಗ್ ಹತ್ಯಾಕಾಂಡದ ವಿರುದ್ಧ ಪ್ರತೀಕಾರಕ್ಕೆ ಹಾತೊರೆಯುತ್ತಿದ್ದ ಅಜಾದ್ ಅವರು ಸರ್ಕಾರಿ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಕೋರ್ಟ್ ಕಟಕಟೆ ಏರಿದಾಗ, ತಮ್ಮ ಹೆಸರು ಆಜಾದ್[ಸ್ವಾತಂತ್ರ್ಯ] ಎಂದು ನ್ಯಾಯಾಧೀಶರ ಮುಂದೆ ಘೋಷಿಸಿದರು.

ಹಿಂದೂಸ್ತಾನ್‌‌ ಸೋಷಲಿಸ್ಟ್‌‌ ರಿಪಬ್ಲಿಕನ್‌ ಅಸೋಸಿಯೇಷನ್‌ ಎಂಬ ಸಂಘವನ್ನು ಆರಂಭಿಸಿದ ಅಜಾದ್ ಅವರ ಜತೆಗೆ ಭಗತ್ ಸಿಂಗ್, ಸುಖ್ ದೇವ್, ಬಟುಕೇಶ್ವರ್ ದತ್, ರಾಜ್ ಗುರು ಸಾಥ್ ನೀಡಿದರು.

ಯುವಕರಿಗೆ ಸ್ಫೂರ್ತಿಯಾಗಿರುವ ದಂತಕಥೆ

ಯುವಕರಿಗೆ ಸ್ಫೂರ್ತಿಯಾಗಿರುವ ದಂತಕಥೆ

ಕಕೋರಿಯ ರೈಲು ದರೋಡೆ ಪ್ರಕರಣದ ಮೂಲಕ ಕ್ರಾಂತಿಕಾರಿ ಆಜಾದ್ ಹಾಗೂ ತಂಡದ ಬಗ್ಗೆ ಬ್ರಿಟಿಷರಿಗೆ ಭಯ ಹುಟ್ಟಿಕೊಂಡಿತು. ಹನುಮಾನ್ ಭಕ್ತರಾಗಿದ್ದ ಅಜಾದ್ ಅವರು ಬಿಲ್ವಿದ್ಯೆ, ಈಜು, ಕುಸ್ತಿಯಲ್ಲಿ ಪರಿಣಿತರಾಗಿದ್ದರು. ಸಂಸ್ಕೃತ ವಿದ್ವಾಂಸನಾಗಲಿ ಎಂದು ಅವರ ತಾಯಿ, ಕಾಶಿವಿದ್ಯಾಲಯಕ್ಕೆ ಸೇರಿಸಿದರು. ಆದರೆ, 15ನೇ ವಯಸ್ಸಿಗೆ ಗಾಂಧೀಜಿ ಕರೆ ನೀಡಿದ್ದ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡು ತಮ್ಮ ಗುರಿಯನ್ನು ಕಂಡುಕೊಂಡರು.

ಅಲ್ ಫ್ರೆಂಡ್ ಉದ್ಯಾನವನದಲ್ಲಿ ಕೊನೆ ಕ್ಷಣ

ಅಂದು ಆಲ್ ಫ್ರೆಡ್ ಉದ್ಯಾನವನದಲ್ಲಿ ಅಂತಿಮ ಕ್ಷಣ ಎದುರಿಸುವಾಗಲೂ ಅಜಾದ್ ಶರಣಾಗಲಿಲ್ಲ, ಸಂಪೂರ್ಣವಾಗಿ ಸುತ್ತುವರೆಯಲ್ಪಟ್ಟ ಪೋಲೀಸರ ಸಂಖ್ಯಾಬಲವು ಹೆಚ್ಚುತ್ತಿದ್ದಂತೆ, ಆಜಾದ್ ಅವರು ತಮ್ಮ ಬಳಿ ಇದ್ದ ಬಂದೂಕಿನಿಂದ ಒಂದೇ ಒಂದು ಗುಂಡು ಉಳಿದಾಗ, ತಮ್ಮ ಮೇಲೆಯೇ ಗುಂಡು ಹಾರಿಸಿಕೊಂಡು ತಮ್ಮನ್ನು ಜೀವಂತವಾಗಿ ಯಾರೂ ಸೆರೆಹಿಡಿಯಲಾರರೆಂಬ ತಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಂಡರು.

