ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲೆನೋವು ಇದೆಯೇ? ಅದು ಕೋವಿಡ್ ಲಕ್ಷಣವಾಗಿರಬಹುದು: ಹೊಸ ಅಧ್ಯಯನ ವರದಿ

|
Google Oneindia Kannada News

ಜಗತ್ತಿನಾದ್ಯಂತ ಕೊರೊನಾ ವೈರಸ್ ಪ್ರಕರಣ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕ ಮೂಡಿಸುತ್ತಿದೆ. ಜತೆಗೆ ಕೊರೊನಾ ವೈರಸ್‌ನಿಂದ ನಿಖರವಾಗಿ ಇಂತಹದೇ ಲಕ್ಷಣ ಕಂಡುಬರುತ್ತದೆ ಎನ್ನುವಂತಿಲ್ಲ. ಜ್ವರ, ತಲೆ ನೋವು, ಗಂಟಲು ನೋವು, ಮೈಕೈ ನೋವು, ಉಸಿರಾಟದ ಸಮಸ್ಯೆ ಮುಂತಾದವು ಸಾಮಾನ್ಯವಾಗಿ ಕಂಡುಬರುತ್ತದೆ ಎಂದರೂ, ಹೊಸ ಹೊಸ ಲಕ್ಷಣಗಳೂ ಪತ್ತೆಯಾಗುತ್ತಿವೆ.

ಕೊರೊನಾ ವೈರಸ್ ದೇಹದಲ್ಲಿ ಅಂಗಗಳಿಗೆ ತೀವ್ರ ಸ್ವರೂಪದಲ್ಲಿ ಹಾನಿ ಮಾಡುವ ಮೂಲಕ ಆರೋಗ್ಯ ಕೆಡಿಸುತ್ತಿದೆ. ಮಿದುಳು, ಹೃದಯ, ಶ್ವಾಸಕೋಶಗಳು ಕೂಡ ವೈರಸ್ ಸೋಂಕಿನಿಂದ ಹಾನಿಗೊಳ್ಳುತ್ತಿವೆ.

ಸಮಯ ಕಳೆದಂತೆ ಹೊಸ ಸಂಶೋಧಕರು ಕೋವಿಡ್‌ನ ಮತ್ತಷ್ಟು ಆಯಾಮಗಳನ್ನು ಪತ್ತೆಹಚ್ಚುತ್ತಿದ್ದಾರೆ. ಕೋವಿಡ್ 19ನಿಂದ ಮನುಷ್ಯನ ಮಿದುಳು ಅತ್ಯಂತ ಹೆಚ್ಚು ಅಪಾಯಕ್ಕೆ ಒಳಗಾಗುತ್ತಿದ ಎನ್ನುವುದು ಗೊತ್ತಾಗಿದೆ. ಸಣ್ಣ ಅಥವಾ ಲಘು ಪ್ರಮಾಣದ ತಲೆನೋವು ವೈರಸ್‌ಗೆ ಸಂಬಂಧಿಸಿದಂತಹ ನರಶಾಸ್ತ್ರೀಯ ಲಕ್ಷಣಗಳು ಇರಬಹುದು ಎಂದು ಅಧ್ಯಯನವೊಂದು ಹೇಳಿದೆ.

ಬೆಂಗಳೂರಲ್ಲಿ ಕ್ಯಾನ್ಸರ್ ಇದ್ದವರೂ ಕೊರೊನಾ ಸೋಂಕಿನಿಂದ ಚೇತರಿಕೆ ಬೆಂಗಳೂರಲ್ಲಿ ಕ್ಯಾನ್ಸರ್ ಇದ್ದವರೂ ಕೊರೊನಾ ಸೋಂಕಿನಿಂದ ಚೇತರಿಕೆ

