2018ರಲ್ಲಿ ಭೂಕಂಪದ ಭಯೋತ್ಪಾದನೆಗೆ ತತ್ತರಿಸಲಿದೆ ಬುವಿ

Posted By:
Subscribe to Oneindia Kannada
   2018ರ ಭವಿಷ್ಯ : ಭೂಕಂಪದಿಂದ ತತ್ತರಿಸಲಿದೆ ಭೂಮಿ | Oneindia Kannada

   ಈ ಸುದ್ದಿಯನ್ನು ಓದುತ್ತಾ ಹೋದಂತೆ ನೀವೇನು ಪತ್ರಕರ್ತರೋ ಅಥವಾ ಭಯೋತ್ಪಾದಕರೋ ಅಂತ ಅನುಮಾನ ಪಡುವ ಸಾಧ್ಯತೆ ಇದೆ. ಆದರೂ ಇದು ತೀರಾ ಮುಖ್ಯವಾದ ಎಚ್ಚರಿಕೆಯಾದ್ದರಿಂದ ಸುದ್ದಿ ಮಾಡುವುದು ಅನಿವಾರ್ಯ. ಚಂಡಮಾರುತವೋ ಭಾರೀ ಮಳೆಯೋ ಆದರೆ ಮುಂಚಿತವಾಗಿಯೇ ಅವುಗಳ ಸೂಚನೆ ಸಿಕ್ಕು, ಜಾಗ್ರತೆ ವಹಿಸಲು ಅನುಕೂಲವಾಗುತ್ತದೆ.

   ವೈರಲ್ ವಿಡಿಯೋ: ಇರಾನ್-ಇರಾಕ್ ಭೀಕರ ಭೂಕಂಪದ ಎದೆನಡುಗಿಸುವ ದೃಶ್ಯ

   2018ನೇ ಇಸವಿ ಭೂಮಿ ಮೇಲಿನ ತೀರಾ ಅನಿಶ್ಚಿತತೆಯ ವರ್ಷ ಎನ್ನಲಾಗಿದೆ. ಇಂಥ ಕಡೆಯೇ ಭೂಕಂಪ ಸಂಭವಿಸುತ್ತದೆ ಎಂದು ಬೊಟ್ಟು ಮಾಡಿ ಹೇಳದಿರಬಹುದು. ಆದರೆ ನಿಖರತೆಗೆ ಹತ್ತಿರವಾಗುವಂತೆ ಹೇಳಬಹುದಾಗಿದೆ. ಆದ್ದರಿಂದ ಭೂಕಂಪನದಂಥ ಅನಾಹುತವನ್ನು ಮುಂಚಿತವಾಗಿ ತಿಳಿದುಕೊಳ್ಳುವ ತಂತ್ರಜ್ಞಾನದಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಪಡಿಸಿದರೂ ಅನುಕೂಲವಾಗುತ್ತದೆ.

   ಪ್ರಳಯದ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಲು ಎಲ್ಲರೂ ಸಜ್ಜಾಗಿ!

   ಆದರೆ, ಭೂ ಕಂಪನವನ್ನು ಹೇಗೆ ಮುಂಚಿತವಾಗಿ ತಿಳಿದುಕೊಳ್ಳುವುದು? ಇಲ್ಲ, ಭೂ ಕಂಪನದ ಮುನ್ಸೂಚನೆಯನ್ನೂ ತಿಳಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಏಕೆಂದರೆ ಭೂಮಿಯು ತಿರುಗುವ ವೇಗದಲ್ಲೇ ಸ್ವಲ್ಪ ಮಟ್ಟಿಗೆ ನಿಧಾನವಾಗಿದೆಯಂತೆ. ಇಂಥ ಸನ್ನಿವೇಶದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

