• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಕಲಿ ಝಗಮಗಿಸುವ ಮೈಸೂರು ಅರಮನೆಯ ಚೆಂದದ ಚಿತ್ರಗಳು

|

ಕೊರೊನಾ ಸೋಂಕು ಮೈಸೂರಿನಲ್ಲಿ ಹೆಚ್ಚುತ್ತಲೇ ಇದೆ. ಆದರೂ ವಾರಾಂತ್ಯದಲ್ಲಿ ನಗರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಈ ಬಾರಿ ದಸರಾ ಸಂಭ್ರಮ ಕೇವಲ ಅರಮನೆಗಷ್ಟೆ ಸೀಮಿತವಾಗಿರುವುದರಿಂದ ದಸರಾ ಸಂಭ್ರಮ ನಗರದಲ್ಲಿ ಹೆಚ್ಚಾಗಿ ಕಂಡು ಬರುತ್ತಿಲ್ಲ.

ಆದರೆ ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಎಲ್ಲ ಕಾರ್ಯಕ್ರಮಗಳು ನಡೆಯಲಿವೆಯಾದರೂ ಅದು ಕೊರೊನಾ ಮಾರ್ಗ ಸೂಚಿಯಂತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಆನೆಗಳು ಕೂಡ ಅರಮನೆ ಆವರಣದ ಸುತ್ತಮುತ್ತಲೇ ತಾಲೀಮು ನಡೆಸುತ್ತಿವೆ. ಹೊರಗೆ ಹೋಗಲು ಯಾವುದೇ ಅವಕಾಶವಿಲ್ಲ.

 ಅರಮನೆಯ ವಿದ್ಯುತ್ ದೀಪಗಳ ದುರಸ್ತಿ

ಅರಮನೆಯ ವಿದ್ಯುತ್ ದೀಪಗಳ ದುರಸ್ತಿ

ಈ ಬಾರಿಯ ದಸರಾ ಕಾರ್ಯಕ್ರಮಗಳು ಅರಮನೆ ಆವರಣಕ್ಕಷ್ಟೆ ಸೀಮಿತವಾಗಿರುವುದರಿಂದ ಅರಮನೆ ಸೇರಿದಂತೆ ಸುತ್ತಮುತ್ತ ಸಿದ್ಧತಾ ಕಾರ್ಯಗಳನ್ನು ಮಾಡಲಾಗುತ್ತಿದೆ. ದಸರಾ ದಿನಗಳಲ್ಲಿ ಅರಮನೆ ವಿದ್ಯುತ್ ದೀಪಗಳಿಂದ ಕಂಗೊಳಿಸಲು ಅನುಕೂಲವಾಗುವಂತೆ ದೀಪಗಳ ಜೋಡಣೆಯೂ ನಡೆಯುತ್ತಿದೆ. ಈಗಾಗಲೇ ಅರಮನೆಯಲ್ಲಿ ಕೆಟ್ಟಿರುವ ಬಲ್ಬ್‌ಗಳನ್ನು ಬದಲಾಯಿಸುವ ಕೆಲಸವನ್ನು ಮಾಡಲಾಗುತ್ತಿದೆ. ಪ್ರತೀ ವರ್ಷವೂ ಕೆಟ್ಟ ಬಲ್ಬ್‌ಗಳನ್ನು ಬದಲಿಸಲಾಗುತ್ತದೆ. ಪ್ರತಿ ಬಾರಿಯೂ ಅರಮನೆಗೆ ಅಳವಡಿಸಿರುವ ಬಲ್ಬ್‌ಗಳಲ್ಲಿ ಶೇ.10ರಷ್ಟು ಬಲ್ಬ್‌ಗಳು ಕೆಡುತ್ತಿರುತ್ತವೆ.

ಮೈಸೂರು ಅರಮನೆಗೆ ಬಂತು ದಸರಾ ಕಳೆ

ಹೀಗಾಗಿ ಅವುಗಳನ್ನು ಕ್ರೇನ್ ಹಾಗೂ ಡ್ರೋಣ್ ಸಹಾಯದಿಂದ ಅಳವಡಿಸುವ ಕೆಲಸ ಮಾಡಲಾಗುತ್ತ್ತದೆ. ಅರಮನೆಗೆ ಬಲ್ಬ್ ಅಳವಡಿಸುವುದೇ ದೊಡ್ಡ ಸಾಹಸ. ಅದರಲ್ಲೂ ಜಯ ಮಾರ್ತಾಂಡ ಗೇಟ್ ಸೇರಿದಂತೆ 80 ಅಡಿ ಎತ್ತರದಲ್ಲಿರುವ ಅರಮನೆ ಗೋಪುರಗಳಿಗೆ ಬಲ್ಬ್‌ಗಳನ್ನು ಅಳವಡಿಸುವುದು ಸವಾಲಿನ ಕೆಲಸವೇ.

