• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟರ್ಮಿನಲ್ ಕಥೆ ನೆನಪಿಸಿದ ಐಜಿಐ ವಿಮಾನ ನಿಲ್ದಾಣದಲ್ಲಿದ್ದ ಜರ್ಮನ್

|

ನವದೆಹಲಿ, ಮೇ 12: ಕೊರೊನಾವೈರಸ್ ಸೋಂಕು ಹರಡದಂತೆ ಭಾರತದಲ್ಲಿ ವಿಧಿಸಿರುವ ಲಾಕ್ಡೌನ್ ಮೂರನೇ ಹಂತದಲ್ಲಿದೆ. ಈ ಅವಧಿಯಲ್ಲಿ ಭಾರತದಲ್ಲಿ ನೆಲೆಸಿದ್ದ ವಿದೇಶಿಯರಿಗೆ ತಮ್ಮ ದೇಶಕ್ಕೆ ತೆರಳಲು ಅವಕಾಶ ನೀಡಲಾಗಿತ್ತು. ಆದರೆ ಒಬ್ಬ ಜರ್ಮನ್ ಮಾತ್ರ ತನ್ನ ದೇಶಕ್ಕೆ ತೆರಳಲು ಮನಸ್ಸು ಮಾಡಲೇ ಇಲ್ಲ. ಟಾಮ್ ಹಾಂಕ್ಸ್ ನಟನೆಯ ಟರ್ಮಿನಲ್ ಚಿತ್ರದ ಮಾದರಿಯಲ್ಲಿ ವಿಮಾನ ನಿಲ್ದಾಣದಲ್ಲೇ ನೆಲೆಸಿದ್ದ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಸುಮಾರು 55 ದಿನಗಳಿಂದ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಸಂಚಾರ ಸ್ಥಗಿತವಾಗಿದೆ. ವಿಮಾನ ನಿಲ್ದಾಣದಲ್ಲಿ ಅನಿವಾರ್ಯವಾಗಿ ಜರ್ಮನ್ ಪ್ರಜೆ ಉಳಿದುಕೊಳ್ಳಬೇಕಾಯಿತು. ವಿಮಾನಯಾನ ಸಂಸ್ಥೆಗಳು ವಿಮಾನ ಏರಲು ಬಿಡಲಿಲ್ಲ, ಆತ ಹೋಗಬೇಕಾದ ಕಡೆಗೆ ವಿಮಾನ ಹಾರಲಿಲ್ಲ. ವಿಮಾನ ನಿಲ್ದಾಣದಲ್ಲೇ ನೆಲೆ ಕಂಡು ಕೊಂಡಿದ್ದ ಆತ ಕೊರೊನಾವೈರಸ್ ನೆಗಟಿವ್ ಆಗಿದ್ದರಿಂದ ನಿಲ್ದಾಣದ ಸಿಬ್ಬಂದಿ ಕೂಡಾ ಅಲ್ಲೇ ನೆಲೆಸಲು ಸಹಕರಿಸಿದ್ದರು. ಆದರೆ, ಮೇ 12ರಂದು ದೆಹಲಿಯ ಐಜಿಐ ನಿಲ್ದಾಣ ತೊರೆದು ಆಮ್ ಸ್ಟ್ರಾಡ್ಯಾಮ್ ಗೆ ಹಾರಬೇಕಾಯಿತು. ಮುಂಜಾನೆ ಕೆಎಲ್‌ಎಂ ವಿಮಾನದಲ್ಲಿಆಮ್ ಸ್ಟ್ರಾಡ್ಯಾಮ್ ಗೆ ಹೊರಟರು, ಬೋರ್ಡಿಂಗ್ ಮೊದಲು COVID-19 ಪರೀಕ್ಷೆ ನಡೆಸಿದ್ದು, ನೆಗೆಟಿವ್ ಎಂದು ಐಜಿಐ ಸಿಬ್ಬಂದಿ ಹೇಳಿದರು.

ಭಾರತೀಯರಿಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಪ್ರಧಾನಮಂತ್ರಿ!