ಒತ್ತಡದ ಸಮಯ ಅಥವಾ ಇತರೆ ದೈಹಿಕ ಹಾಗೂ ಮಾನಸಿಕ ಕಾರಣಗಳಿಂದ ಜನರು ತಲೆನೋವು ಅನುಭವಿಸುವುದರಿಂದ ಅದು ಸಾಮಾನ್ಯ ಸಂಗತಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಒತ್ತಡದಂತಹ ಸನ್ನಿವೇಶದ ಕಾರಣದಿಂದಲೇ ಬರುತ್ತದೆ ಎನ್ನುವಂತಿಲ್ಲ. ಮಿದುಳಿನಲ್ಲಿ ರಕ್ತನಾಳಗಳು ಅದುರುವಂತಹ, ಪಲ್ಸ್ ತೀವ್ರಗೊಳ್ಳುವ ತಲೆನೋವು (ಥ್ರೋಬಿಂಗ್) ಕೋವಿಡ್‌ನ ಅಪಾಯಕಾರಿ ಲಕ್ಷಣಗಳಲ್ಲಿ ಒಂದು ಎಂದು ಅಧ್ಯಯನ ತಿಳಿಸಿದೆ. ಮುಂದೆ ಓದಿ.

ತಲೆನೋವು ಸಹಜ

ತಲೆನೋವು ಸಹಜ

ಅನ್ನಾಲ್ಸ್ ಆಫ್ ಕ್ಲಿನಿಕಲ್ ಆಂಡ್ ಟ್ರಾನ್ಸ್‌ಲೇಷನಲ್ ನ್ಯೂರಾಲಜಿ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನವು ಷಿಕಾಗೋದ ವಿವಿಧ ವೈದ್ಯಕೀಯ ಆಸ್ಪತ್ರೆಗಳಲ್ಲಿ 509 ಕೊರೊನಾ ವೈರಸ್ ರೋಗಿಗಳ ನಡುವೆ ನಡೆಸಿದ ಸಮೀಕ್ಷೆಯನ್ನು ಸಹ ಇದು ಒಳಗೊಂಡಿದೆ. ಈ ರೋಗಿಗಳಲ್ಲಿ ಶೇ 38ರಷ್ಟು ಮಂದಿ ತಮ್ಮ ಕೋವಿಡ್ ದಿನಗಳಲ್ಲಿ ಕೆಲವು ಸಮಯವಾದರೂ ತಲೆನೋವಿನ ಸಮಸ್ಯೆ ಎದುರಿಸುತ್ತಾರೆ. ಕೋವಿಡ್ ಬಂದಾಗ ಜನರು ನರಸಂಬಂಧಿ ಲಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಇದೆ.

ನರಸಂಬಂಧಿ ರೋಗ ಲಕ್ಷಣ

ನರಸಂಬಂಧಿ ರೋಗ ಲಕ್ಷಣ

ಕೊರೊನಾ ವೈರಸ್‌ನಿಂದ ಬಳಲುತ್ತಿರುವ ರೋಗಿಗಳಲ್ಲಿ ಸುಮಾರು ಶೇ 82ರಷ್ಟು ಮಂದಿ ನರಸಂಬಂಧಿ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಶೇ 42ರಷ್ಟು ಮಂದಿಗೆ ಈ ಲಕ್ಷಣಗಳು ಆರಂಭದ ಹಂತದಲ್ಲಿಯೇ ಉಂಟಾದರೆ, ಶೇ 63ರಷ್ಟು ಮಂದಿ ರೋಗಿಗಳು ನರಶಾಸ್ತ್ರೀಯ ಲಕ್ಷಣಗಳನ್ನು ತಮ್ಮ ಆಸ್ಪತ್ರೆ ಚಿಕಿತ್ಸೆ ಅವಧಿಯಲ್ಲಿ ಅನುಭವಿಸುತ್ತಾರೆ.

