ಮನೆಯ ಸುತ್ತಮುತ್ತ ಈ ವಸ್ತುಗಳಿದ್ದರೆ ಹಾವು ಅತ್ತ ತಲೆಯೂ ಹಾಕಲ್ಲ : ಸರ್ಪಗಳು ಸಹಿಸೋದೇ ಇಲ್ಲ ಇದರ ವಾಸನೆ

ಹೇಳಿ ಕೇಳಿ ಇದು ಮುಂಗಾರು. ರಾಜ್ಯದ ಎಲ್ಲಾ ಕಡೆ ಮುಂಗಾರು ಮಳೆ ಸುರಿಯುತ್ತಲೇ ಇದೆ. ಸಿಕ್ಕಾಪಟ್ಟೆ ಮಳೆಯನ್ನು ತಡೆದುಕೊಳ್ಳುವುದು ಎಲ್ಲರಿಗೂ ಕಷ್ಟ. ಇದೇ ಹೊತ್ತಲ್ಲಿ, ಆಶ್ರಯ ಅಥವಾ ಸುರಕ್ಷಾತಾಣಗಳನ್ನು ಹುಡುಕಿಕೊಂಡು ಹಾವು, ಚೇಳು, ಕೀಟಗಳು ಮನೆಯಂಗಳ ಸೇರುತ್ತವೆ. ಅಥವಾ ತಣ್ಣನೆ ಮಳೆಗೆ ಬೆಚ್ಚನೆ ಜಾಗ ಹುಡುಕಿಕೊಂಡು ಮನೆಯೊಳಗೆ ಸೇರಿಬಿಡಬಹುದು. ಹಾವುಗಳು ಸಾಮಾನ್ಯವಾಗಿ ಹೀಗೆಯೇ ನಿಮಗೆ ಗೊತ್ತಿಲ್ಲದಂತೆ ಮನೆಯೊಳಗೆ ಸೇರಿ, ನಿಮಗೆ ಅಪಾಯ ಸೃಷ್ಟಿಸಬಹುದು. ಇಲಿ ಮುಂತಾದ ಆಹಾರ ಹುಡುಕಿಕೊಂಡೋ, ಅಥವಾ ಬೆಚ್ಚನೆ ಜಾಗಕ್ಕಾಗಿಯೋ, ವಿಷಕಾರಿ ಹಾವು ಮನೆ ಸೇರಿ ನಮಗೇ ಅಪಾಯ ಸೃಷ್ಟಿಸುವ ಸಾಧ್ಯತೆಗಳಿರುತ್ತದೆ.

ಹಾವುಗಳು ಜಗತ್ತಿನ ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಒಂದು. ಎಲ್ಲಾ ಹಾವುಗಳು ವಿಷವನ್ನು ಹೊಂದಿರುವುದಿಲ್ಲ. ಆದರೆ ಕೆಲವು ಹಾವುಗಳು ಭರ್ಜರಿ ವಿಷವನ್ನು ಹೊಂದಿರುತ್ತವೆ. ಕೆಲವು ಹಾವುಗಳು ಕಚ್ಚಿದ ಕ್ಷಣ ಮಾತ್ರದಲ್ಲಿ ಮನುಷ್ಯನ ದೇಹದಲ್ಲಿ ವಿಷ ಏರಿ ಬಿಡುತ್ತದೆ. ಇವು ಅತ್ಯಂತ ಮಾರಕ. ಹಾವುಗಳು ವಿಷಕಾರಿ ಆಗಿರಲಿ ಆಗದೆಯೇ ಇರಲಿ ಅವುಗಳನ್ನು ನೋಡಿದ ಕೂಡಲೇ ಮೈ ಜುಮ್ಮೆನ್ನುತ್ತದೆ. ಒಂದು ರೀತಿಯ ಭಯ ಆವರಿಸಿ ಬಿಡುತ್ತದೆ. ಅದರಲ್ಲಿಯೂ ಮನೆಯ ಗಾರ್ಡನ್‌, ಕಾಡು, ಕೊಳ ಅಥವಾ ಬಂಡೆಗಳ ಪ್ರದೇಶದ ಬಳಿ ಇದ್ದರೆ, ಅಪಾಯ ಖಂಡಿತಾ ಇರುತ್ತೆ.

Snakes Hate These Smell And Will Not Come Near Your Home If You Keep These Things Around

ಹಾವುಗಳನ್ನು ದೂರವಿಡುವುದು ಹೇಗೆ ?

