ವಿಡಿಯೋ: ರಣಬೀರ್ ಕಪೂರ್ ಹಾಡಿಗೆ ಲಿಪ್ ಸಿಂಕ್ ಮಾಡಿದ ಕಿಲಿ

ಬಾಲಿವುಡ್ ಹಾಡುಗಳಿಗೆ ಸಖತ್ ಸ್ಟೆಪ್ಸ್ ಹಾಕುವ ಅವುಗಳನ್ನು ಸುಲಲಿತವಾಗಿ ಹಾಡುವ ಈತ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಫೇಮಸ್. ತಾಂಜೇನಿಯಾದ ಪ್ರತಿಭೆ ಕಿಲಿ ಪೌಲ್ ಎಂಬಾತ ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಜೊತೆಗೆ ಹಾಡುಗಳನ್ನು ಹಾಡುವ ಮೂಲಕ ಅನೇಕ ಭಾರತೀಯರ ಮೆಚ್ಚುಗೆ ಪಾತ್ರರಾಗಿದ್ದಾರೆ. ಈಗ ಮತ್ತೊಂದು ಬಾಲಿವುಡ್‌ನ ಹಾಡಿಗೆ ಲಿಪ್ ಸಿಂಕ್ ಮಾಡಿರುವ ತಾಂಜೇನಿಯಾದ ಹುಡುಗ ಕಿಲಿ ನೆಟ್ಟಿಗರ ಮನಸ್ಸು ಗೆದ್ದಿದ್ದಾರೆ. ಈ ವಿಡಿಯೋ ಕೂಡ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಅಭಿನಯದ 'ಚನ್ನ ಮೆರೆಯಾ' ಹಾಡಿಗೆ ಕಿಲಿ ಪೌಲ್ ಲಿಪ್ ಸಿಂಕ್ ಮಾಡಿದ್ದಾರೆ. ಜೊತೆಗೆ ಈ ಹಾಡಿನ ವೈರಲ್ ಡ್ಯನ್ಸ್ ಗೆ ಸ್ಟೆಪ್ಸ್ ಕೂಡ ಹಾಕಿದ್ದಾರೆ. ಇದು ಮನಸ್ಸಿಗೆ ಮುದ ನೀಡುತ್ತದೆ ಎಂದು ಇಂಟರ್ನೆಟ್ ಹೇಳುತ್ತದೆ.

ಕಿಲಿ ಪೌಲ್ ಸಾಮಾಜಿಕ ಜಾಲತಾಣದಲ್ಲಿ ಅದ್ಬುತ ಪ್ರತಿಭೆ. ಆ ಸತ್ಯವನ್ನು ನಾವ್ಯಾರು ಅಲ್ಲಗಳೆಯುವಂತಿಲ್ಲ. ವಿವಿಧ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮತ್ತು ನೃತ್ಯ ಮಾಡುವ ಅವರ ವಿಡಿಯೊಗಳು ಯಾವುದೇ ಸಮಯದಲ್ಲಾಗಲಿ ವೈರಲ್ ಆಗುತ್ತವೆ. ಹೀಗಾಗಿ ಅವರು ರಣಬೀರ್ ಕಪೂರ್ ಅವರ ಚನ್ನ ಮೆರೆಯಾ ಹಾಡಿಗೆ ಲಿಪ್ ಸಿಂಕ್ ಮಾಡುವ ಮತ್ತು ನೃತ್ಯ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದಾಗ, ಅದು ನಿಸ್ಸಂಶಯವಾಗಿ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕಿಲಿ ಮೂಲ ಹಾಡಿನಲ್ಲಿ ರಣಬೀರ್ ಕಪೂರ್ ಅವರಂತೆಯೇ ನೋವಿನ ಭಾವನೆಗಳನ್ನು ತೋರಿಸಿದ್ದಾರೆ. ಕಿಲಿ ಅಸಮಾಧಾನಗೊಂಡು ಹಾಡಿನ ಸಾಹಿತ್ಯಕ್ಕೆ ಭಾವಪೂರ್ಣವಾಗಿ ಲಿಪ್ ಸಿಂಕ್ ಮಾಡಿದ್ದಾರೆ. ಸ್ವಲ್ಪ ಸಮಯದವರೆಗೆ ಲಿಪ್ ಸಿಂಕ್ ಮಾಡುವ ಅವರು ರಣಬೀರ ವಿಡಿಯೊದಲ್ಲಿ ಮಾಡಿದಂತೆಯೇ ಎದ್ದು ನಿಂತು ನೃತ್ಯ ಮಾಡುತ್ತಾರೆ. ಇದು ರಣಬೀರ್ ಅಭಿಮಾನಿಗಳು ಮಾತ್ರವಲ್ಲದೇ ಕಿಲಿ ಅವರ ಅಭಿಮಾನಿಗಳ ಹೃದಯ ಗೆದ್ದಿದೆ.

