ಅಮೇಥಿಯಲ್ಲಿ ರಾಹುಲ್ ಗಾಂಧಿಯ ನಿದ್ದೆ ಕೆಡಿಸಲಿದ್ದಾರೆ ಸ್ಮೃತಿ ಇರಾನಿ

ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಹಲವು ವರ್ಷಗಳ ಕಾಲ ಒಂದು ಪಕ್ಷದ ಭದ್ರಕೋಟೆಯಾಗಿದ್ದ ಕ್ಷೇತ್ರವೇ ಆ ಪಕ್ಷದ ಕನಸನ್ನು ನುಚ್ಚುನೂರು ಮಾಡಬಹುದು. ಅಮೇಥಿಯೂ ಅದೇ ಹಾದಿಯಲ್ಲಿದೆಯಾ?

ಶನಿವಾರ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಡೆಸಿದ ರೋಡ್ ಶೋ ಸಮಯದಲ್ಲಿ ಸಿಕ್ಕ ಧನಾತ್ಮಕ ಸ್ಪಂದನೆಯನ್ನು ನೋಡಿದರೆ ಅಮೇಥಿಯಲ್ಲಿ ಈ ಬಾರಿ ರಾಹುಲ್ ಗಾಂಧಿ ಅವರ ಗೆಲುವು ಸುಲಭವಿಲ್ಲ ಎಂಬುದಕ್ಕೆ ಸೂಚನೆ ಸಿಗುತ್ತದೆ.

'ಏಕ್ ಬಾರ್ ಫಿರ್ ಮೋದಿ ಸರ್ಕಾರ್'(ಮತ್ತೊಮ್ಮೆ ಮೋದಿ ಸರ್ಕಾರ) ಎಂಬ ಘೋಷಣೆಯ ನಡುವಲ್ಲಿ ಶಾ ಮತ್ತು ಇರಾನಿ ಅವರ ರೋಡ್ ಶೋ ಯಶಸ್ವಿಯಾಗಿತ್ತು. ಅಮೇಥಿ ಲೋಕಸಭಾ ಚುನಾವಣೆ ಸೋಮವಾರ(ಮೇ 6) ಮತದಾನ ನಡೆದಿದ್ದು, ಫಲಿತಾಂಶ ಮೇ 23 ರಂದು ಹೊರಬೀಳಲಿದೆ.

ಜನರ ವಿಶಸ್ವಾಸ ಗಳಿಸಿರುವ ಸ್ಮೃತಿ ದೀದಿ

ಜನರ ವಿಶಸ್ವಾಸ ಗಳಿಸಿರುವ ಸ್ಮೃತಿ ದೀದಿ

ಸಾಮಾನ್ಯವಾಗಿ ಸಂಸದರು ಒಂದು ಕ್ಷೇತ್ರದಿಂದ ಆಯ್ಕೆಯಾದ ಮೇಲೆ ಆ ಕ್ಷೇತ್ರಕ್ಕೆ ಬರುವುದು ಕಡಿಮೆಯೇ. ಆದರೆ ಸ್ಮೃತಿ ಇರಾನಿ ಅವರು 2014 ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಸೋಲುಂಡಿದ್ದರೂ, ನಿರಂತರವಾಗಿ ಈ ಕ್ಷೇತ್ರದ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು. ಸಂಸದ ರಾಹುಲ್ ಗಾಂಧಿ ಅವರಿಗಿಂತ ಹೆಚ್ಚು ಬಾರಿ ಅಮೇಥಿಗೆ ಭೇಟಿ ನೀಡುವ ಮೂಲಕ ಜನರ ಬಾಯಲ್ಲಿ, 'ಸ್ಮೃತಿ ದೀದಿ' ಆಗಿದ್ದಾರೆ.

ಅಮೇಥಿಯಲ್ಲಿ ಕಾಂಗ್ರೆಸ್ ಸೋತಿದ್ದು ಎರಡೇ ಬಾರಿ

ಅಮೇಥಿಯಲ್ಲಿ ಕಾಂಗ್ರೆಸ್ ಸೋತಿದ್ದು ಎರಡೇ ಬಾರಿ

ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿದ್ದು ಎರಡೇ ಬಾರಿ. 1977 ರಲ್ಲಿ ಜನತಾ ಪಕ್ಷದ ಅಲೆ ಎದ್ದಿದ್ದ ಸಮಯದಲ್ಲಿ ಮತ್ತು 1998 ರಲ್ಲಿ ಮಾತ್ರವೇ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸೋತಿತ್ತು. ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಈ ಕ್ಷೇತ್ರದಿಂದ ಅನೂಚಾನವಾಗಿ ಗೆಲ್ಲುತ್ತ ಬಂದಿದ್ದಾರೆ.

ರಾಹುಲ್ ಗೂ ಗೆಲ್ಲುವ ವಿಶ್ವಾಸವಿಲ್ಲ!

ರಾಹುಲ್ ಗೂ ಗೆಲ್ಲುವ ವಿಶ್ವಾಸವಿಲ್ಲ!

ಇಷ್ಟು ವರ್ಷ ಕೇವಲ ಅಮೇಥಿ ಕ್ಷೇತ್ರದಿಂದ ಮಾತ್ರ ಚುನಾವಣೆಗೆ ಸ್ಪರ್ಧಿಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈ ಬಾರಿ ಕೇರಳದ ವಯನಾಡು ಕ್ಷೇತ್ರದಿಂದಲೂ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಪ್ರಬಲ ಸ್ಪರ್ಧೆ ನೀಡಲಿರುವ ಹಿನ್ನೆಲೆಯಲ್ಲಿ ಸುಲಭವಾಗಿ ಗೆಲ್ಲಬಹುದಾದ ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಒಂದು ಲಕ್ಷ ,ಮತದ ಅಂತರವನ್ನು ಕಡೆಗಣಿಸುವಂತಿಲ್ಲ!

ಒಂದು ಲಕ್ಷ ,ಮತದ ಅಂತರವನ್ನು ಕಡೆಗಣಿಸುವಂತಿಲ್ಲ!

2014 ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ಕೇವಲ ಒಂದು ಲಕ್ಷ ಮತಗಳ ಅಂತರದಿಂದ ರಾಹುಲ್ ಗಾಂಧಿ ಅವರ ವಿರುದ್ಧ ಸೋತಿದ್ದರು. 2009 ರಲ್ಲಿ 3.7 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ, ಒಂದು ಲಕ್ಷ ಮತಗಳ ಅಂತರವನ್ನು ಕಡೆಗಣಿಸುವಂತಿಲ್ಲ.

ಸಂಸದೆಯಲ್ಲದಿದ್ದರೂ ಅಭಿವೃದ್ಧಿ ಕಾರ್ಯ

ಸಂಸದೆಯಲ್ಲದಿದ್ದರೂ ಅಭಿವೃದ್ಧಿ ಕಾರ್ಯ

ಅಮೇಥಿಯ ಸಂಸದೆಯಲ್ಲದಿದ್ದರೂ ಸ್ಮೃತಿ ಇರಾನಿ ಅವರು ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳಿಗೆ ಅನುದಾನ ಸಿಗುವಂತೆ ಮಾಡಿದ್ದಾರೆ. ಆಸ್ಪತ್ರೆ ಕಟ್ಟಿಸಿಕೊಟ್ಟಿದ್ದಾರೆ, ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ಡಿಜಿಟಲ್ ಯುಗಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯ ಸಿಗುವಂತೆ ಮಾಡಿದ್ದಾರೆ. ಶುಕ್ರವಾರ ಅಮೇಥಿ ಜನರಿಗೆ ರಾಹುಲ್ ಗಾಂಧಿ ಬರೆದ ಬಹಿರಂಗ ಪತ್ರ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿರಂತರ ಪ್ರಚಾರದ ನಡುವೆಯೂ ಸ್ಮೃತಿ ಇರಾನಿ ಅವರ ರೋಡ್ ಶೋಗೆ ಸಿಕ್ಕ ಜನಬೆಂಬಲ ಅಚ್ಚರಿ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+