ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್‌ ಅನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತ ರಾಷ್ಟ್ರವಾದ ಈ ರಾಷ್ಟ್ರ!

|
Google Oneindia Kannada News

ಬೀಜಿಂಗ್‌, ನವೆಂಬರ್‌ 16: ವಿಶ್ವದ ಅತೀ ಶ್ರೀಮಂತ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಪಡೆಯುವ ಓಟದಲ್ಲಿ ಅಮೆರಿಕವನ್ನು ಚೀನಾ ಹಿಂದಕ್ಕೆ ಸರಿಸಿದ್ದು, ಈಗ ವಿಶ್ವದ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದೆ. ಕಳೆದ ಎರಡು ದಶಕಗಳಲ್ಲಿ ಚೀನಾದ ಸಂಪತ್ತು ಮೂರು ಪಟ್ಟು ಅಧಿಕವಾಗಿದ್ದು, ಚೀನಾ ಈಗ 2021 ರಲ್ಲಿ ವಿಶ್ವದ ಶ್ರೀಮಂತ ರಾಷ್ಟ್ರವಾಗಿದೆ ಎಂದು ಬ್ಲೂಬರ್ಗ್ ವರದಿ ಮಾಡಿದೆ.

ಚೀನಾವು ಈ ರಾಷ್ಟ್ರದ ಶ್ರೀಮಂಂತಿಕೆಯ ಓಟದಲ್ಲಿ ಮುಂದಿದೆ. ಅಮೆರಿಕವನ್ನು ಹಿಂದಕ್ಕೆ ತಳ್ಳಿ ಅಗ್ರ ಸ್ಥಾನಕ್ಕೆ ಏರಿದೆ ಎಂದು ವರದಿಯು ಉಲ್ಲೇಖ ಮಾಡಿದೆ. McKinsey & Co. ನಲ್ಲಿ ಕಾರ್ಯ ನಿರ್ವಹಣೆ ಮಾಡುವ ಸಲಹೆಗಾರರ ಸಂಶೋಧನಾ ವಿಭಾಗವು ಹತ್ತು ರಾಷ್ಟ್ರಗಳ ಆಯವ್ಯಯ ಪಟ್ಟಿ (ಬ್ಯಾಲೆನ್ಸ್‌ ಶೀಟ್ಸ್‌) ಅನ್ನು ಪರಿಶೀಲನೆ ಮಾಡಿದೆ. ಇದರಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಹತ್ತು ರಾಷ್ಟ್ರಗಳು ವಿಶ್ವದ ಒಟ್ಟು ಸಂಪತ್ತಿನ ಶೇಕಡ 60 ರಷ್ಟು ಸಂಪತ್ತನ್ನು ಹೊಂದಿರುವ ರಾಷ್ಟ್ರಗಳು ಆಗಿದೆ.

2021 ರ ಕೋಟ್ಯಾಧಿಪತಿಗಳ ಪಟ್ಟಿ: 10 ಯುವ, ಸ್ವಯಂ ಉದ್ಯಮಿಗಳ ಬಗ್ಗೆ ತಿಳಿಯಿರಿ2021 ರ ಕೋಟ್ಯಾಧಿಪತಿಗಳ ಪಟ್ಟಿ: 10 ಯುವ, ಸ್ವಯಂ ಉದ್ಯಮಿಗಳ ಬಗ್ಗೆ ತಿಳಿಯಿರಿ

ವಿಶ್ವದ ನಿವ್ವಳ ಆದಾಯವು ಕಳೆದ ವರ್ಷ ಅಭೂತಪೂರ್ವವಾಗಿ ಏರಿಕೆಯನ್ನು ಕಂಡಿದೆ. 2020 ರಲ್ಲಿ 514 ಟ್ರಿಲಿಯನ್‌ ಡಾಲರ್‌ ನಷ್ಟು ವಿಶ್ವದ ನಿವ್ವಳ ಆದಾಯ ಏರಿಕೆ ಕಂಡಿದೆ. ಅದೇ 2000 ರಲ್ಲಿ ವಿಶ್ವದ ಆದಾಯವು 156 ಟ್ರಿಲಿಯನ್‌ ಡಾಲರ್‌ ಆಗಿತ್ತು. ಚೀನಾ ದೇಶವು ಈ ಸಂಪತ್ತಿನಲ್ಲಿ ಮೂರನೇ ಒಂದು ಭಾಗವನ್ನು ಹೊಂದಿದೆ. "ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಜ್ಯೂರಿಚ್‌ನಲ್ಲಿರುವ ಮೆಕಿನ್ಸೆ ಗ್ಲೋಬಲ್ ಇನ್‌ಸ್ಟಿಟ್ಯೂಟ್‌ನ ಪಾಲುದಾರ ಜಾನ್ ಮಿಶ್ಕೆ, "ನಾವು ಹಿಂದೆದಿಗಿಂತ ಅಧಿಕ ಶ್ರೀಮಂತರಾಗಿದ್ದೇವೆ," ಎಂದು ಹೇಳಿದ್ದಾರೆ.