 1942ರಲ್ಲಿ ಅರಮನೆಗೆ ವಿದ್ಯುದ್ದೀಪಾಲಂಕಾರ

1942ರಲ್ಲಿ ಅರಮನೆಗೆ ವಿದ್ಯುದ್ದೀಪಾಲಂಕಾರ

ಅರಮನೆ ದೀಪಾಲಂಕಾರದ ಬಗೆಗಿನ ಇತಿಹಾಸವನ್ನು ನೋಡಿದರೆ, 1942ರ ಆಸುಪಾಸಿನಲ್ಲಿ ಯದುವಂಶದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್ ಅರಮನೆಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿದರು ಎನ್ನಲಾಗಿದೆ. ತೇಗದ ಮರದ ಪಟ್ಟಿಗಳ ಮೇಲೆ ವೋಲ್ಡರ್ ‌ಗಳನ್ನು ಜೋಡಿಸಿ ಸುಮಾರು ಒಂದು ಲಕ್ಷ ಕ್ಯಾಂಡಿಸೆಂಟ್ ಬಲ್ಬ್ ಗಳನ್ನು ಅಳವಡಿಸಿದ್ದರು. ಆರಂಭದಲ್ಲಿ 30 ವ್ಯಾಟ್ ಬಲ್ಬ್‌ಗಳನ್ನು ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ 20 ವ್ಯಾಟ್ ‌ಗೆ ಇಳಿಸಲಾಯಿತು. ಪ್ರಸ್ತುತ 15 ವ್ಯಾಟ್ ‌ನ ಬಲ್ಬ್ ಗಳನ್ನು ಅಳವಡಿಸಲಾಗಿದೆ.

ವಿದ್ಯುತ್ ಪೂರೈಕೆ ಜವಾಬ್ದಾರಿಯನ್ನು ಚೆಸ್ಕಾಂ ವಹಿಸಿಕೊಂಡಿದ್ದು, ದೀಪಾಲಂಕಾರದ ವ್ಯವಸ್ಥೆಗಾಗಿ ಹೆಚ್ಚು ಸಾಮರ್ಥ್ಯದ ಮೂರು ಟ್ರಾನ್ಸ್ ‌ಫಾರ್ಮರ್ ಗಳನ್ನು ಅಳವಡಿಸಲಾಗಿದೆ. ಪ್ರತಿ ತಿಂಗಳು 8ರಿಂದ 10 ಲಕ್ಷ ರೂ. ವಿದ್ಯುತ್ ಬಿಲ್ ಬರುತ್ತದೆ. ತಿಂಗಳಿಗೆ ಸರಾಸರಿ 88 ಸಾವಿರ ಯೂನಿಟ್ ವಿದ್ಯುತ್ ಬಳಸಲಾಗುತ್ತದೆ. ದಸರಾ ಸಂದರ್ಭ 1.2 ಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ. ದೀಪಾಲಂಕಾರಗಳನ್ನು ನೋಡಿಕೊಳ್ಳಲೆಂದೇ ಅರಮನೆಯ ಪವರ್ ಹೌಸ್‌ನಲ್ಲಿ ಪ್ರತ್ಯೇಕ ಸಿಬ್ಬಂದಿಯಿದ್ದಾರೆ. ವಿದ್ಯುದ್ದೀಪಗಳನ್ನು ಉರಿಸಲು ಅರಮನೆ ಹಾಗೂ ಗೇಟ್‌ಗಳಿಗೆ ಪ್ರತ್ಯೇಕ ಮೂರು ಸ್ವಿಚ್ ಅಳವಡಿಸಲಾಗಿದ್ದು, ದೀಪಾಲಂಕಾರದ ವೇಳಾಪಟ್ಟಿಯಂತೆ ಇಲ್ಲಿರುವ ಮೂರು ಸಿಬ್ಬಂದಿ ಸ್ವಿಚ್ ಆನ್ ಮಾಡುತ್ತಾರೆ. ಆಗ ಒಮ್ಮೆಲೆ ಅರಮನೆ ದೀಪದ ಬೆಳಕಿನಲ್ಲಿ ಮಿನುಗುತ್ತದೆ.

