ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಡ್ ತರಲು ಹೋದ 12 ರ ಹುಡುಗ ಏನಾದ? ಕಾಶ್ಮೀರದ ಕಟುವಾಸ್ತವ!

By ಅಭಿಮುಖಿ ಬೆಂಗಳೂರು
|
Google Oneindia Kannada News

"ನಾನು ಬ್ರೆಡ್ ತರುವುದಕ್ಕೆಂದು ಬೇಕರಿಗೆ ಹೋಗಿದ್ದೆ. ಇದ್ದಕ್ಕಿದ್ದಂತೆ ಪೊಲೀಸರು ಬಂದು ನನ್ನನ್ನು ವಶಕ್ಕೆ ಪಡೆದರು, ಅದಾಗಲೇ ಅಲ್ಲಿ ಆರಂಭವಾಗಿದ್ದ ಕಲ್ಲು ಎಸೆತದಲ್ಲಿ ಭಾಗಿಯಾದವರಲ್ಲಿ ನಾನೂ ಒಬ್ಬ ಎಂಬುದೇ ಆರೋಪ. ಆದರೆ ನಾನು ಆ ಕೆಲಸ ಮಾಡಿರಲಿಲ್ಲ..." 12 ವರ್ಷ ವಯಸ್ಸಿನ ಬಾಲಕನೊಬ್ಬ ಅಳುತ್ತಾ ಹೇಳುವ ಮಾತು ಇದು!

"ನನ್ನಮ್ಮ ನನ್ನನ್ನು ಹುಡುಕಿಕೊಂಡು ಬಂದರು. ಆಕೆಯ ಬಳಿ ಸಹಿ ತೆಗೆದುಕೊಂಡು, ನನಗೆ 'ಬುದ್ಧಿವಾದ' ಹೇಳಿ ನನ್ನನ್ನು ಕಳಿಸಿಕೊಟ್ಟರು..." ಎನ್ನುವ 12 ರ ಆ ಹುಡುಗ, ರಾತ್ರಿ ಮಲಗಿದ್ದಾಗ ಪೊಲೀಸರಿಂದ ಬಂಧನಕ್ಕೊಳಗಾದ ಉಮರ್, ಅಬ್ದುಸ್ ಸಲಾಂನ ಇಬ್ಬರು ಮಕ್ಕಳು, ಆಸ್ಪತ್ರೆಯಲ್ಲಿ ಮಲಗಿದ್ದ ಸಂಬಂಧಿಯನ್ನು ನೋಡಲು ತೆರಳಿ ಬಂಧನಕ್ಕೊಳಗಾಗದ ಮತ್ತೊಬ್ಬ ಯುವಕ ... ಹೀಗೆ ಕಾಶ್ಮೀರದ ಬೀದಿಯಲ್ಲೀಗ ನೂರಾರು ಕತೆಗಳಿವೆ. ಆದರವು ಸುದ್ದಿಯಾಗಿಲ್ಲವಷ್ಟೆ!

370ನೇ ರದ್ದತಿ ಬಳಿಕ ಉಗ್ರರ ಮೊದಲ ದಾಳಿಗೆ ಇಬ್ಬರು ಬಲಿ370ನೇ ರದ್ದತಿ ಬಳಿಕ ಉಗ್ರರ ಮೊದಲ ದಾಳಿಗೆ ಇಬ್ಬರು ಬಲಿ

Recommended Video

ರಾಹುಲ್ ಹೇಳಿಕೆ ಇಟ್ಟುಕೊಂಡು ಅಮೆರಿಕಾಗೆ ಹೋದ ಪಾಕಿಸ್ತಾನ..? | Oneindia Kannada

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮದ ನಂತರ ಕಣಿವೆ ನಾಡಿನಲ್ಲಿ ಏನಾಗಿದೆ? ಈ ಕುರಿತ ಗ್ರೌಂಡ್ ರಿಪೋರ್ಟ್ ಅನ್ನು ಸ್ಕ್ರಾಲ್.ಇನ್ ವೆಬ್ಸ್ ಸೈಟ್ ತಯಾರಿಸಿದೆ. ಅದರ ವರದಿಯ ಯಥಾವತ್ ಸಾರಾಂಶ ಇಲ್ಲಿದೆ.