ಜರ್ಮನಿಯವರಾದ ಎಡ್ಗಾರ್ಡ್ ಜೀಬತ್

ಜರ್ಮನಿಯವರಾದ ಎಡ್ಗಾರ್ಡ್ ಜೀಬತ್

ಜರ್ಮನಿ ಮೂಲದ ಎಡ್ಗಾರ್ಡ್ ಜೀಬತ್ ಅವರು ಮಾರ್ಚ್ 18ರಿಂದ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಸಾರಿಗೆ ಪ್ರದೇಶದಲ್ಲಿ ವಾಸಿಸುತ್ತಿದ್ದರು. ವಿಯೆಟ್ಜೆಟ್ ವಿಮಾನಯಾನ ಸಂಸ್ಥೆಯ ವಿಮಾನದಿಂದ ಟ್ರಾನ್ಸಿಟ್ ಪ್ರಯಾಣಿಕರಾಗಿ ಹನೊಯಿಯಿಂದ ಬಂದ ಎಡ್ಗಾರ್ಡ್ ಇನ್ನೇನು ಟರ್ಕಿಗೆ ತೆರಳುವ ವಿಮಾನ ಏರಬೇಕಾಗಿತ್ತು. ದೆಹಲಿಯಿಂದ ಇಸ್ತಾನ್ ಬುಲ್ ಗೆ ಕನೆಕ್ಟಿಂಗ್ ವಿಮಾನಕ್ಕಾಗಿ ಕಾಯುತ್ತಿದ್ದರು. ಆದರೆ, ನಡೆದಿದ್ದೇ ಬೇರೆ..

ಮಾರ್ಚ್ 18ರಂದು ವಿಮಾನಯಾನ ಸ್ಥಗಿತವಾಯ್ತು

ಮಾರ್ಚ್ 18ರಂದು ವಿಮಾನಯಾನ ಸ್ಥಗಿತವಾಯ್ತು

ಕೊರೊನಾವೈರಸ್ ಸೋಂಕು ಹರಡದಂತೆ ಭಾರತವು ಎಲ್ಲಾ ವಾಣಿಜ್ಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ ಇಸ್ತಾಂಬುಲ್‌ಗೆ ಯಾವುದೇ ವಿಮಾನಗಳು ಲಭ್ಯವಿಲ್ಲದ್ದಂತಾಯಿತು. ನಾಲ್ಕು ದಿನಗಳ ಬಳಿಕ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಯಿತು. ಹೀಗಾಗಿ ವಿಮಾನ ನಿಲ್ದಾಣದ ಟ್ರಾನ್ಸಿಟ್ ಪ್ರದೇಶದಿಂದ ಮುಂದಕ್ಕೆ ಹೋಗದಂಥ ಪರಿಸ್ಥಿತಿ ಎಡ್ಗಾರ್ಡ್ ಎದುರಿಸಬೇಕಾಯಿತು. ಭಾರತದ ವೀಸಾ ಇರದ ಕಾರಣ ವಿಮಾನ ನಿಲ್ದಾಣದಿಂದ ಹೊರಕ್ಕೆ ಹೋಗುವಂತೆಯೂ ಇರಲಿಲ್ಲ. ವಿಮಾನ ಹತ್ತಿ ಬೇಕಾದ ಊರಿಗೆ ಹಾರುವಂತೆಯೂ ಇರಲಿಲ್ಲ.

