• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್‌ಸ್ಟಾದಲ್ಲಿ ಪರಿಚಯವಾದ ಜೋಡಿಯ ಮದುವೆಯ ಆರತಕ್ಷತೆ ಮೆಟಾವರ್ಸ್‌ನಲ್ಲಿ!

|
Google Oneindia Kannada News

ಚೆನ್ನೈ, ಜನವರಿ 17: ತಮಿಳುನಾಡಿನ ದಂಪತಿಗಳು ತಮ್ಮ ಮದುವೆಯ ಆರತಕ್ಷತೆಯನ್ನು ಮೆಟಾವರ್ಸ್‌ನಲ್ಲಿ ಆಯೋಜಿಸಲು ಸಿದ್ಧರಾಗಿದ್ದಾರೆ. ದಿನೇಶ್ ಎಸ್ ಪಿ ಮತ್ತು ಜನಗನಂದಿನಿ ರಾಮಸ್ವಾಮಿ ಫೆಬ್ರವರಿ ಮೊದಲ ಭಾನುವಾರ ತಮಿಳುನಾಡಿನ ಶಿವಲಿಂಗಪುರಂ ಗ್ರಾಮದಲ್ಲಿ ವಿವಾಹವಾಗಲಿದ್ದಾರೆ. ಆದರೆ ತಮ್ಮ ಆರತಕ್ಷತೆಯನ್ನು ವಿನೂತನವಾಗಿ ನಡೆಸಲು ಮುಂದಾಗಿರುವ ಈ ಜೋಡಿಯು ಡಿಜಿಟಲ್‌ ತಂತ್ರಜ್ಞಾನಕ್ಕೆ ತಲೆಬಾಗಿದ್ದಾರೆ.

ವಿವಾಹ ಸಮಾರಂಭದ ನಂತರ, ದಂಪತಿಗಳು ತಮ್ಮ ಹಾಗ್ವಾರ್ಟ್ಸ್ ಥೀಮ್‌ನಲ್ಲಿ ವರ್ಚುವಲ್ ಆಗಿ ಮದುವೆಯ ಆರತಕ್ಷತೆಯನ್ನು ನಡೆಸಲು ಮುಂದಾಗಿದ್ದಾರೆ. ಅದಕ್ಕಾಗಿ ಲ್ಯಾಪ್‌ಟಾಪ್‌ಗಳ ತಂತ್ರಜ್ಞಾನಕ್ಕೆ ಇಳಿಯಲಿದ್ದಾರೆ. ಈ ಮೆಟಾವರ್ಸ್‌ನ ವರ್ಚುವಲ್‌ ಸಭೆಯಲ್ಲಿ ಪ್ರಪಂಚದಾದ್ಯಂತದ ಇರುವ ಈ ಜೋಡಿಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

   Virat Kohli ಕ್ಯಾಪ್ಟೆನ್ಸಿ ನಿರ್ಗಮನದ ಹಿಂದೆಯೇ ಟೀಮ್ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ICC | Oneindia Kannada

   ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಐಐಟಿ ಮದ್ರಾಸ್‌ನೊಂದಿಗೆ ಪ್ರಾಜೆಕ್ಟ್ ಅಸೋಸಿಯೇಟ್ ಆಗಿರುವ ಮದುಮಗ ದಿನೇಶ್ ಎಸ್ ಪಿ, "ನಾನು ಮೆಟಾವರ್ಸ್ ಮೂಲಕ ಮದುವೆಯ ಆರತಕ್ಷತೆಯನ್ನು ನಡೆಸುವ ಆಲೋಚನೆಯನ್ನು ಮಾಡಿದ್ದೇನೆ. ನನ್ನ ಮದುವೆ ಆಗುವ ಹುಡುಗಿ ಕೂಡಾ ಈ ಹೊಸ ಆಲೋಚನೆಯನ್ನು ಇಷ್ಟಪಟ್ಟಿದ್ದಾರೆ," ಎಂದು ತಿಳಿಸಿದ್ದಾರೆ.