ಮಧ್ಯರಾತ್ರಿ ಕಾರಣವಿಲ್ಲದೆ ಅರೆಸ್ಟ್!

ಮಧ್ಯರಾತ್ರಿ ಕಾರಣವಿಲ್ಲದೆ ಅರೆಸ್ಟ್!

ಅದು ಆಗಸ್ಟ್ 18-19 ರ ರಾತ್ರಿ, ಗುಲಾಮ್ ಅಹ್ಮದ್ ದಾರ್ ಮತ್ತು ಆತನ ಕುಟುಂಬಸ್ಥರು ಮಲಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆಯೇ ಕರೆಗಂಟೆ ಬಡಿದುಕೊಳ್ಳಲು ಆರಂಭಿಸಿತ್ತು. ಶ್ರೀನಗರದ ಬುಚ್ಪೊರದ ಉಮಾರ್ಹೇರ್ ನಲ್ಲಿರುವ ಗುಲಾಮ್ ಮನೆಯ ಕಿಟಕಿ ತೆರೆದು ನೋಡಿದರೆ ಅದಾಗಲೇ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ತನ್ನ ಮನೆ ಬಾಗಿಲಲ್ಲಿ ಬಂದು ನಿಂತಿದ್ದರು! ಕಾಶ್ಮೀರದಲ್ಲಿ ಅದು ಹೊಸತಲ್ಲವಾದ್ದರಿಂದ ಹೆಚ್ಚಿನ ಅಚ್ಚರಿಯೇನೂ ಇಲ್ಲ ಎಂಬಂತೆ ಅವರು ಬಾಗಿಲು ತೆರೆದರು.

"ನಾವು ಬಾಗಿಲು ತೆರೆಯುತ್ತಿದ್ದಂತೆಯೇ ಅವರು ನಮ್ಮ ಮೊಮ್ಮಗ ಉಮರ್ ಎಲ್ಲಿ? ಎಂದು ಕೇಳಿದರು. ಸ್ಥಳೀಯ ಪೊಲೀಸರೊಂದಿಗಿದ್ದ ಸಿಆರ್ ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ), ಸ್ಪೆಶಲ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಮತ್ತಿತರರು ಮನೆಯೊಳಗೆ ಬಂದರು. ಮನೆಯ ಮೇಲ್ಮಹಡಿಯಲ್ಲಿ ಮಲಗಿದ್ದ ಉಮರ್ ನ ಕೋಣೆಗೇ ತೆರಳಿ ಆತನನ್ನು ಮತ್ತು ಆತನ ಸ್ನೇಹಿತ ಆಸಿಫ್ ನನ್ನು ಹೊರಗೆ ಎಳೆದುಕೊಂಡುಬಂದು ಅವರಿಗೆ ಥಳಿಸಿದರು. ನಾವು ಎಷ್ಟು ತಡೆದರೂ ಕೇಳದೆ ಆತನ್ನು ತಮ್ಮೊಂದಿಗೀ ಕರೆದುಕೊಂಡು ಹೋದರು. ಅವನನ್ನು ಮಾತ್ರವಲ್ಲದೆ ಅವನ 12 ವರ್ಷ ವಯಸ್ಸಿನ ತಮ್ಮನನ್ನು ಎಳೆದು ಕರೆದೊಯ್ದರು."

"ನಾವು ಅವರನ್ನು ತಡೆಯಲು ಎಷ್ಟೇ ಪ್ರಯತ್ನಿಸಿಸದರೂ ಸಾಧ್ಯವಾಗಲಿಲ್ಲ. ಅವರ ಹಿಂದೆಯೇ ಕೆಲವು ದೂರ ಓಡಿದೆವು, ಆದರೆ ಅಶ್ರುವಾಯು ಪ್ರಯೋಗಿಸಿ ನಮ್ಮನ್ನು ಮುಂದೆ ಬಾರದಂತೆ ಮಾಡಿದರು."

