• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗಮಗಿಸುವ ಮೈಸೂರು ಅರಮನೆಯ ನೋಟದ ಸುತ್ತ...

|

ಮೈಸೂರು, ಸೆಪ್ಟೆಂಬರ್ 11: ಮೈಸೂರು ಎಂದಾಕ್ಷಣ ಕಣ್ಣಮುಂದೆ ಬರುವುದೇ ಜಗಮಗಿಸುವ ಅಂಬಾವಿಲಾಸ ಅರಮನೆ. ಅದರಲ್ಲಿಯೂ ದಸರಾ ವೇಳೆ ಸ್ವರ್ಗವೇ ಧರೆಗಿಳಿದು ಬಂದಿದೆಯೇನೋ ಎಂಬಂತೆ ಭಾಸವಾಗುತ್ತದೆ. ಈ ಸೌಂದರ್ಯಕ್ಕೆ ಅರಮನೆಯನ್ನು ಅಲಂಕರಿಸಿರುವ ವಿದ್ಯುತ್ ದೀಪಗಳೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ನೋಡ ಬನ್ನಿ ಪಾರಂಪರಿಕ ನಗರಿಯ ಝಗಮಗಿಸುವ ದೀಪಾಲಂಕಾರದ ಸೊಬಗು

ಮೈಸೂರು ದಸರಾ ಬರುತ್ತಿದ್ದಂತೆಯೇ ರಸ್ತೆ, ವೃತ್ತ, ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಿ ಬೆಳಗುವ ಅರಮನೆಗೆ ಇನ್ನಷ್ಟು ಮೆರಗು ತರುವ ಕೆಲಸ ನಡೆಯುತ್ತದೆ. ನವರಾತ್ರಿ ದಿನಗಳ ರಾತ್ರಿಗಳಲ್ಲಿ ಮೈಸೂರು ನಗರದಲ್ಲಿ ವಿದ್ಯುದ್ದೀಪದ ಬೆಳಕಿನಲ್ಲಿ ಅಡ್ಡಾಡುವುದೇ ಸಡಗರ, ಸಂಭ್ರಮ. ಅಷ್ಟೇ ಅಲ್ಲ ಅದೊಂದು ಮರೆಯಲಾರದ ಕ್ಷಣವೂ ಹೌದು.

 ಅರಮನೆ ಮತ್ತು ಕಾಂಪೌಂಡ್ ಗೆ ಒಂದು ಲಕ್ಷ ಬಲ್ಬ್

ಅರಮನೆ ಮತ್ತು ಕಾಂಪೌಂಡ್ ಗೆ ಒಂದು ಲಕ್ಷ ಬಲ್ಬ್

ಅರಮನೆಯ ಸೊಬಗನ್ನು ಬಣ್ಣಿಸುವುದೇ ಅಸಾಧ್ಯ. ಹೀಗಿರುವಾಗ ಅದಕ್ಕೆ ವಿದ್ಯುದ್ದೀಪಗಳ ಅಲಂಕಾರ ಇನ್ನಷ್ಟು ರಂಗನ್ನೇರಿಸುತ್ತದೆ. ಈಗಾಗಲೇ ಅರಮನೆಯಲ್ಲಿ ಕೆಟ್ಟಿರುವ 15000 ಬಲ್ಬ್‌ಗಳನ್ನು ಅರಮನೆ ಮಂಡಳಿ ಬದಲಿಸಿದೆ.

