Get Updates
Get notified of breaking news, exclusive insights, and must-see stories!

ಸಿನಿಮಾ ಸ್ಟೋರಿಗಿಂತ ಕಡಿಮೆಯಿಲ್ಲ ಭವಿಷ್ಯದ ಅಂಬಾರಿ ಆನೆ ಭೀಮನ ಕಥೆ

ಅಭಿಮನ್ಯು ನಂತರ ಅಂಬಾರಿ ಆನೆ ಯಾವುದು ಎಂಬ ಪ್ರಶ್ನೆಗೆ ಅರಣ್ಯ ಇಲಾಖೆ ಈಗಿನಿಂದಲೇ ಉತ್ತರ ಹುಡುಕಲು ಶುರು ಮಾಡಿದೆ. ಸದ್ಯ ಎರಡನೇ ಬಾರಿಗೆ ದಸರಾದಲ್ಲಿ ಭಾಗವಹಿಸಿರುವ ಭೀಮ ಆನೆ ಭವಿಷ್ಯದ ಅಂಬಾರಿ ಆನೆ ಆಗುವ ಎಲ್ಲಾ ಲಕ್ಷಣಗಳು ಇದೆ ಎನ್ನಲಾಗುತ್ತಿದೆ.

ಆನೆಗಳಿಗೆ 60 ವರ್ಷ ಆದ ಬಳಿಕ ಹೆಚ್ಚು ಭಾರ ಹೊರಿಸುವಂತಿಲ್ಲ ಎಂಬ ಸುಪ್ರೀಂಕೋರ್ಟ್ ನಿಯಮವಿದೆ. ಹಾಗಾಗಿ 60 ವರ್ಷದ ತುಂಬಿದ ಅರ್ಜುನನಿಗೆ ಕೊಕ್‌ ಕೊಟ್ಟು ಅಭಿಮನ್ಯು ವಿಗೆ ಪಟ್ಟ ಕಟ್ಟಲಾಯಿತು. ಸದ್ಯ ಅಭಿಮನ್ಯು ವಿಗೆ 57 ವರ್ಷ. ಹಾಗಾಗಿ ಅಭಿಮನ್ಯುವಿಗೆ ಪರ್ಯಾಯ ಯಾರು ಎಂಬ ಪ್ರಶ್ನೆ ಎದ್ದಿದೆ.‌ ಸದ್ಯ ಮಟ್ಟಸವಾದ ಹೆಗಲು, ಎತ್ತರ, ತೂಕ ಇರುವ ಭೀಮ ಭವಿಷ್ಯದ ಅಂಬಾರಿ ಆನೆ ಎಂದೇ ಹೇಳಲಾಗುತ್ತಿದೆ.

ನಾಗರಹೊಳೆ ಅಭಯಾರಣ್ಯದ ಮತ್ತಿಗೆ ಗೂಡು ವಲಯದ ಭೀಮನಕಟ್ಟೆ ಎಂಬಲ್ಲಿ 2002ರಲ್ಲಿ ತಾಯಿಯಿಂದ ಬೇರ್ಪಟ್ಟು ಎರಡು ವರುಷದ ಗಂಡಾನೆ ಮರಿ ಕಂಗೆಟ್ಟು ರೋದಿಸುತ್ತಿತ್ತು. ಮರಿಯನ್ನು ಅದರ ತಾಯಿ ಆನೆ ಕರೆದೊಯ್ಯಬಹುದೆಂದು ಅರಣ್ಯ ಸಿಬ್ಬಂದಿ ನಿರೀಕ್ಷಿಸಿದ್ದರು. ಆದರೆ, 2 ದಿನವಾದರೂ ತಾಯಿ ಆನೆ ಮರಿಯನ್ನು ಕರೆದೊಯ್ಯದ ಕಾರಣ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಗಂಡಾನೆ ಮರಿಯನ್ನು ಮತ್ತಿಗೆ ಗೂಡು ಕ್ಯಾಂಪ್‌ಗೆ ಕರೆತಂದು ಬಾಟಲಿಯಲ್ಲಿ ಹಾಲುಣಿಸಿ ಪೋಷಿಸಿ ಭೀಮ ಎಂದು ಹೆಸರಿಟ್ಟು ಸಾಕಲಾಯಿತು.