"ಆಗಸ್ಟ್ 19 ರ ಸಂಜೆಯವರೆಗೂ ಅವರನ್ನು ನೋಡುವ ಅವಕಾಶವನ್ನು ನಮಗೆ ನೀಡಲಿಲ್ಲ. ಇಬ್ಬರನ್ನೂ ಸೌರಾ ಪೊಲೀಸ್ ಸ್ಟೇಷನ್ನಿನಲ್ಲಿಡಲಾಗಿತ್ತು. ಕೆಲವು ದಿನಗಳ ನಂತರ 12 ವರ್ಷ ವಯಸ್ಸಿನ ಬಾಲಕನನ್ನು ಬಿಡುಗಡೆ ಮಾಡಿದರು. ಆದರೆ ಆತನ ಅಣ್ಣನನ್ನು ಇನ್ನೂ ಜೈಲಿನಲ್ಲೇ ಇರಿಸಿಕೊಳ್ಳಲಾಗಿದೆ" ಎನ್ನುತ್ತಾರೆ ಗುಲಾಮ್ ಅಹ್ಮದ್ ದರ್ ಮತ್ತವರ ಕುಟುಂಬಸ್ಥರು.

ವಿಧಿ 370 ರದ್ದತಿಗೆ ಬೆಂಬಲ ಸೂಚಿಸಲು ಕಾರಣ ಬಿಚ್ಚಿಟ್ಟ ಮಾಯಾವತಿವಿಧಿ 370 ರದ್ದತಿಗೆ ಬೆಂಬಲ ಸೂಚಿಸಲು ಕಾರಣ ಬಿಚ್ಚಿಟ್ಟ ಮಾಯಾವತಿ

ಎಫ್ ಐಆರ್ ಬಗ್ಗೆ ಮಾಹಿತಿಯೇ ಇಲ್ಲ!

ಎಫ್ ಐಆರ್ ಬಗ್ಗೆ ಮಾಹಿತಿಯೇ ಇಲ್ಲ!

ಬುಚ್ಪೊರ ಶ್ರೀನಗರ ಸಮೀಪದ ಒಂದು ಊರು. 370 ನೇ ವಿಧಿ ರದ್ದಾದ ನಂತರ ಇಲ್ಲಿನ ಜನ ನಿರಂತರವಾಗಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಆಗಸ್ಟ್ 18-19 ರಾತ್ರಿ ಕೇವಲ ಗುಲಾಮ್ ಅಹ್ಮದ್ ಅವರ ಮನೆ ಮಾತ್ರವಲ್ಲ, ಮಧ್ಯರಾತ್ರಿ ಹಲವಾರು ಮನೆಯ ಬಾಗಿಲು ತಟ್ಟಿದ ಶಬ್ದವಾಗಿದೆ. ಹಲವು ಯುವಕರನ್ನು ಬಂಧಿಸಲಾಗಿದೆ. ಅದಕ್ಕೆ ಕಾರಣವನ್ನೂ ತಿಳಿಸಲಾಗಿಲ್ಲ, ಎಫ್ ಐಆರ್ ದಾಖಲಾದ ಬಗ್ಗೆಯೂ ಮಾಹಿತಿ ಇಲ್ಲ.

'ಸ್ಕ್ರಾಲ್.ಇನ್' ಕಾಶ್ಮೀರದ ಬಹುಪಾಲು ಎಲ್ಲ ಹಳ್ಳಿಗಳನ್ನೂ ಭೇಟಿ ಮಾಡಿ ಈ ವರದಿ ತಯಾರಿಸಿರುವುದಾಗಿ ಹೇಳಿಕೊಂಡಿದೆ. ಆಗಸ್ಟ್ 5 ರ ನಂತರ ಕಾಶ್ಮೀರದಲ್ಲಿ ಹಲವು ಯುವಕರನ್ನು ಬಂಧಿಸಲಾಗಿದ್ದು, ಯಾವುದೇ ಲಿಖಿತ ದಾಖಲೆಗಳಿಲ್ಲದೆ ಅವರನ್ನು ಬಂಧಿಸಿಟ್ಟುಕೊಳ್ಳಲಾಗಿದೆ. ಅಪ್ರಾಪ್ತರನ್ನೂ ಬಂಧಿಸಲಾಗಿದೆ.

"ಈ ನಿರ್ಧಾರವನ್ನು ಸ್ಥಳೀಯ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಲವರನ್ನು ಬಂಧಿಸಲಾಗಿದೆ. ಅವರನ್ನು ಬಿಡುಗಡೆ ಮಾಡುತ್ತೇವೆ" ಎಂದು ರಾಜ್ಯಪಾಲರ ಆಳ್ವಿಕೆಯಲ್ಲಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ವಕ್ತಾರ ರೋಹಿತ್ ಕಾನ್ಸಾಲ್ ಹೇಳಿದ್ದಾರೆ.