 ಚೀನಾ ಹಾಗೂ ಯುಎಸ್‌ನ ಶ್ರೀಮಂತಿಕೆ ಈ ಮಟ್ಟಕ್ಕೆ ಏರಿಕೆ!

ಚೀನಾ ಹಾಗೂ ಯುಎಸ್‌ನ ಶ್ರೀಮಂತಿಕೆ ಈ ಮಟ್ಟಕ್ಕೆ ಏರಿಕೆ!

McKinsey & Co ನ ವಿಶ್ವದ ಆರ್ಥಿಕ ಡೇಟಾ ಪ್ರಕಾರ 2000 ರಲ್ಲಿ ಚೀನಾದ ಒಟ್ಟು ಸಂಪತ್ತು 7 ಟ್ರಿಲಿಯನ್‌ ಡಾಲರ್‌ ಆಗಿತ್ತು. ಆದರೆ ಈಗ 2021 ರಲ್ಲಿ ಚೀನಾದ ಒಟ್ಟು ಸಂಪತ್ತು 120 ಟ್ರಿಲಿಯನ್‌ ಡಾಲರ್‌ ಆಗಿದೆ. ಚೀನಾವು ವರ್ಲ್ಡ್ ಟ್ರೇಡ್ ಆರ್ಗನೈಸೇಶನ್‌ಗೆ ಸೇರುವ ಹಿಂದಿನ ಕೆಳ ದಿನಗಳಿಂದ ಚೀನಾದಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡು ಬಂದಿದೆ. ಹಾಗೆಯೇ ಚೀನಾದ ಶ್ರೀಮಂತಿಕೆಯು ಬೃಹತ್‌ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಕೂಡಾ ಈ ವರದಿಯು ಹೇಳುತ್ತದೆ. ಇನ್ನು ಈ ಸಂದರ್ಭದಲ್ಲೇ ಈ ಹಿಂದೆ ವಿಶ್ವದ ಶ್ರೀಮಂತ ದೇಶ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದ ಯುಎಸ್‌ನಲ್ಲಿ ನಿವ್ವಳ ಆದಾಯ ದ್ವಿಗುಣಗೊಂಡಿದೆ. ಯುಎಸ್‌ನ ನಿವ್ವಳ ಆದಾಯ 90 ಟ್ರಿಲಿಯನ್‌ ಡಾಲರ್‌ ಆಗಿದೆ.

 ಶೇ. 10 ರಷ್ಟ್ರು ಶ್ರೀಮಂತ ಕುಟುಂಬಗಳೇ ಮತ್ತಷ್ಟು ಶ್ರೀಮಂತ!

ಶೇ. 10 ರಷ್ಟ್ರು ಶ್ರೀಮಂತ ಕುಟುಂಬಗಳೇ ಮತ್ತಷ್ಟು ಶ್ರೀಮಂತ!

ಚೀನಾ ಹಾಗೂ ಯುಎಸ್‌ ವಿಶ್ವದ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳು ಆಗಿದೆ. ಈ ಹಿಂದೆ ಯುಎಸ್‌ ವಿಶ್ವದ ಶ್ರೀಮಂತ ರಾಷ್ಟ್ರವಾಗಿತ್ತು. ಆದರೆ ಈಗ ಚೀನಾವು ವಿಶ್ವದ ಶ್ರೀಮಂತ ರಾಷ್ಟ್ರವಾಗಿದೆ. ಆದರೆ ಈ ನಡುವೆ ಸಂಪತ್ತಿನ ಅಸಮಾನತೆ ಮಾತ್ರ ಎದ್ದು ಕಾಣುತ್ತಿದೆ. ಈ ಸಂಪತ್ತಿನ ಬಹು ಭಾಗವು ಶ್ರೀಮಂತರ ಪೈಕಿ ಶೇಕಡ 10 ರಷ್ಟ್ರು ಶ್ರೀಮಂತ ಕುಟುಂಬಗಳ ಕೈಯಲ್ಲಿ ಇದೆ. ಈ ಶೇಕಡ 10 ರಷ್ಟ್ರು ಶ್ರೀಮಂತ ಕುಟುಂಬಗಳೇ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ಎಂದು ವರದಿಯು ತಿಳಿಸಿದೆ.

