ಕಂಡವರ ಜಮೀನಿಗೆ ನುಗ್ಗಿದ್ದ ಕುರಿ ಬಂಧಿಸಿದ ಪೊಲೀಸರು: ವಿಡಿಯೋ ವೈರಲ್
ಕುರಿಯೊಂದು ಹಿಂಡನ್ನು ತಪ್ಪಿಸಿಕೊಂಡು ದೂರ ಹೋಗಿ ಬೇರೊಬ್ಬರ ಜಮೀನಿನಲ್ಲಿ ಅಲೆದಾಡುತ್ತಿದ್ದ ವೇಳೆ ಅದನ್ನು ಬಂಧಿಸಿ ಪೊಲೀಸರು ತಮ್ಮ ವಾಹನದಲ್ಲೇ ಕರೆದೊಯ್ಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ನಡೆದಿರುವುದು ಅಮೆರಿಕದ ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಬೇರೆಯವರ ಜಮೀನಿನಲ್ಲಿ ಕುರಿ ಓಡಾಡುತ್ತಿರುವ ಬಗ್ಗೆ ಓಲ್ಡ್ ಟೌನ್ ಪೊಲೀಸರಿಗೆ ಕರೆ ಬಂದಿದೆ. ತಕ್ಷಣ ಅಲ್ಲಿಗೆ ಧಾವಿಸಿರುವ ಓಲ್ಡ್ ಟೌನ್ ಪೊಲೀಸರು ಕುರಿಯನ್ನು ಬಂಧಿಸಿ ತಮ್ಮ ವಾಹನಕ್ಕೆ ಹತ್ತಿಸಿಕೊಂಡಿದ್ದಾರೆ.
"ಕುರಿಗಳು ಕ್ರೂಸರ್ ನಲ್ಲಿ ಸವಾರಿ ಮಾಡಲು ಹೋಗುತ್ತವೆ" ಎಂದು ಓಲ್ಡ್ ಟೌನ್ ಪೊಲೀಸ್ ಇಲಾಖೆಯು ಫೇಸ್‌ಬುಕ್‌ನಲ್ಲಿ ಕುರಿಯ ವಿಡಿಯೋವನ್ನು ಹಂಚಿಕೊಂಡಿದೆ.

ಬೆಳಗ್ಗೆ ಪೊಲೀಸರು ಬೇರೆಯವರ ಪ್ರದೇಶದಲ್ಲಿ ಕುರಿ ಅಲೆದಾಡುವ ಬಗ್ಗೆ ಕರೆಯನ್ನು ಸ್ವೀಕರಿಸಿದ್ದೇವೆ. ಸಾರ್ಜೆಂಟ್ ಬೈಲಿ ಮತ್ತು ಡೆಪ್ಯೂಟಿ ಚೀಫ್ ಮಿಲ್ಲರ್ ಕುರಿಯನ್ನು ಅದರ ಮಾಲೀಕರಿಗೆ ಒಪ್ಪಿಸಲು ಪೊಲೀಸ್ ಕ್ರೂಸರ್‌ನ ಹಿಂದಿನ ಸೀಟಿನಲ್ಲಿ ಹತ್ತಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಮಿಲ್ಲರ್ ಕೂಡ ಜಮೀನಿನಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೃಷಿ ಪ್ರಾಣಿಗಳನ್ನು ನಿರ್ವಹಿಸುವಲ್ಲಿ ವ್ಯಾಪಕ ಅನುಭವವ ಹೊಂದಿರುವುದು ನೆರವಿಗೆ ಬಂದಿದೆ. ಕುರಿಯನ್ನು ಕ್ರೂಸರ್ ನಲ್ಲಿ ಹತ್ತಿಸಿಕೊಂಡು ಅಕ್ಕ ಪಕ್ಕದಲ್ಲಿ ಸ್ವಲ್ಪ ದೂರ ಅಡ್ಡಾಡಿದ ನಂತರ, ಅವರು ಕುರಿಯ ಮಾಲೀಕನನ್ನು ಪತ್ತೆ ಹಚ್ಚಿ ಅದನ್ನು ವಾಪಸ್ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸ್ ಕ್ರೂಸರ್‌ನಲ್ಲಿ ಕುಳಿತಿರುವ ಕುರಿಯನ್ನು ತೋರಿಸಿದೆ, ಅದು ಕೂಗಲು ಪ್ರಾರಂಭಿಸುವ ಮೊದಲು ಕಿಟಕಿಯ ಮೂಲಕ ತನ್ನ ತಲೆಯನ್ನು ಇಣುಕಿ ನೋಡಿದಾಗ, ಪೊಲೀಸ್ ಅಧಿಕಾರಿಗಳು ನಗುವುದನ್ನು ಕೇಳಬಹುದು.
ಪೊಲೀಸ್ ಇಲಾಖೆ ಫೇಸ್‌ಬುಕ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ ನಂತರ, ಪೊಲೀಸರ ಹೃದಯವಂತಿಕೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋಗೆ ಸಾಕಷ್ಟು ಲೈಕ್ ಮತ್ತು ಕಮೆಂಟ್‌ಗಳು ಬಂದಿವೆ.












Click it and Unblock the Notifications