ವಿಶ್ವದ 150 ಬೆಸ್ಟ್ ರೆಸ್ಟೋರೆಂಟ್, ತಿನಿಸುಗಳ ಪಟ್ಟಿಯಲ್ಲಿ 'ನಮ್ಮ MTR'ನ ಈ ತಿಂಡಿಗೆ ಸ್ಥಾನ!
ವಿಶ್ವದ ಪಾಕಪದ್ಧತಿಯಲ್ಲಿ ಅನೇಕ ಪ್ರಕಾರದ ಭಕ್ಷ್ಯಗಳನ್ನು ನಾವು ನೋಡಬಹುದು. ಆದರೆ ಕೆಲವೊಂದು ಖಾದ್ಯಗಳು ಮಾತ್ರ ಆಯಾ ದೇಶದಲ್ಲಿ ಮಾತ್ರವಲ್ಲದೆ ನೆರೆಯ ರಾಜ್ಯ ಹಾಗೂ ದೇಶಗಳಿಂದ ಬರುವ ಜನರಿಗೂ ಅಚ್ಚುಮೆಚ್ಚಿನ ಖಾದ್ಯಗಳಾಗಿರುತ್ತವೆ. ಹೀಗೆ ಹೆಚ್ಚು ಜನಪ್ರಿಯತೆ ಪಡೆದ ಖಾದ್ಯದಲ್ಲಿ ಮಾವಳ್ಳಿ ಟಿಫಿನ್ ರೂಂನ ನಮ್ಮ MTR ರವೆಇಡ್ಲಿ ಕೂಡ ಒಂದಾಗಿದೆ.
ವಿಶ್ವದಲ್ಲಿರುವ ಜನಮನ್ನಣೆ ಪಡೆದ ರೆಸ್ಟೊರೆಂಟ್‌ಗಳು ಹಾಗೂ ಅಲ್ಲಿನ ಜನಪ್ರಿಯ ಸಾಂಪ್ರದಾಯಿಕ ಆಹಾರಗಳ ಬಗ್ಗೆ ಆಗಾಗ ಟೇಸ್ಟ್‌ಅಟ್ಲಾಸ್ ಕಂಪನಿ ಮಾಹಿತಿಯನ್ನು ಹಂಚಿಕೊಳ್ಳುತ್ತಲೇ ಇರುತ್ತದೆ. ಇತ್ತೀಚೆಗೆ ಅದು ವಿಶ್ವದ 150 ಅತ್ಯಂತ ಪೌರಾಣಿಕ ರೆಸ್ಟೋರೆಂಟ್‌ಗಳು ಮತ್ತು ಅವುಗಳ ಸಾಂಪ್ರದಾಯಿಕ ಖಾದ್ಯಗಳ ಪಟ್ಟಿಯನ್ನು ಹಂಚಿಕೊಂಡಿದೆ. ಈ ಪಟ್ಟಿಯಲ್ಲಿ ಮಾವಳ್ಳಿ ಟಿಫಿನ್ ರೂಂನ ನಮ್ಮ MTR ರವೆಇಡ್ಲಿ 39ನೇ ಸ್ಥಾನ ಪಡೆದುಕೊಂಡಿದೆ.

ನೀವು ಜಗತ್ತಿನ ಯಾವುದೇ ಪ್ರದೇಶಕ್ಕೇ ಹೋಗಿ, ಬಹುತೇಕ ಸಿಕ್ಕೇ ಸಿಗುವ ಒಂದು ಭಾರತೀಯ ತಿಂಡಿ ಅಂದರೆ ಅದು ಇಡ್ಲಿ. ಅದರಲ್ಲೂ ರವೆ ಇಡ್ಲಿ ಅಂದ್ರೆ ಕೇಳೋದೇ ಬೇಡ. ಮಿದುವಾದ ಇಡ್ಲಿಯನ್ನು ತಿನ್ನುವ ಸುಖವೇ ಬೇರೆ. ದಕ್ಷಿಣ ಭಾರತೀಯರ ತಿಂಡಿ ಎಂದೇ ಪ್ರಸಿದ್ಧವಾದ ರವೆ ಇಡ್ಲಿ ಹುಟ್ಟಿದ್ದು ನಮ್ಮ ಕರ್ನಾಟಕದಲ್ಲೇ ಎಂದು ಹೇಳಲಾಗುತ್ತದೆ.
ರವೆ ಇಡ್ಲಿಯನ್ನು ಕಂಡುಹಿಡಿದದ್ದು ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ ಮಾವಳ್ಳಿ ಟಿಫಿನ್ ರೂಮ್ಸ್ ಅಥವಾ MTR. 2ನೇ ಮಹಾಯುದ್ಧದ ಸಮಯದಲ್ಲಿ ರವೆ ಇಡ್ಲಿ ಎಂಬ ತಿಂಡಿ ಹುಟ್ಟಿದ್ದು ಎಂಬುದು ಇನ್ನೊಂದು ಕುತೂಹಲದ ಸಂಗತಿ. 2ನೇ ಮಹಾಯುದ್ಧ ನಡೆಯುತ್ತಿರುವ ಸಮಯ ಅದು. ಇಡ್ಲಿ ಮಾಡಲು ಬಳಸುವ ಪ್ರಮುಖ ವಸ್ತುವಾದ ಅಕ್ಕಿಯ ಕೊರತೆ ಉಂಟಾಗಿತ್ತು. ಹೀಗಾಗಿ 1924ರಲ್ಲಿ ಬೆಂಗಳೂರಿನ MTR ನಲ್ಲಿ ರವೆ ಬಳಸಿ ಇಡ್ಲಿ ಮಾಡುವ ಪ್ರಯೋಗ ಮಾಡಲಾಯ್ತು.
