Republic TV ಸಮೀಕ್ಷೆ: ಉತ್ತರಾಖಂಡ್ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಗೆ ಅಧಿಕಾರ

ಕೊರೊನಾ ಸಾಂಕ್ರಾಮಿಕದ ನಡುವೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಿದ್ಧತೆ ಭರದಿಂದ ಸಾಗಿದೆ. ಐದು ರಾಜ್ಯಗಳ ಪೈಕಿ ಉತ್ತರಾಖಂಡ್ ರಾಜ್ಯದ 70 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತಗಳಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧವಾಗುತ್ತಿದೆ. ವಿವಿಧ ಮಾಧ್ಯಮಗಳು, ಖಾಸಗಿ ಸಂಸ್ಥೆಗಳು ಜನಾಭಿಪ್ರಾಯ ಸಂಗ್ರಹಿಸಿ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳನ್ನು ಪ್ರಕಟಿಸುತ್ತಿವೆ. ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಹೊರ ಬಂದಿದ್ದು, ಉತ್ತರಾಖಂಡ್ ರಾಜ್ಯದಲ್ಲಿ ಬಿಜೆಪಿಗೆ ಭರ್ಜರಿ ಜಯ ಲಭಿಸಲಿದೆ ಎಂದು ಹೇಳಿದೆ.

ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆಯನ್ನು ರಾಜ್ಯದಲ್ಲಿ ಜನವರಿ 5 ರಿಂದ ಜನವರಿ 16 ರವರೆಗೆ 4,250 ವ್ಯಕ್ತಿಗಳ ಅಭಿಪ್ರಾಯ ಮಾದರಿ, ಸಿಎಟಿಐ ಮುಂತಾದ ಮಾದರಿ ಬಳಸಿ ಸಮೀಕ್ಷೆ ನಡೆಸಲಾಗಿದ್ದು, ಒಟ್ಟಾರೆ ರಾಜ್ಯವಾರು ಭವಿಷ್ಯ, ಸ್ಥಾನ ಮತ್ತು ಮತ ಹಂಚಿಕೆಯನ್ನು ತೋರಿಸುತ್ತದೆ.

ಉತ್ತರಾಖಂಡ್ ರಾಜ್ಯದಲ್ಲಿ ಸ್ಥಾನ ಗಳಿಕೆ
70 ಸ್ಥಾನ
ಬಿಜೆಪಿ: 36 ರಿಂದ 42
ಕಾಂಗ್ರೆಸ್: 25 ರಿಂದ 31
ಎಎಪಿ: 0 ರಿಂದ 2
ಇತರೆ: 1 ರಿಂದ 3

ಉತ್ತರಾಖಂಡ್ ರಾಜ್ಯದಲ್ಲಿ ಶೇಕಡವಾರು ಮತ ಗಳಿಕೆ
ಬಿಜೆಪಿ: ಶೇ 39.9
ಕಾಂಗ್ರೆಸ್: ಶೇ 37.5
ಎಎಪಿ: ಶೇ 13.1
ಇತರೆ: ಶೇ 9.5

Republic TV P-MARQ Punjab Opinion Poll for Uttarakhand: BJP likely to win

ಇನ್ನು ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಪೈಪೋಟಿ ಕಂಡುಬರುವ ಸಾಧ್ಯತೆಯಿದೆ. 70 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು 31ರಿಂದ 37 ಸ್ಥಾನಗಳನ್ನು ಹೊಂದುವ ಸಾಧ್ಯತೆಯಿದೆ ಮತ್ತು ಕಾಂಗ್ರೆಸ್ 31ರಿಂದ 36 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಉತ್ತರಾಖಂಡ ವಿಧಾನಸಭೆಯು ಒಟ್ಟು 70 ಸ್ಥಾನಗಳನ್ನು ಹೊಂದಿದ್ದು, 36 ಬಹುಮತದ ಮ್ಯಾಜಿಕ್ ನಂಬರ್‌ ಆಗಿದೆ. ಈ 70 ಉತ್ತರಾಖಂಡ ಕ್ಷೇತ್ರಗಳು ಮೂರು ಪ್ರದೇಶಗಳಲ್ಲಿ ಹರಡಿಕೊಂಡಿದ್ದು, ಗರ್ವಾಲ್ (22 ಕ್ಷೇತ್ರಗಳು), ಮೈದಾನ/ ಬಯಲು ಪ್ರದೇಶ/ತಾರೈ (28) ಮತ್ತು ಕುಮಾನ್ (20).

2017ರ ಉತ್ತರಾಖಂಡ ಚುನಾವಣೆಯಲ್ಲಿ, 57 ಸ್ಥಾನಗಳನ್ನು ಗಳಿಸಿ ಬಿಜೆಪಿಯು 11 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಅನ್ನು ಅಧಿಕಾರದಿಂದ ಹೊರಹಾಕಿತ್ತು. 2001ರಲ್ಲಿ ಉತ್ತರಾಖಂಡ ರಾಜ್ಯ ರಚನೆಯಾದ ನಂತರ ಯಾವುದೇ ಪಕ್ಷವು ನಿರ್ವಹಿಸದ ಅತಿ ಹೆಚ್ಚು ಬಾರಿ ಅಧಿಕಾರದಲ್ಲಿ ಉಳಿದಿಲ್ಲ. ಪ್ರಸ್ತುತ ಉತ್ತರಾಖಂಡ ವಿಧಾನಸಭೆಯ ಅಧಿಕಾರಾವಧಿಯು ಮಾರ್ಚ್ 23, 2022ರಂದು ಕೊನೆಗೊಳ್ಳಲಿದೆ.

Recommended Video

      IPLನಲ್ಲಿ ಈ ನೂತನ ತಂಡದ captain Hardik Pandya | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+