 ಮೈಸೂರು ಬೀದಿಯಲ್ಲಿ ಬುಡ್ಡಿದೀಪಗಳು

ಮೈಸೂರು ಬೀದಿಯಲ್ಲಿ ಬುಡ್ಡಿದೀಪಗಳು

ಇನ್ನು ಮೈಸೂರಿಗೆ ವಿದ್ಯುದ್ದೀಪಗಳು ಯಾವಾಗ ಬಂದವು ಎಂಬುದನ್ನು ನೋಡುವುದಾದರೆ, 1908ಕ್ಕೂ ಹಿಂದೆ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಹಾಗೂ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಸ್ಥಳಗಳಲ್ಲಿ ದೀಪಗಳಿದ್ದವಾದರೂ ಅವುಗಳು ಹರಳೆಣ್ಣೆ ಮತ್ತು ಸೀಮೆ ಎಣ್ಣೆಯ ಬುಡ್ಡಿದೀಪಗಳಾಗಿದ್ದವು. ಅವುಗಳನ್ನು ಬೀದಿಯಲ್ಲಿರುವ ಮರ ಅಥವಾ ಕಲ್ಲಿನ ಕಂಬಗಳಲ್ಲಿ ಇಡಲಾಗುತ್ತಿತ್ತು. ಅಲ್ಲದೆ ಅದಕ್ಕೆ ನಿಯಮಿಸಿದ ನೌಕರ ಪ್ರತಿದಿನವೂ ರಾತ್ರಿಯಾಗುತ್ತಿದ್ದಂತೆಯೇ ಏಣಿಯೊಂದಿಗೆ ಬಂದು ಎತ್ತರದಲ್ಲಿಟ್ಟಿದ್ದ ಕಂಬ ಮರಕ್ಕೆ ಏಣಿಯ ಸಹಾಯದಿಂದ ಹತ್ತಿ ದೀಪಕ್ಕೆ ಎಣ್ಣೆ ಹಾಕಿ ಬಳಿಕ ಉರಿಯನ್ನು ಹಚ್ಚಿ ಹೋಗುತ್ತಿದ್ದರು.

ಮೈಸೂರು ದಸರಾ ವೈಭವಕ್ಕೆ ಸಾಕ್ಷಿಯಾಗಿರುವ ಸೀತಾವಿಲಾಸ ಛತ್ರ

 1908ರಲ್ಲಿ ಮೈಸೂರಿಗೆ ವಿದ್ಯುತ್ ಬಂತು

1908ರಲ್ಲಿ ಮೈಸೂರಿಗೆ ವಿದ್ಯುತ್ ಬಂತು

ಇದಾದ ಕೆಲವು ವರ್ಷಗಳಲ್ಲಿ ಪೆಟ್ರೋಮ್ಯಾಕ್ಸ್ ದೀಪಗಳನ್ನು ಬಳಸಿಕೊಳ್ಳಲು ಆರಂಭಿಸಲಾಯಿತು. ಇದಾದ ನಂತರ 1908ರಲ್ಲಿ ವಿದ್ಯುತ್ ದೀಪಗಳು ಮೈಸೂರಿಗೆ ಬಂದವು. ಮೊದಲ ಬಾರಿಗೆ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಜಗನ್ಮೋಹನ ಅರಮನೆಯ ಸಿಂಹಾಸನವನ್ನು ಅಲಂಕರಿಸಿ 1908ರ ಸೆಪ್ಟೆಂಬರ್ 26ರಂದು ವಿದ್ಯುತ್ ದೀಪದ ಸ್ವಿಚ್ಚನ್ನು ಒತ್ತುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಚಾಮುಂಡಿ ಬೆಟ್ಟಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಮುಂದೆ ಬೀದಿಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಯಿತಲ್ಲದೆ, ಅಂಬಾ ವಿಲಾಸ ಅರಮನೆ ನಿರ್ಮಿಸಿದ ಬಳಿಕ ಅದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತು. ದಸರಾ ಸಮಯದಲ್ಲಿ, ರಾತ್ರಿಯಾಯಿತೆಂದರೆ ವಿದ್ಯುತ್ ದೀಪಗಳಿಂದ ಜಗಮಗಿಸುವ ಅರಮನೆಯನ್ನು ನೋಡುವುದೇ ಕಣ್ಣಿಗೆ ಹಬ್ಬ.

English summary
Dasara programmes this time are confined to the palace premises and preparations are being made in and around the palace. There is also an arrangement of lights, which are the main attraction of dasara
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X