 ಪುಂಡಾನೆ ಪಳಗಿಸುವುದರಲ್ಲಿ ಎತ್ತಿದ ಕೈ ಈ ಭೀಮ

ಪುಂಡಾನೆ ಪಳಗಿಸುವುದರಲ್ಲಿ ಎತ್ತಿದ ಕೈ ಈ ಭೀಮ

22 ವರ್ಷದ ಭೀಮ ಹಲವು ಖೆಡ್ಡಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡಿದೆ. ಕಾಡಿನಿಂದ ನಾಡಿಗೆ ಬಂದು ಪುಂಡಾಟ ಮೆರೆಯುತ್ತಿದ್ದ ಕಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಅಭಿಮನ್ಯು, ಪ್ರಶಾಂತ, ಹರ್ಷ ಆನೆಯೊಂದಿಗೆ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದ ಭೀಮ ಅರಣ್ಯಇಲಾಖೆಗೆ ಆಸ್ತಿಯಂತಾಗಿದ್ದಾನೆ. ಮುಂದಿನ 10 ರಿಂದ 15 ವರ್ಷಗಳ ಅವಧಿಯಲ್ಲಿ ಅಂಬಾರಿ ಹೊರುವ ಆನೆಯನ್ನು ಸಜ್ಜುಗೊಳಿಸುವ ಮುಂದಾಲೋಚೆಯಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗ ಯುವ ಭೀಮನಿಗೆ ತರಬೇತಿ ನೀಡಲು ಸಮ್ಮತಿಸಿದ್ದಾರೆ.

 ಅಂಬಾರಿ ಹೊರಲು ಬೇಕಿರುವ ಲಕ್ಷಣ

ಅಂಬಾರಿ ಹೊರಲು ಬೇಕಿರುವ ಲಕ್ಷಣ

ಮೊದಲ ತಂಡದಲ್ಲಿ ದಸರಾಗೆ ಆಗಮಿಸಿರುವ ಆನೆಗಳ ತಂಡದಲ್ಲಿ ಅತ್ಯಂತ ಕಿರಿಯ ಪ್ರಾಯದ ಆನೆ ಭೀಮ, ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ 22ರ ಹರೆಯದ ಭೀಮ ಜಂಬೂಸವಾರಿಯಲ್ಲಿ ಎರಡನೇ ಬಾರಿಗೆ ಹೆಜ್ಜೆ ಹಾಕಲಿದ್ದಾನೆ. ಭೀಮ ಈ ಹಿಂದೆ 2017ರ ದಸರಾದಲ್ಲಿ ಭಾಗಿಯಾಗಿದ್ದ.

ಭೀಮ ಚಿನ್ನದ ಅಂಬಾರಿ ಹೊರಲು ಬೇಕಿರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾನೆ. ಸದ್ಯ 2.87 ಮೀ. ಎತ್ತರ, 3.05 ಮೀ. ಉದ್ದ ಮತ್ತು 3500 ಕೆ.ಜಿ. ತೂಕವಿರುವ ಈ ಆನೆಯ ದಂತ, ದೇಹ ರಚನೆ, ಸಮತಟ್ಟಾಗಿರುವ ಬೆನ್ನು ಅಂಬಾರಿ ಇಡಲು ಸೂಕ್ತವಾಗಿದೆ. ಆದ್ದರಿಂದ ಭವಿಷ್ಯದಲ್ಲಿ ಗಜಪಡೆಯ ಕ್ಯಾಪ್ಟನ್ ಆಗಲಿದ್ದಾನೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

 ಸಿನಿಮಾ ಕಥೆಗೇನು ಕಡಿಮೆಯಿಲ್ಲ ಭೀಮನ ಸ್ಟೋರಿ

ಸಿನಿಮಾ ಕಥೆಗೇನು ಕಡಿಮೆಯಿಲ್ಲ ಭೀಮನ ಸ್ಟೋರಿ

ಹಾಗೆ ನೋಡಿದರೆ ಭೀಮ ಕಥೆ ಯಾವ ಸಿನಿಮಾಗೂ ಕಡಿಮೆ‌ ಇಲ್ಲ. 2001ರಲ್ಲಿ ಭೀಮ ನಾಗರಹೊಳೆ ಮತ್ತಿಗೋಡು ವಲಯದವಾದ ಭೀಮನಕಟ್ಟೆಯಲ್ಲಿ ಅರಣ್ಯ ಇಲಾಖೆಗೆ ಸಿಗುತ್ತಾನೆ. ಆಗ ಅವನಿಗೆ ಕೇವಲ 6 ತಿಂಗಳು. ತಾಯಿಯನ್ನು ಕಳೆದುಕೊಂಡ ಭೀಮ ವಾರಗಟ್ಟಲೆ ಅಲೆದು ಕೊನೆಗೆ ಗ್ರಾಮ ಜನರ ಕಣ್ಣಿಗೆ ಬೀಳುತ್ತಾನೆ. ಕಾಡಿಗೆ ಮೇಯಲು ಹೋಗಿದ್ದ ದನಗಳ ಜತೆ ಅದು ಭೀಮನಕಟ್ಟೆ ಬಳಿ ಇರುವ ಅಳ್ಳೂರು ಗ್ರಾಮವನ್ನು ಪ್ರವೇಶಿಸಿತು. ಇದರಿಂದ ಸಂಭ್ರಮಗೊಂಡ ಗ್ರಾಮಸ್ಥರು ಆ ಆನೆ ಮರಿಗೆ ಪೂಜೆ ಮಾಡಿ, ಊರಿನಲ್ಲಿ ಮೆರವಣಿಗೆ ಮಾಡಿದರು. ನಂತರ ಮತ್ತಿಗೋಡು ಅರಣ್ಯ ಇಲಾಖೆ ಕಚೇರಿಗೆ ಕರೆದೊಯ್ದು ಒಪ್ಪಿಸಿದರು.

 ಭೀಮನನ್ನು ಸಾಕಿದ್ದು ಕುಳ್ಳರಾಮ ದಂಪತಿ

ಭೀಮನನ್ನು ಸಾಕಿದ್ದು ಕುಳ್ಳರಾಮ ದಂಪತಿ

ಆನೆಗಳ ಲಾಲನೆ, ಪಾಲನೆ ಮತ್ತು ಪಳಗಿಸುವಿಕೆಯಲ್ಲಿ ನೈಪುಣ್ಯತೆ ಹೊಂದಿರುವ ಮಾವುತ ಕುಳ್ಳರಾಮ ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮರಿ ಆನೆಯ ಜವಾಬ್ದಾರಿ ವಹಿಸಿದರು. ನಂತರ ಕುಳ್ಳರಾಮ ಈ ಮರಿ ಆನೆಗೆ ಭೀಮ ಎಂದು ನಾಮಕಾರಣ ಮಾಡಿ, ತನ್ನ ಮಗನಂತೆಯೇ ಸಾಕಿದರು. ಅದೇ ಸಮಯದಲ್ಲಿ ಸುಮಾರು 6 ಮರಿ ಆನೆಗಳು ಕಾಡಿನಲ್ಲಿ ಸಿಕ್ಕಿದ್ದವು. ಆದರೆ, ತಾಯಿಹಾಲು ಸಿಗದ ಕಾರಣ ಅವುಗಳೆಲ್ಲಾ ಸತ್ತುಹೋದವು. ಆದರೆ ಆ ಪೈಕಿ ಉಳಿದವನು ಭೀಮ ಒಬ್ಬನೆ. ಈತನನ್ನು ಕುಳ್ಳರಾಮ ಮತ್ತು ಅವರ ಪತ್ನಿ ತುಂಬಾ ಚನ್ನಾಗಿ ಸಾಕಿದರು. ಅದಕ್ಕೆ ಏನಾದರೂ ನೋವಾದರೆ ಸಾಕು ಸಂಕಟಪಡುತ್ತಿದ್ದರು ಎನ್ನುತ್ತಾರೆ ಅದರ ಮಾವುತ ಗುಂಡ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+