ಬ್ರಹ್ಮ ಬಂದರೂ ಭೂಮಿ ಮೇಲೆ ಪ್ರಳಯ ತಪ್ಪಿಸಲು ಆಗುವುದಿಲ್ಲ..!
ಮಾನವ ಅದೆಷ್ಟೇ ತಂತ್ರಜ್ಞಾನ ಕಂಡುಹಿಡಿದರೂ ಪ್ರಕೃತಿ ಎದುರು ತಲೆಬಾಗುವ ಪರಿಸ್ಥಿತಿ ಇದೆ. ಇದನ್ನು ಪದೇ ಪದೆ ಸಾಬೀತು ಮಾಡುತ್ತಿರುವ ಪ್ರಕೃತಿ, ಇದೀಗ ಕ್ಷುದ್ರಗ್ರಹದ ರೂಪದಲ್ಲಿ ಭೂಮಿಗೆ ಅಪ್ಪಳಿಸಲು ಸಜ್ಜಾಗಿದೆ. ಇನ್ನೂ 6 ತಿಂಗಳ ಅಂತರದಲ್ಲಿ ಭೂಮಿಗೆ ಬೃಹತ್ ಕ್ಷುದ್ರಗ್ರಹವೊಂದು ಅಪ್ಪಳಿಸುವ ಸಾಧ್ಯತೆ ಇದೆ.
ಇನ್ನು ಈ ಕಾರಣಕ್ಕೆ ಸಭೆ ಸೇರಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನಿಗಳು, ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವುದನ್ನು ತಡೆಯಲು ಪ್ಲ್ಯಾನ್ ರೂಪಿಸಿದ್ದಾರೆ. ಆದರೆ ತಮ್ಮ ಯಾವುದೇ ಪ್ಲ್ಯಾನ್ ಕೂಡ ವರ್ಕೌಟ್ ಆಗದು ಎಂಬುದನ್ನ ವಿಜ್ಞಾನಿಗಳು ಮನವರಿಕೆ ಮಾಡಿಕೊಂಡಿದ್ದಾರೆ. '2021 PDC' ಹೆಸರಿನ ಕ್ಷುದ್ರಗ್ರಹ ಭೂಮಿಗೆ ಸುಮಾರು 56 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿದ್ದು, ಭೂಮಿ ಕಡೆಗೆ ಓಡಿ ಬರುತ್ತಿದೆ.
ಇನ್ನು 6 ತಿಂಗಳಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಆದರೆ ಈ ಕ್ಷುದ್ರಗ್ರಹ ನಾಶ ಮಾಡಲು ಅಥವಾ ಅದರ ದಿಕ್ಕು ಬದಲಿಸಲು ಸಭೆ ನಡೆಸಲಾಯಿತು. ಸಭೆಯಲ್ಲಿ ವಿಜ್ಞಾನಿಗಳು ಕೈಚೆಲ್ಲಿ ಕೂತಿದ್ದು, ಈಗ ಮಾನವನ ಬಳಿ ಲಭ್ಯವಿರುವ ತಂತ್ರಜ್ಞಾನ ಏನಕ್ಕೂ ಸಾಲದು ಎಂದಿದ್ದಾರೆ. ಹೀಗಾಗಿ ಭೂಮಿ ಮೇಲೆ ಪ್ರಳಯದ ಭೀತಿ ಮತ್ತೆ ಶುರುವಾಗಿದೆ.

ಜರ್ಮನಿಗೆ ಅಪ್ಪಳಿಸುತ್ತಾ..?
6 ತಿಂಗಳ ಒಳಗಾಗಿ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಲಿದ್ದು, ಉತ್ತರ ಆಫ್ರಿಕಾ ಸೇರಿದಂತೆ ಯುರೋಪ್‌ನ ಕೆಲವು ಪ್ರದೇಶಗಳಿಗೆ ಭಾರಿ ಹಾನಿಯಾಗಲಿದೆ. ಆದರೆ ವಿಜ್ಞಾನಿಗಳ ಅಂದಾಜಿನ ಪ್ರಕಾರ ‘2021 PDC' ಹೆಸರಿನ ಈ ಕ್ಷುದ್ರಗ್ರಹ ಜರ್ಮನಿಗೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ. 700 ಮೀಟರ್ ವಿಸ್ತಿರ್ಣ ಹೊಂದಿರುವ ‘2021 PDC' ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಅಣುಬಾಂಬ್ ಸ್ಫೋಟಕ್ಕಿಂತ ದೊಡ್ಡದಾದ ವಿನಾಶ ಸಂಭವಿಸಲಿದೆ. ಹೀಗಾಗಿ ಬಾಹ್ಯಾಕಾಶ ವಿಜ್ಞಾನಿಗಳು ಚಿಂತಿತರಾಗಿದ್ದು, ಕ್ಷುದ್ರ ಕಂಟಕದಿಂದ ರಕ್ಷಣೆಗೆ ತಂತ್ರ ಹೆಣೆಯುತ್ತಿದ್ದಾರೆ.