ಇಡ್ಲಿ ಮಾಡೋಕೆ ಅಕ್ಕಿ ಸಿಗ್ತಿಲ್ಲ ನಿಜ. ಆದರೆ ವ್ಯಾಪಾರ ಡೌನ್ ಆಗಬಾರದು, ಏನನ್ನಾದರೂ ಹೊಸದನ್ನು ಮಾಡಲೇಬೇಕು ಎಂಬ ಪ್ರಾಮಾಣಿಕ ಹಂಬಲವೇ ಹೀಗೆ ರವೆ ಇಡ್ಲಿ ಹುಟ್ಟಲು ಕಾರಣವಾಯಿತು. ಸಮಸ್ಯೆಯೇ ಹೊಸ ಹುಟ್ಟಿಗೆ ಕಾರಣ ಎಂಬ ಮಾತಿದೆ. ಇಡ್ಲಿ ಮಾಡೋಕೆ ಅಕ್ಕಿ ಇಲ್ಲ ಎಂದು ಕೈಕಟ್ಟಿ ಕೂರದೇ ಹೊಸ ಪ್ರಯೋಗ ಮಾಡಿದ್ದು ರವೆ ಇಡ್ಲಿ ಜಗತ್ತನ್ನೇ ಆಳಲು ಕಾರಣವಾಯಿತು. ಈಗ ಈ ಎಂಟಿಆರ್ ಕಂಡು ಹಿಡಿದ ರವೆಇಂಡ್ಲಿ ವಿಶ್ವದ ಅತ್ಯಂತ ಜನಪ್ರತಿಯ ಖಾದ್ಯಗಳಲ್ಲಿ ಒಂದಾಗಿದೆ.
ಟೇಸ್ಟ್‌ಅಟ್ಲಾಸ್ ಕಂಪನಿ ದೇಶದ ಮೂಲೆ ಮೂಲೆಯಲ್ಲು ಸಾಗಿ ಸ್ಥಳೀಯ ನೆಚ್ಚಿನ ಖಾದ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹವನ್ನು ಮಾಡಿ ಪಟ್ಟಿಯನ್ನು ಬಹಿರಂಗಗೊಳಿಸಿದೆ. ಈ ಪಟ್ಟಿಯಲ್ಲಿ 1905ರಲ್ಲಿ ಸ್ಥಾಪನೆಯಾದ ವಿಯೆನ್ನಾ ಆಸ್ಟ್ರಿಯಾದ ಫಿಗ್ಲ್ಮುಲ್ಲರ್ ರೆಸ್ಟೊರೆಂಟ್‌ನ ಸ್ಕಿನಿಟ್ಜೆಲ್ ವೀನರ್ ಆರ್ಟ್ ಎಂಬ ಖಾದ್ಯ ಮೊದಲ ಸ್ಥಾನದಲ್ಲಿದೆ.
ಎರಡನೇ ಸ್ಥಾನದಲ್ಲಿ ಯುಎಸ್‌ಎ ನ್ಯೂಯಾರ್ಕ್ ನಗರದಲ್ಲಿ 1888ರಂದು ಸ್ಥಾಪನೆಗೊಂಡ ಕಾಟ್ಜ್‌ನ ಡೆಲಿಕಾಟೆಸೆನ್ ರೆಸ್ಟೋರೆಂಟ್‌ನ ರೈ ಆನ್ ಪಾಸ್ಟ್ರಾಮಿ ಎಂಬ ಖಾದ್ಯ ಪಡೆದುಕೊಂಡಿದೆ. ಇನ್ನೂ ಮೂರನೇ ಸ್ಥಾನದಲ್ಲಿ 1941ರಲ್ಲಿ ಸ್ಥಾಪಿತವಾದ ಇಂಡೋನೇಷ್ಯಾದ ಸನೂರ್‌ನಲ್ಲಿರುವ ವಾರುಂಗ್ ಮ್ಯಾಕ್ ಬೆಂಗ್ ರೆಸ್ಟೋರೆಂಟ್‌ನಲ್ಲಿ ಸಿಗುವ ಇಕಾನ್ ಗೊರೆಂಗ್ ಎಂಬ ಖಾದ್ಯವಿದೆ.
MTR ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಮಾವಲಿ ಟಿಫಿನ್ ರೂಮ್ ರೆಸ್ಟೋರೆಂಟ್‌ಗಳು ಭಾರತದ ಪಾಕಶಾಲೆಯ ಇತಿಹಾಸದಲ್ಲಿ ಗೌರವಾನ್ವಿತ ಸ್ಥಾನವನ್ನು ಹೊಂದಿದೆ. ಇದು 1924 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಇದು ಎರಡನೇ ವಿಶ್ವ ಸಮರದ ಸಮಯದಲ್ಲಿ ಪ್ರೀತಿಯ ರವಾ ಇಡ್ಲಿಯನ್ನು ಆವಿಷ್ಕರಿಸಲು ಖ್ಯಾತಿಯನ್ನು ಗಳಿಸಿತು.












Click it and Unblock the Notifications