ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಸಭಾಪತಿ ಚುನಾವಣೆ: RJD ಮನೋಜ್‌ಗೆ 12 ಪಕ್ಷಗಳ ಬೆಂಬಲ

|
Google Oneindia Kannada News

ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕಾಗಿ ಚುನಾವಣೆ ಕಣ ಸಿದ್ಧವಾಗಿದೆ. ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಎನ್ ಡಿಎ ಅಭ್ಯರ್ಥಿ ಹರಿವಂಶ್ ಅವರ ವಿರುದ್ಧ ಯುಪಿಎ ಮೈತ್ರಿಕೂಟದಿಂದ ಸೂಕ್ತ ಅಭ್ಯರ್ಥಿಯ ಗೊಂದಲದ ನಡುವೆ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಅಭ್ಯರ್ಥಿ ಮನೋಜ್ ಝಾ ಅವರಿಗೆ 12 ಪಕ್ಷಗಳ ಬೆಂಬಲ ಸಿಕ್ಕಿದೆ. ಸೆಪ್ಟೆಂಬರ್ 14ರಂದು ಎನ್ಡಿಎ ಅಭ್ಯರ್ಥಿ ಹರಿವಂಶ್ ವಿರುದ್ಧ ಮನೋಜ್ ಪ್ರಮುಖ ಅಭ್ಯರ್ಥಿಯಾಗಿದ್ದಾರೆ.

1977ರಿಂದ ಇಲ್ಲಿ ತನಕ 20 ತಿಂಗಳು ( ಅಗಸ್ಟ್ 2018 ಹಾಗೂ ಏಪ್ರಿಲ್ 2020) ಮಾತ್ರ ಕಾಂಗ್ರೆಸ್ ಉಪ ಸಭಾಪತಿ ಸ್ಥಾನವನ್ನು ಹೊಂದಿಲ್ಲ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ರನ್ನು ಸೋಲಿಸಿ ಹರಿವಂಶ್ ಅವರು ಹೊಸ ಇತಿಹಾಸ ಬರೆದಿದ್ದರು. ಸರಿ ಸುಮಾರು 41 ರಿಂದ 43ವರ್ಷಗಳ ಕಾಲ ಉಪಸಭಾಪತಿ ಸ್ಥಾನವನ್ನು ಗೆಲ್ಲುತ್ತಾ ಬಂದಿದ್ದ ಕಾಂಗ್ರೆಸ್ ಆಘಾತಕ್ಕೊಳಗಾಗಿತ್ತು. ಈಗ ಈ ಪ್ರತಿಷ್ಠಿತ ಸ್ಥಾನವನ್ನು ಗೆಲ್ಲುವುದು ಕಾಂಗ್ರೆಸ್ಸಿಗೆ ಅಷ್ಟು ಸುಲಭವಲ್ಲ.

ರಾಜ್ಯಸಭೆ ಉಪಾಧ್ಯಕ್ಷ ಸ್ಥಾನ, ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪಣರಾಜ್ಯಸಭೆ ಉಪಾಧ್ಯಕ್ಷ ಸ್ಥಾನ, ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪಣ

ಮನೋಜ್ ಝಾ ಅವರಿಗೆ ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ, ದ್ರಾವಿಡ ಮುನ್ನೇತ್ರ ಕಳಗಂ, ಶಿವಸೇನಾ, ಜಾರ್ಖಂಡ್ ಮುಕ್ತಿ ಮೋರ್ಚಾ, ಕೇರಳ ಕಾಂಗ್ರೆಸ್ (ಎಂ), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್.

 ಎಎಪಿ, ಡಿಎಂಕೆ ಬೆಂಬಲ ಸಿಕ್ಕರೂ ಸಾಲಲ್ಲ

ಎಎಪಿ, ಡಿಎಂಕೆ ಬೆಂಬಲ ಸಿಕ್ಕರೂ ಸಾಲಲ್ಲ

ಮನೋಜ್ ಅವರಿಗೆ ಆಮ್ ಆದ್ಮಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದ ಜೊತೆ ಸಮಾಜವಾದಿ ಪಕ್ಷ ಹಾಗೂ ಡಿಎಂಕೆ ಬೆಂಬಲದ ದೊರಕಿಸಿಕೊಡುವ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿದೆ.

