ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ ಚುನಾವಣಾ ಸಮೀಕ್ಷೆ: ಎಎಪಿ-ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ

|
Google Oneindia Kannada News

ಚಂಡೀಗಢ, ಜನವರಿ 18: ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯವಿದೆ. ಈ ನಡುವೆ ಹಲವಾರು ಚುನಾವಣಾಪೂರ್ವ ಸಮೀಕ್ಷೆಗಳು ಪ್ರಕಟವಾಗುತ್ತಿದೆ. ಈವರೆಗೆ ಪ್ರಕಟವಾದ ಸಮೀಕ್ಷೆಯ ಪ್ರಕಾರ ಎಎಪಿಯು ಪಂಜಾಬ್‌ನಲ್ಲಿ ಭಾರೀ ಸ್ಫರ್ಧೆಯನ್ನು ನೀಡಲಿದೆ ಎಂದು ಉಲ್ಲೇಖಿತವಾಗಿದೆ. ಇತ್ತೀಚೆಗಿನ ಹೊಸ ಸಮೀಕ್ಷೆಯು ಎಎಪಿ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ನಡೆಯಲಿದೆ ಎಂದು ಉಲ್ಲೇಖ ಮಾಡಿದೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ, ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

 ಚನ್ನಿ ಮತ್ತೆ ಸಿಎಂ ಆಗ್ತಾರಾ?: ಕಾಂಗ್ರೆಸ್‌ ಶಾಸಕರು ಹೇಳುವುದು ಹೀಗೆ.. ಚನ್ನಿ ಮತ್ತೆ ಸಿಎಂ ಆಗ್ತಾರಾ?: ಕಾಂಗ್ರೆಸ್‌ ಶಾಸಕರು ಹೇಳುವುದು ಹೀಗೆ..

ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ಫಲಿತಾಂಶ ಮಾರ್ಚ್ 10 ರಂದು ಹೊರಬೀಳಲಿದೆ. ಈ ನಡುವೆ ರಿಪಬ್ಲಿಕ್ ಟಿವಿ-ಪಿಎಂಆರ್‌ಕ್ಯು ಅಭಿಪ್ರಾಯ ಸಂಗ್ರಹವು ರಾಜ್ಯದಲ್ಲಿ ಈ ಕ್ಷಣದಲ್ಲಿ ವಿವಿಧ ಪಕ್ಷಗಳು ಯಾವ ಸ್ಥಾನದಲ್ಲಿ ಇದೆ ಎಂಬ ಬಗ್ಗೆ ಚುನಾವಣಾಪೂರ್ವ ಸಮೀಕ್ಷೆಯನ್ನು ಬಹಿರಂಗಪಡಿಸಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್, ಪಂಜಾಬ್ ಲೋಕ ಕಾಂಗ್ರೆಸ್, ಶಿರೋಮಣಿ ಅಕಾಲಿದಳ, ಆಮ್ ಆದ್ಮಿ ಪಕ್ಷ (ಎಎಪಿ), ಮುಂತಾದ ಪಕ್ಷಗಳು ಚುನಾವಣಾ ಕಣದಲ್ಲಿ ಇದೆ. ಈ ನಡುವೆ ಎಎಪಿ ಪಂಜಾ‌ಬ್‌ನಲ್ಲಿ ಭಾರೀ ಪೈಪೋಟಿ ನೀಡಲಿದೆ ಎಂದು ಸಮೀಕ್ಷೆಯು ಹೇಳಿದೆ. ಹಾಗಾದರೆ ಈ ಚುನಾವಣಾ ಸಮೀಕ್ಷೆಯ ಪ್ರಕಾರ ಒಟ್ಟಾಗಿ ಯಾವ ಕ್ಷೇತ್ರದಲ್ಲಿ ಯಾವ ಪಕ್ಷಗಳು ಗೆಲುವು ಸಾಧಿಸಲಿದೆ ಎಂಬ ಮೊದಲಾದ ಮಾಹಿತಿಗಳು ಇಲ್ಲಿದೆ ಮುಂದೆ ಓದಿ...

 ಎಬಿಪಿ-ಸಿ ವೋಟರ್ ಸಮೀಕ್ಷೆ: ಪಂಜಾ‌ಬ್‌ನಲ್ಲಿ ಅಕಾಲಿದಳ ಕಿಂಗ್‌ಮೇಕರ್‌ ಎಬಿಪಿ-ಸಿ ವೋಟರ್ ಸಮೀಕ್ಷೆ: ಪಂಜಾ‌ಬ್‌ನಲ್ಲಿ ಅಕಾಲಿದಳ ಕಿಂಗ್‌ಮೇಕರ್‌