   ಮೆಕ್ಸಿಕೋ ಭೂಕಂಪ: ಸಾವಿನ ಸಂಖ್ಯೆ 248ಕ್ಕೆ ಏರಿಕೆ

   ಭೂ ಕಂಪನದ ಬಗ್ಗೆ ತುಂಬ ನಿಖರವಾಗಿ ಹೀಗೆ ಎಂದು ಹೇಳುವುದು ಅಸಾಧ್ಯ. ಆದರೆ ಈ ಹಿಂದಿನ ದಾಖಲೆಗಳನ್ನು ಗಮನಿಸಿ, ಹೀಗಾಗಬಹುದು ಎಂದು ಸಣ್ಣ ಮಟ್ಟಿಗಿನ ಊಹೆಯೊಂದನ್ನು ಮಾಡಬಹುದು. ಈ ಬಗ್ಗೆ ನಡೆಸಿದ ಅಧ್ಯಯನದ ವರದಿಯೊಂದನ್ನು ಜಿಯಾಲಾಜಿಕಲ್ ಸೊಸೈಟಿ ಆಫ್ ಅಮೆರಿಕಾವು ವಾರ್ಷಿಕ ಸಭೆಯೊಂದರಲ್ಲಿ ಮಂಡನೆ ಮಾಡಿದೆ. ಮತ್ತು ಇದನ್ನೇ ಜಿಯೋಫಿಸಿಕಲ್ ರಿಸರ್ಚ್ ಪ್ರಬಂಧದಲ್ಲೂ ಮಂಡನೆ ಮಾಡಿದೆ.

   117 ವರ್ಷದ ಭೂಕಂಪನ ಅಧ್ಯಯನ

   117 ವರ್ಷದ ಭೂಕಂಪನ ಅಧ್ಯಯನ

   1900ನೇ ಇಸವಿಯಿಂದ ಈವರೆಗೆ 7ರಷ್ಟು ತೀವ್ರತೆಯಲ್ಲಿ ಎಷ್ಟು ಭೂಕಂಪನಗಳು ಸಂಭವಿಸಿವೆ ಎಂಬ ಲೆಕ್ಕಾಚಾರ ಮಾಡಿದ್ದು, ಹಲವು ವರ್ಷಗಳಲ್ಲಿ ಸರಾಸರಿ 15 ಭೂಕಂಪ ಸಂಭವಿಸಿವೆ. ಈ 117 ವರ್ಷದಲ್ಲಿ ಈ ಪ್ರಮಾಣವು ವಾರ್ಷಿಕ 25ರಿಂದ 30 ಕೂಡ ದಾಟಿದ್ದಿದೆ.

   ಭೂಮಿ ನಾವಂದುಕೊಂಡಷ್ಟು ಸದೃಢವಾಗಿಲ್ಲ

   ಭೂಮಿ ನಾವಂದುಕೊಂಡಷ್ಟು ಸದೃಢವಾಗಿಲ್ಲ

   ಈ ಬಗ್ಗೆ ಸಂಶೋಧನೆ ನಡೆಸಿರುವವರು ಕೆಲವು ಸಂದರ್ಭಗಳನ್ನು ಭೂಕಂಪ ಪ್ರೇರಕ ಅಥವಾ ಪೂರಕ ಸಮಯ ಎಂದು ಗುರುತಿಸಿದ್ದಾರೆ. ಜತೆಗೆ ಭೂಮಿ ತಿರುಗುವ ವೇಗ ಯಾವಾಗೆಲ್ಲ ಕಡಿಮೆ ಆಗಿದೆ ಎಂಬುದನ್ನು ಸಹ ಗಮನಿಸಿದ್ದಾರೆ. ನಾವು ವಾಸಿಸುವ ಈ ಗ್ರಹ ನಾವಂದುಕೊಂಡಷ್ಟು ಸದೃಢವಾಗಿಲ್ಲ. ಸಾಗರ, ಗಾಳಿ ಮಾತ್ರವಲ್ಲ, ಈ ಭೂಮಿಯ ಹೊರ ಮೇಲ್ಮೈ ಅಷ್ಟು ಸದೃಢವಾಗಿಲ್ಲ.

   ಹೆಚ್ಚುತ್ತಿರುವ ಒತ್ತಡ

   ಹೆಚ್ಚುತ್ತಿರುವ ಒತ್ತಡ

   ಭೂಮಿಯಲ್ಲಿನ ಕೆಲ ಬದಲಾವಣೆಗಳ ಕಾರಣಕ್ಕೆ ತಿರುಗುವ ವೇಗದಲ್ಲಿ ನಿಧಾನವಾಗಿದೆ. ಅದು ಯಾವ ಪ್ರಮಾಣ ಅಂದರೆ ಮಿಲಿ ಸೆಕೆಂಡ್ ಗಳಲ್ಲಿ ಹೇಳಬೇಕಾಗುತ್ತದೆ. ಈ ರೀತಿ ನಿಧಾನವಾದಾಗ ಹೊರಕ್ಕೆ ಚಲಿಸುವ ಒತ್ತಡ ಹೆಚ್ಚಾಗುತ್ತಾ ಬರುತ್ತದೆ. ನಿಧಾನವಾಗಿ ಅದು ಭೂಮಿ ಮೇಲಿನ ಪದರಗಳು, ಶಿಲೆಗಳ ಮೇಲೆ ಆಗುತ್ತದೆ.