ಕುದಿಯುವ ನೀರಿನ ಆವಿ ಸೇವಿಸಿದರೆ ಕೊರೊನಾ ವೈರಾಣು ಸಾಯುತ್ತಾ? ಏನಂತಾರೆ ವೈದ್ಯರುಕುದಿಯುವ ನೀರಿನ ಆವಿ ಸೇವಿಸಿದರೆ ಕೊರೊನಾ ವೈರಾಣು ಸಾಯುತ್ತಾ? ಏನಂತಾರೆ ವೈದ್ಯರು

ಸುದೀರ್ಘ ಆಸ್ಪತ್ರೆ ವಾಸ

ಸುದೀರ್ಘ ಆಸ್ಪತ್ರೆ ವಾಸ

ಈ ಅಧ್ಯಯನಗಳು ಕೋವಿಡ್ 19ರಲ್ಲಿ ತಲೆನೋವು ಅತ್ಯಂತ ಸಾಮಾನ್ಯವಾದ ಲಕ್ಷಣಗಳಲ್ಲಿ ಒಂದು ಎಂಬುದನ್ನು ತಿಳಿಸಿವೆ. ಹಾಗೆಯೇ ನರಶಾಸ್ತ್ರಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಅನುಭವಿಸಿದ ರೋಗಿಗಳು ಸುದೀರ್ಘ ಕಾಲ ಆಸ್ಪತ್ರೆ ವಾಸ ಅನುಭವಿಸಬೇಕಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

ಶೇ 32ರಷ್ಟು ರೋಗಿಗಳಲ್ಲಿ ತಲೆನೋವು

ಶೇ 32ರಷ್ಟು ರೋಗಿಗಳಲ್ಲಿ ತಲೆನೋವು

ಮಿದುಳಿನ ರೋಗಗಳು, ಹಾನಿ ಅಥವಾ ಅಸಮಪರ್ಕ ಚಟುವಟಿಕೆಗಳು ಸಮಸ್ಯೆಗೆ ಎನ್ಸೆಫಾಲೊಪಥಿ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ಎನ್ಸೆಫಾಲೊಪಥಿಯು ಕೋವಿಡ್-19ರಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಅತಿ ಹೆಚ್ಚು ಕಂಡುಬರುತ್ತಿದೆ. ಅನೇಕರ ಮಿದುಳು ಇದರಿಂದ ತೀವ್ರ ಹಾನಿಗೊಳಗಾಗುತ್ತಿದೆ. ಆಸ್ಪತ್ರೆಗೆ ದಾಖಲಾದ ಶೇ 32ರಷ್ಟು ರೋಗಿಗಳಲ್ಲಿ ತಲೆನೋವು ಬಾಧಿಸಿದೆ.

ಮಿದುಳಿನ ಕಾರ್ಯಾಚರಣೆಗೆ ಹಾನಿ

ಮಿದುಳಿನ ಕಾರ್ಯಾಚರಣೆಗೆ ಹಾನಿ

ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ಮೂರನೇ ಎರಡು ಭಾಗದಷ್ಟು ರೋಗಿಗಳು ತಮ್ಮ ಆರೈಕೆ ಮಾಡಿಕೊಳ್ಳಲು ಸಾಧ್ಯವಾಗದೆ ಮಿದುಳಿನ ಕಾರ್ಯಾಚರಣೆಯ ಹಾನಿಯನ್ನು ಅನುಭವಿಸಿದ್ದಾರೆ. ಇನ್ನೊಂದೆಡೆ ಎನ್ಸೆಫಾಲೊಪಥಿ ಉಂಟಾಗದ ಶೇ 90ರಷ್ಟು ರೋಗಿಗಳಿಗೆ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಯಾವುದೇ ಸಮಸ್ಯೆ ಅನುಭವ ಆಗಿಲ್ಲ. ರೋಗಿಗಳು ಮತ್ತು ಚಿಕಿತ್ಸಕರು ಕೋವಿಡ್ ರೋಗಿಗಳಲ್ಲಿನ ನರಸಂಬಂಧಿ ಸಮಸ್ಯೆಗಳ ತೀವ್ರತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

Recommended Video

DK Shivakumar ಮನೆಯ ಮೇಲೆ ದಾಳಿ ನಡೆಸಿದ ಹಿಂದಿನ ಅಸಲಿ ಕಾರಣ ಇದೇ | Oneindia Kannada

English summary
A new study on coronavirus says, throbbing headache could be a neurological symptom in connection with covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X