ಮನೋಜ್ ಅವರಿಗೆ ಆಮ್ ಆದ್ಮಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದ ಜೊತೆ ಸಮಾಜವಾದಿ ಪಕ್ಷ ಹಾಗೂ ಡಿಎಂಕೆ ಬೆಂಬಲದ ದೊರಕಿಸಿಕೊಡುವ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿದೆ. 2018ರಲ್ಲಿ ಆರ್ ಜೆಡಿಯಿಂದ ನಾಮಾಂಕಿತ ಸದಸ್ಯರಾಗಿರುವ ಮನೋಜ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹಾಗೂ ಎಸ್ ಪಿ ಮೊದಲಿಗೆ ಪ್ರಸ್ತಾವನೆ ಇಟ್ಟಿದ್ದು ನಂತರ ಉಳಿದ ಪಕ್ಷಗಳ ಬೆಂಬಲ ಸಿಕ್ಕಿದೆ.

 ಸಣ್ಣ ಪುಟ್ಟ ಪಕ್ಷಗಳ ಬೆಂಬಲ ಅಗತ್ಯ

ಸಣ್ಣ ಪುಟ್ಟ ಪಕ್ಷಗಳ ಬೆಂಬಲ ಅಗತ್ಯ

ರಾಜ್ಯಸಭೆಯಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತವಿಲ್ಲದ ಕಾರಣ, ಎನ್ಡಿಎ ಹಾಗೂ ಯುಪಿಎ ಎರಡಕ್ಕೂ ಸಣ್ಣ ಪುಟ್ಟ ಪಕ್ಷಗಳ ಬೆಂಬಲ ಅಗತ್ಯ. 245 ಸದಸ್ಯಬಲದ ರಾಜ್ಯಸಭೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರೆ 244 ಸ್ಥಾನದ ಲೆಕ್ಕಾಚಾರದಂತೆ ಗೆಲುವು ಸಾಧಿಸಲು ಅಭ್ಯರ್ಥಿಗೆ 123 ಮತಗಳು ಅಗತ್ಯ. ಕಾಂಗ್ರೆಸ್ 40 ಸ್ಥಾನ ಹೊಂದಿದೆ. ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್(ಯುಪಿಎ) ಬಲ 63. ಯುಪಿಎಸ್ ಬೆಂಬಲಿತ ಡಿಎಂಕೆ 7, ಆರ್ ಜೆ ಡಿ 5, ಎನ್ ಸಿಪಿ 4, ಶಿವಸೇನಾ 3 ಹಾಗೂ ಇತರೆ 4. ಮೈತ್ರಿಕೂಟದಿಂದ ಹೊರಗಿರುವ 16 ಪಕ್ಷಗಳ ಸದಸ್ಯರ ಸಂಖ್ಯೆ 64. ಈ ಪೈಕಿ ತೃಣಮೂಲ ಕಾಂಗ್ರೆಸ್(ಟಿಎಂಸಿ) 13, ಬಿಜು ಜನತಾ ದಳ(ಬಿಜೆಡಿ) 9 ಹೊಂದಿವೆ.

ಲೋಕಸಭೆ ಉಪಾಧ್ಯಕ್ಷರ ಆಯ್ಕೆ, ಎನ್ಡಿಎ ಕುತೂಹಲಕಾರಿ ತಂತ್ರ!ಲೋಕಸಭೆ ಉಪಾಧ್ಯಕ್ಷರ ಆಯ್ಕೆ, ಎನ್ಡಿಎ ಕುತೂಹಲಕಾರಿ ತಂತ್ರ!