ಹಾಗಾದರೆ, ಹಾವುಗಳು ಮನೆ ಹತ್ತಿರ ಸುಳಿಯದಂತೆ ಮಾಡುವುದು ಹೇಗೆ? ಇದಕ್ಕೆ ಹಲವು ಸರಳ ಉಪಾಯಗಳಿವೆ. ಸಾಮಾನ್ಯವಾಗಿ ಹಾವುಗಳಿಗೆ ವಾಸನೆ ಗ್ರಹಿಸುವ ಶಕ್ತಿ ತುಂಬಾ ಬಲವಾಗಿರುತ್ತವೆ. ಕೆಲವೊಂದು ವಾಸನೆಯನ್ನೇ ಹುಡುಕಿಕೊಂಡು ಹಾವುಗಳು ಮನೆಹತ್ತಿರ ಬರುತ್ತವೆ. ಇಲಿ, ಕಪ್ಪೆ, ಮೊಟ್ಟೆ, ಕೋಳಿ ಮರಿ, ಕೆಲವೊಂದು ರೀತಿಯ ಹೂವು, ಹಣ್ಣು ಇತ್ಯಾದಿಗಳ ವಾಸನೆ ಹಿಡಿದುಕೊಂಡೇ ಹಾವುಗಳು ಮನೆ ಹತ್ತಿರ ಬರುತ್ತವೆ. ಅದೇ ರೀತಿ ಹಾವುಗಳಿಗೆ ಕೆಲವೊಂದು ವಾಸನೆಗಳು ಸಹ್ಯ ಆಗಲ್ಲ. ಆ ವಾಸನೆ ಬರ್ತಾ ಇದ್ರೆ, ಹಾವುಗಳು ಅತ್ತ ಸುಳಿಯೋದೇ ಇಲ್ಲ. ಅದ್ಯಾವುದು ನೋಡೋಣ.

ಪುದೀನ ಮತ್ತು ತುಳಸಿ

ನಿಮಗೆ ಗೊತ್ತಿದೆ. ಪುದಿನ ಮತ್ತು ತುಳಸಿಗೆ ಒಂದು ರೀತಿಯ ಗಾಢ ವಾಸನೆ ಇದೆ. ಪುದಿನ ಆಹಾರಕ್ಕೆ ಸೊಗಸಾಗಿರುತ್ತದೆ. ತುಳಸಿ ಆಯುರ್ವೇದ ಔಷಧಿಗೆ ಉಪಯುಕ್ತ. ಇವೆರಡರ ವಾಸನೆಯನ್ನು ಹಾವುಗಳು ಸಹಿಸೋದೇ ಇಲ್ಲ. ಪುದಿನ ಮತ್ತು ತುಳಸಿಯನ್ನ ನಿಮ್ಮ ಹಿತ್ತಲಲ್ಲಿ ಬೆಳೆಸಿದ್ರೆ, ನಿಮಗೆ ವಿಷಕಾರಿ ಹಾವುಗಳಿಂದ ಮುಕ್ತಿ ಸಿಕ್ಕಿದೆ ಅಂತಾನೆ ಅರ್ಥ. ಪುದಿನ ಮತ್ತು ತುಳಸಿ ನಿಮ್ಮ ಹಿತ್ತಲಿನಲ್ಲಿ ನೈಸರ್ಗಿಕ ಪರಿಸರವನ್ನು ತಾಜಾವಾಗಿ ಉಳಿಸುತ್ತದೆ. ಜೊತೆಗೆ ಒಂದು ರೀತಿಯ ಸುವಾಸನೆ ಬೀರುತ್ತಿರುತ್ತವೆ. ಈ ವಾಸನೆ, ಜನರಿಗೆ ಇಷ್ಟ. ಹಾವುಗಳಿಗೆ ಬಹಳ ಕಷ್ಟ. ಹಾಗಾಗಿ, ಮನೆ ಹಿತ್ತಲಿನಲ್ಲಿ ಪುದಿನ, ತುಳಸಿ ಬೆಳೆಸಿ.