ವಿಮಾನಯಾನ ಪ್ರಯಾಣಿಕರ ಗಮನಕ್ಕೆ: ನಿಯಮಗಳಲ್ಲಿ ಭಾರೀ ಬದಲಾವಣೆ

ಇಲ್ಲಿಂದ ಶುರುವಾಯ್ತು ಟರ್ಮಿನಲ್ ಕಥೆ

ಇಲ್ಲಿಂದ ಶುರುವಾಯ್ತು ಟರ್ಮಿನಲ್ ಕಥೆ

ಟಾಮ್ ಹ್ಯಾಂಕ್ಸ್ ಮುಖ್ಯ ಭೂಮಿಕೆಯಲ್ಲಿರುವ ಟರ್ಮಿನಲ್ ಚಿತ್ರದ ಕಥೆಯಂತೆ ಎಡ್ಗಾರ್ಡ್ ಕೂಡಾ ತನ್ನ ಊರಿಗೆ ಹೋಗಲಾರದೆ ವಿಮಾನ ನಿಲ್ದಾಣದಿಂದಲೂ ಹೊರಗೆ ಕಾಲಿಡಲಾಗದಂಥ ಪರಿಸ್ಥಿತಿ ಎದುರಿಸಿದ್ದಾರೆ. ಟರ್ಮಿನಲ್ ನಲ್ಲೇ ಉಳಿದುಕೊಂಡಿದ್ದಾರೆ. 55 ದಿನಗಳ ಕಾಲ ಟರ್ಮಿನಲ್ ನಲ್ಲಿ ಇದ್ದ ದಿನಪತ್ರಿಕೆ, ಮ್ಯಾಗಜೀನ್ ಓದಿದ್ದಾರೆ. ಗೆಳೆಯರಿಗೆ ಫೋನ್ ಮಾಡಿದ್ದಾರೆ. ಸಿಬ್ಬಂದಿಗೆ ಆಹಾರ ಒದಗಿಸುವ ಮಳಿಗೆ ತೆರೆದಾಗ ಊಟ ಪಾರ್ಸಲ್ ಪಡೆದುಕೊಂಡಿದ್ದಾರೆ. ಟರ್ಮಿನಲ್, ಟ್ರಾನಿಸ್ಟ್ ನಲ್ಲಿ ಓಡಾಡಿಕೊಂಡು ಭದ್ರತಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಜೊತೆ ಮಾತನಾಡುತ್ತಾ ಕಾಲ ಕಳೆದಿದ್ದಾರೆ. ದಿನ ನಿತ್ಯದ ಅಗತ್ಯವಸ್ತು, ಸೊಳ್ಳೆ ಪರದೆ, ಟೂತ್ ಪೇಸ್ಟ್ ನೀಡಿ ವಿಮಾನ ನಿಲ್ದಾಣದ ಸಿಬ್ಬಂದಿ ಸಹಕರಿಸಿದ್ದಾರೆ.

ಜರ್ಮನಿಗೆ ತೆರಳಲು ಸಿಕ್ಕಿತ್ತು ಅವಕಾಶ

ಜರ್ಮನಿಗೆ ತೆರಳಲು ಸಿಕ್ಕಿತ್ತು ಅವಕಾಶ

ದೆಹಲಿಯ ವಿಮಾನ ನಿಲ್ದಾಣದ ಟ್ರಾನಿಸ್ಟ್ ನಲ್ಲಿ ಜರ್ಮನ್ ಮೂಲದ ವ್ಯಕ್ತಿಯೊಬ್ಬ ನೆಲೆಸಿರುವ ಬಗ್ಗೆ ದೆಹಲಿಯಲ್ಲಿರುವ ಜರ್ಮನಿ ರಾಯಭಾರ ಕಚೇರಿಗೆ ಮಾಹಿತಿ ಮುಟ್ಟಿದೆ. ಸೋಮವಾರ (ಮೇ 12)ರಂದು ಜರ್ಮನಿಗೆ ವಿಶೇಷ ವಿಮಾನದಲ್ಲಿ ತೆರಳಲು ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಆದರೆ, ಜರ್ಮನಿಗೆ ತೆರಳಲು ಎಡ್ಗಾರ್ಡ್ ನಿರಾಕರಿಸಿದ್ದಾರೆ. ಭಾರತದ ವೀಸಾಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ, ಜರ್ಮನಿಯಲ್ಲಿ ಎಡ್ಗಾರ್ಡ್ ಕ್ರಿಮಿನಲ್ ಕೇಸ್ ಹೊಂದಿರುವ ಕಾರಣ ಭಾರತದ ವೀಸಾ ತಕ್ಷಣಕ್ಕೆ ಸಿಗುವುದು ಕಷ್ಟವಾಗಿತ್ತು ಎಂದು ಹೆಸರಲು ಹೇಳಲು ಇಚ್ಛಿಸಿದ ಅಧಿಕಾರಿಯೊಬ್ಬರು ತಾಂತ್ರಿಕ ತೊಂದರೆ ಬಗ್ಗೆ ವಿವರಿಸಿದರು.