 ಯಾವ ಪಕ್ಷಕ್ಕೆ, ಎಷ್ಟು ಸ್ಥಾನ

ಯಾವ ಪಕ್ಷಕ್ಕೆ, ಎಷ್ಟು ಸ್ಥಾನ

ಒಂದು ತಿಂಗಳಲ್ಲಿ ಚುನಾವಣೆ ನಡೆಯಲಿರುವ ಪಂಜಾಬ್‌ನಲ್ಲಿ ಒಟ್ಟು 117 ಸ್ಥಾನಗಳಲ್ಲಿ ಎಎಪಿ 50-56 ಸ್ಥಾನಗಳನ್ನು (37.8 %), ಕಾಂಗ್ರೆಸ್ 42-48 ಸ್ಥಾನಗಳನ್ನು (35%), ಎಸ್‌ಎಡಿ (ಶಿರೋಮಣಿ ಅಕಾಲಿದಳ) 13 ರಿಂದ 17 ಸ್ಥಾನಗಳನ್ನು (37.8%), ಬಿಜೆಪಿ 1-3 ಸ್ಥಾನಗಳು (5.7%) ಮತ್ತು ಇತರರು 1-3 ಸ್ಥಾನಗಳು (5.6%) ಸ್ಥಾನದಲ್ಲಿ ಗೆಲುವು ಸಾಧಿಸಬಹುದು ಎಂದು ರಿಪಬ್ಲಿಕ್ ಟಿವಿ-ಪಿಎಂಆರ್‌ಕ್ಯು ಚುನಾವಣಾ ಪೂರ್ವ ಸಮೀಕ್ಷೆಯು ಉಲ್ಲೇಖ ಮಾಡಿದೆ.

 2017: ಪ್ರದೇಶವಾರು ವಿವರ ಇಲ್ಲಿದೆ

2017: ಪ್ರದೇಶವಾರು ವಿವರ ಇಲ್ಲಿದೆ

ನಾವು ಪ್ರದೇಶವಾರು ವಿಶ್ಲೇಷಣೆ ಮಾಡುವುದಾದರೆ ಪಂಜಾಬ್ ಅನ್ನು ಮಜಾ, ದೋಬಾ ಮತ್ತು ಮಾಲ್ವಾ ಎಂಬ ಮೂರು ಪ್ರದೇಶಗಳಾಗಿ ವಿಂಗಡನೆ ಮಾಡಬಹುದಾಗಿದೆ. ಮಾಜಾದಲ್ಲಿ 2017ರ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ 23 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ಅಕಾಲಿದಳ-ಬಿಜೆಪಿ ಮೈತ್ರಿಕೂಟ ಕೇವಲ ಮೂರು ಸ್ಥಾನಗಳನ್ನು ಗೆದ್ದಿದೆ. ಈ ಪೈಕಿ ಎರಡು ಅಕಾಲಿ ಅಭ್ಯರ್ಥಿಗಳು ಹಾಗೂ ಒಂದು ಮಾತ್ರ ಬಿಜೆಪಿಗೆ ಗೆದ್ದಿದೆ. ಆದರೆ ಎಎಪಿ ಇಲ್ಲಿ ಯಾವುದೇ ಸ್ಥಾನವನ್ನು ಗೆದ್ದಿಲ್ಲ. ದೋಬಾದಲ್ಲಿ 2017ರ ಚುನಾವಣೆಯಲ್ಲಿ 23 ಸ್ಥಾನಗಳ ಪೈಕಿ ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದಿತ್ತು. ಎಸ್‌ಎಡಿ-ಬಿಜೆಪಿ ಮೈತ್ರಿಕೂಟ 5 ಸ್ಥಾನ, ಎಎಪಿ 2 ಸ್ಥಾನ ಮತ್ತು ಇತರರು 1 ಸ್ಥಾನ ಗಳಿಸಿದ್ದಾರೆ. ಮಾಲ್ವಾ ಪ್ರದೇಶದಲ್ಲಿ 2017ರ ಚುನಾವಣೆಯಲ್ಲಿ 69 ಸ್ಥಾನಗಳ ಪೈಕಿ 40 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ಎಸ್‌ಎಡಿ-ಬಿಜೆಪಿ ಮೈತ್ರಿಕೂಟ 8 ಸ್ಥಾನ, ಎಎಪಿ 18 ಮತ್ತು ಇತರರು 3 ಸ್ಥಾನಗಳನ್ನು ಗೆದ್ದಿದ್ದಾರೆ.

