ವಿಡಿಯೋ: ಬುಲ್ಡೋಜರ್‌ನಲ್ಲಿ ಕುಳಿತು ಗ್ರ್ಯಾಂಡ್ ಎಂಟ್ರಿ ವೇಳೆ ಕೆಳಗೆ ಬಿದ್ದ ಕಪಲ್ಸ್
ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುವ ಬಹುತೇಕ ವಿಡಿಯೋಗಳು ನೋಡುಗರ ಗಮನ ಸೆಳೆಯುವಂತಿರುತ್ತವೆ. ಕೆಲವು ವಿಡಿಯೋಗಳು ತಿಳುವಳಿಕೆಯನ್ನೂ ನೀಡುತ್ತವೆ. ಕೆಲವು ವಿಡಿಯೋಗಳು ಹಾಸ್ಯದಾಯಕವಾಗಿರುತ್ತವೆ. ಇನ್ನೂ ಕೆಲವು ನೋಡುಗರಿಗೆ ನಗೆ ತರಿಸಿದರೆ ವಿಡಿಯೋದಲ್ಲಿದ್ದವರಿಗೆ ಪ್ರಾಣಕ್ಕೆ ಕುತ್ತು ತಂದಿರುತ್ತವೆ. ಇಂಥ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ನೋಡಿದವರು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಅದ್ದೂರಿ ಮದುವೆಯಲ್ಲಿ ಭರ್ಜರಿ ಎಂಟ್ರಿ ಕೊಡಲು ಹೋಗಿ ಬುಲ್ಡೋಜರ್‌ನಿಂದ ವಧು-ವರ ಇಬ್ಬರೂ ಕೆಳಗೆ ಬಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಅದು ಅದ್ದೂರಿ ಮದುವೆ ಸಮಾರಂಭ. ಮದುವೆ ಅದ್ದೂರಿಯಾಗಿರಬೇಕಾದ್ರೆ ಇನ್ನೂ ವಧು-ವರ ಕೂಡ ನೆರೆದವರೆಲ್ಲರ ಕಂಗೊಳಿಸುವಂತೆ ಉಡುಪು ಧರಿಸಿದ್ದರು. ವಧು ಸುಂದರವಾದ ಬಿಳಿ ಗೌನ್ ಧರಿಸಿದ್ದರೆ, ವರನು ಬ್ಲಾಕ್ ಸೂಟ್ ಧರಿಸಿದ್ದಾರೆ. ಜೊತೆಗೆ ಈ ಸಮಾರಂಭದಲ್ಲಿ ಇಬ್ಬರ ಗ್ರ್ಯಾಂಡ್ ಎಂಟ್ರಿ ಕೂಡ ನಡೆದಿದೆ. ಅದು ಹೇಗೆಂದರೆ, ಅಲಂಕಾರದಿಂದ ಆಕರ್ಷಕವಾಗಿದ್ದ ಬುಲ್ಡೋಜರ್‌ನಲ್ಲಿ ಕುಳಿತ ವಧು ವರ ಮದುವೆ ಸಮಾರಂಭಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುವುದು. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ನೆರೆದೆವರೆಲ್ಲಾ ಹುಬ್ಬೇರಿಸಿ ತಲೆ ಎತ್ತಿ ನೋಡುತ್ತಿದ್ದಾರೆ.
ಕೆಲವರು ತಮ್ಮ ಕೈಯಲ್ಲಿದ್ದ ಮೊಬೈಲ್ ಕ್ಯಾಮರಾ ತೆಗೆದು ಈ ಸುಂದರವಾದ ಸಮಯವನ್ನು ಸೆರೆ ಹಿಡಿಯುತ್ತಿದ್ದಾರೆ. ಬುಲ್ಡೋಜರ್‌ನಲ್ಲಿ ಕುಳಿತ ವಧು-ವರ ಇಬ್ಬರೂ ಸಂತೋಷದಿಂದ ತಮ್ಮವರತ್ತ ಕೈಬೀಸುತ್ತಿದ್ದಾರೆ. ಈ ವೇಳೆ ಬುಲ್ಡೋಜರ್ ವಧು-ವರರನ್ನು ಕೆಳಗಿಳಿಸಬೇಕು ಎನ್ನುವಷ್ಟರಲ್ಲಿ ದಂಪತಿಗಳು ಕುಳಿತಿದ್ದ ಅಲಂಕಾರಗೊಂಡ ತೊಟ್ಟಿಲು ತಲೆ ಕೆಳಗಾಗಿ ಮುರಿದು ಬಿದ್ದಿದೆ. ತಕ್ಷಣ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಆನಂದದ ಅಲೆಯಲ್ಲಿ ತೇಲಾಡುತ್ತಿದ್ದವರೆಲ್ಲಾ ನೋಡ ನೋಡುತ್ತಿದ್ದಂತೆ ಗಾಬರಿಗೊಳಗಾಗುತ್ತಾರೆ. ಈ ದೃಶ್ಯವನ್ನು ಸಮಾರಂಭದಲ್ಲಿದ್ದವರು ಸೆರೆ ಹಿಡಿದ್ದಾರೆ.

