• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ.19ರಂದು ಶತಮಾನದ ಸುದೀರ್ಘ ಚಂದ್ರಗ್ರಹಣ: ತಿಳಿಯಬೇಕಾದ ಸಂಗತಿ

|
Google Oneindia Kannada News

2021ರ ನವೆಂಬರ್ 19 ರಂದು ಶತಮಾನದ ಸುದೀರ್ಘ ಚಂದ್ರಗ್ರಹಣ ಸಂಭವಿಸಲಿದೆ. ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಎಂಬ ಖ್ಯಾತಿಯೂ ನವೆಂಬರ್ 19 ಘಟಿಸಲಿರುವ ಖಗೋಳ ವಿಸ್ಮಯಕ್ಕೆ ಇದೆ.

ಒಂದಿಷ್ಟು ಪದ್ಧತಿ, ಒಂದಿಷ್ಟು ಆಚರಣೆ, ಒಂದಿಷ್ಟು ಸಂಶೋಧನೆ ಎಲ್ಲದಕ್ಕೂ ಗ್ರಹಣ ಕಾರಣವಾಗಲಿದೆ. ಬೆಳಗ್ಗೆ 4 ಗಂಟೆಯ ವೇಳೆಗೆ ದಟ್ಟವಾಗಿ ಗೋಚರಿಸಲಿದೆ. ಭೂಮಿಯು ಸೂರ್ಯ ಹಾಗೂ ಚಂದ್ರನ ನಡುವೆ ಚಲಿಸಲಿದೆ.

ಈ ಚಂದ್ರಗ್ರಹಣ ವಿಶ್ವಾದ್ಯಂತ ಗೋಚರಿಸುವುದಿಲ್ಲ, ಅಮೆರಿಕದ 50 ರಾಜ್ಯಗಳು, ಕೆನಡಾ, ಮೆಕ್ಸಿಕೋ ಜನರು ಈ ಚಂದ್ರಗ್ರಹಣ ವೀಕ್ಷಿಸಬಹುದಾಗಿದೆ.

ನೀವು ಟೆಲಿಸ್ಕೋಪ್ ಅಥವಾ ಬೈನಾಕ್ಯುಲರ್ಸ್ ಬಳಸುವ ಅಗತ್ಯವಿಲ್ಲ, ಬೆಳಗಿನ ಜಾವ 2.19 ಹಾಗೂ 5.47ಕ್ಕೆ ಹೊರಗಡೆ ಬಂದು ಆಕಾಶ ನೋಡಿದರೆ ಸಾಕು ಚಂದ್ರಗ್ರಹಣ ಗೋಚರಿಸುತ್ತದೆ.

Lunar Eclipse 2021 : ಮೇ 26ರಂದು ಒಂದೇ ದಿನ ಚಂದ್ರಗ್ರಹಣ, ಬ್ಲಡ್ ಮೂನ್, ಸೂಪರ್ ಮೂನ್, ಎಲ್ಲೆಲ್ಲಿ ಗೋಚರ?Lunar Eclipse 2021 : ಮೇ 26ರಂದು ಒಂದೇ ದಿನ ಚಂದ್ರಗ್ರಹಣ, ಬ್ಲಡ್ ಮೂನ್, ಸೂಪರ್ ಮೂನ್, ಎಲ್ಲೆಲ್ಲಿ ಗೋಚರ?

ಹುಣ್ಣಿಮೆಯ ದಿನದಂದು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ವಸ್ತುಗಳನ್ನು ಜೋಡಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇಡೀ ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಮತ್ತು ಚಂದ್ರನ ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತದೆ.

ತಕ್ಷಣಕ್ಕೆ ಯಾವುದೇ ರೀತಿಯಲ್ಲೂ ಭೂಮಿಗೆ ಕ್ಷದ್ರಗ್ರಹಗಳಿಂದ ಯಾವುದೇ ಅಪಾಯವಿಲ್ಲ. ಆದರೆ, ಒಂದೊಮ್ಮೆ ಮುಂದೊಂದು ದಿನ ಅಂಥ ಪರಿಸ್ಥಿತಿ ಎದುರಾದರೆ, ಅದನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಯೋಚಿಸಿರುವ ನಾಸಾ ಅದಕ್ಕಾಗಿ ಹೊಸ ಸಾಹಸಕ್ಕೆ ಮುಂದಾಗಿದೆ.