ಬೆಳ್ಳುಳ್ಳಿ ಮತ್ತು ಈರುಳ್ಳಿ

ಇನ್ನು ಬೆಳ್ಳುಳ್ಳಿ ಮತ್ತು ಈರುಳ್ಳಿ ವಾಸನೆ ಕೂಡಾ ಹಾವುಗಳಿಗೆ ಆಗಿ ಬರಲ್ಲ. ಬೆಳ್ಳುಳ್ಳಿ ಮತ್ತು ಈರುಳ್ಳಿಗೆ ಒಂದು ರೀತಿಯ ಘಾಟು ವಾಸನೆ ಇರುತ್ತದೆ. ಇದು ಹಾವುಗಳಿಗೆ ಇಷ್ಟ ಆಗಲ್ಲ. ನೀವು ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ಪುಡಿಮಾಡಿ, ಹಾವುಗಳು ಬರಬಹುದಾದ ಜಾಗಕ್ಕೆ ಸಿಂಪಡಿಸಿದರೆ, ಹಾವು ಆ ಕಡೆ ತಲೆಕೂಡಾ ಹಾಕಲ್ಲ. ಬೆಳ್ಳುಳ್ಳಿ, ಈರುಳ್ಳಿಯನ್ನು ಪುಡಿಮಾಡಿ ನೀರಿನಲ್ಲಿ ಬೆರಸಿ, ಗೋಡೆ ಸಂದು, ಬಾಗಿಲಿನ ಸಂದುಗಳಲ್ಲಿ ಸಿಂಪಡಿಸಿದ್ರೆ, ನಿಮ್ಮ ಮನೆ ಹಾವುಗಳಿಂದ ಮುಕ್ತವಾಗುತ್ತದೆ.

ಹೊಗೆ

ಹಾವುಗಳ ಜೀವನ ಅತ್ಯಂತ ಸೂಕ್ಷ್ಮ. ವಿಷಕಾರಿ ಹಾವುಗಳಿಗೆ ಹೊಗೆ ಕಂಡರೆ ಆಗಿಬರಲ್ಲ. ಹೊಗೆಯನ್ನು ತುಂಬಾ ಹೊತ್ತು ಉಸಿರಾಡಲು ಹಾವುಗಳು ಇಷ್ಟ ಪಡಲ್ಲ. ಯಾವಾಗಲಾದರೂ ನಿಮಗೆ ಮನೆಯ ಸುತ್ತಲೂ ಹಾವುಗಳು ಇವೆ ಎನ್ನುವ ಅನುಮಾನ ಬಂದರೆ, ಅಲ್ಲಿ ಹೊಗೆ ಬಿಡಿ. ಕೆಲವು ಒಣಗಿದ ಎಲೆಗಳು ಅಥವಾ ಅಗರಬತ್ತಿಗಳನ್ನು ಸುಟ್ಟು ಹೊಗೆ ಎಬ್ಬಿಸಿ. ಹೊಗೆ ವಾಸನೆ ಬಂದ್ರೆ ಹಾವುಗಳು ಜಾಗ ಖಾಲಿ ಮಾಡುತ್ತವೆ.

ನಿಂಬೆ, ವಿನೆಗರ್ ಮತ್ತು ದಾಲ್ಚಿನ್ನಿ ಎಣ್ಣೆ

ನಿಂಬೆ ರಸ, ವಿನೆಗರ್ ಮತ್ತು ಕೆಲವು ಹನಿ ದಾಲ್ಚಿನ್ನಿ ಎಣ್ಣೆಯನ್ನು ಕೂಡಾ ಹಾವು ಇಷ್ಟ ಪಡಲ್ಲ. ಈ ಮೂರನ್ನೂ ಸಮಾನ ಪ್ರಮಾಣದಲ್ಲಿ ಬೆರೆಸಿ ಈ ಮಿಶ್ರಣವನ್ನು ನಿಮ್ಮ ಮನೆಯ ಸುತ್ತಲೂ ಸಿಂಪಡಿಸಿ. ಇದರ ವಾಸನೆಯು ಹಾವುಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುತ್ತದೆ. ಹಾವು ಮುಕ್ತ ಪರಿಸರ ನಿಮ್ಮದಾಗುತ್ತದೆ.

ಅಮೋನಿಯಾ ಅನಿಲ

ಅಮೋನಿಯಾ ಅನಿಲ ಅತ್ಯಂತ ಕೆಟ್ಟ ವಾಸನೆ ಸೂಸುತ್ತದೆ. ಸಹಿಸಲು ಅಸಾಧ್ಯವಾದ ಕಟು ವಾಸನೆ ಅದು. ಹಾವುಗಳು ಅಮೋನಿಯದ ಕಟುವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾವಿನ ಪ್ರವೇಶ ದ್ವಾರಗಳ ಬಳಿ ಅಮೋನಿಯದ ಸಣ್ಣ ಪಾತ್ರೆಗಳನ್ನು ಇಡುವುದರಿಂದ ಹಾವುಗಳನ್ನು ದೂರವಿಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+