ಇತ್ತೀಚೆಗೆ ಮಳೆ ಸುರಿಯುತ್ತಿರುವ ಕಾರಣ ಬಲ್ಬ್‌ಗಳು ಹಾಳಾಗುತ್ತಿವೆ. ಹೀಗಾಗಿ ಅವುಗಳನ್ನು ಹುಡುಕಿ ಬದಲಾಯಿಸಲಾಗಿದೆ. ಅರಮನೆ ಹಾಗೂ ಕಾಂಪೌಂಡ್ ಗೆ 1 ಲಕ್ಷ ಬಲ್ಬ್ ಅಳವಡಿಸಿದ್ದು, ಪ್ರತೀ ವರ್ಷವೂ ಕೆಟ್ಟ ಬಲ್ಬ್‌ಗಳನ್ನು ಬದಲಿಸಲಾಗುತ್ತದೆ. ಪ್ರತಿ ಬಾರಿಯೂ ಅರಮನೆಗೆ ಅಳವಡಿಸಿರುವ ಬಲ್ಬ್‌ಗಳಲ್ಲಿ ಶೇ.10ರಷ್ಟು ಬಲ್ಬ್‌ಗಳು ಕೆಡುತ್ತಿರುತ್ತವೆ. ಹೀಗಾಗಿ ಅವುಗಳನ್ನು ಕ್ರೇನ್ ಹಾಗೂ ಡ್ರೋಣ್ ಸಹಾಯದಿಂದ ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಅರಮನೆಗೆ ಬಲ್ಬ್ ಅಳವಡಿಸುವುದೇ ದೊಡ್ಡ ಸಾಹಸ. ಅದರಲ್ಲೂ ಜಯ ಮಾರ್ತಾಂಡ ಗೇಟ್ ಸೇರಿದಂತೆ 80 ಅಡಿ ಎತ್ತರದಲ್ಲಿರುವ ಅರಮನೆ ಗೋಪುರಗಳಿಗೆ ಬಲ್ಬ್‌ಗಳನ್ನು ಅಳವಡಿಸುವಾಗ ಎಚ್ಚರಿಕೆ ಬೇಕಾಗುತ್ತದೆ.

 2 ಗಂಟೆಗಳ ಕಾಲ ಮಿನುಗುವ ಅರಮನೆ

2 ಗಂಟೆಗಳ ಕಾಲ ಮಿನುಗುವ ಅರಮನೆ

ಇನ್ನೇನು ಕೆಲವೇ ದಿನಗಳಲ್ಲಿ ಮೈಸೂರಿನತ್ತ ಜನ ಬರಲು ಆರಂಭಿಸುತ್ತಾರೆ. ಜೊತೆ ಜೊತೆಗೆ ದಸರಾ ಕಳೆಯೂ ಬರುತ್ತದೆ. ಈ ಸಮಯದಲ್ಲಿ ಹೆಚ್ಚಿನವರು ಅರಮನೆಯತ್ತ ಹೆಜ್ಜೆ ಹಾಕುತ್ತಾರೆ. ಅಲ್ಲದೆ ವಿದ್ಯುದ್ದೀಪದಲ್ಲಿ ಕಂಗೊಳಿಸುವ ಅರಮನೆಯ ಸೊಬಗನ್ನು ಸವಿಯಲು ಹಾತೊರೆಯುತ್ತಾರೆ. ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ರಾತ್ರಿ 7 ಗಂಟೆಯಿಂದ 8ರವರೆಗೆ ವಿದ್ಯುತ್ ದೀಪಾಲಂಕಾರವಿರಲಿದ್ದು, ಅರಮನೆ ಇಂದ್ರಲೋಕದಂತೆ ಭಾಸವಾಗುತ್ತದೆ. ದಸರಾ ಸಂದರ್ಭದಲ್ಲಿ ರಾತ್ರಿ 7ರಿಂದ 9 ಗಂಟೆವರೆಗೆ 2 ಗಂಟೆಗಳ ಕಾಲ ವಿದ್ಯುದ್ದೀಪದ ಬೆಳಕಿನಲ್ಲಿ ಅರಮನೆ ಮಿನುಗುತ್ತದೆ.

