Signal Loss: ನೆಟ್‌ವರ್ಕ್ ಕಿರಿಕಿರಿಯಿಂದ ಬಿಗ್ ರಿಲೀಫ್: ಟಿಲಿಕಾಂ ಇಲಾಖೆಯ ಹೊಸ ಸೇವೆ
ಬೆಂಗಳೂರು, ಜನವರಿ 20: ದೇಶದಲ್ಲಿ ಸದ್ಯ ಜಿಯೋ, ಬಿಎಸ್‌ಎನ್‌ಎಲ್, ವಡಾಫೋನ್ ಸೇರಿ ಪ್ರಮುಖ ಖಾಸಗಿ ಟೆಲಿಕಾಂ ಕಂಪನಿಗಳ ಬಳಕೆದಾರರು ಹೆಚ್ಚಿದ್ದಾರೆ. ನಿಮ್ಮ ಮೊಬೈಲ್‌ಗೆ ನೆಟ್‌ವರ್ಕ್ ಸಿಗದಿದ್ದರೆ, ನಿರಂತರ ಸಿಗ್ನಲ್ ಲಾಸ್ ಅನುಭವಿಸಿದರೂ ಸಹ ನೀವು ಕರೆ ಮಾಡಬಹುದು. ಅಂತದ್ದೊಂದು ಸೇವೆಗೆ ಚಾಲನೆ ನೀಡುವ ಮೂಲಕ ದೂರಸಂಪರ್ಕ ಇಲಾಖೆಯು ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ.
ರಿಲಯನ್ಸ್ ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎಲ್ ಬಳಕೆದಾರರು ಇತರರಿಗೆ ಕರೆ ಮಾಡುವಾಗ ಸಿಗ್ನಲ್ ಇಲ್ಲದೇ ಒದ್ದಾಡುವ, ತುರ್ತು ಸಂದರ್ಭದಲ್ಲಿ ಎದುರಾಗುವ ಕಿರಿಕರಿ ತಪ್ಪಿಸಲು ಹೊಸ ಸೇವೆ ಆರಂಭವಾಗಿದೆ. ದೂರಸಂಪರ್ಕ ಇಲಾಖೆಯು ದೇಶದಲ್ಲಿ ಇಂಟ್ರಾ ಸರ್ಕಲ್ ರೋಮಿಂಗ್ (ICR) ಸೌಲಭ್ಯ ಕಲ್ಪಿಸಿದೆ. ಇದನ್ನು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಲೋಕಾರ್ಪಣೆ ಮಾಡಿದ್ದಾರೆ.

ಈ ಹೊಸ ಸೇವೆ ದೂರಸಂಪರ್ಕ ಸೇವಾ ಪೂರೈಕೆದಾರರು (TSP) ಸರ್ಕಾರಿ ಅನುದಾನಿತ ಮೊಬೈಲ್ ಟವರ್‌ಗಳಲ್ಲಿ ಮೂಲಸೌಕರ್ಯ ಶೇರಿಂಗ್‌ಗೆ ಸಹಾಯ ಮಾಡುತ್ತದೆ. ಅಂದರೆ ನೀವು BSNL, VI ಅಥವಾ Jio ಬಳಕೆದಾರರು ಆಗಿದ್ದರು ತಮ್ಮದೇ ಆದ ಸೆಲ್ಯುಲಾರ್ ಟವರ್‌ಗಳ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ ಕೂಡ ಕರೆ ಮಾಡಲು ಇದು ಅನುಕೂಲ ಒದಗಿಸುತ್ತದೆ. ನಿಮ್ಮ ಸಿಮ್‌ಗಳಿಗೆ ನೆಟ್‌ವರ್ಕ್ ಸಿಗದಿದ್ದಾಗ. ಒಂದೇ DBN ಅನುದಾನಿತ ಟವರ್ ಮೂಲಕ 4 ಜಿ ಸೇವೆ ಪ್ರವೇಶಕ್ಕೆ ಈ ಐಸಿಆರ್ ಹೊಸ ಸೇವೆ ಅನುಮತಿಸುತ್ತದೆ.
ಡಿಜಿಟಲ್ ಭಾರತ್ ನಿಧಿಯಾಗಿರುವ DBN, ಇದು ದೂರಸಂಪರ್ಕ ಸೇವೆಗಳ ಗುಣಮಟ್ಟ ಮತ್ತು ಪ್ರವೇಶ ಸುಧಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಕೇಂದ್ರ ಸರ್ಕಾರ ಎರಡು ವರ್ಷಗಳ ಹಿಂದೆ ದೂರಸಂಪರ್ಕ ಕಾಯ್ದೆಯ ಭಾಗವಾಗಿ ರಚಿಸಿದೆ.
ICR ಸೌಲಭ್ಯದಿಂದ ನಮ್ಮ ಮೂರು TSP ಗಳಾದ ಬಿಎಸ್‌ಎನ್‌ಎಲ್, ಏರ್‌ಟೆಲ್ ಮತ್ತು ಜಿಯೋ DBN ಅನುದಾನಿತ ಟವರ್‌ಗಳ ನೆಟ್‌ವರ್ಕ್ ಮೂಲ ಸೌಕರ್ಯ ಬಳಸಿಕೊಳ್ಳಲು ಅನುವು ಮಾಡುತ್ತದೆ. ಹೀಗಾಗಿ ನೀವು ಯಾವುದೇ ನೆಟ್‌ವರ್ಕ್ ಬಳಕೆದಾರರು ಆದರೂ, ಸಿಗ್ನಲ್ ಸಿಗದಿದ್ದರೂ ಕರೆ ಮಾಡಬಹುದಾಗಿದೆ ಎಂದು ಕೇಂದ್ರ ಸಚಿವರು ಹೊಸ ಸೇವೆ ಬಗ್ಗೆ ವಿವರಿಸಿದರು.
ಇಂತಹ ಸೇವೆ ನೀಡುವು ಒಟ್ಟು 27 ಸಾವಿರಕ್ಕೂ ಅಧಿಕ ಸೈಟ್‌ಗಳಿವೆ. ಇದರೊಂದಿಗೆ ಸಂಪರ್ಕ ಸಾಧಿಸಲು ಬಳಕೆದಾರರಿಎ ಸಾತಂತ್ರ್ಯ ಸಹ ನೀಡಲಾಗಿದೆ. ICR ಇದು ಇಂಟರ್‌ನೆಟ್ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ. DBN ಟವರ್ ಪ್ರಯೋಜನ ದೊರೆಯುವಂತೆ ಮಾಡುತ್ತದೆ. ಗ್ರಾಮೀಣ, ಹಳ್ಳಿ ಭಾಗಗಳಲ್ಲಿ ಈ ಸೇವೆಯು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ದೂರಸಂಪರ್ಕ ಇಲಾಖೆಯು ಮಾಹಿತಿ ನೀಡಿದೆ..












Click it and Unblock the Notifications