ಭೂಮಿಯು ತಕ್ಷಣದ ಅಪಾಯದಲ್ಲಿಲ್ಲದಿದ್ದರೂ, "ಗ್ರಹಗಳ ರಕ್ಷಣೆ" ಪರೀಕ್ಷೆಯಾಗಿ ಮುಂದಿನ ವರ್ಷ ಕ್ಷುದ್ರಗ್ರಹ ದೊಂದಿಗೆ ಗಂಟೆಗೆ 15,000 ಮೈಲುಗಳಷ್ಟು (ಗಂಟೆಗೆ 24,000 ಕಿಲೋಮೀಟರ್) ಹಾರುವ ಅಂತರಿಕ್ಷ ನೌಕೆಯನ್ನು ಕ್ರ್ಯಾಶ್ ಮಾಡಲು NASA ಉದ್ದೇಶಿಸಿದೆ.

ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆಯ ಉದ್ದೇಶವು ಭವಿಷ್ಯದಲ್ಲಿ ಭೂಮಿಗೆ ಬೆದರಿಕೆಯೊಡ್ಡುವ ಕ್ಷುದ್ರಗ್ರಹದ ಮಾರ್ಗವನ್ನು ತಿರುಗಿಸುವ ಪರಿಣಾಮಕಾರಿ ವಿಧಾನವಾಗಿದೆಯೇ ಎಂದು ನೋಡುವುದಾಗಿದೆ. ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ 330 ಮಿಲಿಯನ್ ಡಾಲರ್ ವೆಚ್ಚದ DART ಯೋಜನೆಯ ಬಗ್ಗೆ ನಾಸಾ ವಿವರಗಳನ್ನು ಬಹಿರಂಗಪಡಿಸಿದೆ.

ನಾಸಾದ ಪ್ಲಾನೆಟರಿ ಡಿಫೆನ್ಸ್ ಆಫೀಸರ್ ಲಿಂಡ್ಲಿ ಜಾನ್ಸನ್ ಅವರ ಪ್ರಕಾರ, ಗ್ರಹಗಳ ರಕ್ಷಣೆಯ ಪ್ರಮುಖ ಅಂಶವೆಂದರೆ ಪ್ರಭಾವದ ಅಪಾಯವನ್ನು ಉಂಟುಮಾಡುವ ಮೊದಲು ಅವುಗಳನ್ನು ಪತ್ತೆ ಹಚ್ಚುವುದಾಗಿದೆ. ಕ್ಷುದ್ರಗ್ರಹವು ಭೂಮಿಯ ಕಡೆಗೆ ಬಂದು ಅಪ್ಪಳಿಸುವ ಸ್ಥಿತಿಯಲ್ಲಿ ನಾವು ಇರಲು ಬಯಸುವುದಿಲ್ಲ. ಅಂಥ ಪರಿಸ್ಥಿತಿ ಎದುರಾದರೆ ಅದನ್ನು ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಮತ್ತು ನಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಜಾನ್ಸನ್ ಹೇಳಿದರು.

ಜಾನ್ಸನ್ ಅವರ ಪ್ರಕಾರ, ಭೂಮಿಯ ಸಮೀಪ 27,000 ಕ್ಷುದ್ರಗ್ರಹಗಳು ಇರುವುದನ್ನು ದಾಖಲಿಸಲಾಗಿದೆ. ಆದಾಗ್ಯೂ ಯಾವುದೇ ಕ್ಷುದ್ರ ಗ್ರಹದಿಂದ ಪ್ರಸ್ತುತ ಭೂಮಿಗೆ ಬೆದರಿಕೆ ಇಲ್ಲ.

 179 ಚಂದ್ರಗ್ರಹಣ

179 ಚಂದ್ರಗ್ರಹಣ

ಒಂದೊಮ್ಮೆ ಚಂದ್ರಗ್ರಹಣ ಮಿಸ್‌ ಮಾಡಿಕೊಂಡರೆ ಬೇಸರ ಬೇಡ, ಮುಂದಿನ 2 ದಶಕಗಳಲ್ಲಿ ಒಟ್ಟು 179 ಚಂದ್ರಗ್ರಹಣ ಸಂಭವಿಸಲಿದೆ. ಅಂದರೆ ವರ್ಷಕ್ಕೆ 2 ಚಂದ್ರಗ್ರಹಣಗಳನ್ನು ನೋಡಬಹುದು. ಮುಂದಿನ ಚಂದ್ರಗ್ರಹಣ 2022ರ ಮೇ 16 ರಂದು ಸಂಭವಿಸಲಿದೆ.