   "ನಾನು ಕ್ರಿಪ್ಟೋ ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ತೊಡಗಿಸಿಕೊಂಡಿದ್ದೇನೆ. ಕಳೆದ ಒಂದು ವರ್ಷದಿಂದ ಕ್ರಿಪ್ಟೋಕರೆನ್ಸಿಯ ಒಂದು ರೂಪವಾದ ಎಥೆರಿಯಮ್ ಅನ್ನು ಗಣಿಗಾರಿಕೆ ಮಾಡುತ್ತಿದ್ದೇನೆ. ಬ್ಲಾಕ್‌ಚೈನ್ ಮೆಟಾವರ್ಸ್‌ನ ಮೂಲ ತಂತ್ರಜ್ಞಾನವಾಗಿರುವುದರಿಂದ, ನನ್ನ ಮದುವೆಯನ್ನು ನಿಗದಿಪಡಿಸಿದಾಗ, ಮೆಟಾವರ್ಸ್‌ನಲ್ಲಿ ಆರತಕ್ಷತೆ ನಡೆಸಲು ನಾನು ಯೋಚಿಸಿದೆ," ಎಂದು ಹೇಳಿದ್ದಾರೆ.

   2022ರಲ್ಲಿ 22,000 ಫ್ರೆಶರ್‌ಗಳ ನೇಮಕಕ್ಕೆ ಮುಂದಾದ HCL ಟೆಕ್ನಾಲಜೀಸ್2022ರಲ್ಲಿ 22,000 ಫ್ರೆಶರ್‌ಗಳ ನೇಮಕಕ್ಕೆ ಮುಂದಾದ HCL ಟೆಕ್ನಾಲಜೀಸ್

   ಏನಿದು ಮೆಟಾವರ್ಸ್?

   ಮೆಟಾವರ್ಸ್ ಎನ್ನುವುದು ವರ್ಚುವಲ್ ರಿಯಾಲಿಟಿ ಪ್ರಪಂಚವಾಗಿದ್ದು, ಬಳಕೆದಾರರು ಡಿಜಿಟಲ್ ಅವತಾರಗಳ ಮೂಲಕ ಇತರರೊಂದಿಗೆ 'ಬದುಕಬಹುದು' ಮತ್ತು ಮಾತುಕತೆ ನಡೆಸಬಹುದಾಗಿದೆ. ಇದು ರಿಯಾಲಿಟಿ, ಬ್ಲಾಕ್‌ಚೈನ್ ಮತ್ತು ವರ್ಚುವಲ್ ರಿಯಾಲಿಟಿ ಮುಂತಾದ ತಂತ್ರಜ್ಞಾನಗಳನ್ನು ಹೊಂದಿದೆ.

   ಮೆಟಾವರ್ಸ್‌ನಲ್ಲಿ ಮದುವೆಯ ಆರತಕ್ಷತೆ ಹೇಗಿರಲಿದೆ?

   ಮೆಟಾವರ್ಸ್‌ನಲ್ಲಿ ಮದುವೆಯ ಆರತಕ್ಷತೆ ಹೇಗಿರಲಿದೆ ಎಂಬ ಬಗ್ಗೆ ಟ್ವಿಟ್ವಟ್‌ನಲ್ಲಿ ಮದುಮಗ ದಿನೇಶ್ ಎಸ್ ಪಿ ಮಾಹಿತಿ ನೀಡಿದ್ದಾರೆ. ಅದಕ್ಕಾಗಿ ಒಂದು ಸಣ್ಣ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದಿನೇಶ್ ಮತ್ತು ಜನಗನಂದಿನಿ ಇಬ್ಬರೂ ಹ್ಯಾರಿ ಪಾಟರ್‌ ಫ್ಯಾನ್‌ಗಳು ಆದ್ದರಿಂದಾಗಿ ಮದುವೆಯ ಆರತಕ್ಷತೆ ಹ್ಯಾರಿ ಪಾಟರ್ ಸಿನಿಮಾ ಮಾದರಿಯಲ್ಲಿ ನಡೆಯಲಿದೆ. ವಧು ಮತ್ತು ವರರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುತ್ತಾರೆ. ಆದರೆ ಅತಿಥಿಗಳಿಗೆ ಲಾಗಿನ್ ವಿವರಗಳನ್ನು ನೀಡಲಾಗುತ್ತದೆ. ಅವರು ತಮ್ಮ ಅವತಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ಗಂಟೆಯ ಸ್ವಾಗತ ಸಮಯದಲ್ಲಿ, ಅವರು ಅತಿಥಿಗಳೊಂದಿಗೆ ಮಾತುಕತೆ ನಡೆಸುತ್ತಾರೆ. ಹಾಗೆಯೇ ಉಡುಗೊರೆಗಳನ್ನು ಕೂಡಾ ನೀಡಬಹುದಾಗಿದೆ. . ಉಡುಗೊರೆ ವೋಚರ್‌ಗಳು ಅಥವಾ Google Pay ಮೂಲಕ ನೀಡಲಾಗುತ್ತದೆ. ಹಾಗೆಯೇ ಕ್ರಿಪ್ಟೋಗಳನ್ನು ಉಡುಗೊರೆಯಾಗಿ ಸ್ವೀಕರಿಸಲಾಗುತ್ತದೆ.

