ಸರ್ ಹೆಲ್ಮೆಟ್ ಹಾಕಿಲ್ಲ ಯಾಕೆ?- ಸೀಟ್ ಬೆಲ್ಟ್‌ ಹಾಕದ ಮಹಿಳೆಯಿಂದ ಪೊಲೀಸಪ್ಪನಿಗೆ ಪ್ರಶ್ನೆ- ವಿಡಿಯೋ

ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಪೊಲೀಸಪ್ಪನಿಗೆ ಮಹಿಳೆಯೊಬ್ಬರು ಮಾತನಾಡಿಸಿದ ವಿಡಿಯೋ ಅಂತರ್ಜಾಲದ ಗಮನ ಸೆಳೆದಿದೆ. ಕಾರು ಚಲಾಯಿಸುವ ಸೀಟಿನಲ್ಲಿ ಕುಳಿತಿದ್ದ ಮಹಿಳೆ, ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಪೊಲೀಸನನ್ನು ಕರೆದಿದ್ದಾಳೆ.

ಅವಳು ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಲು ಕಾರಣವನ್ನು ಕೇಳಿದಾಗ ಪೊಲೀಸಪ್ಪ ವಿವರಣೆ ಕೊಡದೆ ಸವಾರಿ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ ಕಾಮಿಡಿ ಅಂದರೆ ಹೀಗೆ ಪ್ರಶ್ನೆ ಮಾಡಿದ ಮಹಿಳೆಯೇ ಸೀಟ್ ಬೆಲ್ಟ್‌ ಅನ್ನು ಹಾಕಿಕೊಂಡಿಲ್ಲ. ಈ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ ಜನ ಹಿಗ್ಗಾಮಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

policeman-who-does-not-wear-a-helmet

ಅಷ್ಟಕ್ಕೂ ಈ ವಿಡಿಯೋ ಎಲ್ಲಿ ಸೆರೆಯಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಡಿಯೋ ಹಂಚಿಕೊಂಡಾಗಿನಿಂದ ವೈರಲ್ ಆಗುತ್ತಿದೆ. ಸಂಚಾರಿ ನಿಯಮ ಪಾಲನೆ ಮಾಡದೇ ಇರುವವರು ನಿಯಮದ ಬಗ್ಗೆ ಪ್ರಶ್ನೆ ಮಾಡಿರುವುದು ನಗಪಾಟಲೆಗೆ ಗುರಿಯಾಗಿದೆ.

ಈ ವಿಡಿಯೋಗೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಪ್ರತಿ ಕಾಮೆಂಟ್‌ನಲ್ಲೂ ಜನ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸದ ಪೊಲೀಸರ ವಿರುದ್ಧ ಯಾವುದೇ ಕ್ರಮವಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಇದರೊಂದಿಗೆ ಹೆಲ್ಮೆಟ್ ಧರಿಸಲು ಪೊಲೀಸರಿಗೆ ಶಿಸ್ತು ನೀಡುವಾಗ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯವನ್ನುಂಟುಮಾಡುವ ಕಾರು ಚಾಲಕಿಯ ಬೂಟಾಟಿಕೆಯನ್ನು ಜನರು ಎತ್ತಿ ತೋರಿಸಿದರು. ಪೊಲೀಸ್ ಅಧಿಕಾರಿ ಮತ್ತು ಆತನಿಗೆ ಪಾಠ ಮಾಡುತ್ತಿರುವ ಮಹಿಳೆ ಇಬ್ಬರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಜನ ಒತ್ತಾಯಿಸಿದ್ದಾರೆ.

ವೀಡಿಯೊವನ್ನು ಇಲ್ಲಿ ವೀಕ್ಷಿಸಿ:

ಈ ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆ ಕಾರು ಚಲಾಯಿಸುತ್ತಿದ್ದು, ಡ್ರೈವಿಂಗ್ ಮಾಡುವಾಗ ಆಕೆ ಸೀಟ್ ಬೆಲ್ಟ್ ಕೂಡ ಧರಿಸಿಲ್ಲ ಎಂದು ಕೆಲವು ಬಳಕೆದಾರರು ಕಿಡಿ ಕಾರಿದ್ದಾರೆ. ಆದ್ದರಿಂದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಬ್ಬರು ತಪ್ಪು ಮಾಡಿದ್ದಾರೆ ಎಂದು ಕಾಮೆಂಟ್‌ನಲ್ಲಿ ದೂರಲಾಗಿದೆ. ಈ ವಿಡಿಯೋಗೆ ಮುಂಬೈ ಪೊಲೀಸರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆ ನಡೆದ ಸ್ಥಳದ ಬಗ್ಗೆ ಅವರು ಮಾಹಿತಿಯನ್ನು ಕೇಳಿದ್ದಾರೆ.

ಹೆಲ್ಮೆಟ್ ಇಲ್ಲದೆ ಮೈಮರೆತ ಜೋಡಿ

ಬೆಂಗಳೂರು ಮತ್ತು ದೆಹಲಿಯಂತಹ ಬೃಹತ್ ಮೆಟ್ರೋ ನಗರಗಳಲ್ಲಿ ಸದಾ ವಾಹನದಟ್ಟಣೆ ಹೆಚ್ಚಿರುತ್ತದೆ. ಇಂತಹ ಪ್ರದೇಶಗಳಲ್ಲಿ ಪ್ರೇಮಿಗಳು ಹಾಡಹಗಲೇ ಮೆಟ್ರೋ, ಕಾರಿನಲ್ಲಿ, ಬೈಕ್ನಲ್ಲಿ ರೋಮ್ಯಾನ್ಸ್ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಪ್ರೇಮಿಗಳು ಹೀಗೆ ಹಾದಿ ಬೀದಿಯಲ್ಲಿ, ಮೆಟ್ರೋ ರೈಲು, ಬಸ್‌, ಫ್ಲೈಓವರ್ ಮೇಲೆ ರೋಮ್ಯಾನ್ಸ್ ಮಾಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಂಡ ಉದಾಹರಣೆಗಳು ಕಣ್ಣಮುಂದಿವೆ. ಇಂತಹ ಘಟನೆಗಳು ನಡೆಯದಂತೆ ಸಂಚಾರಿ ಪೊಲೀಸರು ಹಲವಾರು ನಿಯಮಗಳನ್ನು ಕೈಗೊಳ್ಳುತ್ತಲೇ ಇರುತ್ತಾರೆ. ಆದರೆ ಪೊಲೀಸರೇ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಸಾರ್ವಜನಿಕರಿಗೆ ಬುದ್ಧಿ ಹೇಳುವವರು ಯಾರು ಎನ್ನುವ ಪ್ರಶ್ನೆ ಈ ವೈರಲ್ ವಿಡಿಯೋದಿಂದ ಹುಟ್ಟಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+