ಆದರೆ ಅಪ್ರಾಪ್ತರನ್ನೂ ಬಂಧಿಸುತ್ತಿರುವ ಬಗ್ಗೆ ಕೇಳಿದರೆ ಯಾರಿಂದಲೂ ಸ್ಪಷ್ಟ ಉತ್ತರ ದೊರಕುತ್ತಿಲ್ಲ. ಈ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪೊಲೀಸರು ಪಲಾಯನವಾದಿಗಳಾಗುತ್ತಾರೆ. ಇದುವರೆಗೂ ಎಷ್ಟು ಜನರನ್ನು ಬಂಧಿಸಲಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಸಾರ್ವಜನಿಕ ಹಿತಾಸಕ್ತಿ ಕಾಯ್ದೆಯಡಿ ಸುಮಾರು 4000 ಕ್ಕೂ ಹೆಚ್ಚು ಜನರನ್ನು ಇದುವರೆಗೂ ಬಂಧಿಸಲಾಗಿದೆ ಎಂಬುದು ಎಎಫ್ಪಿ ನೀಡಿದ ಮಾಹಿತಿ.

ಇಬ್ಬರು ಸಹೋದರರನ್ನು ಎಳೆದೊಯ್ದರು!

ಇಬ್ಬರು ಸಹೋದರರನ್ನು ಎಳೆದೊಯ್ದರು!

ಬುಚ್ಪೊರದ ಉಮರ್ಹೇರ್ ನಲ್ಲಿ ವಾಸವಿರುವ ಅಬ್ದುಸ್ ಸಲಾಂ ದರ್ ಹೇಳುವ ಪ್ರಕಾರ, "ಆ. 18-19 ರಾತ್ರಿ 1:30 ಕ್ಕೆ ಪೊಲೀಸರು ಅವರ ಮನೆಯ ಬಾಗಿಲು ತಟ್ಟಿದ್ದರು. ಬಾಗಿಲು ತೆರೆಯುತ್ತಿದ್ದಂತೆಯೇ ಮನೆಯಲ್ಲಿ ಯಾರೆಲ್ಲ ಇದ್ದೀರಾ ಎಂದು ವಿಚಾರಿಸಿದ್ದರು. ನಾನು ಉತ್ತರಿಸಿದೆ. ಕೂಡಲೆ ನನ್ನ ಇಬ್ಬರು ಗಂಡು ಮಕ್ಕಳನ್ನು ಅವರು ಮಲಗಿದ್ದ ರೂಮಿನಿಂದ ಎಳೆದು ಹೊರಗೆ ತಂದರು. ಅವರನ್ನು ಬಂಧಿಸುವುದನ್ನು ತಡೆಯಲು ಹೊರಟ ನನ್ನ ಕೆನ್ನೆಗೆ ಹೊಡೆರು. ನನ್ನ 22 ವರ್ಷ ವಯಸ್ಸಿನ ಮಗಳು ಜಮೀಲಾ ಪೊಲಿಸರ ಕೈಯಲ್ಲಿದ್ದ ಲಿಸ್ಟ್ ಪಡೆದು, ಅದರಲ್ಲಿ ಆಕೆಯ ತಮ್ಮಂದಿರ ಹೆಸರಿಲ್ಲ ಎಂದು ಹೇಳಿ ಅವರ ಗುರುತಿನ ಚೀಟಿ ನೀಡಿದರೂ ಕೇಳದೆ ಅವರಿಬ್ಬರನ್ನು ಬಂಧಿಸಿದರು. ಮಹಿಳೆಯರನ್ನೂ ಸೇರಿ, ಮನೆಯಲ್ಲಿ ಎಲ್ಲರಿಗೂ ಪೊಲೀಸರು ಹೊಡೆದರು" ಎಂದು ದರ್.

"ಇಬ್ಬರೂ ಸಹೋದರರನ್ನೂ ಇದೀಗ ಜೈಲಿನಲ್ಲಿಡಲಾಗಿದೆ. ಆದರೆ ಯಾವುದೇ ಎಫ್ ಐಆರ್ ಇಲ್ಲ, ಪ್ರಕರಣ ದಾಖಲಾಗಿಲ್ಲ. ಇದು ಅಕ್ರಮವಲ್ಲವೇ?" ಎನ್ನುತ್ತಾರೆ ಜಮೀಲಾ. ಪ್ರತಿದಿನವೂ ಪೊಲೀಸ್ ಸ್ಟೇಷನ್ನಿಗೆ ಈ ಕುಟುಂಬ ಎಡತಾಕುತ್ತಲೇ ಇದೆ!

ಅದು, ಆ.20. ಸರ್ಕಾರಿ ನೌಕರ ಮೊಹಮ್ಮದ್ ಅಲ್ತಾಫ್ ಎಂಬುವವರ ಮಗ 17 ವರ್ಷ ವಯಸ್ಸಿನ ಸಮೀರ್ ಅಹ್ಮದ್ ಆಸ್ಪತ್ರೆಗೆ ದಾಖಲಾಗಿದ್ದ ತಮ್ಮ ಸಂಬಂಧಿಯೊಬ್ಬರಿಗೆ ಟೀ ಮತ್ತು ಆಹಾರ ನೀಡಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಬಂಧಿಸಲಾಯ್ತು. ಅವರಿಗೆ ಚೈನ್ ಗಳಿಂದ ಹೊಡೆದು ಹಿಂಸಿಸಲಾಯ್ತು. ಆದರೆ ಈ ಪ್ರಕರಣವೂ ದಾಖಲಾಗಿಲ್ಲ, ಎಫ್ ಐಆರ್ ಇಲ್ಲ! ಈ ಬಗ್ಗೆ ಪೊಲೀಸರನ್ನು ಕೇಳಿದರೆ, "ಈ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ" ಎಂಬ ಉತ್ತರ!

ಪರಿಚ್ಛೇದ 370 ಕುರಿತು ಬಿಜೆಪಿಯಿಂದ ರಾಷ್ಟ್ರಾದ್ಯಂತ ಜಾಗೃತಿ ಅಭಿಯಾನಪರಿಚ್ಛೇದ 370 ಕುರಿತು ಬಿಜೆಪಿಯಿಂದ ರಾಷ್ಟ್ರಾದ್ಯಂತ ಜಾಗೃತಿ ಅಭಿಯಾನ

ಬ್ರೆಡ್ ತರಲು ಹೋದ ಬಾಲಕ!

ಬ್ರೆಡ್ ತರಲು ಹೋದ ಬಾಲಕ!

ಆತ 12 ವರ್ಷ ವಯಸ್ಸಿನ ಹುಡುಗ. ಆಗಸ್ಟ್ 17 ರ ಮಧ್ಯಾಹ್ನ ಅಮ್ಮ ಬೇಕರಿಯಿಂದ ಬ್ರೆಡ್ ತರಲು ಹೇಳಿದ್ದರಿಂದ ಬೇಕರಿಗೆ ತೆರಳಿದ್ದ. ಆದರೆ ಆ ರಸ್ತೆಯಲ್ಲಿ ಆಗಲೇ ಕೆಲವು ಯುಕರು ಕಲ್ಲು ಎಸೆಯುವುದಕ್ಕೆ ಆರಂಭಿಸಿದ್ದರು. "ನಾನು ಬೇಕರಿಯ ಒಳಗಿದ್ದೆ. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕೆಲವು ಯುವಕರು ಕಲ್ಲು ಎಸೆಯುವುದಕ್ಕೆ ಆರಂಭಿಸಿದ್ದರು. ನಾನು ಬ್ರೆಡ್ ಕೊಂಡು ಹೊರಡುವ ಆತುರದಲ್ಲಿದ್ದೆ. ಅಷ್ಟರಲ್ಲೇ ಭದ್ರತಾ ಸಿಬ್ಬಂದಿ ನನ್ನ ಬಳಿ ಬಂದು, ತಮ್ಮ ಗನ್ನಿನ ಹಿಂಬದಿಯಿಂದ ನನಗೆ ಹೊಡೆದು, ನನ್ನನ್ನು ಅವರೊಂದಿಗೆ ಕರೆದೊಯ್ದರು! ರಸ್ತೆಯಲ್ಲಿ ಗಲಾಟೆ ಕೇಳಿಸಿದ್ದನ್ನು ಕಂಡು ಅಮ್ಮ ಹೊರಗೆ ಬಂದು ಬೇಕರಿಯಲ್ಲಿ ವಿಚಾರಿಸಿದಾಗ ಮಗನನ್ನು ಪೊಲೀಸರು ಕೊಂಡೊಯ್ದಿದ್ದು ತಿಳಿದಿದೆ. ಕೂಡಲೇ ಅಮ್ಮ ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ. ಪೊಲೀಸರು ಅವರಿಗೆ ಪೇಪರ್ ವೊಂದನ್ನು ಕೊಟ್ಟು ಅವರ ಹೆಸರು ಬರೆದು, ಸಹಿ ಹಾಕಲು ಹೇಳಿದ್ದಾರೆ. ಜೊತೆಗೆ ಆಕೆಯ ಫೋಟೊ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ನನ್ನನ್ನು ಬಿಡುಗಡೆ ಮಾಡಿದ್ದಾರೆ" ಎಂದು ಬಿಕ್ಕುತ್ತಾನೆ ಆ ಬಾಲಕ!