   ಗಮನಕ್ಕೆ ಬಂದದ್ದು 2011ರಲ್ಲಿ

   ಗಮನಕ್ಕೆ ಬಂದದ್ದು 2011ರಲ್ಲಿ

   ಈ ರೀತಿ ಭೂಮಿ ಮೇಲೆ ಒತ್ತಡ ಹೆಚ್ಚಾಗುತ್ತಿರುವುದು ಮತ್ತು ಅದು ತಿರುಗುವ ವೇಗದಲ್ಲಿ ಆಗಿರುವ ನಿಧಾನದ ಪ್ರಭಾವ ತಿಳಿದು, ಪರಿಣಾಮ ಎದುರಿಸಲು ಸಿದ್ಧವಾಗುವುದಕ್ಕೆ ಐದರಿಂದ ಆರು ವರ್ಷ ಸಮಯ ಬೇಕಾಗುತ್ತದೆ. ಈ ರೀತಿ ಭೂಮಿ ತಿರುಗುವ ವೇಗ ಕಡಿಮೆಯಾದದ್ದು ಗಮನಕ್ಕೆ ಬಂದದ್ದು 2011ರಲ್ಲಿ.

   ಮೆಕ್ಸಿಕೋ, ಇರಾನ್ ನಲ್ಲಿ ಭೂಕಂಪನ

   ಮೆಕ್ಸಿಕೋ, ಇರಾನ್ ನಲ್ಲಿ ಭೂಕಂಪನ

   ಈಚಿನ ಸನ್ನಿವೇಶಗಳು ಸಮಸ್ಯೆಗಳನ್ನು ಮತ್ತೊಮ್ಮೆ ಸೂಚಿಸುತ್ತಿವೆ. 7.1ರ ತೀವ್ರತೆಯ ಭೂಕಂಪವು ಮೆಕ್ಸಿಕೋದಲ್ಲಿ ಸೆಪ್ಟೆಂಬರ್ 19ರಂದು ಸಂಭವಿಸಿತ್ತು. ಇನ್ನು ಇದೇ ತಿಂಗಳ ಹನ್ನೆರಡನೇ ತಾರೀಕು ಇರಾನ್-ಇರಾಕ್ ಗಡಿ ಭಾಗದಲ್ಲಿ 7.3 ತೀವ್ರತೆಯ ಭೂಕಂಪವಾಗಿತ್ತು. ಇದೇ ತಿಂಗಳ ಹತ್ತೊಂಬತ್ತರಂದು ನ್ಯೂ ಕ್ಯಾಲೆಡೊನಿಯಾದಲ್ಲಿ 7ರ ತೀವ್ರತೆಯ ಭೂಕಂಪವಾಗಿದೆ.

   ನಿಖರತೆಗೆ ಹತ್ತಿರವಾಗಿ ಮುನ್ಸೂಚನೆ

   ನಿಖರತೆಗೆ ಹತ್ತಿರವಾಗಿ ಮುನ್ಸೂಚನೆ

   ಭೂ ಕಂಪನಗಳು ಸಂಭವಿಸುವ ಸಾಧ್ಯತೆಗಳು ಮಾತ್ರವಲ್ಲ, ಇಂಥ ಭೂ ಪ್ರದೇಶದ ಬಳಿ ಹೀಗಾಗುತ್ತದೆ ಎಂದು ಮುನ್ಸೂಚನೆ ನೀಡಲಾಗುತ್ತಿದೆ. ಇರಾನ್ ವಿಷಯದಲ್ಲಿ ಆಗಿದ್ದು ಅದೇ. ತಜ್ಞರು ಹೇಳಿದ್ದಕ್ಕಿಂತ ಹೆಚ್ಚಿನ ವ್ಯತ್ಯಾಸವಿಲ್ಲದಂತೆ ಭೂಕಂಪ ಸಂಭವಿಸಿತ್ತು. ಆದ್ದರಿಂದ ಉದಾಸೀನ ಮಾಡದೆ ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   A new study suggests that we may want to brace for a surge of quakes in the year ahead, and the reason for the danger is an unlikely one: the rotation of the Earth has slowed slightly.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