ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್‌ಗೆ ಭಾರತೀಯ ಹೈಕಮಿಷನ್‌ನಿಂದ ಗೌರವ

ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಹಾಗೂ ಭಾರತೀಯ ಚಲನಚಿತ್ರಗಳ ಜನಪ್ರಿಯ ಹಾಡುಗಳಿಗೆ ಲಿಪ್ ಸಿಂಕ್ ಮಾಡಲು Instagram ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧರಾಗಿರುವ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್ ಅವರನ್ನು ಭಾರತೀಯ ಹೈಕಮಿಷನ್ ಗೌರವಿಸಿದೆ.

ಭಾರತೀಯ ಹೈಕಮಿಷನ್ ಟ್ವಿಟ್ಟರ್‌ನಲ್ಲಿ "ಭಾರತದಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದ ವಿಶೇಷ ಸಂದರ್ಶಕ" ಕುರಿತು ಪೋಸ್ಟ್ ಮಾಡಿದೆ. ಬಾಲಿವುಡ್ ಹಾಡುಗಳಿಗೆ ಸಖತ್ ಸ್ಟೆಪ್ಸ್ ಹಾಕುವ ಅವುಗಳನ್ನು ಸುಲಲಿತವಾಗಿ ಹಾಡುವ ಕಿಲಿ ಪಾಲ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಫೇಮಸ್. ತಾಂಜೇನಿಯಾದ ಪ್ರತಿಭೆ ಕಿಲಿ ಪಾಲ್ ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಜೊತೆಗೆ ಹಾಡುಗಳನ್ನು ಹಾಡುವ ಮೂಲಕ ಅನೇಕ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗಾಗಿ ಕಿಲಿ ಪಾಲ್ Instagram ನಲ್ಲಿ 2 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಭಾರತದಲ್ಲಿ ಆಯುಷ್ಮಾನ್ ಖುರಾನಾ, ಗುಲ್ ಪನಾಗ್, ರಿಚಾ ಚಡ್ಡಾ ಅವರಂತಹ ಅನೇಕ ನಟರು ಅವರನ್ನು ಅನುಸರಿಸುತ್ತಾರೆ.

ಜನಪ್ರಿಯ ಹಿಂದಿ ಚಲನಚಿತ್ರ ಗೀತೆಗಳಿಗೆ ಲಿಪ್-ಸಿಂಕ್ ಮಾಡುವುದರ ಜೊತೆಗೆ, ಕಿಲಿ ಪಾಲ್ ತಮ್ಮ ನೃತ್ಯ ಕೌಶಲ್ಯಗಳನ್ನು ವೀಡಿಯೊಗಳಲ್ಲಿ ಪ್ರಸ್ತುತಪಡಿಸುತ್ತಾರೆ. ಕಿಲಿ ಪಾಲ್ ಅವರ ವೀಡಿಯೊಗಳಲ್ಲಿ ಒಂದಾದ ಶೇರ್ಷಾ ಚಿತ್ರದ 'ರಾತನ್ ಲಂಬಿಯಾನ್' ಅದರಲ್ಲಿ ಅವರ ಸಹೋದರಿ ನೀಮಾ ಕೂಡ ಕಾಣಿಸಿಕೊಂಡಿದ್ದಾರೆ. ಇದನ್ನು ನೆಟಿಜನ್‌ಗಳು ಇಷ್ಟಪಟ್ಟಿದ್ದಾರೆ.

ವಿಡಿಯೋ: ರಣಬೀರ್ ಕಪೂರ್ ಹಾಡಿಗೆ ಲಿಪ್ ಸಿಂಕ್ ಮಾಡಿದ ಕಿಲಿ
ಕಿಲಿ ಪಾಲ್ ತನ್ನ ಸಂಪ್ರದಾಯವನ್ನು ಉಳಿಸಿಕೊಂಡು ತನ್ನ ಸಾಂಪ್ರದಾಯಿಕ ಬಟ್ಟೆಯಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಕೇಶವ್ ಝಾ ಅವರಂತಹ ಬಳಕೆದಾರರು ಇವರಿಗೆ ನೀಡಿದ ಗೌರವಕ್ಕೆ ಅಭಿನಂದಿಸಿದ್ದಾರೆ. "ತಾಂಜೇನಿಯಾದಲ್ಲಿ ಭಾರತವು ಈ ವೀರ ಮತ್ತು ಮೃದು ಸ್ವಭಾವದ ಮಹಾನ್ ಬೆಂಬಲಿಗನನ್ನು ಗೌರವವನ್ನು ಸಲ್ಲಿಸಿ ಉತ್ತಮ ಕೆಲಸ ಮಾಡಿದೆ. ನಾವು ಮತ್ತು ಮಿಷನ್‌ಗಳು ಈ ಸಾಫ್ಟ್ ಪವರ್ ಯೋಧನನ್ನು ಭಾರತೀಯ ಒಳಿತಿಗಾಗಿ ಮತ್ತು ಜಾಗತಿಕ ಒಳಿತಿಗಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು" ಎಂದು ಝಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

