ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಟಗ್ಲಿಪ್ಟಿನ್ ಪೇಟೆಂಟ್ ಮುಕ್ತಾಯ; ಡಯಾಬಿಟಿಸ್ ರೋಗಿಗಳಿಗೆ ಅಗ್ಗಕ್ಕೆ ಸಿಗಲಿದೆ ಸೂಪರ್ ಹಿಟ್ ಔಷಧ

|
Google Oneindia Kannada News

ನವದೆಹಲಿ, ಜುಲೈ 12: ಡಯಾಬಿಟಿಕ್ ರೋಗಿಗಳಿಗೆ ಸಿಹಿ ಸುದ್ದಿ ಇದೆ. ಮಧುಮೇಹ ರೋಗಿಗಳಿಗೆ ಸಾಮಾನ್ಯವಾಗಿ ನೀಡಲಾಗುವ ಗ್ಲಿಪ್ಟಿನ್ ಮಾತ್ರೆಗಳು ಇನ್ಮುಂದೆ ಭಾರೀ ಅಗ್ಗದ ದರಕ್ಕೆ ಸಿಗುವ ಸಾಧ್ಯತೆ ಇದೆ. ಅದಕ್ಕೆ ಕಾರಣ ಸಿಟಗ್ಲಿಪ್ಟಿನ್ ಔಷಧದ ಪೇಟೆಂಟ್ ಅವಧಿ ಮುಕ್ತಾಯಗೊಂಡಿರುವುದು.

ಪೇಟೆಂಟ್ ಮುಗಿದಿರುವ ಹಿನ್ನೆಲೆಯಲ್ಲಿ ಸಿಟಗ್ಲಿಪ್ಟಿನ್‌ನ ಜೆನರಿಕ್ ಔಷಧ ತಯಾರಿಕೆಗೆ ಹಲವು ಫಾರ್ಮಾ ಕಂಪನಿಗಳು ಮುಗಿಬಿದ್ದಿವೆ. ಇದರಿಂದ ಸಿಟಗ್ಲಿಪ್ಟಿನ್ ಔಷಧದ ಬೆಲೆಯಲ್ಲಿ ಕನಿಷ್ಠವೆಂದರೂ ಶೇ. ೩೦ರಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ.

ಮಾರ್ಚ್ 2024ಕ್ಕೆ 10 ಸಾವಿರ ಜನೌಷಧಿ ಕೇಂದ್ರ ಸ್ಥಾಪನೆಮಾರ್ಚ್ 2024ಕ್ಕೆ 10 ಸಾವಿರ ಜನೌಷಧಿ ಕೇಂದ್ರ ಸ್ಥಾಪನೆ

ಒಂದು ವರ್ಷದ ಹಿಂದೆ ವಿಲ್ಡಾಗ್ಲಿಪ್ಟಿನ್ ಎಂಬ ಔಷಧ ಕೂಡ ಪೇಟೆಂಟ್‌ಮುಕ್ತವಾಗಿತ್ತು. ಅದಾದ ಬಳಿಕ ಅದರ ಜೆನೆರಿಕ್ ಮೆಡಿಸಿನ್ ಉತ್ಪಾದನೆ ಶುರುವಾದ ಬಳಿಕ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಈಗ ವಿಲ್ಡಾಗ್ಲಿಪ್ಟಿನ್‌ಗಿಂತಲೂ ಸಿಟಗ್ಲಿಪ್ಟಿನ್ ಔಷಧ ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದು ಪ್ರಯೋಗಗಳಿಂದ ಸಾಬೀತಾಗಿದೆಯಂತೆ. ಸಿಟಗ್ಲಿಪ್ಟಿನ್ ಔಷಧದಿಂದ ಅಡ್ಡಪರಿಣಾಮಗಳು ಕಡಿಮೆ. ಅದರಲ್ಲೂ ಹೃದಯಕ್ಕೆ ಅಪಾಯ ಆಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ, ಸಿಟಾಗ್ಲಿಪ್ಟಿನ್ ಪೇಟೆಂಟ್ ಮುಕ್ತವಾಗಿರುವುದು ಸಕ್ಕರೆ ಕಾಯಿಲೆಯವರಿಗೆ ಹೆಚ್ಚು ಸಿಹಿಯ ಸುದ್ದಿ ಹೌದು.

ಸಿಟಗ್ಲಿಪ್ಟಿನ್ ಹೇಗೆ ಕೆಲಸ ಮಾಡುತ್ತದೆ?

ಸಿಟಗ್ಲಿಪ್ಟಿನ್ ಹೇಗೆ ಕೆಲಸ ಮಾಡುತ್ತದೆ?

ಈ ಔಷಧವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಗ್ಲಿಪ್ಟಿನ್ಸ್ ಎಂಬ ವಿಭಾಗಕ್ಕೆ ಇದು ಸೇರಿದ್ದು. ಸಕ್ಕರೆ ಪ್ರಮಾಣ ಹೆಚ್ಚಿಸುವ ಡಿಪಿಪಿ-4 ಎಂಬ ಪ್ರೋಟೀನ್ ಅನ್ನು ಇದು ದೇಹದಲ್ಲಿ ನಿಯಂತ್ರಿಸುತ್ತದೆ. ಇದರಿಂದ ದೇಹದಲ್ಲಿ ಮೇದೋಜೀರಕ ಗ್ರಂಥಿಯಿಂದ (Pancreas) ಇನ್ಸೂಲಿನ್ ಹೆಚ್ಚು ಸ್ರವಿಸುವಂತೆ ಮಾಡುತ್ತದೆ. ಅ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೆ ಕಡಿವಾಣ ಹಾಕುತ್ತದೆ.

ಗ್ಲಿಪ್ಟಿನ್ಸ್ ಔಷಧವು ಟೈಪ್-2 ಡಯಾಬಿಟಿಸ್ ರೋಗಕ್ಕೆ ನೀಡಲಾಗುತ್ತದೆ. ಸಾಕಷ್ಟು ಇನ್ಸುಲಿನ್ ಉತ್ಪಾದನೆ ಆಗದೇ ಇದ್ದಾಗ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗದಂತೆ ನಿಯಂತ್ರಿಸುವ ಶಕ್ತಿ ದೇಹಕ್ಕೆ ಇರುವುದಿಲ್ಲ. ಆಗ ಈ ಔಷಧ ನೆರವಿಗೆ ಬರುತ್ತದೆ.

ಮೊದಲು ಓದಿ: ಕೊರೊನಾ ಬಂದು ಹೋದ್ರೆ ಅಂಟಿಕೊಳ್ಳುವುದು ಹೇಗೆ ಮಧುಮೇಹ!?ಮೊದಲು ಓದಿ: ಕೊರೊನಾ ಬಂದು ಹೋದ್ರೆ ಅಂಟಿಕೊಳ್ಳುವುದು ಹೇಗೆ ಮಧುಮೇಹ!?

ವೈದ್ಯರ ಶಿಫಾರಸು

ವೈದ್ಯರ ಶಿಫಾರಸು

"14 ವರ್ಷಗಳಿಂದ ಈ ಔಷಧದ ಪ್ರಯೋಗ ಮಾಡಿದ್ದೇವೆ. ಗ್ಲಿಪ್ಟಿನ್ಸ್ ಔಷಧವನ್ನು ಸಂಪೂರ್ಣವಾಗಿ ನಂಬಬಹುದು. ಇದರ ಹೆಚ್ಚು ಅಡ್ಡಪರಿಣಾಮಗಳಿಲ್ಲ. ಸಾಮಾನ್ಯವಾಗಿ ಬೇರೆ ಡಯಾಬಿಟಿಕ್ ಔಷಧಗಳು ಹೈಪೋಗ್ಲೈಕೇಮಿಯಾ ಎಂಬ ಅಡ್ಡಪರಿಣಾಮ ಉಂಟು ಮಾಡುತ್ತವೆ. ಇದರಿಂದ ರೋಗಿಗಳಿಗೆ ಶೀತ ಎಂದರೆ ಆಗುವುದಿಲ್ಲ. ಆದರೆ, ಈ ಅಡ್ಡಪರಿಣಾಮವು ಗ್ಲಿಪ್ಟಿನ್ಸ್‌ನಲ್ಲಿ ಇರುವುದಿಲ್ಲ. ಇದನ್ನು ಯಾವುದೇ ವಯೋಮಾನದವರಿಗೂ ನೀಡಬಹುದು" ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯರೊಬ್ಬರು ಹೇಳುತ್ತಾರೆ.

ಪ್ರತೀ ಹತ್ತು ಡಯಾಬಿಟಿಕ್ ರೋಗಿಗಳಲ್ಲಿ ನಾಲ್ವರಿಗಾದರೂ ಗ್ಲಿಪ್ಟಿನ್ಸ್ ಔಷಧವನ್ನು ವೈದ್ಯರು ಬರೆದುಕೊಡುತ್ತಾರೆ. ಅದರಲ್ಲೂ ಸಿಟಾಗ್ಲಿಪ್ಟಿನ್ ಅನ್ನು ವೈದ್ಯರು ಹೆಚ್ಚು ಶಿಫಾರಸು ಮಾಡುತ್ತಾರೆ. ಡಾ. ಮಿಶ್ರಾ ಪ್ರಕಾರ ಈ ಔಷಧವು ಮಧುಮೇಹ ರೋಗಿಗಳ ಹೃದಯಕ್ಕೆ ಅಪಾಯ ಉಂಟು ಮಾಡುವುದಿಲ್ಲವಂತೆ.

ಸ್ಪರ್ಧೆ ಹೆಚ್ಚಾಯ್ತು

ಸ್ಪರ್ಧೆ ಹೆಚ್ಚಾಯ್ತು

ವಾಸ್ತವದ ಸಂಗತಿ ಎಂದರೆ ಕೆಲ ವರ್ಷಗಳ ಹಿಂದಿನವರೆಗೂ ಗ್ಲಿಪ್ಟಿನ್ಸ್ ಔಷಧವೇ ಡಯಾಬಿಟಿಸ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿದ್ದು. ಆದರೆ, ಗ್ಲಿಫ್ಲೋಜಿನ್ಸ್ ಎಂದು ಕರೆಯಲಾಗುವ ಎಸ್‌ಜಿಎಲ್‌ಟಿ-2 ಪ್ರತಿಬಂಧಕ (Inibitors) ಎಂಬ ಹೊಸ ಮಾದರಿ ಔಷಧ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಈ ಔಷಧವು ಹೃದಯಕ್ಕೂ ಒಳ್ಳೆಯದಾದ್ದರಿಂದ ಹೆಚ್ಚೆಚ್ಚು ಬಳಕೆಯಾಗತೊಡಗಿದೆ. ಹಾಗೆಯೇ ಟೆನೆಲಿಗ್ಲಿಪ್ಟಿನ್ ಎಂಬ ಔಷಧ ಕೂಡ ಕಡಿಮೆ ಬೆಲೆಗೆ ಬಂದಿತು. ಇವೆಲ್ಲಾ ಸ್ಪರ್ಧೆಯಿಂದಾಗಿ ಸಿಟಗ್ಲಿಪ್ಟಿನ್‌ಗೆ ಬೇಡಿಕೆ ಕಡಿಮೆ ಆಗಿತ್ತು.

ಈಗ ಸಿಟಗ್ಲಿಪ್ಟಿನ್ಸ್ ಔಷಧದ ಬೆಲೆ ಇಳಿಕೆ ಆಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಇದು ಮತ್ತೆ ಪಾರುಪತ್ಯ ಮಾಡಬಹುದು. ಹೆಚ್ಚೆಚ್ಚು ವೈದ್ಯರು ಈ ಔಷಧವನ್ನು ತಮ್ಮ ರೋಗಿಗಳಿಗೆ ಶಿಫಾರಸು ಮಾಡುವ ಸಾಧ್ಯತೆ ಇದೆ.

ಎಷ್ಟು ಬೆಲೆ ಇಳಿಕೆಯಾಗಬಹುದು?

ಎಷ್ಟು ಬೆಲೆ ಇಳಿಕೆಯಾಗಬಹುದು?

ಸದ್ಯ ಪೇಟೆಂಟ್ ಜೊತೆಗೆ ಉತ್ಪಾದನೆಯಾಗುವ ಸಿಟಗ್ಲಿಪ್ಟಿನ್‌ನ ಒಂದು ಮಾತ್ರೆಗೆ 20ಕ್ಕಿಂತ ಹೆಚ್ಚು ಬೆಲೆ ಇದೆ. ಈಗ ಜೆನೆರಿಕ್ ಮೆಡಿಸಿನ್ ತಯಾರಿಕೆಯಿಂದ ಒಂದು ಮಾತ್ರೆ ಬೆಲೆ ಆರೇಳು ರೂಪಾಯಿಗೆ ಸಿಗಬಹುದು.

ಝೈಡಸ್ ಲೈಫ್ ಸೈನ್ಸಸ್, ಗ್ಲೆನ್‌ಮಾರ್ಕ್, ಡಾ. ರೆಡ್ಡಿಸ್ ಲ್ಯಾಬ್ ಮೊದಲಾದ ಪ್ರಮುಖ ಫಾರ್ಮಾ ಕಂಪನಿಗಳು ಸಿಟಗ್ಲಿಪ್ಟಿನ್‌ನ ಜೆನೆರಿಕ್ ಔಷಧವನ್ನು ತಯಾರಿಸುತ್ತಿವೆ. ಗುಣಮಟ್ಟಕ್ಕೆ ರಾಜಿಯಾಗದೇ ಔಷಧವನ್ನು ತಯಾರಿಸಿದರೆ ಸಿಟಗ್ಲಿಪ್ಟಿನ್ ಡಯಾಬಿಟಿಸ್ ರೋಗಿಗಳ ಪಾಲಿಗೆ ನೆಚ್ಚಿನ ಔಷಧವಾಗಲಿದೆ.

(ಒನ್ಇಂಡಿಯಾ ಸುದ್ದಿ)

Recommended Video

ಭಾರತದ ವಿರುದ್ಧ ಇಂಗ್ಲೆಂಡ್ ಹೀನಾಯವಾಗಿ ಸೋತ್ಮೇಲೆ ನಗೆ ಪಾಟಲಿಗೀಡಾದ Michael Vaughan | *Cricket | OneIndia

English summary
Many Pharma companies are producing generic medicines of Sitagliptin which has gone out of patent. This may reduce the price by more than 60%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X