 ಸುದೀರ್ಘ ಚಂದ್ರಗ್ರಹಣ

ಸುದೀರ್ಘ ಚಂದ್ರಗ್ರಹಣ

ನವೆಂಬರ್ 19 ರಂದು, ಸಂಭವಿಸುವ ಈ ಚಂದ್ರಗ್ರಹಣ 21ನೇ ಶತಮಾನದ ಸುದೀರ್ಘ ಚಂದ್ರಗ್ರಹಣ. 2001 ರಿಂದ 2100 ರ ಅವಧಿಯಲ್ಲಿ ಇಂಥ ಗ್ರಹಣ ಸಂಭವಿಸಿಲ್ಲ. ಮುಂದೆ ಸಂಭವಿಸುವುದೂ ಇಲ್ಲ. 3 ಗಂಟೆ 28 ನಿಮಿಷ 23 ಸೆಕೆಂಡ್ ನಷ್ಟು ಸುದೀರ್ಘ ಕಾಲ ಖಗ್ರಾಸ ಗ್ರಹಣ ಇರಲಿದೆ. ನೀವು ಟೆಲಿಸ್ಕೋಪ್ ಅಥವಾ ಬೈನಾಕ್ಯುಲರ್ಸ್ ಬಳಸುವ ಅಗತ್ಯವಿಲ್ಲ, ಬೆಳಗಿನ ಜಾವ 2.19 ಹಾಗೂ 5.47ಕ್ಕೆ ಹೊರಗಡೆ ಬಂದು ಆಕಾಶ ನೋಡಿದರೆ ಸಾಕು ಚಂದ್ರಗ್ರಹಣ ಗೋಚರಿಸುತ್ತದೆ.

 ಬರಿಗಣ್ಣಿನಲ್ಲಿ ಚಂದ್ರಗ್ರಹಣ ವೀಕ್ಷಿಸಬಹುದು

ಬರಿಗಣ್ಣಿನಲ್ಲಿ ಚಂದ್ರಗ್ರಹಣ ವೀಕ್ಷಿಸಬಹುದು

ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಣೆ ಮಾಡಬಹುದು. ಮಳೆ ಮೋಡ ಅಂದು ಅಡ್ಡಿ ಮಾಡದಿದ್ದರೆ ಖಗೋಳ ವಿಸ್ಮಯವನ್ನು ಸವಿಯಬಹುದು. ಸುದೀರ್ಘ ಚಂದ್ರಗ್ರಹಣದೊಟ್ಟಿಗೆ ಖಗೋಳದಲ್ಲಿ ಇನ್ನೊಂದು ವಿಸ್ಮಯ ಸಂಭವಿಸಲಿದೆ. ಈ ದಿನ ಮಂಗಳ ಗ್ರಹ ಭೂಮಿಗೆ ಅತೀ ಹತ್ತಿರ ಬರಲಿದ್ದು, ಸೂರ್ಯ ಮತ್ತು ಮಂಗಳ ಗ್ರಹ ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳಲಿವೆ. ದಶಕದ ನಂತರ ಭೂಮಿಗೆ ಅತೀ ಹತ್ತಿರದಲ್ಲಿ ಮಂಗಳ ಗ್ರಹ ಕಾಣಿಸುವುದರಿಂದ ಆಕಾಶದಲ್ಲಿ ಇದು ಅತ್ಯಂತ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ.

 ಗ್ರಹಣ ಆಸ್ವಾದನೆಗೆ ಟಿಪ್ಸ್..

ಗ್ರಹಣ ಆಸ್ವಾದನೆಗೆ ಟಿಪ್ಸ್..

* ದಾರಿ ದೀಪಗಳು ದೂರವಿರುವ ಜಾಗದಲ್ಲಿ ನಿಂತು ಗ್ರಹಣ ನೋಡಿ
* ಸಾಧ್ಯವಾದರೆ ದೂರದರ್ಶಕ ಬಳಸಿ
* ಗ್ರಹಣದ ಬಗ್ಗೆ ವೈಜ್ಞಾನಿಕ ಮಾಹಿತಿ ಕಲೆಹಾಕಿಕೊಳ್ಳಿ
* ಮೊಬೈಲ್‌ಲ್ಲಿ ಸೆರೆಹಿಡಿಯುವ ವ್ಯರ್ಥ ಪ್ರಯತ್ನ ಮಾಡುತ್ತ ನೈಜ ಸೌಂದರ್ಯ ಮಿಸ್ ಮಾಡಿಕೊಳ್ಳಬೇಡಿ

English summary
During the early hours of November 19, Earth will pass between the sun and moon, casting a shadow over the latter. The eclipse will peak just after 4 a.m. ET, when our planet will hide 97% of the full moon from the sun's light, giving the moon a reddish hue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X