ಸಿರಾ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಆಸ್ತಿ ವಿವರ
ತುಮಕೂರು, ಅ. 14: ಸಿರಾ ವಿಧಾನಸಭೆ ಉಪ ಚುನಾವಣೆ ಕದನದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರು ನಾಮಪತ್ರ ಸಲ್ಲಿಸಿದ್ದು, ಜೊತೆಗೆ ಆಸ್ತಿ ವಿವರಗಳುಳ್ಳ ಅಫಿಡವಿಟ್ ಕೂಡಾ ನೀಡಿದ್ದಾರೆ.
ಆರು ಬಾರಿ ಶಾಸಕ ಟಿ.ಬಿ.ಜಯಚಂದ್ರ ಅವರು ಕಳೆದ ಬಾರಿ ಅನುಭವಿಸಿದ ಸೋಲನ್ನು ಮರೆತು ಮತ್ತೆ ಗೆಲುವು ಕಾಣಲು ಮುಂದಾಗಿದ್ದು, ಕಾಂಗ್ರೆಸ್ ಕೂಡಾ ಈ ಕ್ಷೇತ್ರವನ್ನು ಪುನಃ ವಶಪಡಿಸಿಕೊಳ್ಳಲು ಹವಣಿಸುತ್ತಿದೆ. ಕುಂಚಿಟಿಗ ಒಕ್ಕಲಿಗರು ಮತ್ತು ಎಸ್‌ಸಿ, ಎಸ್‌ಟಿ, ಯಾದವರು, ಮುಸ್ಲಿಂಮರು ಕ್ಷೇತ್ರದ ಶಾಸಕರು ಯಾರಾಗಬೇಕು ಎಂದು ನಿರ್ಧರಿಸಲಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಿ. ಸತ್ಯನಾರಾಯಣ ಅವರ ಎದುರು ಮಾಜಿ ಸಚಿವ ಟಿ.ಬಿ. ಜಯಚಂದ್ರ ಸುಮಾರು 10 ಸಾವಿರ ಮತಗಳ ಅಂತರದರಿಂದ ಸೋತಿದ್ದರು. ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಉಪ ಚುನಾವಣೆ ಎದುರಾಗಿದೆ. ನವೆಂಬರ್ 3ರಂದು ಮತದಾನ ಹಾಗೂ ನವೆಂಬರ್ 10ರಂದು ಮತ ಎಣಿಕೆಯಾಗಲಿದೆ.

ಟಿ.ಬಿ ಜಯಚಂದ್ರ :
ಒಟ್ಟು ಆಸ್ತಿ: 14 ಕೋಟಿ ರು
ವಾರ್ಷಿಕ ಆದಾಯ: 68, 01, 586 ರುಪಾಯಿ
ಚರಾಸ್ತಿ: 1,33, 81, 409 ರು
* 100 ಗ್ರಾಂ ಚಿನ್ನಾಭರಣ
* 39.35 ಲಕ್ಷ ರು ಮೌಲ್ಯದ ಕಾರು, 5 ಲಕ್ಷ ಮೌಲ್ಯದ ಕಾರು
ಸ್ಥಿರಾಸ್ತಿ: ಆರ್. ಟಿ ನಗರದಲ್ಲಿ ನಿವೇಶನ ಮೌಲ್ಯ 8.5 ಕೋಟಿ ರು
ಆರ್ ಎಂ ವಿ 2ನೇ ಹಂತದಲ್ಲಿ 13.10 ಕೋಟಿ ರು ಮೌಲ್ಯದ ಕಟ್ಟಡ.
ಸಾಲ: 1.47 ಕೋಟಿ ರು
* ತಮ್ಮ ಮೇಲೆ 2 ಕ್ರಿಮಿನಲ್ ಕೇಸ್ ಗಳಿವೆ ಎಂದಿದ್ದಾರೆ.
ಟಿ.ಬಿ ಜಯಚಂದ್ರ ಪತ್ನಿ ಜಿ.ಎಚ್ ನಿರ್ಮಲಾ
ಒಟ್ಟು ಆಸ್ತಿ: 8 ಕೋಟಿ ರು
ವಾರ್ಷಿಕ ಆದಾಯ: 11, 69, 227 ರು
ಚರಾಸ್ತಿ ಮೌಲ್ಯ: 60, 09, 092 ರು
* 11. 44 ಲಕ್ಷ ರು ಮೌಲ್ಯದ ಚಿನ್ನಾಭರಣ, 1.50 ಲಕ್ಷ ರು ಬೆಳ್ಳಿ
ಸ್ಥಿರಾಸ್ತಿ: 13.10 ಕೋಟಿ ರು
ಆರ್ ಎಂವಿ 2ನೇ ಹಂತದಲ್ಲಿ 4.60 ಕೋಟಿ ರು ಮೌಲ್ಯದ ಮನೆ
ಕಳ್ಳಂಬೆಳ್ಳ ಬಳಿ 3.22 ಎಕರೆ ಜಮೀನು, ತೋಟದ ಮನೆ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 6.25 ಕೋಟಿ ರು ಮೌಲ್ಯದ ವಾಣಿಜ್ಯ ಕಟ್ಟಡ
ಸಾಲ: 15 ಲಕ್ಷ ರು
* ತಮ್ಮ ಮೇಲೆ ಯಾವುದೇ ಕ್ರಿಮಿನಲ್ ಕೇಸುಗಳಿಲ್ಲ ಎಂದಿದ್ದಾರೆ.












Click it and Unblock the Notifications