ಈ ಭಯಾನಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 15 ಸೆಕೆಂಡುಗಳ ಕ್ಲಿಪ್ ಅನ್ನು ನವೆಂಬರ್ 28 ರಂದು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು 30,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಜೊತೆಗೆ ಹಾಸ್ಯಾಸ್ಪದ ಕಾಮೆಂಟ್‌ಗಳನ್ನು ಈ ವಿಡಿಯೋ ಪಡೆದುಕೊಂಡಿದೆ.
JCB wala bhul gaya Shaadi ka order hai 🤦♂️😝🤣🤣🤣 pic.twitter.com/wXJMDdjPb0
— Kungfu Pande 🇮🇳2.0 (@pb3060) November 28, 2021
ಓರ್ವ ನೆಟ್ಟಿಗ, "ಜೆಸಿಬಿ ವಾಲಾ ಭುಲ್ ಗಯಾ ಶಾದಿ ಕಾ ಆರ್ಡರ್ ಹೈ," (JCB wala bhul gaya Shaadi ka order hai) 'ಜೆಸಿಬಿ ಚಾಲಕ ಇದು ಮದುವೆಯಾ ಆರ್ಡರ್ ಅನ್ನೋದನ್ನ ಮರೆತಿದ್ದಾನೆ' ಎಂದು ಪೋಸ್ಟ್ ಮಾಡಿದ್ದಾರೆ.
ಕ್ಲಿಪ್ ಹಲವಾರು ನೆಟಿಜನ್‌ಗಳಿಂದ ಹಲವಾರು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದು ಎಷ್ಟು ಅಪಾಯಕಾರಿ ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.
"ಇದು ತುಂಬಾ ಅಪಾಯಕಾರಿ" (This is so dangerous) ಎಂದು ಮತ್ತೊಬ್ಬರು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರರು, "ಅವರು ಸೇಕ್ರೆಡ್ ಗೇಮ್ಸ್‌ನಿಂದ ಸ್ಫೂರ್ತಿ ಪಡೆದಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.
ನಿಮಗೆ ನಿಮ್ಮಲ್ಲಿ ಕಾರ್ಟೂನ್ ಆಗಲು ಅಧಿಕ ಕುತೂಹಲವಿದೆ. "ಕಾರ್ಟೂನ್ ಬನ್ನೇ ಕಾ ಶಾಕ್ ಹಿ ಖತರ್ನಾಕ್ ಹೈ ಆಪ್ನೆ ಆಪ್ ಮೆ ಭಿ" (Cartoon banne ka shauk hi khatarnak hai apne aap me bhai)
ಇತ್ತೀಚಿನ ದಿನಗಳಲ್ಲಿ ಜನರು ಆಧುನೀಕರಣದಿಂದಾಗಿ ಮದುವೆಯ ಆಚರಣೆಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಇವರು ಅದಕ್ಕೆ ಅರ್ಹರು(Vivah sanskar ka mazaak bna ke rakh diya hai aajkal logon ne modernisations ke chakkar me....they deserve it)
ಖತ್ರೋನ್ ಕೆ ಖಿಲಾಡಿ...ಅವರು ಈ ರೀತಿಯ ಸಾಹಸವನ್ನು ಆರಿಸಿಕೊಂಡಾಗ ಇದನ್ನು ಪೂರ್ಣವಾಗಿ ಆನಂದಿಸಬೇಕು.(khatro ke khiladi...When the chose this type of adventure then they should get full mazzaa of the act)
ಈ ಕೆಳಗೆ ಕಾಮೆಂಟ್ ನೋಡಬಹುದು
Why do people come up with weird ideas can someone explain 🙆🙆
— Happy Feet 🇮🇳 (@happyfeet_286) November 29, 2021
Recommended Video
They got inspired by Nawazuddin from sacred games pic.twitter.com/TqbzhsCuQh
— Kungfu Pande 🇮🇳2.0 (@pb3060) November 29, 2021
-
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications