ಕಡಿಮೆ ಬಜೆಟ್‌ನ ಸ್ಮಾರ್ಟ್‌ಫೋನ್ ತೆಗೆದುಕೊಳ್ಳುವ ಯೋಚನೆಯಾ? ಇಲ್ಲಿದೆ ಬೆಸ್ಟ್ ಚಾಯ್ಸ್
ಈಗ ಭಾರತದಲ್ಲಿ ಲಾಂಚ್ ಆಗುತ್ತಿರುವ ಹಲವು ಮೊಬೈಲ್‌ಗಳು ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನ್ನು ಟಾರ್ಗೆಟ್ ಮಾಡುತ್ತವೆ. ಇದೇ ದೃಷ್ಟಿಯಿಂದ ಶುಕ್ರವಾರ ಮತ್ತೊಂದು ಮೊಬೈಲ್ ಭಾರತೀಯ ಮಾರುಕಟ್ಟೆಗೆ ಸದ್ದಿಲ್ಲದೆ ಎಂಟ್ರಿ ನೀಡಿದೆ. ಈ ಮೊಬೈಲ್ ಗ್ರಾಹರಕಗೆ ಕೈ ಗೆಟಕುವ ದರದಲ್ಲಿ ಸಿಗುತ್ತಿದ್ದು, ಹೆಚ್ಚು ಫೀಚರ್ಸ್‌ಗಳನ್ನು ನೀಡುತ್ತಿದೆ. ಹೀಗಾಗಿ ಈ ಮೊಬೈಲ್ ಕೊಳ್ಳಲು ಗ್ರಾಹಕ ಸಹ ಲೈನ್‌ನಲ್ಲಿ ನಿಂತಿದ್ದಾನೆ.
ಚೀನಾ ಮೂಲದ ರಿಯಲ್‌ಮಿ ಕಂಪನಿ ತನ್ನ ಸಿ ಸರಣಿಯ ಸ್ಮಾರ್ಟ್‌ಫೋನ್‌ನ್ನು ಮಾರುಟ್ಟೆಗೆ ರಿಲೀಸ್ ಮಾಡಿದೆ. ಈ ಫೋನ್‌ಗೆ ಕಂಪನಿ Realme C61 ಎಂದು ಹೆಸರು ಇಟ್ಟಿದೆ. ಒಂದು ವೇಳೆ ನೀವು ಏನಾದಾರೂ 10 ಸಾವಿರ ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ನೋಡ್ತಾ ಇದ್ದರೆ ಈ ಫೋನ್ ನಿಮಗೆ ಬೆಸ್ಟ್ ಚಾಯ್ಸ್ ಆಗಿರಲಿದೆ.

ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ?
ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ಈ ಪೋನ್ ಲಾಂಚ್ ಆದರೂ ಸಹ, ರಿಯಲ್‌ಮಿ ಸಿ 61 ಆಕರ್ಷಕ ಫೀಚರ್ಸ್‌ಗಳನ್ನು ನೀಡುತ್ತಿದೆ. ಈ ಫೋನ್ ವಾಟರ್ ಡ್ರಾಪ್ ಶೈಲಿಯ ನಾಚ್ ಹೊಂದಿದೆ. ಈ ಫೋನಿನ ಡಿಸ್‌ಪ್ಲೇ 6.7 ಇಂಚಿನಿಂದ ಕೂಡಿದ್ದು, 90 HZ ರಿಫ್ರೆಶ್ ದರವನ್ನು ಹೊಂದಿರಲಿದೆ. ಈ ಫೋನ್ Unisoc T612 ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿರುತ್ತದೆ ಮತ್ತು 6GB RAM ಮತ್ತು 128GB ಸಂಗ್ರಹದೊಂದಿಗೆ ಗ್ರಾಹಕರ ಕೈ ಸೇರಲಿದೆ..
C61 5,000mAh ಬ್ಯಾಟರಿಯನ್ನು ಹೊಂದಿದ್ದು, ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 32MP ಹೊಂದಿದ್ದು, IP54 ರೇಟಿಂಗ್ ಅನ್ನು ಸಹ ಹೊಂದಿದೆ. ಮೊಬೈಲ್‌ಗೆ ಪ್ಲಾಸ್ಟಿಕ್ ಫಿನಿಶ್ ಅನ್ನು ನೀಡಿದೆ ಎಂದು ತೋರುತ್ತದೆ. ಮುಂಭಾಗದಲ್ಲಿ ವಿಡಿಯೋ ಹಾಗೂ ರೆಕಾರ್ಡಿಂಗಾಗಿ 5 MP ಕ್ಯಾಮೆರಾ ನೀಡಲಾಗಿದೆ. ಇದು ಆಯತಾಕಾರದ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಹೊಂದಿದೆ.

ಈ ಸ್ಮಾರ್ಟ್ಫೋನ್ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ: ಸಫಾರಿ ಗ್ರೀನ್ ಮತ್ತು ಮಾರ್ಬಲ್ ಬ್ಲಾಕ್. ವಿನ್ಯಾಸದ ವಿಷಯದಲ್ಲಿ, Realme ನ ಟೀಸರ್ ಚಿತ್ರವು ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಎರಡನ್ನೂ ಸಾಧನದ ಬಲಭಾಗದಲ್ಲಿ ನೀಡಿದೆ. ಈ ಮೊಬೈಲ್ ಸುಧಾರಿತ ಆಂಡ್ರಾಯ್ಡ್ 14 ಬೆಂಬಲಿಸುತ್ತದೆ. ಈ ಮೊಬೈಲ್ 4ಜಿ ನೆಟ್‌ವರ್ಕ್‌ಗೆ ಸಪೋರ್ಟ್ ಮಾಡುತ್ತದೆ.
ಬೆಲೆ ಎಷ್ಟು?
ರಿಯಲ್ ಮಿ ಸಿ61 ಎರಡು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿದೆ. 4 ಜಿಬಿ ಹಾಗೂ 64 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಮೊಬೈಲ್ ಗ್ರಾಹಕರ ಕೈಗೆ 7,699 ರೂಗೆ ಸಿಗುತ್ತದೆ. ಇನ್ನು 4 ಜಿಬಿ ಹಾಗೂ 128 ಜಿಬಿ ಇಂರ್ಟನಲ್ ಸ್ಟೋರೇಜ್ ಹೊಂದಿರುವ ಮೊಬೈಲ್ 8,999 ರೂಗಳಿಗೆ ಗ್ರಾಹಕರ ಕೈ ಸೇರಲಿದೆ. ಈ ಫೋನ್ ಕೊಳ್ಳುವ ಮನಸ್ಸು ಹೊಂದಿರುವವರು ಫ್ಲಿಪ್ ಕಾರ್ಟ್ ಹಾಗೂ ಕಂಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದು.











Click it and Unblock the Notifications