ವಿಜ್ಞಾನಿಗಳ ಪಾಲಿಗೆ ಮಹತ್ವದ ದಿನ..!
ಒಂದು ಕಡೆ ಆತಂಕ, ಮತ್ತೊಂದು ಕಡೆ ಕುತೂಹಲ. ಹೀಗೆ ಎರಡನ್ನೂ ಸೃಷ್ಟಿಸಿದೆ ‘2021 PDC' ಕ್ಷುದ್ರಗ್ರಹ. ಭೂಮಿಗೆ ಸಮೀಪದಲ್ಲಿ ಕ್ಷುದ್ರಗ್ರಹ ಹಾದು ಹೋಗುವ ಹಿನ್ನೆಲೆಯಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಹಲವಾರು ಮಹತ್ವದ ಸಂಶೋಧನೆಗೆ ತಯಾರಿ ನಡೆಸಿದ್ದಾರೆ. ನಾಸಾ ವಿಜ್ಞಾನಿಗಳು ನಿದ್ದೆಯನ್ನೇ ಮರೆತು ‘2021 PDC' ಕ್ಷುದ್ರಗ್ರಹ ಬರುವಿಕೆಗೆ ಕಾಯುತ್ತಿದ್ದಾರೆ. ಮತ್ತೊಂದ್ಕಡೆ ‘2021 PDC' ಕ್ಷುದ್ರಗ್ರಹಕ್ಕೆ ನ್ಯೂಕ್ಲಿಯರ್ ಬಾಂಬ್ ಢಿಕ್ಕಿ ಹೊಡೆಸಿ ಬಾಹ್ಯಾಕಾಶದಲ್ಲೇ ಕ್ಷುದ್ರಗ್ರಹ ಸ್ಫೋಟಿಸುವ ಐಡಿಯಾ ಕೂಡ ಸಿಕ್ಕಿದೆ. ಆದರೆ ಯೋಜನೆಗಳು ಕಾರ್ಯರೂಪಕ್ಕೆ ಬರಲು ಸಾಕಷ್ಟು ಸಮಯ ಬೇಕಿದೆ.

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!
ಕ್ಷುದ್ರಗ್ರಹ ಕೇವಲ ಬಂಡೆಯ ತುಣುಕಲ್ಲ ಬದಲಾಗಿ ಕ್ಷುದ್ರಗ್ರಹ ಅಪಾರ ಪ್ರಮಾಣದ ಸಂಪತ್ತು ಹೊಂದಿರುತ್ತೆ. ಈ ರೀತಿ ಕ್ಷುದ್ರಗ್ರಹದ ಮೇಲೆ ಮೈನಿಂಗ್ ಮಾಡುವ ಆಲೋಚನೆ ಕೂಡ ಮಾನವರಲ್ಲಿ ಇದ್ದು, ಈಗಾಗಲೇ ಕ್ಷುದ್ರಗ್ರಹ ಗಣಿಗಾರಿಕೆಗೆ ಹಲವು ಪ್ರಯತ್ನಗಳು ಸಾಗಿವೆ. ಕೆಲವು ದೇಶಗಳು ಅದರಲ್ಲಿ ಯಶಸ್ಸು ಕಾಣುತ್ತಿವೆ. ಹೀಗಾಗಿ ಕ್ಷುದ್ರಗ್ರಹ ಅಧ್ಯಯನಕ್ಕೆ ಶ್ರೀಮಂತ ರಾಷ್ಟ್ರಗಳು ಒಂದೊಂದು ದೊಡ್ಡ ವಿಜ್ಞಾನಿಗಳ ತಂಡ ರಚಿಸಿ, ಬಾಹ್ಯಾಕಾಶದಲ್ಲಿ ಇಣುಕಿ ನೋಡುತ್ತಿದ್ದಾರೆ. ಅದರಲ್ಲೂ ಮಂಗಳ ಹಾಗೂ ಗುರು ಗ್ರಹದ ಮಧ್ಯೆ ಇರುವಂತಹ ಕ್ಷುದ್ರಗ್ರಹ ಹೊನಲು ಅಥವಾ ಕ್ಷುದ್ರಗ್ರಹ ಸಾಲಿನಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಜ್ರ ಅಡಗಿದೆ.
Recommended Video

ಊಹೆಗೂ ನಿಲುಕದಷ್ಟು ಸಂಪತ್ತು..!
ಅಕಸ್ಮಾತ್ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಸಾಧ್ಯವಾದರೆ ಈವರೆಗೂ ಮನುಕುಲ ಕಾಣದಷ್ಟು ಪ್ರಮಾಣದ ಸಂಪತ್ತು ಭೂಮಿಗೆ ಬರಲಿದೆ. ಭೂಮಿಯ ಅಕ್ಕಪಕ್ಕದ ಕ್ಷುದ್ರಗ್ರಹಗಳ ಮೂಲಕ ಮೈನಿಂಗ್ ಮಾಡಿ, ಭೂಮಿ ಮೇಲೆ ನಡೆಯುವಂತೆ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ಈ ಅವಕಾಶ ಖಾಸಗಿ ಕಂಪನಿಗಳಿಗೆ ಸಿಕ್ಕರೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ ಎಂಬುದು ಹಿರಿಯ ವಿಜ್ಞಾನಿಗಳ ಆಕ್ಷೇಪ. ಆದರೂ ಜಗತ್ತಿನ ಬಹುಪಾಲು ದೇಶಗಳು ಬಾಹ್ಯಾಕಾಶವನ್ನೂ ಖಾಸಗೀಕರಣ ಮಾಡಲು ಹೊರಟಿವೆ. ಖಾಸಗಿ ಕಂಪನಿಗಳಿಂದ ಮೈನಿಂಗ್ ಮಾಡಿಸಲು ಪ್ರೋತ್ಸಾಹ ನೀಡುತ್ತಿವೆ.












Click it and Unblock the Notifications