“Special Visitor”: Kili Paul Honoured by Indian High Commission
ಅಂದಹಾಗೆ ಕಿಲಿ ಪಾಲ್ ಅವರು YouTube ಚಾನಲ್ ಅನ್ನು ಸಹ ಹೊಂದಿದ್ದಾರೆ, ಅಲ್ಲಿ ಅವರ ಎಲ್ಲಾ ಜನಪ್ರಿಯ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಅವರ Instagram ಪ್ರೊಫೈಲ್ ಅವರನ್ನು "ವಿಷಯ ರಚನೆಕಾರ" ಎಂದು ವಿವರಿಸುತ್ತದೆ. ಅವರ ಇತ್ತೀಚಿನ ಪೋಸ್ಟ್‌ಗಳಲ್ಲಿ ಕಿಲಿ ಪಾಲ್ ಅವರ ಸಹೋದರಿ ನೀಮಾ ಅವರೊಂದಿಗೆ ಉತ್ಸಾಹದಿಂದ ಪ್ರದರ್ಶನ ನೀಡುತ್ತಿದ್ದಾರೆ.

ಇತ್ತೀಚೆಗೆ ಕಿಲಿ ಹಾಡೊಂದಕ್ಕೆ ನಟನೆಯ ವಿಡಿಯೋ ಹಂಚಿಕೊಂಡಿದ್ದರು. "ಪ್ರತಿಯೊಬ್ಬರೂ @neemapaul155 ನೃತ್ಯವನ್ನು ನೋಡಿ, ಇಲ್ಲಿ ಅವಳು ಮಾಡುವ ನೃತ್ಯ ಅತ್ಯುತ್ತಮವಾದುದಾಗಿದೆ" ಎಂದು ಕಿಲಿ ಪೌಲ್ ವೀಡಿಯೊಗೆ ತಮ್ಮ ಶೀರ್ಷಿಕೆಯಲ್ಲಿ ಹೇಳಿದ್ದಾರೆ. 'ಕಚ್ಚಾ ಬಾದಮ್' ಎಂಬುವುದು ಮೂಲತಃ ಪಶ್ಚಿಮ ಬಂಗಾಳದ ಭೂಬನ್ ಬಡ್ಯಾಕರ್ ಎಂಬ ಕಡಲೆಕಾಯಿ ಮಾರಾಟಗಾರ ಹಾಡಿದ್ದಾರೆ.

“Special Visitor”: Kili Paul Honoured by Indian High Commission
ಕಿಲಿ ಪೌಲ್ ಸಾಮಾಜಿಕ ಜಾಲತಾಣದಲ್ಲಿ ಅದ್ಬುತ ಪ್ರತಿಭೆ. ಆ ಸತ್ಯವನ್ನು ನಾವ್ಯಾರು ಅಲ್ಲಗಳೆಯುವಂತಿಲ್ಲ. ವಿವಿಧ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮತ್ತು ನೃತ್ಯ ಮಾಡುವ ಅವರ ವಿಡಿಯೊಗಳು ಯಾವುದೇ ಸಮಯದಲ್ಲಾಗಲಿ ವೈರಲ್ ಆಗುತ್ತವೆ. ಜೊತೆಗೆ ಅವರು ರಣಬೀರ್ ಕಪೂರ್ ಅವರ ಚನ್ನ ಮೆರೆಯಾ ಹಾಡಿಗೆ ಲಿಪ್ ಸಿಂಕ್ ಮಾಡುವ ಮತ್ತು ನೃತ್ಯ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದಾಗ, ಅದು ನಿಸ್ಸಂಶಯವಾಗಿ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು.

ಕಿಲಿ ಈ ಹಾಡಿನಲ್ಲಿ ರಣಬೀರ್ ಕಪೂರ್ ಅವರಂತೆಯೇ ನೋವಿನ ಭಾವನೆಗಳನ್ನು ತೋರಿಸಿದ್ದಾರೆ. ಕಿಲಿ ಅಸಮಾಧಾನಗೊಂಡು ಹಾಡಿನ ಸಾಹಿತ್ಯಕ್ಕೆ ಭಾವಪೂರ್ಣವಾಗಿ ಲಿಪ್ ಸಿಂಕ್ ಮಾಡಿದ್ದಾರೆ. ಸ್ವಲ್ಪ ಸಮಯದವರೆಗೆ ಲಿಪ್ ಸಿಂಕ್ ಮಾಡುವ ಅವರು ರಣಬೀರ ವಿಡಿಯೊದಲ್ಲಿ ಮಾಡಿದಂತೆಯೇ ಎದ್ದು ನಿಂತು ನೃತ್ಯ ಮಾಡುತ್ತಾರೆ. ಇದು ರಣಬೀರ್ ಅಭಿಮಾನಿಗಳು ಮಾತ್ರವಲ್ಲದೇ ಕಿಲಿ ಅವರ ಅಭಿಮಾನಿಗಳ ಹೃದಯ ಗೆದ್ದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+