   ಯುಐಡಿಎಐ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸಯುಐಡಿಎಐ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ

   ಇದನ್ನು "ಭಾರತದ ಮೊದಲ ಮೆಟಾವರ್ಸ್ ಮದುವೆ" ಎಂದು ಪ್ರಚಾರ ಮಾಡಿದ್ದಾರೆ. "ನಾನು ತುಂಬಾ ಹೆಮ್ಮೆಪಡುತ್ತೇನೆ ಮತ್ತು ಆಶೀರ್ವದಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ಲಕ್ಷಾಂತರ ಜನರು ಈ ಜಗತ್ತಿನಲ್ಲಿ ಅನೇಕ ಉತ್ತಮ ಅವಕಾಶಗಳನ್ನು ನೋಡುವ ಮೊದಲು ನಾನು ನೋಡಿದ್ದೇನೆ ಮತ್ತು ಪ್ರಯೋಜನವನ್ನು ಪಡೆದುಕೊಂಡಿದ್ದೇನೆ. ಯಾವುದೋ ಒಂದು ದೊಡ್ಡ ಆರಂಭ! ಬಹುಭುಜಾಕೃತಿ ಬ್ಲಾಕ್‌ಚೈನ್‌ನಲ್ಲಿ ಭಾರತದ ಮೊದಲ #ಮೆಟಾವರ್ಸ್ ಮದುವೆಯು TardiVerse Metaverse ಸ್ಟಾರ್ಟ್‌ಆಪ್‌ನ ಸಹಯೋಗದೊಂದಿಗೆ ನಡೆಸಲಾಗುತ್ತಿದೆ," ಎಂದು ತಿಳಿಸಿದ್ದಾರೆ. ಇನ್ನು ವಧು ಜನಗನಂದಿನಿ, ಈ ಹೊಸ ವಿಚಾರದಿಂದಾಗಿ ಥ್ರಿಲ್‌ ಆಗಿದ್ದೇನೆ ಎಂದಿದ್ದಾರೆ. "ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಮೊದಲು ಪರಿಚಯವಾದೆವು. ಈಗ ಮೆಟಾದಲ್ಲಿ ನಮ್ಮ ಮದುವೆಯ ಆರತಕ್ಷತೆಯನ್ನು ನಡೆಸಲಿದ್ದೇವೆ," ಎಂದಿದ್ದಾರೆ. ಮೆಟಾವರ್ಸ್ ಸ್ವಾಗತದ ಕಲ್ಪನೆಯನ್ನು ರಿಯಾಲಿಟಿ ಆಗಿ ಪರಿವರ್ತಿಸಲು, ದಿನೇಶ್ ಅವರು ಟಾರ್ಡಿವರ್ಸ್‌ನ ವಿಘ್ನೇಶ್ ಸೆಲ್ವರಾಜ್ ಅವರನ್ನು ಸಂಪರ್ಕಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

   English summary
   Tamil Nadu couple who met on Instagram to Host Wedding Reception In Metaverse.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X