Video: Lip synced Kili to Ranbir Kapoor song
ವೈರಲ್ ವೀಡಿಯೊವನ್ನು ಇಲ್ಲಿ ನೋಡಿ:

ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟಿಜನ್‌ಗಳು ಕಾಮೆಂಟ್‌ಗಳ ಬಾಕ್ಸ್‌ನಲ್ಲಿ ಕಿಲಿಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ. ಕಿಲಿಯ ನಟನೆಗೆ ಮಾರು ಹೋಗಿದ್ದಾರೆ. "ಅದ್ಭುತ ಅಭಿವ್ಯಕ್ತಿ, ಮನಸ್ಸಿಗೆ ಮುದನೀಡುತ್ತದೆ" ಎಂದು ಬಳಕೆದಾರರು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರರು, "ತುಂಬಾ ಚೆನ್ನಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.

Video: Lip synced Kili to Ranbir Kapoor song

ಕಾಮೆಂಟ್‌ಗಳನ್ನು ಇಲ್ಲಿ ನೋಡಿ:

ರಣಬೀರ್ ಕಪೂರ್, ಐಶ್ವರ್ಯಾ ರೈ ಮತ್ತು ಅನುಷ್ಕಾ ಶರ್ಮಾ ಅಭಿನಯದ 'ಏ ದಿಲ್ ಹೈ ಮುಷ್ಕಿಲ್‌'ನ ಜನಪ್ರಿಯ ಸಿನಿಮಾ 2016 ರಲ್ಲಿ ತೆರೆಕಂಡಿದೆ. 'ಚನ್ನ ಮೇರೆಯಾ' ಹಾಡನ್ನು ಅರಿಜಿತ್ ಸಿಂಗ್ ಹಾಡಿದ್ದು, ಪ್ರೀತಮ್ ಸಂಗೀತ ಸಂಯೋಜಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕಿಲಿ ಪೌಲ್‌ ಇನ್ಸ್ಟಾಗ್ರಾಮ್‌ನಲ್ಲಿ 732 ಸಾವಿರ ಫಾಲೋವರ್‌ಗಳನ್ನು ಗಳಿಸಿದ್ದರು. ಇದರಲ್ಲಿರುವ ಬಹುತೇಕ ಫಾಲೋವರ್‌ಗಳು ಭಾರತದವರಾಗಿದ್ದಾರೆ. ಇವರು ಸಂಪ್ರದಾಯಿಕ ಮಾಸೈ ಧಿರಿಸು ಧರಿಸಿ ತಮ್ಮ ಸಹೋದರಿ ನೀಮಾ ಜೊತೆ ಸೇರಿ ಡಾನ್ಸ್‌ ಮಾಡುತ್ತಾರೆ. ಇವರ ಡಾನ್ಸ್‌ ಕೇವಲ ಭಾರತೀಯರನಷ್ಟೇ ಆಕರ್ಷಿಸಿಲ್ಲ. ನಟರು ಗಾಯಕರು, ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಇರುವ ಗಣ್ಯರು ಕಿಲಿ ಪೌಲ್‌ ಡಾನ್ಸ್‌ನ್ನು ಇಷ್ಟ ಪಡುತ್ತಾರೆ. ಇದೇ ತಿಂಗಳು ಡಿಸೆಂಬರ್ 21 ರಂದು ಈ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಡಾನ್ಸ್‌, ಹಾಡು ಮುಂತಾದವುಗಳಿಗೆ ಯಾವುದೇ ಜಾತಿ, ಭಾಷೆ, ವಯಸ್ಸು, ದೇಶದ ಗಡಿಗಳ ಹಂಗಿಲ್ಲ. ನಿಮಗೆ ನೃತ್ಯ ಗೊತ್ತಿದ್ದರೇ ಸಾಕು ಎಲ್ಲಿ ಯಾವ ಹಾಡಿಗೆ ಬೇಕಾದರೂ ನೀವು ಕುಣಿಯಬಹುದು. ಆದರೆ ಕೆಲವು ಹಾಡುಗಳು ಅವುಗಳಿಗೆ ನೀಡಿರುವ ಸಂಗೀತಾ ಇದುವರೆಗೆ ಡಾನ್ಸ್‌ ಮಾಡದವರನ್ನು ಎಗ್ಗು ಸಿಗ್ಗಿಲ್ಲದೇ ಕುಣಿಸುತ್ತವೆ. ಇತ್ತೀಚೆಗೆ ಬಾಲಿವುಡ್‌ ನಟ ಹೃತಿಕ್ ರೋಷನ್ ಅವರ 'ಬ್ಯಾಂಗ್ ಬ್ಯಾಂಗ್' ಹಾಡಿಗೆ ಮಹಿಳೆಯೊಬ್ಬರು ಎರ್ರಾಬಿರ್ರಿ ಕುಣಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+