ವಂದೇ ಭಾರತ್ ಮಿಷನ್; ದೇಶಕ್ಕೆ ವಾಪಸ್ ಆದವರು ಎಷ್ಟು ಜನ?

ಟರ್ಕಿಗೆ ವಿಮಾನ ಹೊರಟರು ಏರಲು ಆಗಲಿಲ್ಲ

ಟರ್ಕಿಗೆ ವಿಮಾನ ಹೊರಟರು ಏರಲು ಆಗಲಿಲ್ಲ

ಹಲವು ದೇಶಗಳ ಪಾಸ್ ಪೋರ್ಟ್, ವೀಸಾ ಹೊಂದಿದ್ದ 40 ವರ್ಷ ವಯಸ್ಸಿನ ಎಡ್ಗಾರ್ಡ್ ಸದ್ಯ ಇಸ್ತಾನ್ ಬುಲ್ ಹೋಗಲು ಬಯಸಿದ್ದರು. ಇತ್ತೀಚೆಗೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ಟರ್ಕಿಗೆ ಏರ್ ಇಂಡಿಯಾದ ವಿಶೇಷ ವಿಮಾನ ಹೊರಟ್ಟಿತ್ತು. ಆದರೆ, ಟರ್ಕಿಯ ಅಧಿಕಾರಿಗಳು ಎಡ್ಗಾರ್ಡ್ ಗೆ ವಿಮಾನ ಏರಲು ಅನುಮತಿ ನೀಡಲಿಲ್ಲ. ಈ ವಿಮಾನ ಟರ್ಕಿಯ ನಾಗರಿಕರಿಗೆ ಮಾತ್ರ, ಪ್ರವಾಸಿಗರಿಗೆ ಅಲ್ಲ ಎಂದು ಹೇಳಿದರು. ಕೊನೆಗೆ ಮತ್ತೊಮ್ಮೆ ಅದೇ ಟರ್ಮಿನಲ್ ನಲ್ಲಿ ಎಡ್ಗಾರ್ಡ್ ಉಳಿದುಕೊಳ್ಳಬೇಕಾಯಿತು.

Leave India Notice ಪಡೆದ ಎಡ್ಗಾರ್ಡ್

Leave India Notice ಪಡೆದ ಎಡ್ಗಾರ್ಡ್

ಅಸಹಾಯಕ ಎಡ್ಗಾರ್ಡ್ ಗೆ ಕಾನೂನಿನ ಪ್ರಕಾರ ಭಾರತವನ್ನು ತೊರೆಯುವಂತೆ ನೋಟಿಸ್ ನೀಡಲಾಯಿತು. ಸಾಮಾನ್ಯವಾಗಿ ಟ್ರಾನ್ಸಿಟ್ ನಲ್ಲಿ ಸಂಪರ್ಕ ವಿಮಾನ ವಿಳಂಬವಾದರೆ ಉಳಿದುಕೊಳ್ಳಲು ಒಂದು ದಿನದ ಮಟ್ಟಿನ ಅವಕಾಶವಿರುತ್ತದೆ. ಆದರೆ, ಎಡ್ಗಾರ್ಡ್ 55 ದಿನಗಳ ಕಾಲ ಉಳಿದುಕೊಳ್ಳಬೇಕಾಗಿತ್ತು. ಮಾರ್ಚ್ 18ರಂದು ವಿಯೆಟ್ನಾನಿಂದ ವಿಜೇಟ್ ವಿಮಾನದಿಂದ ದೆಹಲಿಗೆ ಬಂದಿದ್ದ ಎಡ್ಗಾರ್ಡ್ ಕೊನೆಗೂ ಮೇ 12ರಂದು ಕೆಎಲ್ ಎಂ ವಿಮಾನದ ಮೂಲಕ Amsterdam ಗೆ ತೆರಳಿದರು ಎಂದು ದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿ ಖಚಿತಪಡಿಸಿದ್ದಾರೆ.

ದಿ ಟರ್ಮಿನಲ್ ಚಿತ್ರದ ಕಥೆಯೇನು?

ದಿ ಟರ್ಮಿನಲ್ ಚಿತ್ರದ ಕಥೆಯೇನು?

ಆಸ್ಕರ್ ವಿಜೇತ ನಟ ಟಾಮ್ ಹ್ಯಾಂಕ್ಸ್ ನಟನೆಯ, ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್ ಬರ್ಗ್ ನಿರ್ದೇಶನದ ದಿ ಟರ್ಮಿನಲ್ ಚಿತ್ರದಲ್ಲಿ ವಿಕ್ಟರ್ ನರ್ವೋಸ್ಕಿ ಪಾತ್ರದಲ್ಲಿ ಟಾಮ್ ಅಭಿನಯಿಸಿದ್ದಾರೆ. ಕ್ರಕೋಜಿಯಾ ಎಂಬ ದೇಶದಿಂದ ನ್ಯೂಯಾರ್ಕಿನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣಕ್ಕೆ ವಿಕ್ಟರ್ ಬರುತ್ತಾನೆ. ಕ್ರಕೋಜಿಯಾ ದಲ್ಲಿ ಪ್ರತಿಕೂಲ ಪರಿಸ್ಥಿತಿ ಉಂಟಾಗುತ್ತದೆ. ಕ್ರಕೋಜಿಯಾವನ್ನು ಸ್ವತಂತ್ರ ದೇಶವೆಂದು ಅಮೆರಿಕಾ ಪರಿಗಣಿಸಿರುವುದಿಲ್ಲ. ವಿಮಾನ ನಿಲ್ದಾಣದಿಂದ ಹೊರಕ್ಕೆ ಹೋಗಲು ವೀಸಾ ಸಿಕ್ಕಿರುವುದಿಲ್ಲ. ಹೀಗೆ 9 ತಿಂಗಳುಗಳ ಕಾಲ ಟರ್ಮಿನಲ್ ನಲ್ಲಿ ವಿಕ್ಟರ್ ಕಾಲ ಕಳೆಯುತ್ತಾನೆ. ಸಿಬ್ಬಂದಿಗಳ ಮನಗೆದ್ದು, ವಿಮಾನನಿಲ್ದಾಣದಿಂದ ಹೊರಕ್ಕೆ ಕಾಲಿಟ್ಟು ಬರುತ್ತಾನೆ. ಸಿಟಿಯೊಳಗೆ ಹೋಗಲು ಕಾರಣವೂ ಇರುತ್ತದೆ. ವಿಕ್ಟರ್ ನ ತಂದೆ ಜಾಝ್ ಸಂಗೀತ ಆರಾಧಕರಾಗಿರುತ್ತಾರೆ. ಹಂಗೇರಿಯ ಪತ್ರಿಕೆಯ ಬಂದ ಚಿತ್ರವೊಂದರಲ್ಲಿದ್ದ 57 ಸಂಗೀತಗಾರರ ಆಟೋಗ್ರಾಫ್ ಪಡೆಯುವ ಇಚ್ಛೆ ಹೊಂದಿರುತ್ತಾರೆ. ಆದರೆ, ಆಸೆ ಪೂರೈಸುವ ಮುನ್ನವೇ ಕೊನೆಯುಸಿರೆಳೆಯುತ್ತಾರೆ. ತಂದೆಯ ಕೊನೆಯಾಸೆ ಈಡೇರಿಸಲು ವಿಕ್ಟರ್ ನ್ಯೂಯಾರ್ಕಿಗೆ ಬಂದಿರುತ್ತಾನೆ. ಬೆನ್ನಿ ಗೊಲ್ಸನ್ ಎಂಬ ಸ್ಯಾಕ್ಸೋಫೋನ್ ವಾದಕನ ಆಟೋಗ್ರಾಫ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಚಿತ್ರದಲ್ಲಿ: ನಟ ಟಾಮ್ ಹ್ಯಾಂಕ್ಸ್

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

English summary
A 40-year-old German who has been living in the transit area of the Delhi’s Indira Gandhi International (IGI) airport for the last 55 days turned down an offer go to his home country, and was recently served a “Leave India Notice” by authorities, according to officials familiar with the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X