ರಾಜ್ಯದಲ್ಲಿ 90 ಮಂದಿ ಕೋಟ್ಯಾಧಿಪತಿಗಳು: ಅಗ್ರ ಸ್ಥಾನದಲ್ಲಿ ಅಜೀಮ್‌ ಪ್ರೇಮ್‌ಜಿರಾಜ್ಯದಲ್ಲಿ 90 ಮಂದಿ ಕೋಟ್ಯಾಧಿಪತಿಗಳು: ಅಗ್ರ ಸ್ಥಾನದಲ್ಲಿ ಅಜೀಮ್‌ ಪ್ರೇಮ್‌ಜಿ

 ರಿಯಲ್‌ ಎಸ್ಟೇಟ್‌ನಲ್ಲೇ ಅಧಿಕ ಸಂಪತ್ತು

ರಿಯಲ್‌ ಎಸ್ಟೇಟ್‌ನಲ್ಲೇ ಅಧಿಕ ಸಂಪತ್ತು

ಇನ್ನು ಈ ನಡುವೆ ಈ McKinsey ನ ಸಲಹೆಗಾರರ ಸಂಶೋಧನಾ ವಿಭಾಗವು ಮಾಡಿರುವ ಈ ವರದಿಯ ಪ್ರಕಾರ, ಜಾಗತಿಕ ನಿವ್ವಳ ಮೌಲ್ಯದ ಶೇಕಡ 68 ರಷ್ಟು ರಿಯಲ್ ಎಸ್ಟೇಟ್‌ನಲ್ಲಿಯೇ ಇದೆ. ಆದರೆ ಯಂತ್ರೋಪಕರಣಗಳು, ಮೂಲಸೌಕರ್ಯಗಳು, ಉಪಕರಣಗಳಲ್ಲಿ ಸಂಪತ್ತಿನ ಹೂಡಿಕೆಯು ಬಹಳ ಸಣ್ಣ ಪ್ರಮಾಣದಲ್ಲಿದೆ ಎಂಬುವುದನ್ನು ಉಲ್ಲೇಖ ಮಾಡಿದೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಕೂಡಾ ವರದಿಯು ವಿಶ್ಲೇಷಿಸಿದೆ.

 ಇದರಿಂದ ತೊಂದರೆಯೂ ಇದೆ, ಏನೆಂದು ತಿಳಿಯಿರಿ

ಇದರಿಂದ ತೊಂದರೆಯೂ ಇದೆ, ಏನೆಂದು ತಿಳಿಯಿರಿ

ಕಳೆದ ಎರಡು ದಶಕಗಳಲ್ಲಿ ವಿಶ್ವದಲ್ಲಿ ನಿವ್ವಳ ಆದಾಯ ಮೊತ್ತವು ಏರಿಕೆ ಕಾಣುತ್ತಿದೆ. ಆದರೆ ಸಂಪತ್ತಿನ ಹಠಾತ್‌ ಏರಿಕೆಯ ನಡುವೆ ಸುಸ್ಥಿರತೆಯ ಬಗ್ಗೆ ಪ್ರಶ್ನೆಯೂ ಹುಟ್ಟುತ್ತದೆ. ರಿಯಲ್‌ ಎಸ್ಟೇಟ್‌ ಸಂಪತ್ತು ಅಥವಾ ಮೌಲ್ಯವು ಅಧಿಕ ಆಗುವ ಕಾರಣದಿಂದಾಗಿ ಹಲವಾರು ಜನರಿಗೆ ತಮ್ಮ ಸ್ವಂತ ಮನೆಯನ್ನು ಹೊಂದುವುದು ಅಸಾಧ್ಯವಾಗಬಹುದು. ಜನರಿಗೆ ಮನೆ ಖರೀದಿ ಕೈಗೆಟುಕದ ಆಕಾಶದಂತೆ ಆಗಬಹುದು. ಇದರಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು. ಯುಎಸ್‌ನ 2008 ರಲ್ಲಿಯೂ ಈ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂದು ಸಂಶೋದಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚೀನಾದಲ್ಲಿಯೂ ಯುಎಸ್‌ನಲ್ಲಿ ಉಂಟಾದ ಸಮಸ್ಯೆ ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

(ಒನ್‌ಇಂಡಿಯಾ ಸುದ್ದಿ)

English summary
China Becomes Richest Country In The World, Here's Richest Country List in The World 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X