"ನನ್ನೊಂದಿಗೆ ಲಾಕಪ್ ನಲ್ಲಿ 10-12 ಯುವಕರಿದ್ದರು ಎಂಬುದು ಮೊಹಮ್ಮದ್ ಶಫಿ ಎಂಬ ಬಂಧಿತ ಯುವಕನ ಮಾತು. ಡಯಾಲಿಸಿಸ್ ಚಿಕಿತ್ಸಸೆ ಪಡೆಯುತ್ತಿದ್ದ ತನ್ನ ತಂದೆಯನ್ನು ನೋದಿಕೊಳ್ಳುವ ಸಲುವಾಗಿ ಶಾಲಯನ್ನು ಒಂಬತ್ತನೇ ತರಗತಿಗೇ ಬಿಟ್ಟ ಹುಡುಗನ್ನೂ ಬಂಧಿಸಲಾಗಿತ್ತು. ಆದರೆ ಯಾವುದೇ ಎಫ್ ಐಆರ್ ದಾಖಲಾಗಿರಲಿಲ್ಲ!"
ಯಾವುದೇ ಕಲ್ಲು ಎಸೆವ ಘಟನೆಯಾಗಲೀ, ಹಿಂಸಾಚಾರವಾಗಲೀ ಇಲ್ಲದಿದ್ದರೂ ನಮ್ಮನ್ನು ಬಂಧಿಸಲಾಗಿತ್ತು ಎನ್ನುತ್ತಾನೆ ಮೊಹಮ್ಮದ್ ಶಫಿ!

"ನಾವು ಪೊಲೀಸ್ ಠಾಣೆಗೆ ಮಾಡಿದ ಎಲ್ಲಾ ಭೇಟಿಯೂ ವಿಫಲವಾಗಿದೆ. ಅಲ್ಲಿ ತೆರಳಿದಾಗೆಲ್ಲ ಯಾರೊಬ್ಬರೂ ಸಂಪರ್ಕಕ್ಕೆ ಸಿಗುವುದಿಲ್ಲ. ಸಿಕ್ಕರೂ ಈ ಬಗ್ಗೆ ಕಮೆಂಟ್ ಮಾಡುವುದಿಲ್ಲ ಎಂದು ಸುಮ್ಮನಾಗುತ್ತಾರೆ. ನಿಷ್ಕಾರಣವಾಗಿ ಜನರನ್ನು ಬಂಧಿಸುತ್ತಿರುವ ಪೊಲೀಸರನ್ನು ಪ್ರಶ್ನಿಸುವವರಿಲ್ಲ..." ಎನ್ನುತ್ತ ಸ್ಕ್ರಾಲ್.ಇನ್ ತನ್ನ ವರದಿಯನ್ನು ಮುಗಿಸುತ್ತದೆ!
(ಕೃಪೆ: ಸ್ಕ್ರಾಲ್.ಇನ್)

English summary
Here is a story on Jammu and Kashmir after scrapping of Article 370 based on ground report by Scroll.in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X