ದಸರಾಕ್ಕೆ ಕ್ಷಣಗಣನೆ: ಮಧುವಣಗಿತ್ತಿಯಂತೆ ಸಿಂಗಾರಗೊಂಡ ಸಾಂಸ್ಕೃತಿಕ ನಗರಿ

 15 ವ್ಯಾಟ್ ಬಲ್ಬ್ ಗಳ ಅಳವಡಿಕೆ

15 ವ್ಯಾಟ್ ಬಲ್ಬ್ ಗಳ ಅಳವಡಿಕೆ

ಅರಮನೆ ದೀಪಾಲಂಕಾರದ ಬಗೆಗಿನ ಇತಿಹಾಸವನ್ನು ನೋಡಿದರೆ 1942ರ ಆಸುಪಾಸಿನಲ್ಲಿ ಯದುವಂಶದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್ ಅರಮನೆಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿದರು ಎಂದು ಹೇಳಲಾಗಿದೆ. ತೇಗದ ಮರದ ಪಟ್ಟಿಗಳ ಮೇಲೆ ವೋಲ್ಡರ್ ‌ಗಳನ್ನು ಜೋಡಿಸಿ ಸುಮಾರು ಒಂದು ಲಕ್ಷ ಕ್ಯಾಂಡಿಸೆಂಟ್ ಬಲ್ಬ್ ಗಳನ್ನು ಅಳವಡಿಸಿದ್ದರು. ಆರಂಭದಲ್ಲಿ 30 ವ್ಯಾಟ್ ‌ನ ಬಲ್ಬ್‌ಗಳನ್ನು ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ 20 ವ್ಯಾಟ್ ‌ಗೆ ಇಳಿಸಲಾಯಿತು. ಪ್ರಸ್ತುತ 15 ವ್ಯಾಟ್ ‌ನ ಬಲ್ಬ್ ಗಳನ್ನು ಅಳವಡಿಸಲಾಗಿದೆ.

 ಪ್ರತಿ ತಿಂಗಳಿಗೆ 8-10 ಲಕ್ಷ ರೂ. ವಿದ್ಯುತ್ ಬಿಲ್

ಪ್ರತಿ ತಿಂಗಳಿಗೆ 8-10 ಲಕ್ಷ ರೂ. ವಿದ್ಯುತ್ ಬಿಲ್

ವಿದ್ಯುತ್ ಪೂರೈಕೆ ಜವಾಬ್ದಾರಿಯನ್ನು ಚೆಸ್ಕಾಂ ವಹಿಸಿಕೊಂಡಿದ್ದು, ದೀಪಾಲಂಕಾರದ ವ್ಯವಸ್ಥೆಗಾಗಿ ಹೆಚ್ಚು ಸಾಮರ್ಥ್ಯದ ಮೂರು ಟ್ರಾನ್ಸ್ ಫಾಮರ್ ಗಳನ್ನು ಅಳವಡಿಸಲಾಗಿದೆ. ಪ್ರತಿ ತಿಂಗಳು 8-10 ಲಕ್ಷ ರೂ. ವಿದ್ಯುತ್ ಬಿಲ್ ಬರುತ್ತದೆ. ತಿಂಗಳಿಗೆ ಸರಾಸರಿ 88 ಸಾವಿರ ಯೂನಿಟ್ ವಿದ್ಯುತ್ ಬಳಸಲಾಗುತ್ತದೆ. ದಸರಾ ಸಂದರ್ಭದಲ್ಲಿ 1.2 ಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ ಎನ್ನಲಾಗಿದೆ.

ಇನ್ನು ಈ ದೀಪಾಲಂಕಾರಗಳನ್ನು ನೋಡಿಕೊಳ್ಳಲೆಂದೇ ಅರಮನೆಯ ಪವರ್ ಹೌಸ್‌ನಲ್ಲಿ ಪ್ರತ್ಯೇಕ ಸಿಬ್ಬಂದಿಯಿದ್ದಾರೆ. ವಿದ್ಯುದ್ದೀಪಗಳನ್ನು ಉರಿಸಲು ಅರಮನೆ ಹಾಗೂ ಗೇಟ್‌ಗಳಿಗೆ ಪ್ರತ್ಯೇಕ ಮೂರು ಸ್ವಿಚ್ ಅಳವಡಿಸಲಾಗಿದ್ದು, ದೀಪಾಲಂಕಾರದ ವೇಳಾಪಟ್ಟಿಯಂತೆ ಇಲ್ಲಿರುವ ಮೂವರು ಸಿಬ್ಬಂದಿ ಸ್ವಿಚ್ ಆನ್ ಮಾಡುತ್ತಾರೆ. ಆಗ ಒಮ್ಮೆಲೆ ಅರಮನೆ ದೀಪದ ಬೆಳಕಿನಲ್ಲಿ ಮಿನುಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ.

ದಸರೆ ದೀಪಾಲಂಕಾರಕ್ಕೆ ಹೊಸ ಮೆರುಗು: ಝಗಮಗಿಸಲಿವೆ 23 ವೃತ್ತಗಳು

English summary
As Mysore Dasara is coming in, the road, the circle, the buildings are decorated with electric lights and there is much work to be done to brighten the palace. It is most memorable to walk around the streets of mysuru in this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X