ಆಜಾದ್ ತ್ಯಾಗ ಬಲಿದಾನವನ್ನು ಸ್ಮರಿಸೋಣ

ನಮಗಾಗಿ ಆಜಾದ್ ಅವರು ಮಾಡಿದ ತ್ಯಾಗ, ಬಲಿದಾನವನ್ನು ಸ್ಮರಿಸುವ ದಿನ ಇದಾಗಿದೆ. ಇಂಥ ಹೀರೋಗಳು ಮತ್ತೆ ಹುಟ್ಟಿ ಬರಲಿ

ಕ್ರಾಂತಿಕಾರಿಗಳ ಬಲಿದಾನದ ಬಗ್ಗೆ ನೆನಪಿರಲಿ

ಭಗತ್ ಸಿಂಗ್, ಆಜಾದ್ ರಂಥ ಕ್ರಾಂತಿಕಾರಿಗಳ ಬಲಿದಾನದ ಬಗ್ಗೆ ಸ್ಮರಿಸೋಣ. ಇಂಥವರ ಬಲಿದಾನದಿಂದ ನಮಗೆ ಇಂದು ಸ್ವಾತಂತ್ರ್ಯ ಲಭಿಸಿದೆ.

ಆಜಾದ್ ಬಗ್ಗೆ ಸ್ವಾರಸ್ಯಕರ ಸಂಗತಿ

ಆಜಾದ್ ಬಗ್ಗೆ ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಳ್ಳುತ್ತಿರುವ ಟ್ವೀಟ್ ಲೋಕ. ಆಜಾದರ ಬಗೆಗಿನ ರಹಸ್ಯ ಕಡತವೊಂದನ್ನು ಲಕ್ನೋನ ಗೋಖಲೆ ಮಾರ್ಗ್‌ ರಸ್ತೆಯಲ್ಲಿರುವ C.I.D. ಪ್ರಧಾನ ಕಚೇರಿಯಲ್ಲಿ ರಕ್ಷಿಸಿಡಲಾಗಿದೆ. ಅವರ COLT ಕಂಪೆನಿಯ ಪಿಸ್ತೂಲನ್ನು/ಕೈಬಂದೂಕನ್ನು ಅಲಹಾಬಾದ್‌‌ ವಸ್ತು ಸಂಗ್ರಹಾಲಯದಲ್ಲಿ ಅವರ ಅತಿ ಅಪರೂಪದ ಕೆಲ ಛಾಯಾಚಿತ್ರಗಳೊಂದಿಗೆ ಪ್ರದರ್ಶನಕ್ಕಿಡಲಾಗಿದೆ.

ವಂಚನೆಯಿಂದಾಗಿ ಆಜಾದ್ ಅಂದು ಬಲಿಯಾದರು

ನಂಬಿಕಸ್ತರ ವಂಚನೆಯಿಂದಲೇ ಅಂದು ಆಜಾದ್ ಬಲಿದಾನವಾಯಿತು. ಅವರು ಸಾಯುತ್ತಿರುವುದನ್ನು ನೋಡಿದರೂ ಅವರ ಮೃತದೇಹದ ಬಳಿಗೆ ಸುಮಾರು ಎರಡು ಗಂಟೆಗಳ ಕಾಲ ಯಾವುದೇ ಭಾರತೀಯ ಸೈನಿಕನೂ ಹೋಗಲಿಲ್ಲವೆಂದು ಹೇಳಲಾಗುತ್ತದೆ. ಆಜಾದ್ ಎಂಬ ಬಹುರೂಪಿ ಯಾವ ರೀತಿ ಬ್ರಿಟಿಷರಿಗೆ ಭಯ ಹುಟ್ಟಿಸಿದ್ದರು ಎಂಬುದನ್ನು ಕಾಣಬಹುದು.

ಆಜಾದ್ ಬರೆದಿರುವ ಪತ್ರದ ಪ್ರತಿ

ಆಜಾದ್ ಅವರ ಬರೆದಿರುವ ಪತ್ರದ ಪ್ರತಿ, ಆಲ್ ಫ್ರೆಡ್ ಉದ್ಯಾನದಲ್ಲಿ ಅಂದಿನ ಚಿತ್ರ ಎಲ್ಲವನ್ನು ಹಂಚಿಕೊಳ್ಳಲಾಗುತ್ತಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Twitterati remembers Indian revolutionary Chandra Shekhar Azad on his death anniversary today(Feb 27). Azad died at Alfred park in Allahabad on 27 February 1931.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more