ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಟಕ್ಕೆ, ಸಂತಸಕ್ಕೆ ಸ್ಪಂದಿಸುತ್ತಿದ್ದ ಸುಷ್ಮಾ ಸ್ವರಾಜ್ : ಟ್ವಿಟ್ಟರಲ್ಲಿ ಹೊಗಳಿಕೆ

|
Google Oneindia Kannada News

ವಿದೇಶಾಂಗ ಸಚಿವಾಲಯವನ್ನು ಜನಾನುರಾಗಿಯನ್ನಾಗಿಸಿದ್ದ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮೋದಿ 2.0 ಸರ್ಕಾರದಲ್ಲಿ ಸ್ಥಾನ ಸಿಕ್ಕಿಲ್ಲ. ಮೇ 30ರಂದು ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸುಷ್ಮಾರನ್ನು ಮತ್ತೊಮ್ಮೆ ಸಚಿವ ಸ್ಥಾನದಲ್ಲಿ ಕಾಣಬಯಸಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ.

2019ರ ಮೋದಿ ಸರ್ಕಾರದ ಕೇಂದ್ರ ಸಚಿವ ಸಂಪುಟ ಸದಸ್ಯರು2019ರ ಮೋದಿ ಸರ್ಕಾರದ ಕೇಂದ್ರ ಸಚಿವ ಸಂಪುಟ ಸದಸ್ಯರು

17ನೇ ಲೋಕಸಭೆಗಾಗಿ ನಡೆದ ಚುನಾವಣೆಯಲ್ಲಿ ಅನಾರೋಗ್ಯದ ಕಾರಣ ಸ್ಪರ್ಧಿಸುವುದಿಲ್ಲ ಎಂದು ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದರು.

ಮೋದಿ 2.0 ಸರ್ಕಾರ: ಯಾವ ಸಚಿವರಿಗೆ ಯಾವ ಖಾತೆ ಹಂಚಿಕೆ?ಮೋದಿ 2.0 ಸರ್ಕಾರ: ಯಾವ ಸಚಿವರಿಗೆ ಯಾವ ಖಾತೆ ಹಂಚಿಕೆ?

ಸುಷ್ಮಾ ಸ್ವರಾಜ್ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ತಮ್ಮ ನಿರ್ಧಾರವನ್ನು ಲೋಕಸಭೆ ಚುನಾವಣೆ ಮುನ್ನವೇ ಪ್ರಕಟಿಸಿದ್ದರು. ಆದರೆ ಈ ಬಾರಿ ಸಂಪುಟದಿಂದಲೂ ದೂರ ಉಳಿಯುವ ಸಾಧ್ಯತೆ ಬಗ್ಗೆ ಅನುಮಾನವಿತ್ತು.

ಮೋದಿ ಅವರ ಸಂಪುಟದಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ಸಚಿವರಲ್ಲಿ ಸುಷ್ಮಾ ಸ್ವರಾಜ್ ಅವರು ಪ್ರಮುಖರಾಗಿದ್ದರು. ಮೋದಿ ಸರ್ಕಾರದ ವಿದೇಶಾಂಗ ನೀತಿ, ನೆರೆ ರಾಷ್ಟ್ರಗಳ ಜತೆಗಿನ ಬಾಂಧವ್ಯ, ಕಷ್ಟದಲ್ಲಿ ಸಿಲುಕಿದ ಎನ್ನಾರೈ, ಭಾರತೀಯ ಮೂಲದ ಪ್ರವಾಸಿಗರು, ದೇಶದಲ್ಲಿ ಪಾಸ್ ಪೋರ್ಟ್, ವೀಸಾ ಸಮಸ್ಯೆ, ಉಗ್ರರ ಬೆಂಬಲಕ್ಕೆ ನಿಂತ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡುವುದು ಹೀಗೆ ಎಲ್ಲಾ ಬಗೆಯ ಕಾರ್ಯಗಳಲ್ಲೂ ಉತ್ತಮ ಸ್ಪಂದನೆ ತೋರಿದವರು.

ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಸುಷ್ಮಾ

ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಸುಷ್ಮಾ

ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು, ಎರಡು ವರ್ಷದ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮದುಮೇಹ ಸಂಬಂಧಿ ಸಮಸ್ಯೆ ಅನುಭವಿಸಿದ್ದ ಸುಷ್ಮಾ, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 1977ರಲ್ಲಿ 25ನೇ ವಯಸ್ಸಿನಲ್ಲಿ ಹರಿಯಾಣದ ಸಚಿವರಾಗುವ ಮೂಲಕ ಅತ್ಯಂತ ಕಿರಿಯ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಅನಾರೋಗ್ಯದ ಕಾರಣದಿಂದ ಚುನಾವಣೆಯಿಂದ ಹಿಂದಕ್ಕೆ

ಅನಾರೋಗ್ಯದ ಕಾರಣದಿಂದ ಚುನಾವಣೆಯಿಂದ ಹಿಂದಕ್ಕೆ

ಅನಾರೋಗ್ಯದ ಕಾರಣದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿರುವ ಅವರು, ಉಳಿದಂತೆ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಮುಂದುವರಿಯಲಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ನಿರಂತರ ಓಡಾಟ ಮತ್ತು ಕೆಲಸದ ಒತ್ತಡದಿಂದ ಬಳಲಿರುವ ಅವರು ರಾಜಕೀಯ ಜೀವನದಿಂದಲೂ ನಿವೃತ್ತರಾಗುತ್ತಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ

ಸುಷ್ಮಾ ಸ್ವರಾಜ್ ಟ್ವೀಟ್

'ಪ್ರಧಾನಮಂತ್ರಿಗಳೇ, ನೀವು 5 ವರ್ಷ ತನಕ ನನಗೆ ವಿದೇಶಾಂಗ ಖಾತೆ ನೀಡಿದ್ರಿ, ದೇಶವಾಸಿ, ಪ್ರವಾಸಿ ಭಾರತೀಯರ ಸೇವೆ ಮಾಡಲು ಅವಕಾಶ ನೀಡಿದಿರಿ, ವ್ಯಕ್ತಿಗತವಾಗಿ ತುಂಬಾ ಸಮ್ಮಾನ ನೀಡಿದ್ದಿರಿ. ನಮ್ಮ ಸರ್ಕಾರ ಯಶಸ್ಸಿನತ್ತ ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.

ಸುಷ್ಮಾ ಇಲ್ಲದ ಮೋದಿ ಸಂಪುಟ ಎಂಬ ಹೆಡ್ ಲೈನ್

ಸುಷ್ಮಾ ಇಲ್ಲದ ಮೋದಿ ಸಂಪುಟ ಎಂಬ ಹೆಡ್ ಲೈನ್ ನೋಡಲು ಬಯಸುವುದಿಲ್ಲ, ಅನಾರೋಗ್ಯದ ಕಾರಣ ಮೋದಿ ಸರ್ಕಾರದ ಭಾಗವಾಗಿಲ್ಲದಿರಬಹುದು, ಆದರೂ ಇದನ್ನು ಸಹಿಸಲು ಆಗುತ್ತಿಲ್ಲ.

ವಿದೇಶಾಂಗ ಸಚಿವಾಲಯದ ಅರ್ಥ ಬದಲಾಯಿಸಿದ ಸುಷ್ಮಾ

ವಿದೇಶಾಂಗ ಸಚಿವಾಲಯದ ಅರ್ಥ ಬದಲಾಯಿಸಿದ ಸುಷ್ಮಾ ಸ್ವರಾಜ್, ಹೊಸದಾಗಿ ನೇಮಕವಾಗಿರುವವರಿಗೆ ಶುಭಹಾರೈಕೆ ಎಂದು ಟ್ವೀಟ್.

ಪ್ರಧಾನಿಯಾಗುವ ಅರ್ಹತೆಯುಳ್ಳ ಸುಷ್ಮಾ

ಪ್ರಧಾನಿಯಾಗುವ ಎಲ್ಲಾ ಅರ್ಹತೆಯುಳ್ಳ ಸುಷ್ಮಾ ಅವರಿಗೆ ಈ ರೀತಿ ಆಗಬಾರದಿತ್ತು. ಇದೇ ಕಾರಣಕ್ಕೆ ಸಂಪುಟದಿಂದ ದೂರ ಇಡಲಾಗಿದೆ

ಜನಪ್ರಿಯ ಕ್ಯಾಬಿನೆಟ್ ಸಚಿವರಾಗಿ ಸುಷ್ಮಾ

ಎಷ್ಟೆ ಒಳ್ಳೆ ಸರ್ಕಾರಗಳು ಬರಲಿ, ಸಂಪುಟಗಳು ಬದಲಾಗಲಿ, ಅತ್ಯಂತಜನಪ್ರಿಯ ಕ್ಯಾಬಿನೆಟ್ ಸಚಿವರಾಗಿ ಸುಷ್ಮಾ ಅವರು ಗುರುತಿಸಲ್ಪಡುತ್ತಾರೆ.

ಎಲ್ಲರೊಡನೆ ಸಮನಾಗಿ ಬೆರೆಯುತ್ತಿದ್ದ ಸುಷ್ಮಾ

ಎಲ್ಲರೊಡನೆ ಸಮನಾಗಿ ಬೆರೆಯುತ್ತಿದ್ದ ಸುಷ್ಮಾ ಅವರು ಹಿರಿಯ ಕಿರಿಯರೆಲ್ಲರಿಗೂ ಅಚ್ಚು ಮೆಚ್ಚು ಎಂದು ಪತ್ರಕರ್ತ ಶಿವ್ ಅರೂರ್ ಅವರಿಂದ ಟ್ವೀಟ್.

ಮಾಲ್ಡೀವ್ಸ್ ನ ಪ್ರತಿನಿಧಿನಿಂದ ಸುಷ್ಮಾ ಬಗ್ಗೆ ಹೊಗಳಿಕೆ

ಮಾಲ್ಡೀವ್ಸ್ ನ ಪ್ರತಿನಿಧಿನಿಂದ ಸುಷ್ಮಾ ಬಗ್ಗೆ ಹೊಗಳಿ ಟ್ವೀಟ್, ಮಾಲ್ಡೀವ್ಸ್ ನ ಜತೆ ನೀವು ಹೊಂದಿದ್ದ ಬಾಂಧವ್ಯ, ಗೆಳೆತನಕ್ಕೆ ನಾವು ಆಭಾರಿ ಎಂದಿದ್ದಾರೆ.

English summary
In an indication that the veteran leader will sit out of a BJP government for the first time, Sushma Swaraj, who was External Affairs minister in the previous government, was seen taking a seat in the audience at Prime Minister Narendra Modi's oath ceremony today. The fact she wouldn't continue as the foreign minister has left twitterati in distraught.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X