 2022: ಪ್ರದೇಶವಾರು ವಿವರ ಇಲ್ಲಿದೆ

2022: ಪ್ರದೇಶವಾರು ವಿವರ ಇಲ್ಲಿದೆ

ರಿಪಬ್ಲಿಕ್ ಟಿವಿ-ಪಿಎಂಆರ್‌ಕ್ಯು ಅಭಿಪ್ರಾಯ ಸಂಗ್ರಹದ ಪ್ರಕಾರ ಮಜಾ ಪ್ರದೇಶದಲ್ಲಿ, ಕಾಂಗ್ರೆಸ್ 12-16 ಸ್ಥಾನಗಳನ್ನು, ಎಎಪಿ 7-11 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಎಸ್‌ಎಡಿ 1-3 ಸ್ಥಾನಗಳು, ಬಿಜೆಪಿ 1-2 ಸ್ಥಾನಗಳು ಮತ್ತು ಇತರರು 0-1 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ರಿಪಬ್ಲಿಕ್ ಟಿವಿ-ಪಿಎಂಆರ್‌ಕ್ಯು ಅಭಿಪ್ರಾಯ ಸಂಗ್ರಹದ ಪ್ರಕಾರ ದೋಬಾ ಪ್ರದೇಶದಲ್ಲಿ, ಕಾಂಗ್ರೆಸ್ 10-14 ಸ್ಥಾನಗಳನ್ನು, ಎಎಪಿ 7-11 ಸ್ಥಾನಗಳನ್ನು, ಎಸ್‌ಎಡಿ 1-3 ಸ್ಥಾನಗಳನ್ನು, ಬಿಜೆಪಿ 0-1 ಸ್ಥಾನಗಳನ್ನು ಮತ್ತು ಇತರರು 0-1 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಾರೆ. ರಿಪಬ್ಲಿಕ್ ಟಿವಿ-ಪಿಎಂಆರ್‌ಕ್ಯು ಅಭಿಪ್ರಾಯ ಸಂಗ್ರಹದ ಪ್ರಕಾರ ಮಾಲ್ವಾ ಪ್ರದೇಶದಲ್ಲಿ ಕಾಂಗ್ರೆಸ್ 17-21 ಸ್ಥಾನಗಳನ್ನು, , ಎಎಪಿ 31-39 ಸ್ಥಾನಗಳನ್ನು, ಎಸ್‌ಎಡಿ 10-14 ಸ್ಥಾನಗಳನ್ನು, ಬಿಜೆಪಿ 1-2 ಸ್ಥಾನಗಳನ್ನು ಮತ್ತು ಇತರರು 0-1 ಸ್ಥಾನಗಳನ್ನು ಗೆಲ್ಲುತ್ತಾರೆ.

 ಮುಖ್ಯಮಂತ್ರಿ ಯಾರಾಗಬಹುದು?

ಮುಖ್ಯಮಂತ್ರಿ ಯಾರಾಗಬಹುದು?

ರಿಪಬ್ಲಿಕ್ ಟಿವಿ-ಪಿಎಂಆರ್‌ಕ್ಯು ಮುಖ್ಯಮಂತ್ರಿ ಯಾರು ಆಗಬೇಕು ಎಂಬ ಬಗ್ಗೆಯೂ ಜನರಿಂದ ಅಭಿಪ್ರಾಯವನ್ನು ಸಂಗ್ರಹ ಮಾಡಿದೆ. ಈ ಪೈಕಿ ಶೇಕಡ 29.7ರಷ್ಟು ಮಂದಿ ಪ್ರಸ್ತುತ ಮುಖ್ಯಮಂತ್ರಿ ಆಗಿರುವ ಚರಂಜಿತ್ ಸಿಂಗ್ ಚನ್ನಿಯೇ ಮತ್ತೆ ಮುಖ್ಯಮಂತ್ರ ಆಗಬೇಕು ಎಂದು ಹೇಳಿದ್ದಾರೆ. ಇನ್ನು ಶೇಕಡ 21.4 ಮಂದಿ ಭಗವಂತ್‌ ಮಾನ್‌ ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ. ಇದು ಜನರ ಎರಡನೇ ಆಯ್ಕೆಯಾಗಿದೆ. ಇನ್ನು ನವಜೋತ್‌ ಸಿಂಗ್‌ ಸಿಧು ಕೂಡಾ ಮುಖ್ಯಮಂತ್ರಿ ಆಗಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಶೇಕಡ 14.6ರಷ್ಟು ಮಂದಿ ಸಿಧು ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪಂಜಾಬ್‌ನ ಮುಖ್ಯಮಂತ್ರಿ ಆಗಬೇಕು ಎಂದು ಶೇಕಡ 12.8 ಮಂದಿ ಹೇಳಿದ್ದಾರೆ. ಸುಖ್‌ಬೀರ್‌ ಸಿಂಗ್‌ ಬಾದಲ್‌ ಮುಖ್ಯಮಂತ್ರಿ ಆಗಬೇಕು ಎಂದು ಶೇಡಕ 11.2ರಷ್ಟು ಮಂದಿ ಅಭಿಪ್ರಾಯಿಸಿದ್ದಾರೆ. ಇನ್ನು ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಸಿಎಂ ಆಗುವುದಕ್ಕೆ ಶೇಕಡ 3.2ರಷ್ಟು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಇತರರು ಮುಖ್ಯಮಂತ್ರಿ ಆಗಬೇಕು ಎಂದು ಶೇಕಡ 7.1ರಷ್ಟು ಮಂದಿ ಅಭಿಪ್ರಾಯ ವ್ಯಕ್ತ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

IPLನಲ್ಲಿ ಈ ನೂತನ ತಂಡದ captain Hardik Pandya | Oneindia Kannada

English summary
Republic P-MARQ Punjab Opinion Poll: Strong Fight Between AAP-Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X