 ಕಾಂಗ್ರೆಸ್ ಪಕ್ಷಕ್ಕೆ ಪರಿಸ್ಥಿತಿ ಕಷ್ಟವಾಗಲಿದೆ

ಕಾಂಗ್ರೆಸ್ ಪಕ್ಷಕ್ಕೆ ಪರಿಸ್ಥಿತಿ ಕಷ್ಟವಾಗಲಿದೆ

ಸಮಾಜವಾದಿ ಪಕ್ಷ: 8 ತೆಲಂಗಾಣ ರಾಷ್ಟ್ರ ಸಮಿತಿ: 7 ವೈಎಸ್ಸಾರ್ ಕಾಂಗ್ರೆಸ್ ಪಕ್ಷ: 6 ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್ ವಾದಿ) : 5 ಬಹುಜನ ಸಮಾಜ ಪಕ್ಷ: 4 ಆಮ್ ಆದ್ಮಿ ಪಕ್ಷ: 3 ಪೀಪಲ್ಸ್ ಡೆಮೊಕ್ರಾಟಿಕ್ ಪಕ್ಷ: 2 ಇದಲ್ಲದೆ, ಟಿಡಿಪಿ, ಜೆಡಿಎಸ್, ಸಿಪಿಐ, ಕೆಸಿ-ಎಂ, ಎನ್ ಪಿಎಫ್, ಎಸ್ ಡಿಎಫ್ ಹಾಗೂ ಎಲ್ ಜೆಡಿ ತಲಾ 1 ಸ್ಥಾನ ಹೊಂದಿವೆ. ಮೈತ್ರಿಕೂಟದ ಹೊರಗಿನ ಪಕ್ಷಗಳ ಬೆಂಬಲ: ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕಾದರೆ, ಉಪ ಸಭಾಪತಿ ಸ್ಥಾನ ಉಳಿಸಿಕೊಳ್ಳಬೇಕಾದರೆ, ಮೈತ್ರಿಕೂಟದ ಹೊರಗಿನ 12 ಪಕ್ಷಗಳ 60 ಸಂಸದ ಬೆಂಬಲ ಅತ್ಯಗತ್ಯ. ಬಿಜೆಡಿ, ವೈಎಸ್ಸಾರ್ ಕಾಂಗ್ರೆಸ್ ಪಕ್ಷಗಳು ಆಡಳಿತ ಪಕ್ಷದ ಪರವೇ ಮತ ಹಾಕುತ್ತಾ ಬಂದಿವೆ. ಹೀಗಾದರೆ, ಕಾಂಗ್ರೆಸ್ ಪಕ್ಷಕ್ಕೆ ಪರಿಸ್ಥಿತಿ ಕಷ್ಟವಾಗಲಿದೆ.

Recommended Video

Hindi Diwas ವಿಚಾರವಾಗಿ ಗರಂ ಆದ್ರು Dinesh Gundurao | Oneindia Kannada
 ಎನ್ಡಿಎ ಸ್ಥಿತಿ ಗತಿ ಭದ್ರವಾಗಿದೆ

ಎನ್ಡಿಎ ಸ್ಥಿತಿ ಗತಿ ಭದ್ರವಾಗಿದೆ

ಎನ್ಡಿಎ ಸ್ಥಿತಿ ಗತಿ: ರಾಜ್ಯಸಭೆಯಲ್ಲಿ ಎನ್ಡಿಎ 117 ಸ್ಥಾನವನ್ನು ಹೊಂದಿದೆ. ಇವರ ಜೊತೆಗೆ ಸ್ವಪನ್ ದಾಸ್ ಗುಪ್ತ, ರಂಜನ್ ಗೊಗಾಯಿ, ನರೇಂದ್ರ ಜಾಧವ್, ಎಂಸಿ ಮೇರಿ ಕೋಮ್ ರಂಥ ನಾಮಂಕಿತ ಸದಸ್ಯರು ಬೆಂಬಲಕ್ಕೆ ನಿಲ್ಲಲಿದ್ದಾರೆ. ಬಿಜೆಪಿ ಬಳಿಯೇ 87 ಸಂಸದರಿದ್ದಾರೆ, ಎಐಎಡಿಎಂಕೆ 9 ಹಾಗೂ ಜೆಡಿಯು 5.

9 ಸದಸ್ಯರನ್ನು ಹೊಂದಿರುವ ಬಿಜೆಡಿ ಸೆಳೆದರೆ ಉಳಿದ ಪಕ್ಷಗಳನ್ನು ಸೆಳೆಯುವುದು ಸುಲಭ ಎಂಬ ಎಣಿಕೆಯಲ್ಲಿ ಕಾಂಗ್ರೆಸ್ ಇನ್ನೂ ಲೆಕ್ಕಾಚಾರದಲ್ಲಿದೆ. ಆದರೆ, ನವೀನ್ ಪಟ್ನಾಯಕ್ ಅವರಿಗೆ ಪ್ರಧಾನಿ ಮೋದಿ, ಬಿಹಾರ ಸಿಎಂ ನಿತೀಶ್ ಕುಮಾರ್ ಕರೆ ಮಾಡಿ ಬೆಂಬಲ ಕೋರಿದ್ದಾರೆ. ಎನ್ಡಿಎಗೆ ಬಿಜೆಡಿ, ವೈಎಸ್ಸಾರ್ ಕಾಂಗ್ರೆಸ್, ಟಿಆರ್ ಎಸ್ ಬೆಂಬಲ ಪಡೆದರೆ 123 ಸ್ಥಾನ ಪಡೆಯುವುದು ಕಷ್ಟವೇನಲ್ಲ.

English summary
Rajya Sabha deputy chairman election 2020: Twelve opposition parties have confirmed their support for the candidature of Rashtriya Janata Dal’s Manoj Jha. Election scheduled to be held on 14 September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X